ಹದಿಹರೆಯದ ಹುಡುಗಿಯರಲ್ಲಿ ಪಿಸಿಓಎಸ್ ಲಕ್ಷಣಗಳೇನು?

ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನ ಸಾಮಾನ್ಯವಾಗಿ ಕಾಡುತ್ತಿರುವ ಸಮಸ್ಯೆ ಅಂದ್ರೆ ಅದು ಪಿಸಿಓಎಸ್. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಥವಾ ಪಿಸಿಓಎಸ್ ಎಂದು ಕರೆಯಲ್ಪಡುವ ಈ ಸಮಸ್ಯೆ, ಬಂಜೆತನದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಕೇವಲ ಮಹಿಳೆಯರಲ್ಲಷ್ಟೇ ಅಲ್ಲ, ಹದಿಹರೆಯದ ವಯಸ್ಸಿನ ಹುಡುಗಿಯರಲ್ಲೂ ಕಂಡುಬರುವುದು. ಹಾಗಾದರೆ, ಹದಿಹರೆಯದ ಯುವತಿರಲ್ಲಿ ಪಿಸಿಓಸ್ ನ ಲಕ್ಷಣಗಳೇನು? ಅದನ್ನು ಗುಣಪಡಿಸುವುದು ಹೇಗೆ? ಇದಕ್ಕೆ ಕಾರಣವೇನು? ಎಲ್ಲವನ್ನ ಇಲ್ಲಿ ತಿಳಿದುಕೊಳ್ಳೋಣ.

ಹದಿಹರಿಯದ ಹುಡುಗಿಯರಲ್ಲಿ ಪಿಸಿಓಎಸ್‌ಗೆ ಕಾರಣ, ಲಕ್ಷಣ ಹಾಗೂ ಚಿಕಿತ್ಸೆಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಹದಿಹರೆಯದವರಲ್ಲಿ ಪಿಸಿಒಎಸ್ ಸಾಮಾನ್ಯವೇ?:

ಹದಿಹರೆಯದವರಲ್ಲಿ ಪಿಸಿಒಎಸ್ ಸಾಮಾನ್ಯವೇ?:

ಪಿಸಿಒಎಸ್ ಒಂದು ಸಾಮಾನ್ಯ ಸ್ಥಿತಿಯಾಗಿದ್ದು, ಸುಮಾರು 5% ರಿಂದ 10%ದಷ್ಟು ಹದಿಹರೆಯದವರು ಮತ್ತು 15- 44 ವಯಸ್ಸಿನ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ .

ಹದಿಹರೆಯದವರಲ್ಲಿ PCOS ಗೆ ಕಾರಣವೇನು?:

ಪಿಸಿಓಎಸ್ಗೆ ನಿಖರವಾದ ಕಾರಣ ತಿಳಿದಿಲ್ಲ, ಆದರೆ ತಜ್ಞರು ಅಣುವಂಶೀಯತೆ ಮತ್ತು ಹಾರ್ಮೋನ್ ಅಸಮತೋಲನವು ಒಂದು ಪಾತ್ರವನ್ನು ವಹಿಸುತ್ತದೆ ಎಂದು ಹೇಳುತ್ತಾರೆ.

ಅಂಡಾಶಯಗಳು ಈಸ್ಟ್ರೊಜೆನ್, ಪ್ರೊಜೆಸ್ಟರಾನ್ ಮತ್ತು ಆಂಡ್ರೋಜೆನ್ (ಟೆಸ್ಟೋಸ್ಟೆರಾನ್) ಎಂಬ ಸಣ್ಣ ಪ್ರಮಾಣದ ಪುರುಷ ಹಾರ್ಮೋನುಗಳಂತಹ ಲೈಂಗಿಕ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತವೆ. ಈ ಹಾರ್ಮೋನುಗಳು ಅಂಡೋತ್ಪತ್ತಿ ಮತ್ತು ಋತುಚಕ್ರವನ್ನು ನಿಯಂತ್ರಿಸುತ್ತದೆ. ಪಿಸಿಓಎಸ್ ಹೊಂದಿರುವ ಮಹಿಳೆಯರ ದೇಹವು ಸಾಮಾನ್ಯ ಆಂಡ್ರೊಜೆನ್ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣವನ್ನು ಉತ್ಪಾದಿಸುತ್ತದೆ. ಇದು ಮೊಟ್ಟೆಯ ಬೆಳವಣಿಗೆ ಮತ್ತು ಅಂಡೋತ್ಪತ್ತಿಗೆ ಅಡ್ಡಿಪಡಿಸುತ್ತದೆ. ಇದರಿಂದ, ಮುಟ್ಟಿನ ಸಮಸ್ಯೆ, ಮೊಡವೆ ಸಮಸ್ಯೆಗಳು ಮತ್ತು ಹೆಚ್ಚುವರಿ ಕೂದಲು ಬೆಳವಣಿಗೆ ಉಂಟಾಗಲು ಕಾರಣವಾಗುವುದು.

