Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಅಂಡಾಶಯದ ಕ್ಯಾನ್ಸರ್‌ನ ಅಪಾಯವನ್ನುತಗ್ಗಿಸುವ ನೈಸರ್ಗಿಕ ಆಹಾರಗಳು
ಕ್ಯಾನ್ಸರ್ ವಿರುದ್ಧ ಹೋರಾಡುವುದು ಯಾರಿಗಾದರೂ ಕಠಿಣ ಸವಾಲಾಗಿರುವುದು. ಅದಾಗ್ಯೂ ಕೆಲವೊಂದು ನೈಸರ್ಗಿಕ ನೆರವುಗಳನ್ನು ಪಡೆದುಕೊಂಡು ಕ್ಯಾನ್ಸರ್ ನಿವಾರಣೆ ಮಾಡಬಹುದು. ಇದು ಪ್ರಕೃತಿದತ್ತವಾಗಿ ಸಿಗುವಂತಹ ಆಹಾರ ಮತ್ತು ಸರಿಯಾದ ಚಿಕಿತ್ಸೆ ಪಡೆದರೆ ಆದ ಖಂಡಿತವಾಗಿಯೂ ಸಮಸ್ಯೆ ನಿವಾರಣೆ ಅಷ್ಟು ಕಠಿಣವೇನಲ್ಲ. ಅಂಡಾಶಯದ ಕ್ಯಾನ್ಸರ್ ವಿರುದ್ಧ ಹೋರಾಡಲು ಯಾವ ರೀತಿಯಲ್ಲಿ ಪ್ರಯತ್ನಿಸಬಹುದು ಎಂದು ತಿಳಿಯಬಹುದು.
ಅಂಡಾಶಯದ ಕ್ಯಾನ್ಸರ್ ಸಮಸ್ಯೆಯು ಮಹಿಳೆಯರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅಂಡಾಶಯದ ಕ್ಯಾನ್ಸರ್ ತುಂಬಾ ಅಪಾಯಕಾರಿ ಕ್ಯಾನ್ಸರ್ ಆಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಎಚ್ಚರಿಕೆ ವಹಿಸುವುದು ಅತೀ ಅಗತ್ಯವಾಗಿದೆ. ನೀವು ಸೇವಿಸುವಂತಹ ಆಹಾರ ಕ್ರಮದ ಬಗ್ಗೆ ಗಮನಹರಿಸಿದರೆ ಆಗ ಈ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಪೋಷಕಾಂಶಗಳಿಂದ ಸಮೃದ್ಧವಾಗಿರುವಂತಹ ಆಹಾರದಿಂದ ದೇಹದಲ್ಲಿನ ಪ್ರತಿರೋಧಕ ವ್ಯವಸ್ಥೆಯು ಬಲಗೊಳ್ಳುವುದು, ಇದರಿಂದ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ನೆರವಾಗುವುದು. ಅಂಡಾಶಯದ ಕ್ಯಾನ್ಸರ್ ನಿವಾರಣೆ ಮಾಡುವಂತಹ ಕೆಲವು ಆಹಾರಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ಕೋಸುಗಡ್ಡೆ(ಬ್ರಾಕೋಲಿ)
ಕೋಸುಗಡ್ಡೆಯನ್ನು ವಿಶ್ವದಲ್ಲಿನ ಅಗ್ರ ಮೂರು ಆಹಾರದಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದು ಅಂಡಾಶಯದ ಕ್ಯಾನ್ಸರ್ ವಿರುದ್ಧ ಹೋರಾಡುವುದು. ಬ್ರಾಕೋಲಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇವುಗಳಲ್ಲಿ ಮುಖ್ಯವಾಗಿ ಕಬ್ಬಿನಾಂಶ, ಪ್ರೋಟೀನ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್ಸ್, ಕ್ರೋಮಿಯಂ, ವಿಟಮಿನ್ ಎ, ವಿಟಮಿನ್ ಸಿ ಇದೆ. ಈ ಎಲ್ಲಾ ಪೋಷಕಾಂಶಗಳು ತರಕಾರಿಯನ್ನು ಪೌಷ್ಠಿಕವಾಗಿಸಿದೆ. ಇದರ ಹೊರತಾಗಿ ಇದರಲ್ಲಿ ಪೈಥೋಕೆಮಿಮಕಲ್ ಮತ್ತು ಆಂಟಿಆಕ್ಸಿಡೆಂಟ್ ಗಳು ಇವೆ. ಇದು ಕ್ಯಾನ್ಸರ್ ವಿರೋಧಿ ಆಹಾರದಲ್ಲಿ ಪ್ರಮುಖವಾಗಿ ಒಳಗೊಂಡಿರುವ ಅಂಶಗಳು.
