For Quick Alerts
ALLOW NOTIFICATIONS  
For Daily Alerts

ಈ ಲಕ್ಷಣಗಳಿದ್ದರೆ ನಿಮಗೆ ಸೂರ್ಯನ ಕಿರಣದ ಕೊರತೆ ಇದೆ ಎಂದರ್ಥ

|

ಬಿಸಿಲಿಗೆ ಹೋದರೆ ಚರ್ಮ ಕಪ್ಪಾಗುತ್ತದೆ ಎಂಬ ಕಾರಣಕ್ಕೆ ಹಲವರು ಬಿಸಿಲಿಗೆ ಒಡ್ಡಿಕೊಳ್ಳುವುದೇ ಇಲ್ಲ. ವಾಸ್ತವದಲ್ಲಿ, ನಮ್ಮ ದೇಹಕ್ಕೆ ಬಿಸಿಲು ಸಹಾ ಅಗತ್ಯವಿದೆ. ನಮ್ಮ ದೇಹದ ಹಲವಾರು ಅಗತ್ಯತೆಗಳು ಬಿಸಿಲಿನಿಂದ ಪೂರ್ಣಗೊಳ್ಳುತ್ತವೆ.

Signs That You Are Not Getting Enough Sunlight

ಆದರೆ ಬಿಸಿಲಿ ಅತಿ ಹೆಚ್ಚಾದರೂ ಇದು ಮಾರಕವೇ ಹೌದು. ವಿಶೇಷವಾಗಿ ಮಧ್ಯಾಹ್ನದ ಬಿಸಿಲು ಚರ್ಮದ ಕ್ಯಾನ್ಸರ್ ಗೂ ಕಾರಣವಾಗಬಹುದು. ಅಲ್ಲದೇ ಇಂದಿನ ಕೊರೋನಾವೈರಸ್ ಗೃಹಬಂಧನದ ಸಮಯದಲ್ಲಂತೂ ಹೊರಗೆ ಹೋಗುವುದೇ ದುಸ್ತರವಾಗಿರುವಾಗ ಬಿಸಿಲಿಗೆ ಒಡ್ಡಿಕೊಳ್ಳುವುದು ಇನ್ನೂ ಕಷ್ಟವೇ ಹೌದು.

ಆದರೆ CDC (ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಯ ತಜ್ಞರು ಹೇಳುವಂತೆ ನೀವು ಇನ್ನೂ ಸಾಮಾಜಿಕ ದೂರದಲ್ಲಿರುವವರೆಗೆ ಮತ್ತು ಮಾಸ್ಕ್ ಗಳನ್ನು ಧರಿಸುವಂತಹ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವವರೆಗೆ ಸ್ವಲ್ಪ ಶುದ್ಧ ಗಾಳಿಯನ್ನು ಪಡೆಯುವುದು ಸರಿ.

ಆದರೆ ಅತಿ ಕಡಿಮೆ ಸೂರ್ಯನನ್ನು ಪಡೆಯುತ್ತಿದ್ದರೆ ನಿಮ್ಮ ದೇಹ ಬಿಸಿಲಿನಿಂದ ಪಡೆಯುವ ಪ್ರಯೋಜನಗಳನ್ನು ಪಡೆಯದೇ ಹೋಗಿ ಕೆಲವು ಕೊರತೆಗಳು ಎದುರಾಗಬಹುದು.

ಈ ಕೊರತೆಗಳನ್ನು ಪ್ರಕಟಿಸುವ ಈ ಚಿಹ್ನೆಗಳನ್ನು ಗುರುತಿಸಿದರೆ ನೀವು ಆದಷ್ಟೂ ಮಟ್ಟಿಗೆ ಬೆಳಗ್ಗಿನ ಮತ್ತು ಸಂಜೆಯ ಬಿಸಿಲಿಗೆ ಮನೆಯೊಳಗಿದ್ದುಕೊಂಡೇ ಒಡ್ಡಿಕೊಳ್ಳುವುದು ಅಗತ್ಯವಾಗಿದೆ. ಸಾಧ್ಯವಾದರೆ ಮನೆಯ ಹೊರಗೆ, ಮೆಟ್ಟಿಲು, ಛಾವಣಿ ಮೊದಲಾದ ಸ್ಥಳಗಳ ಉಪಯೋಗ ಪಡೆದುಕೊಳ್ಳಬಹುದು.

