For Quick Alerts
ALLOW NOTIFICATIONS  
For Daily Alerts

ರಾತ್ರಿಯಿಡೀ ಕಾಲುನೋವಾಗುತ್ತದೆಯೇ? ಇಲ್ಲಿದೆ ಪರಿಹಾರ

|

ರಾತ್ರಿ ಸುಖ ನಿದ್ದೆ ಕಣ್ಣಿಗೆ ಹತ್ತಿರುತ್ತದೆ, ಅಷ್ಟೊತ್ತಿಗೆ ಕಾಲಿನಲ್ಲಿ ಅದೇನೋ ಸೆಳೆತ ಉಂಟಾಗುತ್ತದೆ. ಆ ನೋವನ್ನು ಅವುಡುಗಚ್ಚಿ ಸಹಿಸಬೇಕೆಂದು ಬಯಸಿದರೂ ಆಗುವುದಿಲ್ಲ, ನೋವಿನಲ್ಲಿ ಕಿರುಚದೇ ಇರಲು ಸಾಧ್ಯನೇ ಆಗುವುದಿಲ್ಲ. ನಿಮ್ಮ ಕಿರುಚಾಟಕ್ಕೆ ಮನೆಯವರು ಎಚ್ಚರವಾಗಿ ಬಂದು ಕಾಲಿಗೆ ಏನಾದರೂ ಮಸಾಜ್‌ ಮಾಡಿದರಷ್ಟೇ ಕಡಿಮೆಯಾಗುವುದು.

Remedies For Leg Cramps At Night | Boldsky Kannada

ಈ ರೀತಿಯ ಸಮಸ್ಯೆ ಶೇ.60ರಷ್ಟು ವಯಸ್ಸಾದವರಲ್ಲಿ ಕಂಡು ಬರುತ್ತದೆ ಹಾಗೂ ಕೆಲ ಗರ್ಭಿಣಿಯರಲ್ಲಿ ಕಂಡು ಬರುತ್ತದೆ. ಮಂಡಿಯ ಕೆಳಗಡೆಯ ಸ್ನಾಯುನ ಸೆಳೆತದಿಂದಾಗಿ ಈ ರೀತಿ ಉಂಟಾಗುತ್ತದೆ. ಕೆಲವರಿಗೆ ಅಪರೂಪಕ್ಕೆ ಉಂಟಾದರೆ, ಇನ್ನು ಕೆಲವರಿಗೆ ಪ್ರತಿದಿನ ಆಗಾಗ ಉಂಟಾಗುತ್ತಿರುತ್ತದೆ, ಹೀಗಾದರೆ ನೋವಿನ ಜೊತೆಗೆ ನಿದ್ದೆಗೆ ಭಂಗ ಉಂಟಾಗುವುದು.

Remedies For Leg Cramps At Night

ರಾತ್ರಿ ಸ್ನಾಯು ಸೆಳೆತಕ್ಕೆ ಕಾರಣಗಳು

ರಾತ್ರಿ ಹೊತ್ತಿನಲ್ಲಿ ಈ ರೀತಿಯ ಸ್ನಾಯು ಸೆಳೆತಕ್ಕೆ ನಿಖರ ಕಾರಣವೇನೆಂಬುವುದು ಪರಿಣಿತರಿಗೂ ತಿಳಿದುಬಂದಿಲ್ಲ. ರಾತ್ರಿ ಹೊತ್ತಿನಲ್ಲಿ ಕಾಲಿನಲ್ಲಿ ಸ್ನಾಯುಗಳ ಸೆಳೆತ ಉಂಟಾಗಲು ಇವುಗಳು ಕಾರಣವಾಗಿರಬಹುದು ಎಂದು ಹೇಳಲಾಗುತ್ತದೆ.

