Latest Updates
-
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ -
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ -
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ!
ಮಸಾಲೆ ಇರುವ ಆಹಾರ ತಿಂದರೆ ದೊರೆಯುವ ಪ್ರಯೋಜನಗಳಿವು
ನಾವು ಪ್ರತಿ ದಿನ ಆಹಾರ ಸೇವನೆ ಮಾಡುವ ಸಂದರ್ಭದಲ್ಲಿ ನಮ್ಮ ಅಡುಗೆ ತಯಾರಿಯಲ್ಲಿ ನಮಗೆ ಅಗತ್ಯವಾದ ಮಸಾಲೆ ಪದಾರ್ಥಗಳನ್ನು ಸೇರಿಸಿ ಅಡುಗೆ ಮಾಡಿಕೊಂಡು ಸೇವನೆ ಮಾಡುತ್ತೇವೆ. ಸ್ವಲ್ಪ ವಯಸ್ಸಾದವರು ಮಾತ್ರ ಮಸಾಲೆ ಪದಾರ್ಥಗಳಿಂದ ದೂರವುಳಿಯುತ್ತಾರೆ. ಆದರೆ ಮಿಕ್ಕ ಎಲ್ಲರಿಗೂ ಅಂದರೆ ಚಿಕ್ಕ ಮಕ್ಕಳಿಂದ ಹಿಡಿದು ಮಧ್ಯ ವಯಸ್ಸಿನ ಎಲ್ಲಾ ಪುರುಷರಿಗೆ ಮತ್ತು ಮಹಿಳೆಯರಿಗೆ ಮಸಾಲೆ ಭರಿತ ಆಹಾರ ಪದಾರ್ಥಗಳು ದೇಹಕ್ಕೆ ಅವಶ್ಯಕವಾಗಿ ಬೇಕಾಗಿರುತ್ತವೆ.
ಮಸಾಲೆ ತುಂಬಿದ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಆರೋಗ್ಯದಲ್ಲಿ ಹಲವಾರು ಪ್ರಯೋಜನಗಳು ಉಂಟಾಗಲಿವೆ. ದೀರ್ಘಕಾಲದ ಹಲವಾರು ಆರೋಗ್ಯ ಸಮಸ್ಯೆಗಳು ಬಗೆಹರಿಯಲಿವೆ. ಅದರಲ್ಲೂ ವಿಶೇಷವಾಗಿ ಚಳಿಗಾಲದಲ್ಲಿ ಕಂಡುಬರುವ ಶೀತ, ನೆಗಡಿ, ಕೆಮ್ಮು ಇತ್ಯಾದಿ ಸಮಸ್ಯೆಗಳು ಮಾಯವಾಗುತ್ತವೆ. ಸಾಕಷ್ಟು ಜನರಿಗೆ ತಾವು ಸೇವನೆ ಮಾಡುವ ಮಸಾಲೆ ಪದಾರ್ಥಗಳ ಬಗ್ಗೆ ಅರಿವಿರುವುದಿಲ್ಲ. ಆದರೂ ಸಹ ಪ್ರತಿದಿನ ತಮ್ಮ ಅಡುಗೆಯಲ್ಲಿ ಶುಂಠಿ ಬೆಳ್ಳುಳ್ಳಿ ದಾಲ್ಚಿನ್ನಿ ಅರಿಶಿನ ಜೀರಿಗೆ ಇತ್ಯಾದಿಗಳನ್ನು ಬಳಸುತ್ತಾರೆ.
ಈ ಲೇಖನದಲ್ಲಿ ನಮ್ಮ ದಿನಬಳಕೆಯಲ್ಲಿ ಉಪಯೋಗಕ್ಕೆ ಬರುವ ನಮ್ಮ ನೆಚ್ಚಿನ ಮಸಾಲೆ ಪದಾರ್ಥಗಳಿಂದ ನಮ್ಮ ಆರೋಗ್ಯಕ್ಕೆ ಯಾವ ಲಾಭಗಳು ಉಂಟಾಗಲಿವೆ ಎಂಬುದನ್ನು ನೋಡೋಣ.

