For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದೀರಾ, ತಪ್ಪದೇ ಈ ಲೇಖನ ಓದಿ

|

ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಕ್ರಮಗಳು ಹೆಚ್ಚು ತೀವ್ರವಾಗುತ್ತಿದ್ದಂತೆಯೇ ವಿಶ್ವದ ಹೆಚ್ಚಿನ ದೇಶಗಳು ತಮ್ಮ ನಾಗರಿಕರನ್ನು ಆದಷ್ಟೂ ಮನೆಯಲ್ಲಿಯೇ ಇರುವಂತೆ ವಿನಂತಿಸಿಕೊಳ್ಳುತ್ತಿವೆ. ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಇದು ಅಗತ್ಯ ಮತ್ತು ಅನಿವಾರ್ಯ ಕ್ರಮವೂ ಹೌದು.

ಶಾಲೆಗಳಿಗೆ ಮಕ್ಕಳು ಬಾರದಂತೆ ಮತ್ತು ಇವರ ಶಿಕ್ಷಣ ಅಂತರ್ಜಾಲದ ಮೂಲಕ ನಡೆಸುವಂತೆ ಈಗಾಗಲೇ ಕ್ರಮಗಳನ್ನು ಕೈಗೊಂಡಾಗಿದೆ. ಕಚೇರಿಗಳು ತಮ್ಮ ಕಾರ್ಯಕಲಾಪಗಳನ್ನು ಆದಷ್ಟೂ ಮನೆಯಿಂದಲೇ ನಡೆಸುತ್ತಿವೆ. ಒಟ್ಟಾರೆ, ಜನರು ಆದಷ್ಟೂ ಪರಸ್ಪರ ಸೇರದಂತೆ ಹಾಗೂ ಈ ಮೂಲಕ ಒಬ್ಬರಿಂದೊಬ್ಬರಿಗೆ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲಾಗಿದ್ದು ಇದನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

Sitting Disease: The Side Effects Of Sitting For Too Long

ಮನೆಯಿಂದಲೇ ಕೆಲಸ ಮಾಡಿ ಎಂದು ಕಚೇರಿಗಳು ಆದೇಶ ಹೊರಡಿಸಿದ್ದು ಇದರಿಂದ ದೂರದ ಕಚೇರಿಗೆ ಹೋಗಬೇಕಾಗಿಲ್ಲ, ಹೆಚ್ಚಿನ ಸಮಯ ಕುಟುಂಬದವರೊಡನೆ ಇರಬಹುದು, ಮನೆಯ ಊಟ ಸಿಗುತ್ತದೆ ಎಂಬ ಅನುಕೂಲತೆಗಳು ಒಂದು ಕಡೆ ಇದ್ದರೆ ಇದರಿಂದ ಕೆಲವು ಅನಾನುಕೂಲತೆಗಳೂ ಇವೆ.

ಇಡಿಯ ದಿನ ಕುಳಿತೇ ಇರಬೇಕಾದ ಅನಿವಾರ್ಯತೆ, ಬೆಳಿಗ್ಗೆ ಬೇಗನೆದ್ದು, ಸ್ನಾನ, ಉಪಾಹಾರ ಮುಗಿಸಿ ಕಚೇರಿಗೆ ಹೋಗಲು ತಯಾರಿ ನಡೆಸಿ ಕಚೇರಿ ತಲುಪುವವರೆಗೆ ಪ್ರಯಾಣ ನಡೆಸಿ ಕಚೇರಿ ತಲುಪಿದ ಬಳಿಕ ನಿತ್ಯ ಭೇಟಿಯಾಗುವವರನ್ನು ಭೇಟಿಯಾಗಿ ಮುಂದಿನ ಕೆಲಸಗಳನ್ನು ನಿರ್ವಹಿಸುವುದು ಈಗ ಸಾಧ್ಯವಾಗುವುದಿಲ್ಲ. ಈ ಅಗತ್ಯತೆಗಳು ಇಲ್ಲ ಎಂದಾಗ ಹೆಚ್ಚಿನವರು ಈ ಸಮಯವನ್ನು ಮಲಗಿಯೇ ಕಳೆಯಲು ಇಚ್ಛಿಸುತ್ತಾರೆ. ಪರಿಣಾಮವಾಗಿ ಜಡತನ ಎದುರಾಗುತ್ತದೆ.

ಕಚೇರಿ ತಲುಪುವವರೆಗೆ ನಡೆಸುವ ಪ್ರಯಾಣ, ಮೆಟ್ಟಿಲೇರುವುದು, ಇಳಿಯುವುದು, ನಡೆಯುವುದು ಮೊದಲಾದ ಚಟುವಟಿಕೆಗಳೆಲ್ಲವೂ ಅಗತ್ಯ ವ್ಯಾಯಾಮವನ್ನು ನೀಡುತ್ತವೆ. ಇಂದು ಕಚೇರಿಗೆ ಹೋಗಬಾರದು, ಮನೆಯಿಂದಲೇ ಕೆಲಸ ಮಾಡಬೇಕು ಎಂಬ ಆದೇಶದಿಂದ ಈ ಚಟುವಟಿಕೆಗಳೆಲ್ಲಾ ಹೆಚ್ಚೂ ಕಡಿಮೆ ನಿಂತೇ ಹೋಗುತ್ತವೆ.

ಇದಕ್ಕೆ ಸರಿಸಮನಾದ ನಡಿಗೆ ಮತ್ತು ವ್ಯಾಯಾಮವನ್ನು ತಪ್ಪದೇ ನಿರ್ವಹಿಸುವವರು ಕಡಿಮೆ ಎಂದೇ ಹೇಳಬಹುದು. ಮನೆಯಲ್ಲಿಯೇ ಉಳಿಯುವ ಮತ್ತು ಕಚೇರಿಯ ಕೆಲಸದ ನಿಮಿತ್ತ ಹೆಚ್ಚಿನ ಸಮಯವನ್ನು ಕುಳಿತೇ ಕಳೆಯುವವರು ಆಸೀನ ರೋಗ ಅಥವಾ couch potato ಎಂಬ ಸ್ಥಿತಿಗೆ ಒಳಗಾಗುವ ಸಾಧ್ಯತೆ ಹೆಚ್ಚೇ ಇರುತ್ತದೆ.