  • ಮೈಗೆ ವ್ಯಾಯಾಮ ಇಲ್ಲದೇ ಇರುವ ಜೀವನಶೈಲಿ: ಕಾಲುಗಳನ್ನು ಆಗಾಗ ಮಡಚುವುದು, ಕೂರುವುದು, ಏಳುವುದು ಇವೆಲ್ಲಾ ಮಾಡುತ್ತಾ ಇರಬೇಕು. ಕಾಲುಗಳಿಗೆ ಯಾವುದೇ ವ್ಯಾಯಾಮ ಮಾಡದೇ ಇದ್ದಾಗ ಈ ರೀತಿ ಉಂಟಾಗುವುದು.
  • ಅತ್ಯಧಿಕ ವ್ಯಾಯಾಮ: ಇನ್ನು ತುಂಬಾ ವ್ಯಾಯಾಮ ಮಾಡುವುದರಿಂದ ಸ್ನಾಯುಗಳ ಸೆಳೆತ ಉಂಟಾಗುವುದು.
  • ಕೂರುವ ಭಂಗಿ ಸರಿಯಾಗಿ ಇಲ್ಲದೇ ಇರುವುದು:ಕಾಲುಗಳನ್ನು ಮಡಚಿ ತುಂಬಾ ಹೊತ್ತು ಕೂರುವುದರಿಂದಲೂ ಸ್ನಾಯು ಸೆಳತ ಉಂಟಾಗುವುದು.
  • ತುಂಬಾ ಹೊತ್ತು ನಿಂತುಕೊಳ್ಳುವುದು: ತುಂಬಾ ಹೊತ್ತು ನಿಂತುಕೊಂಡು ಕೆಲಸ ಮಾಡುವವರಲ್ಲಿಯೂ ಈ ಸ್ನಾಯು ಸೆಳೆತದ ಸಮಸ್ಯೆ ಕಂಡು ಬರುವುದು.
  • ನರಗಳ ಅಸಹಜ ಚಟುವಟಿಕೆ: ಎಲೆಕ್ಟ್ರೋಮಯೋಗ್ರಾಫಿಕ್ ಅಧ್ಯಯನ ಪ್ರಕಾರ ಅಸಹಜ ನರಗಳ ಚಟುವಟಿಕೆಯಿಂದಾಗಿ ಉಂಟಾಗುವುದು.
ಇವರಲ್ಲಿಯೂ ಸ್ನಾಯು ಸೆಳೆತ ಕಂಡು ಬರುವುದು

ಇವರಲ್ಲಿಯೂ ಸ್ನಾಯು ಸೆಳೆತ ಕಂಡು ಬರುವುದು

  • ಗರ್ಭಿಣಿ
  • ಫ್ಲ್ಯಾಟ್‌ ಫೀಟ್ ಸಮಸ್ಯೆ ಇರುವವರಲ್ಲಿ
  • ನರಗಳಗಳಲ್ಲಿ ದೋಷವಿದ್ದರೆ
  • ಪಾರ್ಕಿನ್‌ಸನ್ಸ್ ಕಾಯಿಲೆ ಇದ್ದವರಲ್ಲಿ
  • ಸಂಧಿವಾತ ಇದ್ದವರಲ್ಲಿ
  • ಲಿವರ್‌, ಕಿಡ್ನಿ, ಥೈರಾಯ್ಡ್ ಸಮಸ್ಯೆ ಇದ್ದವರಲ್ಲಿ
  • ಹೃದಯ ಸಂಬಂಧಿ ಸಮಸ್ಯೆ ಇರುವವರಲ್ಲಿ
  • ರಾತ್ರಿಯಲ್ಲಿ ಸ್ನಾಯು ಸೆಳೆತ ಕಡಿಮೆ ಮಾಡಲು ಪರಿಹಾರ:

    ಕಾಲುಗಳಿಗೆ ಎಣ್ಣೆ ಮಸಾಜ್ ಮಾಡಿ

    ಕಾಲುಗಳಿಗೆ ಎಣ್ಣೆ ಮಸಾಜ್ ಮಾಡಿ

    ಎಲ್ಲಿ ನೋವು ಕಂಡು ಬರುತ್ತದೋ ಆ ಭಾಗಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಸ್ನಾಯು ಸೆಳೆತ ಕಡಿಮೆಯಾಗುವುದು. ಮಲಗುವ ಮುಂಚೆ ನೋವು ನಿವಾರಕ ಎಣ್ಣೆ ಹಚ್ಚಿ ಮಲಗಿದರೆ ಸ್ನಾಯುಗಳು ವಿಶ್ರಾಂತಿಯನ್ನ ಪಡೆಯುತ್ತದೆ, ಸೆಳೆತ ಕಡಿಮೆಯಾಗುವುದು.

