Latest Updates
-
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು!
ವೈಜ್ಞಾನಿಕವಾಗಿ ನಿದ್ದೆಗೆ ಸೂಕ್ತವಾದ ತಾಪಮಾನ ಎಷ್ಟಿರಬೇಕು ಗೊತ್ತಾ?
ಮಲಗುವ ವಿಷಯ ಬಂದಾಗ ಪ್ರತಿಯೊಬ್ಬರಿಗೂ ತಮ್ಮದೇ ಇಷ್ಟದ ವಾತಾವರಣ ಬೇಕಾಗುತ್ತದೆ. ದಣಿದು ಮನೆಗೆ ಬಂದ ಬಳಿಕ ಕೆಲವರಿಗೆ ಬೆಚ್ಚಗಿದ್ದರೆ, ಕೆಲವರಿಗೆ ತಣ್ಣಗೆ, ಕೆಲವರಿಗೆ ಹೊದಿಕೆಯಿಂದ ಒಂದು ಕಾಲು ಹೊರಹಾಕಿ ಮಲಗುವುದು ಇಷ್ಟವಾಗುತ್ತದೆ. ನಿದ್ದೆಯ ವಿಷಯದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಆದ್ಯತೆಯನ್ನು ಹೊಂದಿರುತ್ತೀರಿ, ಆದರೆ ಉತ್ತಮ ನಿದ್ದೆಗೆ ನೀವು ಮಲಗುವ ಕೋಣೆಯ ತಾಪಮಾನವವನ್ನೂ ಇಲ್ಲಿ ಪರಿಗಣಿಸಬೇಕು. ಹಾಗಿದ್ದರೆ ನಿಮ್ಮ ಕೋಣೆಯನ ತಾಪಮಾನ ಎಷ್ಟಿರಬೇಕು, ಇಲ್ಲಿದೆ ಸಲಹೆ.

ಏಕೆ? ಇಲ್ಲಿದೆ ವಿವರ:
ಮುಂದಿನ ಬಾರಿ, ನಿಮಗೆ ಗಾಢನಿದ್ದೆ ಏಕೆ ಬರಲಿಲ್ಲ ಎಂಬ ಪ್ರಶ್ನೆ ನಿಮಗೆ ಎದುರಾದರೆ ನಿಮ್ಮ ಮಲಗುವ ಕೋಣೆಯ ತಾಪಾಮನದ ಬಗ್ಗೆ ಕೊಂಚ ಗಮನ ಹರಿಸಿ. ಏಕೆಂದರೆ ನಮ್ಮ ದೇಹದ ತಾಪಮಾನ ದಿನದ ಅವಧಿಯಲ್ಲಿ ಹಲವು ಬಾರಿ ಏರುಪೇರಾಗುತ್ತದೆ. ಬೆಳಗ್ಗೆ ಸಾಮಾನ್ಯ ತಾಪಮಾನದಿಂದ ದಿನದ ಗರಿಷ್ಟ ತಾಪಮಾನದಲ್ಲಿ ಏರಿ ಸಂಜೆಯ ಹೊತ್ತಿಗೆ ಇಳಿಮುಖವಾಗುತ್ತದೆ ಮತ್ತು ರಾತ್ರಿಯ ನಿದ್ದೆಗೆ ತಯಾರುಗೊಳಿಸುತ್ತದೆ. ನಮ್ಮ ದೇಹದಲ್ಲಿರುವ ಜೈವಿಕ ಗಡಿಯಾರದಂತೆಯೇ ನಮ್ಮ ದೇಹದ ತಾಪಮಾನಕ್ಕೂ ತನ್ನದೇ ಆದ ಏರಿಳಿತಗಳಿವೆ. ಹಾಗಾಗಿ, ದೇಹದ ತಾಪಮಾನ ಇಳಿಮುಖವಾಗುತ್ತಿರುವಾಗ ನಮ್ಮ ಕೋಣೆಯ ತಾಪಮಾನವೂ ಇದಕ್ಕೆ ಸರಿಹೊಂದುವಂತಿರಬೇಕು, ಆಗ ಮಾತ್ರವೇ ದೇಹ ನಿಸರ್ಗದ ನಿಯಮವನ್ನು ಪಾಲಿಸಿ ಗಾಢ ನಿದ್ದೆ ಪಡೆಯಲು ಸಾಧ್ಯವಾಗುತ್ತದೆ.
ಗಾಢ ನಿದ್ದೆ ಪಡೆಯಲು ಸೂಕ್ತ ತಾಪಮಾನ ಎಷ್ಟಿರಬೇಕು?