ಇಂದಿನ ಲೇಖನದಲ್ಲಿ, ಹೀಗೆ ದಿನದ ಹೆಚ್ಚಿನ ಹೊತ್ತು ಕುಳಿತೇ ಕಳೆಯುವ ವ್ಯಕ್ತಿಗಳಿಗೆ ಎದುರಾಗುವ ತೊಂದರೆಗಳನ್ನು ವಿವರಿಸಲಾಗಿದೆ.

ತುಂಬಾ ಹೊತ್ತು ಕುಳಿತುಕೊಳ್ಳುವುದು ಆರೊಗ್ಯಕ್ಕೆ ಒಳ್ಳೆಯದಲ್ಲ

ತುಂಬಾ ಹೊತ್ತು ಕುಳಿತುಕೊಳ್ಳುವುದು ಆರೊಗ್ಯಕ್ಕೆ ಒಳ್ಳೆಯದಲ್ಲ

ಸಿಟ್ಟಿಂಗ್ ಡಿಸೀಸ್ ಎಂಬ ಹೆಸರಿನಿಂದ ಹೊಸತಾಗಿ ಕರೆಯಲ್ಪಟ್ಟಿರುವ ಈ ತೊಂದರೆ ಇಡಿಯ ದಿನ ಕುಳಿತೇ ಇರುವ ಅಥವಾ ಅಗತ್ಯವಿದ್ದಷ್ಟು ದೈಹಿಕ ಚಲನೆ ಪಡೆಯದ ಮನಃಸ್ಥಿತಿಯನ್ನು ಬಿಂಬಿಸುತ್ತದೆ.

ಟೀವಿ ಅಥವಾ ಸಿನೀಮಾ ಗೃಹದಲ್ಲಿ ನಾವು ಕುಳಿತೇ ಇಡಿಯ ಕಥೆಯನ್ನು ನೋಡಲು ಇಚ್ಛಿಸುತ್ತೇವೆ. ಕಂಪ್ಯೂಟರ್ ಗೇಮ್ಸ್ ಅಥವಾ ಕೆಲಸದ ನಿಮಿತ್ತವೂ ನಾವು ಹೆಚ್ಚಿನ ಹೊತ್ತು ಕುಳಿತೇ ಇರುತ್ತೇವೆ. ನಮ್ಮ ದೇಹ ಇಡಿಯ ದಿನ ಕುಳಿತಿರುವಂತೆ ನಿಸರ್ಗ ನಿರ್ಮಿಸಿಲ್ಲ. ಬದಲಿಗೆ ಹಗಲಿನ ಹೊತ್ತು ಸಾಕಷ್ಟು ಚಲನ ವಲನ ಇರುವಂತೆಯೇ ನಿರ್ಮಿಸಲ್ಪಟ್ಟಿದೆ. ಹಾಗಾಗಿ, ಅಗತ್ಯ ಚಲನೆಗಳು ಕಡಿಮೆಯಾದಷ್ಟೂ ಅನಾರೋಗ್ಯಕರ.

ದೇಹಕ್ಕೆ ಅಗತ್ಯವಿದ್ದಷ್ಟು ಚಲನೆಗಳು ಸಿಗದೇ ಹೋದರೆ ಅಥವಾ ಕನಿಷ್ಟ ವ್ಯಾಯಾಮವನ್ನೂ ಮಾಡದೇ ಇದ್ದರೆ ದೇಹಕ್ಕೆ ಎದುರಾಗುವ ಅನಾರೋಗ್ಯಗಳ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಅದರಲ್ಲೂ ಹೆಚ್ಚಿನ ಹೊತ್ತು ಕುಳಿತೇ ಇದ್ದರೆ ಈ ಅನಾರೋಗ್ಯದ ಸಾಧ್ಯತೆಗಳು ಗಾಬರಿ ಹುಟ್ಟಿಸುವಷ್ಟು ಹೆಚ್ಚುತ್ತವೆ. ನಮ್ಮ ದೇಹ ಆಹಾರವನ್ನು ಸಂಸ್ಕರಿಸಿ ನಾಳೆಗೆಂದು ಕೊಬ್ಬಿನ ರೂಪದಲ್ಲಿ ಶೇಖರಿಸಿಕೊಳ್ಳುವ ಮುನ್ನ ಈ ಜೀವಕೋಶಗಳು preadipocyte cell ಎಂಬ ಜೀವಕೋಶಗಳಾಗಿ ಮಾರ್ಪಾಡು ಹೊಂದುತ್ತವೆ. ಒಂದು ವೇಳೆ ದೇಹಕ್ಕೆ ವ್ಯಾಯಾಮ ಅಥವಾ ಚಟುವಟಿಕೆ ದೊರೆತಾಗ ಈ ಕೋಶಗಳು ಕೊಬ್ಬಾಗಿ ಮಾರ್ಪಾಡು ಹೊಂದದೇ ಬಳಸಲ್ಪಡುತ್ತವೆ. ಇಡಿಯ ದಿನ ಕುಳಿತೇ ಇದ್ದರೆ ಈ ಜೀವಕೋಶಗಳು ಕೊಬ್ಬಿನ ಕಣಗಳಾಗಿ ಮಾರ್ಪಾಡು ಹೊಂದುವ ಸಾಧ್ಯತೆ ಹೆಚ್ಚುತ್ತದೆ. ಹೆಚ್ಚು ಮಲಗಿದ್ದಷ್ಟೂ ಮತ್ತು ಹೆಚ್ಚು ಕುಳಿತಿದ್ದಷ್ಟೂ ಈ ಕೊಬ್ಬಿನ ಸಂಗ್ರಹ ಹೆಚ್ಚುತ್ತದೆ.