    ಕಾಲುಗಳನ್ನು ನಿಮಿರಿ (ಸ್ಟ್ರೆಚ್ ಮಾಡಿ)

    ಕಾಲುಗಳನ್ನು ನಿಮಿರಿ (ಸ್ಟ್ರೆಚ್ ಮಾಡಿ)

    ಕಾಲುಗಳಿಗೆ ವಿಶ್ರಾಂತಿ ನೀಡಿ, ಕಾಲುಗಳ ಸ್ನಾಯುಗಳಿಗೆ ಒತ್ತಡ ಬೀಳುವ ಯಾವ ಚಟುವಟಿಕೆಯೂ ಮಾಡಬೇಡಿ. ಮಂಡಿ ಕೆಳಗಡೆ ಸೆಳೆತ ಉಂಟಾದಾಗ ಮೆಲ್ಲನೆ ಕಾಲುಗಳನ್ನು ಉದ್ದ ಮಾಡಿ, ಕಾಲಿನ ಬೆರಳುಗಳು ನಿಮ್ಮ ನೇರಕ್ಕೆ ಮ ಉಖ ಮಾಡಿದಂತೆ ಸ್ಟ್ರೆಚ್‌ ಮಾಡುವುದರಿಂದ ಸೆಳೆತ ಕಡಿಮೆಯಾಗುವುದು.

    ಹಿಮ್ಮಡಿಯಲ್ಲಿ ನಡೆಯಿರಿ: ಹೀಗೆ ಮಾಡುವುದರಿಂದ ಸ್ನಾಯು ಸೆಳೆತ ಬೇಗ ಕಡಿಮೆಯಾಗುವುದು. ಇದು ಸ್ನಾಯು ಸೆಳೆತಕ್ಕೆ ವಿರುದ್ಧವಾಗಿ ಸ್ನಾಯುಗಳ ಚಟುವಟಿಕೆ ಹೆಚ್ಚಿಸುವುದರಿಂದ ನೋವು ಕಡಿಮೆಯಾಗುವುದು.

    ಬಿಸಿ ಇಡಿ

    ಬಿಸಿ ಇಡಿ

    • ಪರ್ಸನಲ್ ಟ್ರೈನರ್‌ಗಳು ಹಾಗೂ ಕೋಚ್‌ಗಳು, ಥೆರಾಪಿಸ್ಟ್ ಸ್ನಾಯು ಸೆಳೆತ ತಡೆಗಟ್ಟಲು ಈ ಸಲಹೆ ಕೊಡುತ್ತಾರೆ. ಎಪ್ಸೋಮ್‌ ಸಾಲ್ಟ್‌ ಅನ್ನು ಬಿಸಿ ನೀರಿಗೆ ಹಾಕಿ, ಆ ನೀರಿನಲ್ಲಿ ಒಂದು ಬಟ್ಟೆ ಅದ್ದಿ, ಹಿಂಡಿ ಆ ಬಟ್ಟೆಯನ್ನ ನೋವು ಇರುವ ಕಡೆ ಇಡುತ್ತಿದ್ದರೆ ನೋವು ಕಡಿಮೆಯಾಗುವುದು.
    • ಇಲ್ಲಾ ಒಂದು ಬಕೆಟ್ ಬಿಸಿ ನೀರಿಗೆ ಎಪ್ಸೋಮ್ ಹಾಕಬಹುದು, ಹಾಕದೇ ಇರಬಹುದು, ಆ ನೀರು ಬಿಸಿ ಕಾಲುಗಳನ್ನು ಮುಳುಗಿಸಿ ಇಡುವಷ್ಟು ಹದವಾದ ಮೇಲೆ ಅದರಲ್ಲಿ ಕಾಲುಗಳನ್ನು ಇಡುವುದರಿಂದ ಕೂಡ ನೋವು ಕಡಿಮೆಯಾಗುವುದು.
    • ಹೀಟಿಂಗ್‌ ಪ್ಯಾಡ್‌ ಕೂಡ ಬಳಸಬಹುದು.
    • ಮೆಗ್ನಿಷ್ಯಿಯಂ

      ಮೆಗ್ನಿಷ್ಯಿಯಂ

      ಇತರ ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೆಯೂ ನಿಮಗೆ ಪ್ರತಿದಿನ ಸ್ನಾಯು ಸೆಳೆತ ಉಂಟಾಗುತ್ತಿದ್ದರೆ ಆಹಾರದಲ್ಲಿ ಮೆಗ್ನಿಷ್ಯಿಯಂ ಸೇರಿಸಿ. ನಟ್ಸ್, ಕುಂಬಳಕಾಯಿ ಬೀಜ ತಿನ್ನಬೇಕು. ಇನ್ನು ಮೆಗ್ನಿಷ್ಯಿಯಂ ಸಪ್ಲಿಮೆಂಟ್‌ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯಬೇಕು.