ಹದಿಹರೆಯದವರಲ್ಲಿ ಪಿಸಿಓಎಸ್ ನ ಲಕ್ಷಣಗಳು ಯಾವುವು?:

ಹದಿಹರೆಯದವರಲ್ಲಿ ಪಿಸಿಓಎಸ್ ನ ಲಕ್ಷಣಗಳು ಯಾವುವು?:

ಪಿಸಿಓಎಸ್ ಹೊಂದಿರುವ ಹದಿಹರೆಯದ ಹುಡುಗಿಯರು ಈ ಕೆಳಗಿನ ಲಕ್ಷಣಗಳನ್ನು ಗಮನಿಸಬಹುದು. ಅವುಗಳೆಂದರೆ,

ಅನಿಯಮಿತ ಋತುಸ್ರಾವ

ಶ್ರೋಣಿಯ ನೋವು

ಹಿರ್ಸುಟಿಸಮ್ ಅಂದ್ರೆ, ಹುಡುಗಿಯರ ಮುಖ, ಎದೆ, ಹೊಟ್ಟೆ ಮತ್ತು ದೇಹದ ಇತರ ಭಾಗಗಳಲ್ಲಿ ಹೆಚ್ಚಿನ ಕೂದಲು ಬೆಳೆಯುವ ಸ್ಥಿತಿಯಾಗಿದೆ.

ತೀವ್ರವಾದ ಮೊಡವೆ ಮತ್ತು ಮುಚ್ಚಿಹೋಗಿರುವ ತ್ವಚೆಯ ರಂಧ್ರಗಳು

ತೂಕ ಹೆಚ್ಚಾಗುವಿಕೆ ಅಥವಾ ಸ್ಥೂಲಕಾಯತೆ

ಇನ್ಸುಲಿನ್ ಪ್ರತಿರೋಧದ ಕಾರಣದಿಂದಾಗಿ ಕುತ್ತಿಗೆ, ಕಂಕುಳಡಿ ಅಥವಾ ಸ್ತನಗಳ ಹಿಂಭಾಗದಲ್ಲಿ ಚರ್ಮ ಕಪ್ಪು ಮತ್ತು ದಪ್ಪವಾಗುವುದು.

ಕೂದಲು ತೆಳುವಾಗುವಿಕೆ

ಪಿಸಿಓಎಸ್ ಅಪಾಯವನ್ನು ಹೆಚ್ಚಿಸುವ ಅಂಶಗಳು ಯಾವುವು?:

ಪಿಸಿಓಎಸ್ ಅಪಾಯವನ್ನು ಹೆಚ್ಚಿಸುವ ಅಂಶಗಳು ಯಾವುವು?:

ಪಿಸಿಓಎಸ್ ಹೊಂದುವ ಅಪಾಯವನ್ನು ಹೆಚ್ಚಿಸುವ ಕೆಲವು ಅಂಶಗಳೆಂದರೆ,

ಬೊಜ್ಜು

ಪಿಸಿಓಎಸ್ ಹೊಂದಿರುವ ಕುಟುಂಬ ಸದಸ್ಯರು (ತಾಯಿ, ಸಹೋದರಿ ಅಥವಾ ಚಿಕ್ಕಮ್ಮ)