ಶುಂಠಿ
ಹಲವಾರು ದಶಕಗಳಿಂದಲೂ ಶುಂಠಿಯನ್ನು ತುಂಬಾ ಆರೋಗ್ಯಕಾರಿ ಆಹಾರ ಎಂದು ಪರಿಗಣಿಸಲಾಗಿದೆ. ಶುಂಠಿಯು ಕ್ಯಾನ್ಸರ್ ನ ದೊಡ್ಡ ವಿರೋಧಿಯಾಗಿದೆ. ಅಂಡಾಶಯದ ಕ್ಯಾನ್ಸರ್ ವಿಚಾರಕ್ಕೆ ಬಂದರೆ ಶುಂಠಿಯು ತುಂಬಾ ಪ್ರಬಲ ನೈಸರ್ಗಿಕ ಅಂಶವಾಗಿದ್ದು, ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವುದು. ನಿಮ್ಮ ಆಹಾರ ಕ್ರಮದಲ್ಲಿ ಹೆಚ್ಚಿನ ಮಟ್ಟದಲ್ಲಿ ಶುಂಠಿ ಸೇರಿಸಿಕೊಂಡರೆ ಆಗ ಕ್ಯಾನ್ಸರ್ ಅಪಾಯವು ಕಡಿಮೆ ಆಗುವುದು.
ಮೊಟ್ಟೆ
ವಿಟಮಿನ್ ಡಿ ಅತೀ ಮುಖ್ಯ ವಿಟಮಿನ್ ಆಗಿದ್ದು, ಇದು ಅಂಡಾಶಯದ ಕ್ಯಾನ್ಸರ್ ನಿವಾರಣೆ ಮಾಡುವಲ್ಲಿ ಪ್ರಮುಖವಾಗಿದೆ. ದೇಹದಲ್ಲಿ ವಿಟಮಿನ್ ಡಿ ಪ್ರಮಾಣವು ಕಡಿಮೆಯಾದಷ್ಟು ಅಂಡಾಶಯದ ಕ್ಯಾನ್ಸರ್ ಸಮಸ್ಯೆಯು ಹೆಚ್ಚಾಗುವುದು. ಮೊಟ್ಟೆಯಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿದೆ ಮತ್ತು ಇದು ದೇಹದಲ್ಲಿ ಕ್ಯಾನ್ಸರ್ ಅಪಾಯವನ್ನು ತಪ್ಪಿಸುತ್ತದೆ. ಅಂಡಾಶಯದ ಕ್ಯಾನ್ಸರ್ ತಪ್ಪಿಸಲು ನೀವು ದೈನಂದಿನ ಆಹಾರ ಕ್ರಮದಲ್ಲಿ ಮೊಟ್ಟೆ ಸೇರಿಸಿಕೊಳ್ಳಿ.
ಚಹಾ
ಯಾವುದೇ ರೀತಿಯ ಚಾ ಅಂಡಾಶಯದ ಕ್ಯಾನ್ಸರ್ ನ ಅಪಾಯವನ್ನು ಶೇ.50ರಷ್ಟು ತಪ್ಪಿಸುವುದು ಎಂದು ಹೇಳಲಾಗುತ್ತದೆ. ಅಧ್ಯಯನಗಳು ಹೇಳುವ ಪ್ರಕಾರ, ಕ್ಯಾನ್ಸರ್ ಕೋಶಗಳನ್ನು ತಡೆಯುವಲ್ಲಿ ಚಾ ತುಂಬಾ ಪರಿಣಾಮಕಾರಿ ಆಗಿದೆ ಎಂದು ಹೇಳಲಾಗುತ್ತದೆ. ಚಾದಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಕ್ಯಾನ್ಸರ್ ನಿವಾರಣೆ ಮಾಡಲು ನೆರವಾಗುವುದು. ದಿನನಿತ್ಯವು ಎರಡು ಕಪ್ ಚಾ ಕುಡಿದರೆ ಆಗ ಅಂಡಾಶಯದ ಅಪಾಯವು ತಗ್ಗುವುದು.