ನಿಮ್ಮ ಮನೋಭಾವ ಸೂಕ್ಷ್ಮವಾಗುತ್ತದೆ ಮತ್ತು ಖಿನ್ನತೆಯೂ ಆವರಿಸಬಹುದು

ನಿಮ್ಮ ಮನೋಭಾವ ಸೂಕ್ಷ್ಮವಾಗುತ್ತದೆ ಮತ್ತು ಖಿನ್ನತೆಯೂ ಆವರಿಸಬಹುದು

ತಂಪಾದ ತಾಪಮಾನದಲ್ಲಿ ಮಾನಸಿಕವಾಗಿ ಕುಗ್ಗುವಿಕೆ ಮಂಕು ಕವಿಯಬಹುದು. ಮನಸ್ಥಿತಿಗಳನ್ನು ತರಬಹುದು. ನೀವು ಇದನ್ನು ಚಳಿಗಾಲದ ಬ್ಲೂಸ್, ಕ್ಯಾಬಿನ್ ಜ್ವರ ಅಥವಾ SAD- (seasonal affective disorder (SAD) ಎಂದು ಕರೆಯುತ್ತರೆ, ವೈದ್ಯರು ತಂಪಾದ-ಹವಾಮಾನದ ಮನಸ್ಥಿತಿಗೆ ಬಿಸಿಲಿನ ಕೊರತೆಯನ್ನು ಪ್ರಮುಖವಾಗಿ ಗುರುತಿಸುತ್ತಾರೆ.

"ಮೂಲತಃ, ಇದು ನಿಮ್ಮ ಮೆದುಳಿನಲ್ಲಿರುವ ಸಿರೊಟೋನಿನ್ ಎಂಬ ರಸದೂತವನ್ನು ಸರಿಯಾದ ಮ್ಮಟ್ಟಕ್ಕೆ ತರುತ್ತದೆ." ಎಂದು ಅಕಾಡೆಮಿ ಫಾರ್ ನ್ಯೂಟ್ರಿಷನ್ ಅಂಡ್ ಡಯೆಟಿಕ್ಸ್ ಸಂಸ್ಥೆಯ ವಕ್ತಾರರಾಗಿರುವ ವೆಸ್ಲಿ ಡೆಲ್ಬ್ರಿಡ್ಜ್ ವಿವರಿಸುತ್ತಾರೆ. "ಸೂರ್ಯನ ಬೆಳಕಿನಂತೆ ಪ್ರಕಾಶಮಾನವಾದ ಬೆಳಕಿಗೆ ಒಡ್ಡಿಕೊಳ್ಳುವುದರಿಂದ, ಸಿರೊಟೋನಿನ್ ಮಟ್ಟ ಹೆಚ್ಚಾಗುತ್ತದೆ." ಹಾಗಾಗಿ, ಮುಂಜಾನೆಯ ಬಿಸಿಲಿನಲ್ಲಿ ಕೊಂಚ ಅಡ್ಡಾಡುವುದು ಅಥವಾ ಬಿಸಿಲಿನಲ್ಲಿ ಕೊಂಚ ಹೊತ್ತು ಕುಳಿತುಕೊಳ್ಳುವುದು ಮೆದುಳಿನ ಆರೋಗ್ಯಕ್ಕೆ ಅತಿ ಅವಶ್ಯಕವಾಗಿದೆ.

ನಿಮ್ಮ ತೂಕ ಹೆಚ್ಚುತ್ತಿದೆ

ನಿಮ್ಮ ತೂಕ ಹೆಚ್ಚುತ್ತಿದೆ

ನಮ್ಮ ದೇಹದಲ್ಲಿ ವಿಟಮಿನ್ ಡಿ ತಯಾರಿಕೆಗೆ ಚರ್ಮವನ್ನು ಪ್ರೋತ್ಸಾಹಿಸುವುದರ ಜೊತೆಗೆ, ಸೂರ್ಯನ ಬೆಳಕು ಪ್ರಮುಖ ಪೋಷಕಾಂಶಗಳಾದ ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸಲೂ ಅಗತ್ಯವಾಗಿದೆ. , ಇದು ನಿಮ್ಮ ಜೀವ ರಾಸಾಯನಿಕ ಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ ಮತ್ತು ಅತಿಯಾದ ಆಹಾರದ ಸೇವನೆಯಿಂದ ತಡೆಯುತ್ತದೆ.