ತಜ್ಞರ ಪ್ರಕಾರ, ನಿಮ್ಮ ಕೋಣೆಯ ತಾಪಮಾನದ ನಿಯಂತ್ರಕವನ್ನು 60-67 ಡಿಗ್ರಿ ಫ್ಯಾರನ್ ಹೀಟ್ (15-19 ಡಿಗ್ರಿ ಸೆಲ್ಸಿಯಸ್) ನಷ್ಟಿರುವಂತೆ ಇರಿಸಿದರೆ ಅತಿ ಸೂಕ್ತ. ಹದಿನೈದು ಎಂದರೆ ಗಡಗಡಿಸುವ ಚಳಿ ಮತ್ತು ದಪ್ಪನೆಯ ಕಂಬಳಿ ಇಲ್ಲದೇ ಮಲಗುವುದು ಸಾಧ್ಯವೇ ಇಲ್ಲ ಆದರೆ, ನಮ್ಮ ದೇಹಗಳೂ ತಾಪಮಾನವನ್ನು ಬಿಡುಗಡೆ ಮಾಡುತ್ತವೆ ಎಂಬುದನ್ನು ನೆನಪಿರಿಸಬೇಕು. ತಣ್ಣನೆಯ ವಾತಾವರಣದಲ್ಲಿ ದೇಹದ ಎಲ್ಲಾ ಭಾಗಗಳ ತಾಪಮಾನ ಏಕಪ್ರಕಾರವಾಗಿರಲು ಸಾಧ್ಯವಾಗುತ್ತದೆ ಹಾಗೂ ಈ ತಾಪಮಾನದಲ್ಲಿರಲು ಸಾಕಷ್ಟು ಗಾಳಿಯಾಡುವಂತೆಯೂ ಇರಬೇಕು. ಹಾಗಾಗಿ, ಈ ತಾಪಮಾನಗಳ ಆಸುಪಾಸಿನಲ್ಲಿಯೇ ಕೋಣೆಯ ತಾಪಮಾನವನ್ನಿರಿಸುವುದು ಅತಿ ಸೂಕ್ತವಾಗಿದೆ.
ಬಿಸಿ ಪ್ರದೇಶದಿಂದ ಮನೆಗೆ ಬಂದ ಬಳಿಕ ನಿಯಂತ್ರಕವನ್ನು 16-17 ಡಿಗ್ರಿ ಸೆಲ್ಸಿಯಸ್ ಗೆ ಇಳಿಸುವ ಮೂಲಕ ದೇಹದ ಒಳಭಾಗದ ತಾಪಮಾನವನ್ನು ಅಗತ್ಯಮಟ್ಟಕ್ಕೆ ಇಳಿಸಲು ಸಾಧ್ಯವಾಗುತ್ತದೆ. ಇದು ಬೇಗನೇ ನಿದ್ದೆಗೆ ಜಾರಿ ಗಾಢ ನಿದ್ದೆ ಪಡೆಯಲು ನೆರವಾಗುತ್ತದೆ.
ಈ ತಾಪಮಾನ ವಯಸ್ಕರಿಗೆ ಅತಿ ಸೂಕ್ತವಾಗಿದ್ದರೂ ಶಿಶುಗಳು ಹಾಗೂ ಹತ್ತು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗೆ ಸೂಕ್ತವಾದ ತಾಪಮಾನವೆಂದರೆ 65-70 ಡಿಗ್ರಿ ಫ್ಯಾರನ್ ಹೀಟ್.
ಉಳಿದಂತೆ ಮಾಡಬಹುದಾದ ಕಾರ್ಯಗಳು
ಕೋಣೆಯನ್ನು ತಂಪಗಾಗಿಸಿ ಸುಖನಿದ್ದೆಯನ್ನು ಪಡೆಯಲು ಕೆಲವು ಸುಲಭ ಕಾರ್ಯಗಳು ನೆರವಾಗಬಹುದು. ಬೇಸಿಗೆಯ ಸಮಯದಲ್ಲಿ ನಿದ್ದೆಯ ಸ್ಥಳದಲ್ಲಿ ಒಂದು ಲೋಟ ತಣ್ಣನೆಯ ನೀರನ್ನಿರಿಸುವುದು, ಮಂಜುಗಡ್ಡೆಯ ತುಂಡುಗಳಿರುವ ಪೊಟ್ಟಣವನ್ನು ಇರಿಸುವುದು, ತೆಳುವಾದ, ಗಾಳಿಯಾಡುವಂತಿರುವ ಹತ್ತಿಯ ಬಟ್ಟೆಗಳನ್ನು ತೊಡುವುದು (ಸಾಧ್ಯವಾದರೆ ಹುಟ್ಟುಡುಗೆಯಲ್ಲಿ ನಿದ್ರಿಸುವುದು) ಮೊದಲಾದವು ದೇಹದ ತಾಪಮಾನವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