ಬಸಲೆ
ಅಂಡಾಶಯದ ಕ್ಯಾನ್ಸರ್ ತಡೆಯಲು ಬಸಲೆಯು ಅದ್ಭುತ ಆಹಾರವಾಗಿದೆ. ಬಸಲೆಯು ಅಂಡಾಶಯದ ಕ್ಯಾನ್ಸರ್ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಸಲೆಯಲ್ಲಿ ಉನ್ನತ ಮಟ್ಟದ ಸತು, ಮೆಗ್ನಿಶಿಯಂ, ಪೊಟಾಶಿಯಂ ಇದ್ದು, ಇದು ಶಕ್ತಿ ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಬಸಲೆ ಸೇವನೆ ಮಾಡಿದರೆ ಅದರಿಂದ ಅಂಡಾಶಯದ ಕ್ಯಾನ್ಸರ್ ಗಡ್ಡೆಯು ಬೆಳೆಯುವುದು ತಪ್ಪುವುದು.
ಸೌತೆಕಾಯಿ
ದೇಹದಲ್ಲಿರುವಂತಹ ವಿಷಕಾರಿ ಅಂಶವನ್ನು ತೆಗೆಯಲು ಸೌತೆಕಾಯಿಯು ಅದ್ಭುತವಾದ ಆಹಾರವಾಗಿದೆ. ಪ್ಯಾಂಟೊಥೆನಿಕ್ ಆಮ್ಲವು ಇದರಲ್ಲಿ ಇರುವ ಕಾರಣದಿಂದಾಗಿ ಇದು ಕ್ಯಾನ್ಸರ್ ವಿರುದ್ಧ ಹೋರಾಡುವುದು. ಇದರ ಹೊರತಾಗಿ ಸೌತೆಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಕೆ, ಮೆಗ್ನಿಶಿಯಂ, ಪೊಟಾಶಿಯಂ ಸಮೃದ್ಧವಾಗಿದೆ.
ಕ್ಯಾರೆಟ್
ಕ್ಯಾರೆಟ್ ತುಂಬಾ ಅಗ್ಗ, ರುಚಿಕರ ಹಾಗೂ ತುಂಬಾ ಜನಪ್ರಿಯವಾಗಿರುವ ಆಹಾರವಾಗಿದೆ. ಇದರಲ್ಲಿ ತುಂಬಾ ಸಮತೋಲಿತ ಕೆಲವೊಂದು ಅಂಶಗಳು ಒಳಗೊಂಡಿದೆ. ಕ್ಯಾರೆಟ್ ನಲ್ಲಿ ವಿಟಮಿನ್ ಕೆ, ವಿಟಮಿನ್ ಬಿ6, ವಿಟಮಿನ್ ಎ ಸಮೃದ್ಧವಾಗಿದೆ. ಇದರ ಹೊರತಾಗಿ ಇದರಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶ ಕ್ಯಾನ್ಸರ್ ನಿವಾರಣೆ ಮಾಡಲು ಪರಿಣಾಮಕಾರಿ ಎಂದು ಸಾಬೀತಾಗಿದೆ.