ಹುಡುಗಿಯರಲ್ಲಿ ಪ್ರೌಢಾವಸ್ಥೆಗೆ ಬೇಗ ಕಾಲಿಡುವುದು (ಎಂಟು ವರ್ಷಕ್ಕಿಂತ ಮೊದಲು)

ಪಿಸಿಓಎಸ್ ರೋಗನಿರ್ಣಯ ಹೇಗೆ?:

ಪಿಸಿಓಎಸ್ ರೋಗನಿರ್ಣಯ ಹೇಗೆ?:

ಪಿಸಿಓಎಸ್‌ನ್ನು ಅನ್ನು ನಿಖರವಾಗಿ ಪತ್ತೆಹಚ್ಚಲು, ವೈದ್ಯರು ನಿಮ್ಮ ಮಗಳ ವೈದ್ಯಕೀಯ ಇತಿಹಾಸ, ಔಷಧಿಗಳು, ಋತುಚಕ್ರದ ಮಾದರಿ ಮತ್ತು ಅದೇ ಸ್ಥಿತಿಯನ್ನು ಹೊಂದಿರುವ ಯಾವುದೇ ಕುಟುಂಬದ ಸದಸ್ಯರ ಇತಿಹಾಸದ ಬಗ್ಗೆ ತಿಳಿದುಕೊಳ್ಳುತ್ತಾರೆ. ಜೊತೆಗೆ ವೈದ್ಯರು ಈ ಕೆಳಗಿನ ಪರೀಕ್ಷೆಗಳನ್ನು ಸಹ ಮಾಡುತ್ತಾರೆ.

1. ದೈಹಿಕ ಪರೀಕ್ಷೆ: ತೂಕ, ಬಾಡಿ ಮಾಸ್ ಇಂಡೆಕ್ಸ್ ಮತ್ತು ಸೊಂಟದ ಗಾತ್ರ, ದೇಹದ ಮೇಲೆ ಹೆಚ್ಚುವರಿ ಕೂದಲಿನ ಚಿಹ್ನೆಗಳು, ತೀವ್ರವಾದ ಮೊಡವೆ, ಕೂದಲು ನಷ್ಟ ಅಥವಾ ಥೈರಾಯ್ಡ್‌ನಂತ ಆರೋಗ್ಯ ಸಮಸ್ಯೆಗಳನ್ನು ಪರೀಕ್ಷೆ ಮಾಡಬಹುದು.

2. ಶ್ರೋಣಿಯ ಪರೀಕ್ಷೆ

3. ಪೆಲ್ವಿಕ್ ಅಲ್ಟ್ರಾಸೌಂಡ್

4. ರಕ್ತ ಪರೀಕ್ಷೆಗಳು: ಹಾರ್ಮೋನ್ ಮಟ್ಟ, ರಕ್ತದಲ್ಲಿನ ಸಕ್ಕರೆಯ ಮಟ್ಟ, ಕೊಲೆಸ್ಟರಾಲ್ ಮಟ್ಟಗಳನ್ನು ರಕ್ತ ಪರೀಕ್ಷೆ ಮಾಡಿ ಕಂಡು ಹಿಡಿಯುತ್ತಾರೆ.

ಹದಿಹರೆಯದವರಲ್ಲಿ ಪಿಸಿಓಎಸ್ ಗೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ?:

ಹದಿಹರೆಯದವರಲ್ಲಿ ಪಿಸಿಓಎಸ್ ಗೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ?:

PCOS ಗೆ ಯಾವುದೇ ಚಿಕಿತ್ಸೆ ಇಲ್ಲ; ಆದಾಗ್ಯೂ, ಜೀವನಶೈಲಿ ಮಾರ್ಪಾಡುಗಳು, ಆಹಾರ ಪದ್ಧತಿ ಮತ್ತು ಔಷಧಿಗಳ ಮೂಲಕ ಇದನ್ನು ಯಶಸ್ವಿಯಾಗಿ ಪರಿಹರಿಸಬಹುದು.

1. ನಿಯಮಿತ ವ್ಯಾಯಾಮ:

ವ್ಯಾಯಾಮವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅಧಿಕ ತೂಕ ಹೊಂದಿರುವವರ ದೇಹದ ತೂಕದಲ್ಲಿ 5% ಕಡಿತವು ಕೆಲವು PCOS ರೋಗಲಕ್ಷಣಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.

