Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
ಕೇರಳದಲ್ಲಿ ಕಂಡುಬಂತು ಮತ್ತೊಂದು ಭಯಾನಕ ವೈರಸ್! ಏನಿದು ಶಿಗೆಲ್ಲಾ?
ಕೊರೋನಾದಿಂದ ಇಡೀ ಜಗತ್ತು ತತ್ತರಿಸಿ ಹೋಗಿರುವಾಗಿರುವಾಗಲೇ ಕೇರಳದಲ್ಲಿ ಮತ್ತೊಂದು ವೈರಸ್ ಹಾವಳಿ ಶುರುವಾಗಿದೆ. ಕೊರೋನಾದಿಂದ ಈಗಾಗಲೇ ಸಾಕಷ್ಟು ಸಾವು-ನೋವು, ಕಷ್ಟ-ನಷ್ಟಗಳನ್ನು ಅನುಭವಿಸಿ, ಚೇತರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಮತ್ತೊಂದು ವೈರಸ್ ಕಾಣಿಸಿಕೊಂಡಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ. ಅಂದಹಾಗೇ ಕೇರಳದಲ್ಲಿ ಕಾಣಿಸಿಕೊಂಡಿರುವ ಈ ವೈರಸ್ ಯಾವುದಪ್ಪ ಅಂತ ಯೋಚನೆ ಮಾಡ್ತಾ ಇದೀರಾ? ಅದೇ ಶಿಗೆಲ್ಲಾ ಬ್ಯಾಕ್ಟೀರಿಯಾ ಅಥವಾ ವೈರಸ್. ಈ ವೈರಸ್ನಿಂದ ಕೇರಳದಲ್ಲಿ ೧೧ವರ್ಷದ ಮಗುವೊಂದು ಮೃತಪಟ್ಟಿದ್ದು, ಈ ಸೋಂಕಿನ ಬಗ್ಗೆ ಜನರು ತೀವ್ರ ಎಚ್ಚರಿಕೆ ವಹಿಸಬೇಕೆಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಸೂಚಿಸಿದ್ದಾರೆ. ಏನಿದು ಶಿಗೆಲ್ಲಾ ಬ್ಯಾಕ್ಟೀರಿಯಾ? ಅದರ ಲಕ್ಷಣಗಳೇನು? ಎಂಬುದನ್ನು ನೋಡ್ಕೊಂಡು ಬರೋಣ.
ಕೇರಳದಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಸೋಂಕು ಪತ್ತೆಯಾಗಿದ್ದು ಇದೇ ಮೊದಲ ಸಲವೇನಲ್ಲ. ಈ ಹಿಂದೆಯೂ ಹಲವು ಬಾರಿಈ ಪ್ರಕರಣಗಳು ವರದಿಯಾಗಿದ್ದವು ಅನ್ನೋ ಮಾಹಿತಿ ಇದೆ. ಸಾಮಾನ್ಯವಾಗಿ ಈ ಬ್ಯಾಕ್ಟೀರಿಯಾ ಕಲುಷಿತ ನೀರಿನಿಂದ ಹರಡುತ್ತದೆ. ಹೀಗಾಗಿ ಅಧಿಕ ಸಾಂದ್ರತೆಯ ಜನಸಂಖ್ಯೆ ಇರುವಲ್ಲಿ ಜನರು ನೀರನ್ನು ಕುದಿಸಿ ಕುಡಿಯುವುದು ಬಹಳ ಮುಖ್ಯ. ಪ್ರತಿಯೊಬ್ಬರೂ ಈ ಎಚ್ಚರಿಕೆಯನ್ನು ಪಾಲಿಸಬೇಕು. ಹಾಗೆಯೇ ಸೂಕ್ತ ರೀತಿಯಲ್ಲಿ ಸ್ವಚ್ಛತೆ ಕಾಪಾಡಬೇಕು.
ಕಳೆದ ಕೆಲವು ದಿನಗಳಿಂದ ವಯನಾಡ್ ಮತ್ತು ಇತರೆ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತಿದೆ. ಸೋಂಕು ಕಂಡುಬಂದ ಪ್ರದೇಶಗಳಲ್ಲಿ ನೀರು ಹಾಗೂ ಆಹಾರದ ಮಾದರಿಗಳನ್ನು ಪರೀಕ್ಷೆಗೆ ಪಡೆಯಲಾಗಿದೆ.