ಅಮೇರಿಕನ್ ಕ್ಯಾನ್ಸರ್ ಸೊಸೈಟಿ ನಡೆಸಿದ ಒಂದು ಅಧ್ಯಯನದ ಪ್ರಕಾರ ಒಂದು ದಿನದ ಅವಧಿಯಲ್ಲಿ ನೀವು ಸುಮಾರು ಆರು ಘಂಟೆಗಳ ಕಾಲ ಕುಳಿತೇ ಇದ್ದರೆ ನಿಮಗೆ ಎದುರಾಗುವ ಸಾವಿನ ಸಂಭವ ಮೂರು ಘಂಟೆಗೂ ಕಡಿಮೆ ಕುಳಿತುಕೊಳ್ಳುವ ವ್ಯಕ್ತಿಗಳಿಗಿಂತ ಹತ್ತೊಂಭತ್ತು ಶೇಖಡಾ ಹೆಚ್ಚು ಇರುತ್ತದೆ. ಇನ್ನೊಂದು ಅಧ್ಯಯನದಲ್ಲಿ ಕುಳಿತೇ ಕಾಲ ಕಳೆಯುವ ವ್ಯಕ್ತಿಗಳಿಗೆ ಹೃದಯದ ಮುಖ್ಯ ನಾಳವಾದ ಅಭಿಧಮನಿಗೆ ಸಂಬಂಧಿಸಿದ ಕಾಯಿಲೆಗಳಿಂದ ಸಾವು ಸಂಭವಿಸುವ ಸಾಧ್ಯತೆಗೂ ಕುಳಿತೇ ಇರುವ ಸಮಯಕ್ಕೂ ನಿಕಟ ಸಂಬಂಧವಿದೆ ಎಂದು ತಿಳಿಸುತ್ತದೆ. ಮತ್ತೊಂದು ಅಧ್ಯಯನದಲ್ಲಿ ವ್ಯಕ್ತಿಯೊಬ್ಬ ಹೆಚ್ಚು ಕುಳಿತಷ್ಟೂ ಆತ ಹೃದಯ ಸಂಬಂಧಿ ತೊಂದರೆಯಿಂದ ಸಾಯುವ ಸಾಧ್ಯತೆ ಹನ್ನೆರಡು ವರ್ಷದಶ್ಟು ಮುಂಚಿತವಾಗಿಸುತ್ತದೆ ಎಂದು ತಿಳಿಸುತ್ತದೆ.

ಬನ್ನಿ, ಕುಳಿತೇ ಇರುವ ತೊಂದರೆಯ ಕುರಿತಾದ ಅಗತ್ಯ ಮಾಹಿತಿಗಳನ್ನು ಅರಿಯೋಣ

ಬನ್ನಿ, ಕುಳಿತೇ ಇರುವ ತೊಂದರೆಯ ಕುರಿತಾದ ಅಗತ್ಯ ಮಾಹಿತಿಗಳನ್ನು ಅರಿಯೋಣ

1. ಕ್ಯಾಲೋರಿಗಳು ದಹಿಸಲ್ಪಡುವ ಗತಿ ನಿಧಾನ

ಕುಳಿತೇ ಇದ್ದಾಗ ಕ್ಯಾಲೋರಿಗಳು ದಹಿಸಲ್ಪಡುವ ಗತಿ ನಿಧಾನವಾಗುತ್ತದೆ. ಅಂದರೆ ಒಂದು ನಿಮಿಷಕ್ಕೆ ಒಂದು ಕ್ಯಾಲೋರಿ ಕಡಿಮೆ ದಹಿಸಲ್ಪಡುತ್ತದೆ. ಅಂದರೆ ಒಂದು ಘಂಟೆ ಕುಳಿತಿದ್ದಾಗ ನಿಂತಿದ್ದಾಗಿಂತಲೂ ಅರವತ್ತು ಕ್ಯಾಲೋರಿಗಳು ಕಡಿಮೆ ಖಾಲಿಯಾಗುತ್ತವೆ. ಇದೇ , ನೀವು ನಿಂತೇ ಇದ್ದರೆ ದಿನಕ್ಕೆ ಮುನ್ನೂರು ಕ್ಯಾಲೋರಿಗಳು ಖಾಲಿಯಾಗುತ್ತವೆ. ಕ್ಯಾಲೋರಿಗಳು ಕಡಿಮೆ ಖರ್ಚಾದಷ್ಟೂ ತೂಕ ಏರುವ ಸಾಧ್ಯತೆ ಹೆಚ್ಚುತ್ತದೆ.

2. ದೇಹದ ತೂಕ ಹೆಚ್ಚುತ್ತದೆ

2. ದೇಹದ ತೂಕ ಹೆಚ್ಚುತ್ತದೆ

ನಿಮ್ಮ ದೇಹದ ಜೀವಕೋಶಗಳಲ್ಲಿ ಹೆಚ್ಚು ಹೆಚ್ಚು ಕೊಬ್ಬು ತುಂಬಿಕೊಳ್ಳುವ ಕಾರಣದಿಂದ ದೇಹದ ಒಟ್ಟು ತೂಕ ಹೆಚ್ಚುತ್ತದೆ. ಅಲ್ಲದೇ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (ಎಲ್ ಡಿ ಎಲ್- ಲೋ ಡೆನ್ಸಿಟಿ ಲಿಪೋ ಪ್ರೋಟೀನ್) ಸಂಗ್ರಹ ಎಚ್ಚುತ್ತದೆ, ಇನ್ಸುಲಿನ್ ತಾಳಿಕೊಳ್ಳುವ ಕ್ಶಮತೆ ಮತ್ತು ಪ್ಲಾಸ್ಮಾ ಟ್ರೈಗ್ಲಿಸರೈಡುಗಳ ಮಟ್ಟವೂ ಹೆಚ್ಚುತ್ತದೆ. ಅಂದರೆ ನಿಮ್ಮ ದೇಹ ಇನ್ಸುಲಿನ್ ಅನ್ನು ಸಹಿಸಿಕೊಳ್ಳುವುದು ಕಡಿಮೆಯಾಗಿರುವ ಕಾರಣ ಮೇದೋಜೀರಕ ಗ್ರಂಥಿ ಮತ್ತು ಯಕೃತ್ ನ ಮೇಲೆ ಹೆಚ್ಚಿನ ಒತ್ತಡ ಬೀಳುತ್ತವೆ.