ಡಯಾಬಿಟಿಸ್ ಜರ್ನಲ್ ಎಂಬ ಮಾಧ್ಯಮದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಅತಿನೇರಳೆ (UV) ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ತೂಕದ ಹೆಚ್ಚಳ ನಿಧಾನವಾಗುತ್ತದೆ ಮತ್ತು ಮಧುಮೇಹವನ್ನೂ ತಡವಾಗಿಸಬಹುದು. ನೇಚರ್ ಪತ್ರಿಕೆಯಲ್ಲಿ 2017 ರಲ್ಲಿ ಪ್ರಕಟವಾದ ಇನ್ನೊಂದು ವರದಿಯ ಪ್ರಕಾರ ಕೆನಡಾದಲ್ಲಿ ನಡೆಸಿದ ಅಧ್ಯಯನಲ್ಲಿ ಚಳಿಗಾಲದಲ್ಲಿ ತೂಕ ಹೆಚ್ಚಾಗುವುದು ಸೂರ್ಯನ ಬೆಳಕಿನ ಕೊರತೆಯಿಂದಾಗಿರಬಹುದು ಎಂದು ಕಂಡುಕೊಳ್ಳಲಾಗಿದೆ. ಆದರೂ, ಆರೋಗ್ಯಕರ ಬಿಸಿಲು ಮೈಗೆ ಒಡ್ಡುವ ಅವಧಿಯನ್ನು ನಿರ್ಧರಿಸಲು ಮತ್ತು ತೀವ್ರಗೊಳಿಸಲು ಈ ವಿಷಯದ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಾಗಿದೆ.

ಮೂಳೆಗಳು ಶಿಥಿಲಗೊಳ್ಳುತ್ತವೆ

ಮೂಳೆಗಳು ಶಿಥಿಲಗೊಳ್ಳುತ್ತವೆ

ವಯಸ್ಕರಲ್ಲಿ ಸಂಧಿವಾತ ಅಥವಾ ಫೈಬ್ರೊಮ್ಯಾಲ್ಗಿಯ (fibromyalgia ದೀರ್ಘಕಾಲದ ಸ್ನಾಯು ನೋವು ಮತ್ತು ಆಯಾಸ) ಎಂದು ತಪ್ಪಾಗಿ ಗ್ರಹಿಸಬಹುದಾದ ಅಂಶವೆಂದರೆ ಸೂರ್ಯನ ಬೆಳಕಿನ ಕೊರತೆಯಿಂದಾಗಿ ವಿಟಮಿನ್ ಡಿ ಕೊರತೆಯಾಗಿರಬಹುದು ಎಂದು ಡೆಲ್ಬ್ರಿಡ್ಜ್ ರವರು ವಿವರಿಸುತ್ತಾರೆ. ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯದ ವಯಸ್ಕರು, ವಿಶೇಷವಾಗಿ ಚಳಿಗಾಲದಲ್ಲಿ ಹೊರಗೆ ಸಮಯ ಕಳೆಯಲು ಚಳಿಯಿಂದಾಗಿ ಹಿಂದೇಟು ಹಾಕುತ್ತಿದ್ದರೆ ಆಗಾಗ್ಗೆ ಅವರ ಸ್ನಾಯುಗಳು ಮತ್ತು ಮೂಳೆಗಳಲ್ಲಿ ನೋವು ಮತ್ತು ಸೆಳೆತವನ್ನು ಅನುಭವಿಸುತ್ತಾರೆ, ಅಥವಾ ಬೆಳಿಗ್ಗೆ ಕೊಂಚ ಸೆಡೆತವೂ ಕಾಣಿಸಿಕೊಳ್ಳಬಹುದು.

ಕ್ಯಾಲ್ಸಿಯಂ ಮತ್ತು ಕೊಲ್ಯಾಜೆನ್ ನಂತಹ ಪೋಷಕಾಂಶಗಳು ಮೂಳೆಗಳನ್ನು ನಿರ್ಮಿಸಲು ಅಗತ್ಯವಾಗಿವೆ. ಆದರೆ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಇಲ್ಲದೇ ಹೋದರೆ ಈ ಪೋಷಕಾಂಶಗಳಿದ್ದೂ ಪ್ರಯೋಜನಕ್ಕೆ ಬಾರದಂತಾಗುತ್ತದೆ. ಹಾಗಾಗಿ, ವಿಟಮಿನ್ ಡಿ ಪಡೆಲಿಕ್ಕೋಸ್ಕರವಾದರೂ ಬಿಸಿಲಿಗೆ ಒಡ್ಡಿಕೊಳ್ಳುವುದು ಅಗತ್ಯವಾಗಿದೆ.