      ಇನ್ನು ಗರ್ಭಿಣಿಯರು ನಟ್ಸ್ ತಿಂದರೆ ಒಳ್ಳೆಯದು. ಮೆಗ್ನಿಷ್ಯಿಯಂ ಸಪ್ಲಿಮೆಂಟ್ ಸೂಚಿಸಿದರೆ ತೆಗೆದುಕೊಳ್ಳಬಹುದು, ಇಲ್ಲಾ ಅಂದರೆ ಸ್ವತಃ ತೆಗೆದುಕೊಳ್ಳಬೇಡಿ.

      ಉಪ್ಪಿನಕಾಯಿ ರಸ ಕುಡಿಯಿರಿ

      ಉಪ್ಪಿನಕಾಯಿ ರಸ ಕುಡಿಯಿರಿ

      ಸ್ವಲ್ಪ ಪ್ರಮಾಣದಲ್ಲಿ ಉಪ್ಪಿನಕಾಯಿ ರಸ ಕುಡಿಯುವುದರಿಂದ ಕೂಡ ಸ್ನಾಯು ಸೆಳೆತ ಕಡಿಮೆಯಾಗುವುದು ಎಂದು ಕೋಚಗಗಗಳು ಸಲಹೆ ನೀಡುತ್ತಾರೆ.

      ಸಾಕಷ್ಟು ನೀರು ಕುಡಿಯಿರಿ

      ಸಾಕಷ್ಟು ನೀರು ಕುಡಿಯಿರಿ

      ದೇಹದಲ್ಲಿ ನೀರಿನಂಶ ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ನಿಮ್ಮ ವಯಸ್ಸು, ತೂಕ ಹಾಗೂ ನಿಮ್ಮ ಚಟುವಟಿಕೆ ಹಾಗೂ ನೀವು ತೆಗೆದುಕೊಳ್ಳುವ ಔಷಧಿಗೆ ಅನುಗುಣವಾಗಿ ನೀರು ಕುಡಿಯಿರಿ.

      ಮಲಗುವ ಭಂಗಿಯಲ್ಲಿ ಬದಲಾವಣೆ

      ಮಲಗುವ ಭಂಗಿಯಲ್ಲಿ ಬದಲಾವಣೆ

      ಮಲಗುವಾಗ ಬೆನ್ನು ಮೇಲೆ ಮಲಗಿ ಹಾಗೂ ಕಾಲುಗಳಿಗೆ ದಿಂಬುಗಳ ಸಪೋರ್ಟ್ ಇಡಿ. ಈ ರೀತಿ ಇಡುವುದರಿಂದ ಸ್ನಾಯುಗಳ ಸೆಳೆತ ಕಡಿಮೆಯಾಗುವುದು.

      ಸ್ನಾಯು ಸೆಳೆತ ಕಡಿಮೆ ಮಾಡುವ ಪಾದುಕೆ ಬಳಸಿ

      ಸ್ನಾಯು ಸೆಳೆತ ಕಡಿಮೆ ಮಾಡುವ ಪಾದುಕೆ ಬಳಸಿ

      ಈ ರೀತಿಯ ಸಮಸ್ಯೆಗಳಿಗೆ ಪ್ರತ್ಯೇಕವಾದ ಪಾದುಕೆಗಳು ದೊರೆಯುತ್ತವೆ. ಅವುಗಳನ್ನು ಕೊಂಡು ಬಳಸುವುದರಿಂದ ಸ್ನಾಯು ಸೆಳೆತ ಕಡಿಮೆಯಾಗುವುದು.

English summary

Remedies For Leg Cramps At Night

You are facing leg problem at night? Most of the time, the muscle relaxes itself in less than 10 minutes. Here are remedies to solve that pain.
X
Desktop Bottom Promotion