3. ಮೂಳೆಗಳು ಶಿಥಿಲಗೊಳ್ಳತೊಡಗುತ್ತವೆ

3. ಮೂಳೆಗಳು ಶಿಥಿಲಗೊಳ್ಳತೊಡಗುತ್ತವೆ

ಮೂಳೆಗಳಿಗೂ ಸತತ ಚಲನೆ ಬೇಕಾಗುತ್ತದೆ. ಇಲ್ಲದಿದ್ದರೆ ಮೂಳೆಗಳಲ್ಲಿರುವ ಖನಿಜಗಳ ಸಾಂದ್ರತೆ ಕಡಿಮೆಯಾಗುತ್ತಾ ಹೋಗುತ್ತದೆ. ಕುಳಿತಿದ್ದಷ್ಟೂ ಹೊತ್ತು ಮೂಳೆಗಳಿಗೆ ಚಲವನವನ ಕಡಿಮೆಯಾಗುತ್ತದೆ. ಶರೀರದ ಯಾವುದೇ ಚಲನೆ ಮೂಳೆಗಳಿಗೆ ಒಳ್ಳೆಯದು. ಇದೇ ಕಾರಣಕ್ಕೆ ನಡಿಗೆಯನ್ನು ಎಲ್ಲಾ ವಯಸ್ಸಿನವರಿಗೂ ವೈದ್ಯರು ಶಿಫಾರಸ್ಸು ಮಾಡುತ್ತಾರೆ. ದೈಹಿಕ ಚಟುವಟಿಕೆ ಮತ್ತು ಸಾಕಷ್ಟು ವ್ಯಾಯಾಮದ ಕೊರತೆ ಎದುರಾದಷ್ಟೂ ಮೂಳೆಗಳು ಶಿಥಿಲವಾಗುವ ಸಾಧ್ಯತೆ ಹೆಚ್ಚುತ್ತದೆ.

4. ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ

4. ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ

ದಿನದ ಹೆಚ್ಚಿನ ಹೊತ್ತು ಕುಳಿತೇ ಕಾಲ ಕಳೆಯುವ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಉಳಿದವರಿಗಿಂತ ಕಡಿಮೆ ಇರುತ್ತದೆ. ಸಾಕಷ್ಟು ವ್ಯಾಯಾಮ ದೊರಕದೇ ಇದ್ದರೆ ರೋಗ ನಿರೋಧಕ ಶಕ್ತಿ ಕುಗುತ್ತಾ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಉತ್ತಮವಾಗಿರಲು ಸಾಕಷ್ಟು ವ್ಯಾಯಮದ ಅಗತ್ಯವಿದೆ. ವ್ಯಾಯಮದಿಂದ ದೇಹದ ಚಟುವಟಿಕೆ ಹೆಚ್ಚುತ್ತದೆ ಹಾಗೂ ಪ್ರತಿ ಜೀವಕೋಶವೂ ತಮ್ಮ ಕಾರ್ಯಗಳನ್ನು ನಿರ್ವಹಿಸುವ ಮೂಲಕ ದೇಹದಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ಪ್ರವೇಶವನ್ನು ನಿರ್ಬಂಧಿಸುತ್ತದೆ.

5. ರಕ್ತಪರಿಚಲನೆ ಏರುಪೇರುಗೊಳ್ಳುತ್ತದೆ

5. ರಕ್ತಪರಿಚಲನೆ ಏರುಪೇರುಗೊಳ್ಳುತ್ತದೆ

ದೇಹ ದಿನದ ಹೆಚ್ಚಿನ ಹೊತ್ತು ಚಲನೆಯನ್ನು ಪಡೆಯದೇ ಇದ್ದರೆ ದೇಹದ ಎಲ್ಲಾ ಭಾಗಗಳಿಗೆ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ವಿಶೇಷವಾಗಿ ಪಾದಗಳಿಗೆ ಅಗತ್ಯ ಪ್ರಮಾಣದ ರಕ್ತಸಂಚಾರ ದೊರಕುವುದಿಲ್ಲ. ರಕ್ತ ಸಂಚಾರ ದೊರಕದ ನರಗಳು ಕುಗ್ಗಿ ನಡುವೆ ಎಲ್ಲೋ ಒಂದೆಡೆ ತಡೆಯನ್ನುಂಟು ಮಾಡಬಹುದು. ಈ ಭಾಗದಿಂದ ರಕ್ತ ಮುಂದುವರೆಯದೇ ಯಾವ ಭಾಗಕ್ಕೆ ರಕ್ತ ದೊರಕುವುದಿಲ್ಲವೋ ಆ ಭಾಗ ಮರಗಟ್ಟುತ್ತದೆ ಅಥವಾ ನೋವಿನಿಂದ ಕೂಡಿದ ಸೆಡೆತ ಎದುರಾಗುತ್ತದೆ. ಸೆಡೆತ ಸಾಮಾನ್ಯವಾಗಿ ಕಾಲಿನ ಮೀನಖಂಡ, ಪಾದದ ಭಾಗಗಳಲ್ಲಿಯೇ ಎದುರಾಗುತ್ತದೆ. ಅಲ್ಲದೇ ಸ್ನಾಯುಗಳ ಸೆಡೆತ ಎದುರಾದಷ್ಟೂ ರಕ್ತ ಹೆಪ್ಪುಗಟ್ಟುವ ಸಂಭವವೂ ಹೆಚ್ಚುತ್ತದೆ.