ಕೋಸುಗಡ್ಡೆ(ಬ್ರಾಕೋಲಿ)
ಕೋಸುಗಡ್ಡೆಯನ್ನು ವಿಶ್ವದಲ್ಲಿನ ಅಗ್ರ ಮೂರು ಆಹಾರದಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದು ಅಂಡಾಶಯದ ಕ್ಯಾನ್ಸರ್ ವಿರುದ್ಧ ಹೋರಾಡುವುದು. ಬ್ರಾಕೋಲಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇವುಗಳಲ್ಲಿ ಮುಖ್ಯವಾಗಿ ಕಬ್ಬಿನಾಂಶ, ಪ್ರೋಟೀನ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್ಸ್, ಕ್ರೋಮಿಯಂ, ವಿಟಮಿನ್ ಎ, ವಿಟಮಿನ್ ಸಿ ಇದೆ. ಈ ಎಲ್ಲಾ ಪೋಷಕಾಂಶಗಳು ತರಕಾರಿಯನ್ನು ಪೌಷ್ಠಿಕವಾಗಿಸಿದೆ. ಇದರ ಹೊರತಾಗಿ ಇದರಲ್ಲಿ ಪೈಥೋಕೆಮಿಮಕಲ್ ಮತ್ತು ಆಂಟಿಆಕ್ಸಿಡೆಂಟ್ ಗಳು ಇವೆ. ಇದು ಕ್ಯಾನ್ಸರ್ ವಿರೋಧಿ ಆಹಾರದಲ್ಲಿ ಪ್ರಮುಖವಾಗಿ ಒಳಗೊಂಡಿರುವ ಅಂಶಗಳು.
ಶುಂಠಿ
ಹಲವಾರು ದಶಕಗಳಿಂದಲೂ ಶುಂಠಿಯನ್ನು ತುಂಬಾ ಆರೋಗ್ಯಕಾರಿ ಆಹಾರ ಎಂದು ಪರಿಗಣಿಸಲಾಗಿದೆ. ಶುಂಠಿಯು ಕ್ಯಾನ್ಸರ್ ನ ದೊಡ್ಡ ವಿರೋಧಿಯಾಗಿದೆ. ಅಂಡಾಶಯದ ಕ್ಯಾನ್ಸರ್ ವಿಚಾರಕ್ಕೆ ಬಂದರೆ ಶುಂಠಿಯು ತುಂಬಾ ಪ್ರಬಲ ನೈಸರ್ಗಿಕ ಅಂಶವಾಗಿದ್ದು, ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವುದು. ನಿಮ್ಮ ಆಹಾರ ಕ್ರಮದಲ್ಲಿ ಹೆಚ್ಚಿನ ಮಟ್ಟದಲ್ಲಿ ಶುಂಠಿ ಸೇರಿಸಿಕೊಂಡರೆ ಆಗ ಕ್ಯಾನ್ಸರ್ ಅಪಾಯವು ಕಡಿಮೆ ಆಗುವುದು.
ಮೊಟ್ಟೆ
ವಿಟಮಿನ್ ಡಿ ಅತೀ ಮುಖ್ಯ ವಿಟಮಿನ್ ಆಗಿದ್ದು, ಇದು ಅಂಡಾಶಯದ ಕ್ಯಾನ್ಸರ್ ನಿವಾರಣೆ ಮಾಡುವಲ್ಲಿ ಪ್ರಮುಖವಾಗಿದೆ. ದೇಹದಲ್ಲಿ ವಿಟಮಿನ್ ಡಿ ಪ್ರಮಾಣವು ಕಡಿಮೆಯಾದಷ್ಟು ಅಂಡಾಶಯದ ಕ್ಯಾನ್ಸರ್ ಸಮಸ್ಯೆಯು ಹೆಚ್ಚಾಗುವುದು. ಮೊಟ್ಟೆಯಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿದೆ ಮತ್ತು ಇದು ದೇಹದಲ್ಲಿ ಕ್ಯಾನ್ಸರ್ ಅಪಾಯವನ್ನು ತಪ್ಪಿಸುತ್ತದೆ. ಅಂಡಾಶಯದ ಕ್ಯಾನ್ಸರ್ ತಪ್ಪಿಸಲು ನೀವು ದೈನಂದಿನ ಆಹಾರ ಕ್ರಮದಲ್ಲಿ ಮೊಟ್ಟೆ ಸೇರಿಸಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Click it and Unblock the Notifications