1. ಕರುಳಿನ ಭಾಗದಲ್ಲಿ ಗೆಡ್ಡೆಗಳು ಉಂಟಾಗುವುದಿಲ್ಲ : -
ಇದಕ್ಕೆ ಪ್ರಮುಖ ಕಾರಣ ನಾವು ಬಳಸುವ ಒಣ ಮೆಣಸಿನಕಾಯಿಯಲ್ಲಿ ಕಂಡುಬರುವ ' capsaicin ' ಎಂಬ ಅಂಶ. ಇದು ಕರುಳಿನ ಒಳಭಾಗದಲ್ಲಿ ಸಾಧಾರಣವಾಗಿ ರೂಪುಗೊಂಡಿರುವ ಜೀವ ಕೋಶಗಳನ್ನು ಉತ್ತೇಜಿಸಿ ಅಲ್ಲಿ ಉರಿಯೂತ ಉಂಟಾಗದಂತೆ ನೋಡಿಕೊಂಡು, ಗೆಡ್ಡೆಗಳು ಉತ್ಪತ್ತಿಯಾಗದಂತೆ ಜಾಗರೂಕತೆ ವಹಿಸುತ್ತದೆ. ಮುಂಬರುವ ದಿನಗಳಲ್ಲಿ ಸಹ ದೇಹದ ಯಾವುದೇ ಭಾಗಗಳಲ್ಲಿ ಗೆಡ್ಡೆಗಳು ಉಂಟಾಗದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮೆಣಸಿನಕಾಯಿಯನ್ನು ಮಸಾಲೆ ಪದಾರ್ಥವಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಬಳಕೆ ಮಾಡಬಹುದು

2. ಆಯಸ್ಸು ಹೆಚ್ಚಾಗುತ್ತದೆ : -
ಮಸಾಲೆ ಪದಾರ್ಥಗಳನ್ನು ನಾವು ಆಗಾಗ ಸೇವನೆ ಮಾಡುವುದರಿಂದ ಚಿಕ್ಕ ವಯಸ್ಸಿಗೆ ಅಥವಾ ಮಧ್ಯ ವಯಸ್ಸಿನಲ್ಲಿ ನಮ್ಮ ಜೀವಕ್ಕೆ ಕುತ್ತು ಎದುರಾಗುವ ಸಂಭವ ತಪ್ಪುತ್ತದೆ. ಹೀಗೆ ಎಂದು ನಾವು ಹೇಳುತ್ತಿಲ್ಲ. ಬದಲಿಗೆ 2015 ನೇ ಇಸವಿಯಲ್ಲಿ ನಡೆದ ಒಂದು ಸಂಶೋಧನೆ ತನ್ನ ವರದಿಯಲ್ಲಿ ಹೇಳಿದೆ.

3. ಲೈಂಗಿಕ ಸಾಮರ್ಥ್ಯ ಹೆಚ್ಚಾಗಲಿದೆ : -
ನಾವು ಬಳಸುವ ಬಹುತೇಕ ಮಸಾಲೆ ಪದಾರ್ಥಗಳಲ್ಲಿ ನೈಸರ್ಗಿಕವಾದ ಕೇಸರಿ ಮತ್ತು ' ginseng ' ಅಂಶ ಇರುತ್ತದೆ. ಇದು ವ್ಯಕ್ತಿಯ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಉತ್ತಮವಾದ ಲೈಂಗಿಕ ತೃಪ್ತಿ ಹೊಂದಲು ಸಹಾಯ ಮಾಡುತ್ತದೆ. ಲೈಂಗಿಕತೆಯ ವಿಚಾರಕ್ಕೆ ಸಂಬಂಧಪಟ್ಟಂತೆ ತೆಗೆದುಕೊಳ್ಳುವ ಔಷಧಿಗಳು ನೈಸರ್ಗಿಕವಾದ ಇಂತಹ ಮಸಾಲೆ ಪದಾರ್ಥಗಳ ಮುಂದೆ ಏನು ಅಲ್ಲ ಎಂದು ತಿಳಿದುಕೊಳ್ಳಬಹುದು.

4. ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು : -
ನಾವು ನಮ್ಮ ಆಹಾರ ಪದ್ಧತಿಯಲ್ಲಿ ಇತರ ಆಹಾರಗಳ ಜೊತೆ ಮಸಾಲೆ ಪದಾರ್ಥಗಳನ್ನು ಸೇರಿಸಿ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆ ಹೆಚ್ಚಾಗುತ್ತದೆ ಮತ್ತು ಕೊಬ್ಬಿನ ಅಂಗಾಂಶ ಕಡಿಮೆ ಆಗುತ್ತದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ದೇಹದಲ್ಲಿ ಮಸಾಲೆ ಪದಾರ್ಥಗಳನ್ನು ಸೇವನೆ ಮಾಡಿದ ಬಳಿಕ ಉಷ್ಣಾಂಶ ಹೆಚ್ಚಾಗುತ್ತದೆ. ಹೀಗಾಗಿ ನಮ್ಮ ದೇಹದ ಕೊಬ್ಬು, ಬೊಜ್ಜು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅಂಶ ಕರಗುತ್ತದೆ. ಸಾಕಷ್ಟು ಕ್ಯಾಲೋರಿಗಳು ಸಹ ಕಡಿಮೆ ಆಗುವುದರಿಂದ ನಮ್ಮ ದೇಹದ ತೂಕ ಅಚ್ಚುಕಟ್ಟಾಗಿ ನಿರ್ವಹಣೆ ಆಗುತ್ತದೆ.

5. ಕ್ಯಾನ್ಸರ್ ಸಮಸ್ಯೆ ಉಂಟಾಗುವುದು ತಪ್ಪುತ್ತದೆ : -
ಅಮೆರಿಕದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆ ಹೇಳುವ ಹಾಗೆ ಮಸಾಲೆ ಪದಾರ್ಥಗಳಾದ ಹಳದಿ ಮತ್ತು ಸಾಸಿವೆ ಕಾಳುಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ದೇಹದಲ್ಲಿ ಸರ್ ಗಡ್ಡೆಗಳು ರೂಪುಗೊಳ್ಳುವ ಸಂಭವ ಕಡಿಮೆ ಆಗುತ್ತದೆ. ಕ್ಯಾನ್ಸರ್ ರೋಗಿಗಳು ತೆಗೆದುಕೊಳ್ಳುವ ಕ್ಯಾನ್ಸರ್ ಔಷಧಗಳಂತೆ ಇವು ನೈಸರ್ಗಿಕವಾಗಿ ಕೆಲಸ ಮಾಡಲಿವೆ.

6. ಸೇರೋಟೋನಿನ್ ಮಟ್ಟ ಹೆಚ್ಚಾಗುತ್ತದೆ : -
ಮಸಾಲೆ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಮ್ಮ ಮೆದುಳಿಗೆ ಸಂಬಂಧ ಪಟ್ಟಂತಹ ನಮ್ಮ ಮನಸ್ಸಿನ ಭಾವನೆಗಳ ಮೇಲೆ ಒಳ್ಳೆಯ ಪ್ರಭಾವ ಬೀರುವಂತಹ ಸೇರೋಟೋನಿನ್ ಎಂಬ ಹಾರ್ಮೋನಿನ ಮಟ್ಟ ಹೆಚ್ಚಾಗುತ್ತದೆ. ಇದು ನಮ್ಮ ಮಾನಸಿಕ ಒತ್ತಡ, ಮಾನಸಿಕ ಖಿನ್ನತೆ ಮನಸ್ಸಿನ ಆತಂಕವನ್ನು ದೂರ ಮಾಡುತ್ತದೆ.

7. ಹೃದಯ ರಕ್ತನಾಳ ವ್ಯವಸ್ಥೆ ಬಲಗೊಳ್ಳುತ್ತದೆ : -
ಹಸಿ ಮೆಣಸಿನಕಾಯಿ ಮತ್ತು ಕಪ್ಪು ಮೆಣಸು ಮಸಾಲೆ ಪದಾರ್ಥಗಳಾಗಿದ್ದು ಇವುಗಳಲ್ಲಿ ವಿಟಮಿನ್ ' ಎ ' ಮತ್ತು ವಿಟಮಿನ್ ' ಸಿ ' ಅಂಶ ಹೆಚ್ಚಾಗಿದೆ. ನಮ್ಮ ಹೃದಯದ ಮಾಂಸ - ಖಂಡಗಳನ್ನು ಸದೃಡಗೊಳಿಸುವ ಮೂಲಕ ನಮ್ಮ ದೇಹದಲ್ಲಿ ಉಷ್ಣಾಂಶವನ್ನು ಹೆಚ್ಚು ಮಾಡಿ ನಮ್ಮ ದೇಹದ ರಕ್ತದ ಒತ್ತಡ ಕಡಿಮೆ ಆಗುವಂತೆ ಮಾಡುತ್ತದೆ.



Click it and Unblock the Notifications