6. ಬೆನ್ನು ನೋವು ಎದುರಾಗುತ್ತದೆ

6. ಬೆನ್ನು ನೋವು ಎದುರಾಗುತ್ತದೆ

ಹೆಚ್ಚು ಹೊತ್ತು ಕುಳಿತೇ ಇರುವ ದೊಡ್ಡ ತೊಂದರೆ ಎಂದರೆ ಬೆನ್ನು ನೋವು. ಹೆಚ್ಚು ಕುಳಿತಿದ್ದಷ್ಟೂ ಬೆನ್ನಿನ ಸ್ನಾಯುಗಳಿಗೆ ಕೆಲಸವೇ ಇಲ್ಲವಾಗಿ ಶಿಥಿಲವಾಗುತ್ತದೆ. ಅಲ್ಲದೇ ಬೆನ್ನು ಮೂಳೆಯ ಅತಿ ಕೆಳಗಿನ ಭಾಗದ ತಟ್ಟೆಗಳಿಗೆ ಅಡ್ಡಲಾಗಿ ಒಡ್ಡುವ ಭಾರದ ಕಾರಣ ಇದರ ಮೂಲಕ ಹಾದು ಹೋಗುವ ಬೆನ್ನು ಹುರಿ (lumbar spine)ಯ ಸ್ಥಾನವನ್ನು ಪಲ್ಲಟಗೊಳಿಸಿ ಕೆಳಬೆನ್ನಿನ ಭಾಗದ ಒಳ ಪೆಟ್ಟು(low back injury) ಎದುರಾಗುವ ಸಾಧ್ಯತೆ ಹೆಚ್ಚಿಸುತ್ತದೆ.

7. ಬೆನ್ನುಮೂಳೆ ಪೆಡಸಾಗುವ ಸಾಧ್ಯತೆ ಹೆಚ್ಚು

7. ಬೆನ್ನುಮೂಳೆ ಪೆಡಸಾಗುವ ಸಾಧ್ಯತೆ ಹೆಚ್ಚು

ನಮ್ಮ ಬೆನ್ನು ಮೂಳೆ ನಟ್ಟಗಿಲ್ಲ ಮತ್ತು ಹಲವಾರು ಅಡ್ಡತಟ್ಟೆಗಳಂತಹ ರಚನೆಯನ್ನು ಹೊಂದಿದೆ. ಈ ಮೂಳೆಯ ಭಾಗಗಳು ಪರಸ್ಪರ ಒಂದಕ್ಕೊಂದು ಉಜ್ಜುತ್ತಾ ಕೊಂಚವೇ ಸರಿಯುವ ಮೂಲಕ ಬೆನ್ನು ಬಾಗಲು ಸಾಧ್ಯವಾಗುತ್ತದೆ. ಈ ಮೂಲಕ ಈ ತಟ್ಟೆಗಳ ನಡುವೆ ಸೂಕ್ತವಾದ ಒತ್ತಡ ಎದುರಾಗಿ ರಕ್ತ ಮತ್ತು ಪೋಷಕಾಂಶಗಳೂ ಸಮರ್ಪಕವಾಗಿ ವಿತರಿಸಲ್ಪಡುತ್ತವೆ. ಈ ತಟ್ಟೆಗಳ ನಡುವೆ ಇರುವ ಮೃದುವಾದ ಭಾಗಗಳೂ ಸೂಕ್ತ ಪ್ರಮಾಣದಲ್ಲಿ ಸಂಕುಚಿಸಲ್ಪಟ್ಟು ಬೆನ್ನು ಮೂಳೆಯ ಆರೋಗ್ಯವನ್ನು ಕಾಪಾಡುತ್ತವೆ. ಕುಳಿತೇ ಇದ್ದರೆ ಈ ಚಟುವಟಿಕೆಗಳೆಲ್ಲಾ ನಡೆಯದೇ ಹೋಗುತ್ತವೆ ಮತ್ತು ಬೆನ್ನು ಮೂಳೆಯ ತಟ್ಟೆಗಳು ಅಸಮರ್ಪಕವಾಗಿ ಒತ್ತಡಕ್ಕೊಳಗಾಗುತ್ತಾ ವಯಸ್ಸಾದಂತೆ ಬೆನ್ನು ಬಾಗುವ ಸಾಧ್ಯತೆ ಹೆಚ್ಚುತ್ತದೆ.

8. ಕಾಲು ನೋವು ಹೆಚ್ಚಿಸುತ್ತದೆ

8. ಕಾಲು ನೋವು ಹೆಚ್ಚಿಸುತ್ತದೆ

ಹೆಚ್ಚು ಹೊತ್ತು ಕುಳಿತೇ ಇದ್ದರೆ ಕಾಲಿನ ಕೆಳಭಾಗಕ್ಕೆ ಹರಿಯಬೇಕಾಗಿದ್ದಷ್ಟು ರಕ್ತ ಹರಿಯದೇ ಕಾಲಿನ ಭಾಗದ ಸ್ನಾಯುಗಳು ಸೊರಕುತ್ತವೆ. ಅಲ್ಲದೇ ಕಾಲಿನ ಭಾಗದಲ್ಲಿ ಹೆಚ್ಚು ದ್ರವ ತುಂಬಿಕೊಳ್ಳತೊಡಗುತ್ತದೆ. ಪರಿಣಾಮವಾಗಿ ಪಾದಗಳು, ಮಣಿಕಟ್ಟು ಮೊದಲಾದ ಭಾಗಗಳು ಊದಿಕೊಳ್ಳುವುದು, ತಿರುಚಿದ ನರಗಳು ಅಥವಾ ವೆರಿಕೋಸ್ ವೇಯ್ನ್ಸ್ ಎದುರಾಗುವ ಸಾಧ್ಯತೆಯೂ ಹೆಚ್ಚುತ್ತದೆ.