ನಿಮಗೆ ಸಾಕಷ್ಟು ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ

ನಿಮಗೆ ಸಾಕಷ್ಟು ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ

ಸೂರ್ಯನ ಬೆಳಕಿನ ಕೊರತೆಯು ಸೂರ್ಯ ಮುಳುಗಿದ ನಂತರ ನಿಮ್ಮ ದೇಹದ ಮೇಲೆ ಪ್ರಭಾವನ್ನು ಉಂಟುಮಾಡುತ್ತದೆ. ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ, ಕೃತಕ ಬೆಳಕಿನಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದು ಅಥವಾ ಎಲೆಕ್ಟ್ರಾನಿಕ್ ಪರದೆಗಳನ್ನು ನೋಡುವುದು ಗಂಭೀರ ನಿದ್ರೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ವಾಸ್ತವದಲ್ಲಿ ನೀವು ಮನೆಯೊಳಗೇ ಹೆಚ್ಚು ಕಾಲ ಕಳೆಯುವ ಮೂಲಕ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದು ಕಡಿಮೆಯಾದರೆ, ನಿಮ್ಮ ಸಿರ್ಕಾಡಿಯನ್ ಲಯವನ್ನು(circadian rhythm-ನಿಮ್ಮ ದೇಹದ ಆಂತರಿಕ ಗಡಿಯಾರ) ಏರುಪೇರುಗೊಳ್ಳುತ್ತದೆ, ಇದರರ್ಥ ನೀವು ಸಾಕಷ್ಟು ಗಾಢವಾಗಿ ನಿದ್ರಿಸುತ್ತಿಲ್ಲ ಮತ್ತು ನಿದ್ರಾಹೀನತೆಗೆ ಇದು ನೇರವಾಗಿ ಕಾರಣವಾಗಬಹುದು..

ನೀವು ಅಗತ್ಯಕ್ಕೂ ಹೆಚ್ಚು ಬೆವರು ಸುರಿಸುತ್ತಿದ್ದೀರಿ

ನೀವು ಅಗತ್ಯಕ್ಕೂ ಹೆಚ್ಚು ಬೆವರು ಸುರಿಸುತ್ತಿದ್ದೀರಿ

ವ್ಯಾಯಾಮ ಮಾಡದೇ ಇದ್ದರೂ ಸೆಖೆ ಇರದೇ ಇದ್ದರೂ ನಿಮ್ಮ ಹಣೆಯ ಮೇಲೆ ಹೆಚ್ಚು ಬೆವರು ಸಂಗ್ರಹವಾಗುತ್ತಿದ್ದರೆ ನಿಮ್ಮ ದೇಹದಲ್ಲಿ ಅಗತ್ಯಕ್ಕೆ ತಕ್ಕಷ್ಟು ವಿಟಮಿನ್ ಡಿ ಇಲ್ಲ ಎಂಬುದರ ಸ್ಪಷ್ಟ ಸಂಕೇತವಾಗಿದೆ. ನಿಮ್ಮ ಹಣೆಯಲ್ಲಿ ಬೆವರು ಮಣಿಗಟ್ಟಿದ್ದರೆ (ನಿಮ್ಮ ದೇಹದ ಉಷ್ಣತೆ ಮತ್ತು ಚಟುವಟಿಕೆಯ ಮಟ್ಟ ಸಾಮಾನ್ಯವಾಗಿದ್ದರೂ ಸಹ), ವಿಟಮಿನ್ ಡಿ ಕೊರತೆಗಾಗಿ ನಿಮ್ಮ ರಕ್ತವನ್ನು ಪರೀಕ್ಷಿಸುವ ಬಗ್ಗೆ ನಿಮ್ಮ ವೈದ್ಯರನ್ನು ಕೇಳುವ ಸಮಯ ಇದಾಗಿರಬಹುದು. ವಿಟಮಿನ್ ಡಿ ಕೊಂಚ ಪ್ರಮಾಣದಲ್ಲಿದ್ದು ದೇಹದ ಅಗತ್ಯಕ್ಕೆ ತಕ್ಕಷ್ಟು ಇಲ್ಲದಿದ್ದರೂ ಮಧುಮೇಹ, ಅಸ್ಥಿಸಂಧಿವಾತ ಮತ್ತು ಕ್ಯಾನ್ಸರ್ ಸೇರಿದಂತೆ ಕೆಲವಾರು ಆರೋಗ್ಯ ಸ್ಥಿತಿಗಳನ್ನು ಇವು ಉಲ್ಬಣಿಸಬಹುದು.