2. ಪೌಷ್ಟಿಕ ಆಹಾರ:

ಪೌಷ್ಟಿಕಾಂಶದ ಆಹಾರವು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ, ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಹದಿಹರೆಯದವರು ಆಹಾರ-ಸಂಬಂಧಿತ ಸಲಹೆಗಳಿಗಾಗಿ ವೈದ್ಯರು ಮತ್ತು ಪೌಷ್ಟಿಕತಜ್ಞರನ್ನು ಸಂಪರ್ಕಿಸಬೇಕು.

3. ಹೆಚ್ಚುವರಿ ಕೂದಲು ಬೆಳವಣಿಗೆಗೆ ಚಿಕಿತ್ಸೆ:

ಹೆಚ್ಚುವರಿ ದೇಹದ ಕೂದಲನ್ನು ಲೇಸರ್ ಚಿಕಿತ್ಸೆ, ವ್ಯಾಕ್ಸಿಂಗ್, ಬ್ಲೀಚಿಂಗ್ ಅಥವಾ ಡಿಪಿಲೇಟರಿಗಳ ಮೂಲಕ ಚಿಕಿತ್ಸೆ ನೀಡಬಹುದು. ಕೂದಲಿನ ಬೆಳವಣಿಗೆಯನ್ನು ಕಡಿಮೆ ಮಾಡಲು ಮತ್ತು ಕೂದಲನ್ನು ನುಣ್ಣಗೆ ಮಾಡಲು ಸ್ಪಿರೊನೊಲ್ಯಾಕ್ಟೋನ್ ನಂತಹ ಪ್ರಿಸ್ಕ್ರಿಪ್ಷನ್ ಔಷಧಿಗಳನ್ನು ಸಹ ಬಳಸಬಹುದು.

4. ಮೊಡವೆ ಚಿಕಿತ್ಸೆ:

ಮೊಡವೆಗಳಿಗೆ ಕ್ರೀಮ್‌ಗಳು, ಮೌಖಿಕ ಪ್ರತಿಜೀವಕಗಳ ಮೂಲಕ ಚಿಕಿತ್ಸೆ ನೀಡಬಹುದು. ಆದಾಗ್ಯೂ, ಇನ್ಸುಲಿನ್ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಿದಾಗ, ಅಂಡೋತ್ಪತ್ತಿ ಸಮತೋಲನಗೊಳ್ಳುತ್ತದೆ ಮತ್ತು ಮೊಡವೆ ಸಮಸ್ಯೆಗಳು ಸುಧಾರಿಸುತ್ತವೆ ಎಂದು ಅಧ್ಯಯನಗಳು ತೋರಿಸುತ್ತವೆ.

ಇತರ ಸಲಹೆಗಳು:

ಇತರ ಸಲಹೆಗಳು:

ನಿಮ್ಮ ಸ್ಥಿತಿಯ ಬಗ್ಗೆ ಉತ್ತಮ ಜ್ಞಾನ ಹೊಂದಿರುವ ವೈದ್ಯರನ್ನು ಹುಡುಕಿ.

ನಿಮ್ಮ ಮಗಳು ತನ್ನ ಎಲ್ಲಾ ಸಮಸ್ಯೆಗಳನ್ನು ವೈದ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.

ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳಿ.

ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ.

ನಿಮ್ಮ ಮಗಳ ಆಹಾರ ಮತ್ತು ವ್ಯಾಯಾಮ ದಿನಚರಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲು ಸಹಾಯ ಮಾಡಿ.

ನಿಮ್ಮ ಮಗಳ ದೈನಂದಿನ ಆಹಾರದಲ್ಲಿ ಸಾಕಷ್ಟು ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಇತರ ಆರೋಗ್ಯಕರ ಆಹಾರಗಳನ್ನು ಸೇರಿಸಿ.

English summary

PCOS In Teens: Causes, Symptoms, Risks And Complications and Treatment in Kannada

Here we talking about PCOS In Teens: Causes, Symptoms, Risks And Complications in Kannada, read on
X
Desktop Bottom Promotion