9. ಸ್ಮರಣ ಶಕ್ತಿಯನ್ನೂ ಕುಂದಿಸಬಹುದು

9. ಸ್ಮರಣ ಶಕ್ತಿಯನ್ನೂ ಕುಂದಿಸಬಹುದು

ಕುಳಿತೇ ಕಾಲ ಕಳೆಯುವ ವ್ಯಕ್ತಿಗಳ ಸ್ಮರಣ ಶಕ್ತಿ ಉಡುಗುವ ಮತ್ತು ವಿಷಯಕ್ಕೆ ಗಮನ ನೀಡುವ ಕ್ಷಮತೆಯ್ ಕುಗ್ಗುತ್ತದೆ. ದಿನದ ಹಲವಾರು ಘಂಟೆಗಳನ್ನು ಕುಳಿತೇ ಕಳೆಯುವ ವ್ಯಕ್ತಿಗಳು ತಮ್ಮ ದಿನಚರಿಯನ್ನು ಸೂಕ್ತವಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಹಾಗೂ ಏಕಾಗ್ರತೆ ಸಾಧಿಸಲು ವಿಫಲರಾಗುತ್ತಾರೆ. ಈ ವ್ಯಕ್ತಿಗಳಿಗೆ ನೀಡುವ ಸೂಚನೆಗಳನ್ನು ಇವರು ಸರಿಯಾಗಿ ಪಾಲಿಸುವುದಿಲ್ಲ ಮತ್ತು ತಮ್ಮ ಕಾರ್ಯಗಳನ್ನೆಲ್ಲಾ ಇವರು ಮುಂದೂಡುವ ಸ್ವಭಾವವನ್ನು ಹೊಂದಿರುತ್ತಾರೆ.

10. ಹೃದಯದ ಕಾಯಿಲೆಗಳನ್ನು ಹೆಚ್ಚಿಸಬಹುದು

10. ಹೃದಯದ ಕಾಯಿಲೆಗಳನ್ನು ಹೆಚ್ಚಿಸಬಹುದು

ಚಟುವಟಿಕೆಯುಳ್ಳ ವ್ಯಕ್ತಿಗಳಿಗಿಂತಲೂ ಕುಳಿತೇ ಕಾಲ ಕಳೆಯುವ ವ್ಯಕ್ತಿಗಳಿಗೆ ಹೃದಯದ ಸ್ತಂಭನ ಮತ್ತು ಆಘಾತಗಳು ಎದುರಾಗುವ ಸಾಧ್ಯತೆಗೆಳು ಹೆಚ್ಚು ಎಂದು ಅಧ್ಯಯನಗಳು ತೋರಿಸಿವೆ. ಈ ವ್ಯಕ್ತಿಗಳಿಗೆ ಹೃದಯ ಮತ್ತು ಹೃದಯನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳು ಆವರಿಸುವ ಸಾಧ್ಯತೆ 80 ಶೇಖಡಾ ಹೆಚ್ಚುತ್ತದೆ. ಕಾರ್ಯನಿಮಿತ್ತ ಕಂಪ್ಯೂಟರ್ ಮುಂದೆ ಹಲವಾರು ಘಂಟೆ ಕುಳಿತೇ ಇರುವ ವ್ಯಕ್ತಿಗಳಿಗೂ ಹೆಚ್ಚೂ ಕಡಿಮೆ ಇದೇ ಸಾಧ್ಯತೆಗಳು ಎದುರಾಗುತ್ತವೆ. ಅಲ್ಲದೇ ಈ ವ್ಯಕ್ತಿಗಳ ರಕ್ತದಲ್ಲಿ ಸಕ್ಕರೆಯ ಮಟ್ಟ ಮತ್ತು ಕೊಬ್ಬಿನ ಪ್ರಮಾಣವೂ ಅನಾರೋಗ್ಯಕರ ಮಟ್ಟಗಳಲ್ಲಿರುತ್ತವೆ.

ಕುಳಿತೇ ಇರುವ ತೊಂದರೆಯನ್ನು ಎದುರಿಸಲು ಕೆಲವು ಮಾರ್ಗಗಳು

ಕುಳಿತೇ ಇರುವ ತೊಂದರೆಯನ್ನು ಎದುರಿಸಲು ಕೆಲವು ಮಾರ್ಗಗಳು

ಒಂದು ವೇಳೆ ನಿಮಗೆ ಕಾರ್ಯ ನಿಮಿತ್ತ ದಿನದ ಹೆಚ್ಚಿನ ಹೊತ್ತು ಕುಳಿತೇ ಇರುವುದು ಅನಿವಾರ್ಯವಾಗಿದ್ದರೆ ವ್ಯಾಯಾಮಕ್ಕಾಗಿ ನೀವು ಸಮಯವನ್ನು ಮೀಸಲಿಡುವುದು ಕಷ್ಟ. ಆದರೆ ವ್ಯಾಯಾಮದಿಂದ ಸಂಪೂರ್ಣವಾಗಿ ವಂಚಿತರಾಗದೇ ಇರಲು ನೀವು ಈ ಕ್ರಮಗಳನ್ನು ಕೈಗೊಳ್ಳಬಹುದು.