ನೀವು ಸದಾ ಸನ್ ಸ್ಕ್ರೀನ್ ಬಳಸುತ್ತಿದ್ದೀರಿ

ನೀವು ಸದಾ ಸನ್ ಸ್ಕ್ರೀನ್ ಬಳಸುತ್ತಿದ್ದೀರಿ

ಬಿಸಿಲಿಗೆ ಹೋಗುವಾಗ ಸನ್ ಸ್ಕ್ರೀನ್ ಬಳಸುವುದು ಒಳ್ಳೆಯದೇ ಹೌದು. ಆದರೆ ಇಡಿಯ ದಿನ ಅಲ್ಲ. ವಾಸ್ತವದಲ್ಲಿ, ಮಧ್ಯಾಹ್ನದ ಬಿರು ಬಿಸಿಲು ಹೆಚ್ಚು ಮಾರಕವೇ ಹೊರತು ಬೆಳಗ್ಗಿನ ಮತ್ತು ಸಂಜೆಯ ಕಿರಣಗಳಲ್ಲ. ಹಾಗಾಗಿ ಇಡಿಯ ದಿನ ಸನ್ ಸ್ಕ್ರೀನ್ ಬಳಸುವ ಅಗತ್ಯವೇ ಇಲ್ಲ. ಡಾ. ಹಾಲಿಕ್ ರವರ ಪ್ರಕಾರ ದಿನಕ್ಕೆ ಹತ್ತರಿಂದ ಹದಿನೈದು ನಿಮಿಷ ಬಿಸಿಲಿಗೆ ಒಡ್ಡಿಕೊಂಡರೂ ಸಾಕಾಗುತ್ತದೆ.

ಆದರೆ ಈ ಹತ್ತರಿಂದ ಹದಿನೈದು ನಿಮಿಷ ನಡುಮಧ್ಯಾಹ್ನವೇ ಆಗಬೇಕೆಂದಿಲ್ಲ ಬೆಳಗ್ಗಿನ ಮತ್ತು ಸಂಜೆಯ ಬಿಸಿಲೂ ಒಳ್ಳೆಯದು. ಸೂರ್ಯೋದಯದ ಮೊದಲ ಕಿರಣಗಳು ಮತ್ತು ಸೂರ್ಯಾಸ್ತದ ಕಡೆಯ ಕಿರಣಗಳು ದೇಹಕ್ಕೆ ಕನಿಷ್ಟ ಹಾನಿಕರ ಮತ್ತು ಹೆಚ್ಚು ಪ್ರಯೋಜನಕಾರಿಯಾಗಿವೆ. ಅಷ್ಟೇ ಅಲ್ಲ, ಅತಿನೇರಳೆ ಕಿರಣಗಳೂ ನಮಗೆ ಮಿತ ಪ್ರಮಾಣದಲ್ಲಿ ಅಗತ್ಯವಿದೆ. ಹಾಗಾಗಿ, ದಿನದಲ್ಲಿ ಕೊಂಚ ಹೊತ್ತಾದರೂ ಸರಿ, ಬಿಸಿಲಿಗೆ ಒಡ್ಡಿಕೊಳ್ಳುವುದು ಅಗತ್ಯವಾಗಿದೆ ಎಂದು ಡೆಲ್ಬ್ರಿಜ್ ರವರು ವಿವರಿಸುತ್ತಾರೆ.

English summary

Signs That You Are Not Getting Enough Sunlight

Here we are discussing about Signs That You Are Not Getting Enough Sunlight. You might want to head out for a walk, sit on your front steps, or sit near a sunny window if you recognize these signs you’re getting too little sun. Read more.
X
Desktop Bottom Promotion