ಏನಿದು ಶಿಗೆಲ್ಲಾ?:
ಅಪಾಯಕಾರಿ ವೈರಾಣು ಸೋಂಕನ್ನು ಸಾಮಾನ್ಯವಾಗಿ ಶಿಗೆಲ್ಲೊಸಿಸ್ ಎಂದು ಕರೆಯಲಾಗುತ್ತದೆ. ಇದು ಶಿಗೆಲ್ಲಾ ಬ್ಯಾಕ್ಟೀರಿಯಾದಿಂದ ಬರುತ್ತದೆ. 10 ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಶಿಗೆಲ್ಲಾ ಸೋಂಕಿಗೆ ಒಳಗಾಗುತ್ತಾರೆ. ಕಲುಷಿತ ನೀರು ಅಥವಾ ಹಳಸಿದ ಆಹಾರ ಸೇವನೆಯಿಂದ ವ್ಯಕ್ತಿಗೆ ಶಿಗೆಲ್ಲಾ ಸೋಂಕು ತಗುಲಬಹುದು. ಮಾತ್ರವಲ್ಲ, ಸೋಂಕಿತ ವ್ಯಕ್ತಿ ಬಳಸಿದ ಶೌಚಾಲಯ ಉಪಯೋಗಿಸಿದಾಗಲೂ ಸೋಂಕು ಹರಡಬಹುದು.

ಶಿಗೆಲ್ಲಾದ ಲಕ್ಷಣಗಳು:
ಶಿಗೆಲ್ಲಾ ಸೋಂಕಿನ ಅತ್ಯಂತ ಪ್ರಮುಖ ಲಕ್ಷಣವೆಂದರೆ ಅತಿಸಾರ (ಡಯೇರಿಯಾ). ಇದರ ಜತೆಗೆ ರೋಗಿಗಳಲ್ಲಿ ಜ್ವರ ಮತ್ತು ಹೊಟ್ಟೆ ನೋವು ಕೂಡ ಕಾಣಿಸಿಕೊಳ್ಳಬಹುದು. ಶಿಗೆಲ್ಲಾ ಸೋಂಕು ತಗುಲಿದ ಒಂದು ಅಥವಾ ಎರಡು ದಿನಗಳಲ್ಲಿ ಅದರ ಲಕ್ಷಣಗಳು ಕಾಣಿಸಲು ಆರಂಭಿಸುತ್ತದೆ. ಈ ಲಕ್ಷಣಗಳು ಒಂದು ವಾರದವರೆಗೂ ಇರಬಹುದು.

ಇದುವರೆಗೆ 6 ಪ್ರಕರಣಗಳು ಖಚಿತ:
ಕೋಯಿಕ್ಕೋಡ್ನಲ್ಲಿ ಕಳೆದ ಕೆಲವು ದಿನಗಳಲ್ಲಿ 26 ಅತಿಸಾರದ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಆರು ಪ್ರಕರಣಗಳು ಶಿಗೆಲ್ಲಾ ಸೋಂಕಿಗೆ ಸಂಬಂಧಿಸಿದ್ದು ಎಂದು ಖಚಿತವಾಗಿದೆ. ತೀವ್ರ ಪ್ರಬಲ ವೈರಸ್ ಸೋಂಕು ರೋಗಿಗಳಲ್ಲಿ ಅತಿಸಾರ ಉಂಟುಮಾಡುವುದು ಇದರ ಪ್ರಮುಖ ಲಕ್ಷಣವಾಗಿದೆ.

ಮುನ್ನೆಚ್ಚರಿಕೆ ಕ್ರಮಗಳು:
ಕುದಿಸಿದ ಸ್ವಚ್ಛ ನೀರು ಕುಡಿಯುವುದು, ಆಹಾರದ ಬಳಕೆಯಲ್ಲಿ ಎಚ್ಚರಿಕೆ ಮತ್ತು ಆಗಾಗ್ಗೆ ಕೈಗಳನ್ನು ಸೋಪು ಬಳಸಿ ತೊಳೆಯುವುದು ಮುಖ್ಯವಾಗಿದೆ. ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು.



Click it and Unblock the Notifications