ಸೆಳೆತದ ವ್ಯಾಯಾಮಗಳು

ಸೆಳೆತದ ವ್ಯಾಯಾಮಗಳು

ದಿನದಲ್ಲಿ ಹತ್ತು ನಿಮಿಷವಾದರೂ ಸಾಮಾನ್ಯ ಮತ್ತು ಸರಳ ಸೆಳೆತದ ವ್ಯಾಯಾಮಗಳನ್ನು ಮಾಡಬೇಕು. ದೇಹವನ್ನು ನಿಮ್ಮಿಂದ ಆಗುವಷ್ಟು ಮಟ್ಟಿಗೆ ಬಗ್ಗಿಸಬೇಕು. ದಿನದಲ್ಲಿ ಹಲವಾರು ಬಾರಿ ಸೆಳೆತದ ವ್ಯಾಯಾಮಗಳನ್ನು ನಿರ್ವಹಿಸಬೇಕು. ಕೈಗಳನ್ನು ಹಿಂದಕ್ಕೆ ಸೆಳೆಯುವುದು, ಮುಂದಕ್ಕೆ ಬಾಗುವುದು, ಹಿಂದಕ್ಕೆ ಬಾಗುವುದು, ಪಕ್ಕಕ್ಕೆ ಬಾಗುವುದು, ಬಸ್ಕಿ ಹೊಡೆಯುವುದು, ಇಂತಹ ಸರಳ ವ್ಯಾಯಾಮಗಳನ್ನು ದಿನದಲ್ಲಿ ಆಗಾಗ, ಸಮಯ ತೆಗೆದು ಮಾಡುತ್ತಿರಬೇಕು. ದಿನದಲ್ಲಿ ಸುಮಾರು ಐದರಿಂದ ಆರು ಬಾರಿಯಾದರೂ ಮಾಡಿದರೆ ಸಾಕಾಗುತ್ತದೆ ಹಾಗೂ ಕಾಯಿಲೆಗಳ ವಿರುದ್ದ ಹೋರಾಡುವ ಶಕ್ತಿ ಹೆಚ್ಚುತ್ತದೆ.

ನಿಂತಲ್ಲಿಯೇ ಮಾಡಬಹುದಾದ ವ್ಯಾಯಾಮಗಳು

ನಿಂತಲ್ಲಿಯೇ ಮಾಡಬಹುದಾದ ವ್ಯಾಯಾಮಗಳು

ಕುಳಿತೇ ಇದ್ದಾಗ ದಹಿಸಲ್ಪಡುವ ಕ್ಯಾಲೋರಿಗಳಿಗಿಂತಲೂ ನಿಂತಿದ್ದಾಗ ಹೆಚ್ಚು ದಹಿಸಲ್ಪಡುತ್ತವೆ. ಹಾಗಾಗಿ, ಇಡಿಯ ದಿನ ಕುಳಿತೇ ಇರದೇ ಆಗಾಗ ಎದ್ದು ಅಡ್ಡಾಡುತ್ತಿರಿ ಹಾಗೂ ಕೊಂಚ ಕಾಲ ನಿಂತೇ ಕಾಲ ಕಳೆಯಿರಿ. ನಿಂತಿದ್ದಲ್ಲಿಯೇ ಕೈಗಳನ್ನು ಹಿಂದೆ ಚಾಚುವುದು, ಪಕ್ಕಕ್ಕೆ ಚಾಚುವುದು, ಬೆರಳುಗಳನ್ನು ಪರಸ್ಪರ ಬಂಧಿಸಿ ತಲೆಯ ಮೇಲೆ ತೆಗೆದುಕೊಂಡು ಹೋಗುವುದು ಅಥವಾ ಮುಂದಕ್ಕೆ ಚಾಚುವುದು ಮೊದಲಾದ ಸರಳ ವ್ಯಾಯಾಮಗಳನ್ನು ಆಗಾಗ ಮಾಡುತ್ತಿರಿ. ಇದರಿಂದ ನಿಮ್ಮ ಹೃದಯದ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ ಹಾಗೂ ಬೆನ್ನು ನೋವು ಮತ್ತು ಇತರ ಚಲನಾರಾಹಿತ್ಯ ಕಾರಣದಿಂದ ಎದುರಾಗುವ ಕಾಯಿಲೆಗಳ ಸಾಧ್ಯತೆ ತಗ್ಗುತ್ತದೆ.

ಭುಜದ ಸ್ನಾಯುಗಳನ್ನು ಹುರಿಗಟ್ಟಿಸುವ ವ್ಯಾಯಮಗಳು

ಭುಜದ ಸ್ನಾಯುಗಳನ್ನು ಹುರಿಗಟ್ಟಿಸುವ ವ್ಯಾಯಮಗಳು

ನೀವು ಕೆಲಸ ಮಾಡುವ ಸ್ಥಳದಲ್ಲಿಯೇ ಈ ವ್ಯಾಯಮಗಳನ್ನು ಮಾಡಬಹುದು. ಬೆನ್ನು ಕುರ್ಚಿಯ ಬೆನ್ನಿನ ಭಾಗಕ್ಕೆ ತಗುಲಿದ್ದು ನೇರವಾಗಿರುವಂತೆ ಇರಿಸಿ. ಪಾದಗಳು ನೆಲದ ಮೇಲೆ ಪೂರ್ಣವಾಗಿ ಊರುವಂತೆ ಇರಿಸಿ. ಈಗ ಕೈಗಳನ್ನು ಮುಂದಕ್ಕೆ ಚಾಚಿ ಹೆಬ್ಬೆರಳು ಮೇಲೆ ಇರುವಂತೆ ತಲೆಯ ಮೇಲಕ್ಕೆ ತನ್ನಿ. ಕೈಗಳು ತಲೆಯ ಮೇಲಿದ್ದಂತೆಯೇ ದೀರ್ಘ ಉಸಿರೆಳೆದುಕೊಳ್ಳಿ ಮತ್ತು ಕನಿಷ್ಟ ಅರ್ಧ ನಿಮಿಷ ಉಸಿರುಗಟ್ಟಿ. ನಂತರ ಇದೇ ಕ್ರಮದಲ್ಲಿ ಕೈಗಳನ್ನು ನಿಧಾನವಾಗಿ ಮೊದಲ ಹಂತಕ್ಕೆ ತಂದು ನಿಧಾನವಾಗಿ ಉಸಿರು ಬಿಡಿ. ನಾಲ್ಕಾರು ಬಾರಿ ಮಾಡಿದರೆ ಸಾಕು. ನಿಮ್ಮ ಭುಜಗಳ ಸ್ನಾಯುಗಳು ಹೆಚ್ಚು ಬಲಯುತಗೊಳ್ಳುತ್ತವೆ.

