Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ನೀವು ಹೀಗೆ ಮಾಡಿದ್ದೇ ಆದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಬಂದಾಗಿನಿಂದ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಈ ಹಿಂದೆಗಿಂತಲೂ ಹೆಚ್ಚಾಗಿದೆ. ಜೊತೆಗೆ ಈ ಕಾರಣದಿಂದ ಜನರು ಹೊರಗಡೆ ತಿನ್ನುವುದು, ಫಾಸ್ಟ್ ಫುಡ್ಸ್, ರೆಡಿ ಟು ಕುಕ್ ಫುಡ್ಸ್ ತಿನ್ನುವುದು ಇವುಗಳಿಂದ ಸ್ವಲ್ಪ ದೂರವಾಗಿ ಮನೆಯಲ್ಲಿಯೇ ಕಷಾಯ ಮಾಡಿ ಕುಡಿಯುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವಿಸುವುದು ಮಾಡುತ್ತಿದ್ದಾರೆ.

ಕೊರೊನಾವೈರಸ್ ನಿಯಂತ್ರಿಸಲು ಇದುವರೆಗೆ ಯಾವುದೇ ಲಸಿಕೆ ಬಂದಿಲ್ಲ. ಸದ್ಯಕ್ಕೆ ನಮ್ಮ ಮುಂದೆ ಇರುವ ದಾರಿಯೆಂದರೆ ನಮ್ಮಲ್ಲಿರುವ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ಆರೋಗ್ಯ ತಜ್ಞರು ಹೇಳುವ ಪ್ರಕಾರ ಒಂದೇ ದಿನದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದಿಲ್ಲ, ಅದಕ್ಕಾಗಿ ನಾವು ಕೆಲವೊಂದು ಅಂಶಗಳನ್ನು ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಲು ನಾವೇನು ಮಾಡಬೇಕು ಎಂದು ನೋಡೋಣ ಬನ್ನಿ:

1. ಯೋಗ ಆರಂಭಿಸಿ
ಸರ್ವರೋಗವನ್ನು ದೂರವಿಡುವ ಶಕ್ತಿ ಯೋಗದಲ್ಲಿದೆ. ಯೋಗ ಅಭ್ಯಾಸ ಮಾಡುತ್ತಿದ್ದರೆ ಕೆಲವೇ ತಿಂಗಳಿನಲ್ಲಿ ನಿಮ್ಮ ಶರೀರ ಹಾಗೂ ಮನಸ್ಸಿನಲ್ಲಿ ವ್ಯತ್ಯಾಸ ಗಮನಿಸಬಹುದು. ವಾಕಿಂಗ್, ಜಾಗಿಂಗ್ ಮಳೆಗಾಲದಲ್ಲಿ ಮಾಡಲು ಕಷ್ಟವಾಗುತ್ತದೆ. ಆದರೆ ಯೋಗಾಸನವನ್ನು ಎಲ್ಲಾ ಕಾಲದಲ್ಲಿಯೂ ಮಾಡಬಹುದಾಗಿದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ ದೈಹಿಕ ಸೌಂದರ್ಯವನ್ನೂ ಹೆಚ್ಚಿಸುತ್ತದೆ.

2. ಎಣ್ಣೆಯಲ್ಲಿ ಬಾಯಿ ಮುಕ್ಕಳಿಸುವುದು (Oil pulling)
ಎಣ್ಣೆಯಲ್ಲಿ ಬಾಯಿ ಮುಕ್ಕಳಿಸುವುದು ಹಿಂದಿನ ಕಾಲದಿಂದಲೂ ಮಾಡುತ್ತಾ ಬರುತ್ತಿದ್ದಾರೆ. 1-2 ಚಮಚ ಶುದ್ಧ ಕೊಬ್ಬರಿ ಎಣ್ಣೆಯನ್ನು ಬಾಯಿಯಲ್ಲಿ ಹಾಕಿ 4-5 ನಿಮಿಷ ಬಾಯಿ ಮುಕ್ಕಳಿಸಿದರೆ ಬಾಯಲ್ಲಿರುವ ಹಾನಿಕಾರಕ ಬ್ಯಾಕ್ಟಿರಿಯಾಗಳು ನಾಶವಾಗುತ್ತದೆ, ದಂತದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇದನ್ನು ಪ್ರತಿದಿನ ಮಾಡುವಂತೆ ಆಯುಷ್ ಇಲಾಖೆ ಕೂಡ ಸಲಹೆ ನೀಡಿದೆ.

3. ಸಾಕಷ್ಟು ನೀರು ಕುಡಿಯಿರಿ
ಬೆಳಗ್ಗೆ ಎದ್ದ ತಕ್ಷಣ ಎರಡು ಲೋಟ ನೀರು ಕುಡಿಯುವುದು ತುಂಬಾನೇ ಒಳ್ಳೆಯ ಅಭ್ಯಾಸ. ಅದರಲ್ಲೂ ಬಿಸಿ ನೀರಿಗೆ ಸ್ವಲ್ಪ ಜೇನು ಮತ್ತು ನಿಂಬೆಹಣ್ಣು ಹಾಕಿ ಸೇವಿಸಿದರೆ ತುಂಬಾನೇ ಒಳ್ಳೆಯದು. ಜೊತೆಗೆ ಸ್ವಲ್ಪ ಅರಿಶಿಣ ಹಾಕಿದ ನಿರು, ಅಶ್ವಗಂಧ ಪುಡಿ ಹಾಕಿದ ನೀರು ಕುಡಿಯುವುದು ಒಳ್ಳೆಯದು. ದಿನದಲ್ಲಿ 8 ಲೋಟ ಅಂದರೆ ಮೂರರಿಂದ ಮೂರೂವರೆ ಲೀಟರ್ ನೀರು ಕುಡಿಯಬೇಕು.

4. ವ್ಯಾಯಾಮ ಮಾಡಿ
ಬೆಳಗ್ಗೆ ಎದ್ದು 30 ನಿಮಿಷ ವ್ಯಾಯಾಮ ಮಾಡಿ. ನಡೆಯುವುದು, ವಾಕಿಂಗ್ , ಸೈಕ್ಲಿಂಗ್ ಈ ರೀತಿ ಮಾಡುವುದು ಒಳ್ಳೆಯದು. ಯೋಗ ಮಾಡುವುದಾದರೆ ಆಸನಗಳನ್ನು ಮಾಡುವ ಮುನ್ನ ಅರ್ಧ ಗಂಟೆ ವ್ಯಾಯಾಮ ಮಾಡಿ ನಂತರ ಆಸನಗಳನ್ನು ಅಭ್ಯಾಸ ಮಾಡಿ.

5. ಬ್ರೇಕ್‌ಫಾಸ್ಟ್ ಮಿಸ್ ಮಾಡಲೇಬೇಡಿ
ಬೆಳಗ್ಗಿನ ಬ್ರೇಕ್‌ಫಾಸ್ಟ್ ಮಿಸ್ ಮಾಡಲೇಬಾರದು. ಬ್ರೇಕ್‌ಫಾಸ್ಟ್‌ನಲ್ಲಿ ಪ್ರೊಟೀನ್, ಕಾರ್ಬ್ಸ್, ಆರೋಗ್ಯಕರ ಕೊಬ್ಬಿನಂಶ ಇರುವಂತೆ ನೋಡಿಕೊಳ್ಳಿ. ಹಣ್ಣಿನ ಜ್ಯೂಸ್ ಕುಡಿಯಿರಿ.
ಇಷ್ಟೇ ಮಾಡಿದರೆ ಸಾಕು ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.



Click it and Unblock the Notifications