ಮಧ್ಯಾಹ್ನದ ವ್ಯಾಯಮವನ್ನು ಪರಿಗಣಿಸಿ

ಮಧ್ಯಾಹ್ನದ ವ್ಯಾಯಮವನ್ನು ಪರಿಗಣಿಸಿ

ಮಧ್ಯಾಹ್ನ ಯಾರೂ ಸಾಮಾನ್ಯವಾಗಿ ವ್ಯಾಯಾಮ ಮಾಡುವುದಿಲ್ಲ. ಅಂದರೆ ನಿಜಕ್ಕೂ ವ್ಯಾಯಾಮಶಾಲೆಗೆ ಹೋಗಬೇಕಾಗಿಲ್ಲ. ಬದಲಿಗೆ, ಊಟದ ನಂತರ ಕೊಂಚ ಹೊತ್ತು ವಿಶ್ರಮಿಸಿ ನಿಮ್ಮ ಊಟದ ಅವಧಿಯ ಉಳಿದ ಅವಧಿಯನ್ನು ಕೊಂಚ ದೂರ ನಡೆದಾಡಿಕೊಂಡು ಬರಲು ಉಪಯೋಗಿಸಿ. ಮೆಟ್ಟಿಲು ಏರುವುದು ಅಥವಾ ಯಾವುದಾದರೂ ಕಾರ್ಯವನ್ನು ಕೊಂಚ ದೂರ ಹೋಗಿ ಬರುವ ಮೂಲಕ ನಿರ್ವಹಿಸುವುದು ಮೊದಲಾದವುಗಳನ್ನು ಅಭ್ಯಾಸ ಮಾಡಿಕೊಳ್ಳಿ.

ಮಾತನಾಡುತ್ತಿರುವಾಗ ನಡೆದಾಡಿ

ಮಾತನಾಡುತ್ತಿರುವಾಗ ನಡೆದಾಡಿ

ನಿಮ್ಮ ಕೆಲಸದಲ್ಲಿ ದೂರವಾಣಿ ಕರೆಗಳು ಅಗತ್ಯವಾಗಿದ್ದರೆ ಮತ್ತು ಈ ಕರೆಗಳ ಸಮಯದಲ್ಲಿ ನೀವು ಸುಮ್ಮನೇ ಕುಳಿತೇ ಇರುವ ಬದಲು ಆ ಸಮಯದಲ್ಲಿ ಆದಷ್ಟೂ ನಡೆದಾಡಿ.

ಕೊನೆಯದಾಗಿ

ಕೊನೆಯದಾಗಿ

ಕುಳಿತುಕೊಳ್ಳುವುದೇ ಅನಾರೋಗ್ಯಕರವೇ? ಅಲ್ಲ! ವಿಶ್ರಮಿಸಲು ಕುಳಿತುಕೊಳ್ಳುವುದು ಅಗತ್ಯ. ಆದರೆ ಇಡಿಯ ದಿನ ಅಲ್ಲ! ದಿನದ ಹೆಚ್ಚಿನ ಹೊತ್ತು ಕುಳಿತೇ ಇರುವುದರಿಂದ ಹೃದಯದ ತೊಂದರೆಗಳು, ಮಧುಮೇಹ, ಮೂತ್ರಪಿಂಡದ ಕಾಯಿಲೆಗಳು, ಶ್ವಾಸಕೋಶದ ಕಾಯಿಲೆಗಳು, ಯಕೃತ್, ನರವ್ಯವಸ್ಥೆ ಮತ್ತು ಮೂಳೆ-ಸ್ನಾಯುಗಳಿಗೆ ಸಂಬಂಧಿಸಿದ ತೊಂದರೆಗಳು ಆವರಿಸುವ ಸಾಧ್ಯತೆ ಹೆಚ್ಚುತ್ತದೆ.

ಅಲ್ಲದೇ ಕುಳಿತೇ ಇರುವವರಿಗೆ ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಅಧಿಕ ರಕ್ತದ್ದಲ್ಲಿ ಸಕ್ಕರೆಯ ಮಟ್ಟ, ಅಧಿಕ ಕೊಲೆಸ್ಟ್ರಾಲ್ ಮೊದಲಾದ ತೊಂದರೆಗಳೂ ಎದುರಾಗುವ ಸಾಧ್ಯತೆ ಹೆಚ್ಚುತ್ತದೆ. ಕುಳಿತಿದ್ದಷ್ಟೂ ಹೊತ್ತು ದೇಹ ನಿಂತಾಗ ಬಳಸಿಕೊಳ್ಳುವುದಕ್ಕಿಂತಲೂ ಕಡಿಮೆ ಶಕ್ತಿಯನ್ನು ಬಳಸಿಕೊಳ್ಳುತ್ತದೆ ಹಾಗೂ ಇದೇ ಹಲವಾರು ಅನಾರೋಗ್ಯಗಳಿಗೆ ಮೂಲವಾಗಿದೆ. ಪ್ರಕೃತಿ ನಿಯಮದ ಪ್ರಕಾರ ನಮ್ಮ ದೇಹ ಸದಾ ಚಟುವಟಿಕೆಯಿಂದ ಇರಬೇಕು. ಇದರಿಂದ ವಂಚಿತರಾದಷ್ಟೂ ನಿಸರ್ಗ ನಿಯಮಕ್ಕೆ ವಿರುದ್ದವಾಗಿದ್ದು ಅನಾರೋಗ್ಯ ಇದರ ಫಲವಾಗಿರುತ್ತದೆ.

English summary

Sitting Disease: The Side Effects Of Sitting For Too Long

Here we are discussing about Sitting Disease: The Side Effects Of Sitting For Too Long. Read more.
X
Desktop Bottom Promotion