Latest Updates
-
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು
ಮಕ್ಕಳಾಗುತ್ತಿಲ್ಲ ಎಂದಾದರೆ ಪುರುಷನ ಬಂಜೆತನವೂ ಕಾರಣವಾಗಿರಬಹುದು!
ಮಕ್ಕಳಿರುವ ಮನೆ ಎಂದಿಗೂ ನಗುತ್ತಿರುತ್ತದೆ ಅನ್ನುತ್ತಾರೆ. ಹೀಗಾಗಿ ಮಕ್ಕಳನ್ನು ಪಡೆಯುವ ಬಯಕೆ ಎಲ್ಲಾ ದಂಪತಿಗೂ ಇದ್ದೆ ಇರುತ್ತೆ. ಮದುವೆಯಾದ ವರ್ಷದಲ್ಲೇ ಕೆಲವರು ಮಕ್ಕಳನ್ನು ಪಡೆದರೆ ಇನ್ನು ಕೆಲವರು ಕೊಂಚ ತಡವಾಗಿ ಹೊಂದುವುದು ಇಂದಿನ ಕಾಲದಲ್ಲಿ ಸಾಮಾನ್ಯವಾಗಿಟ್ಟಿದೆ. ಆದರೆ ಕೆಲವು ದಂಪತಿ ತೀವ್ರ ಲೈಂಗಿಕ ಪ್ರಯತ್ನದ ಬಳಿಕವೂ ಮಕ್ಕಳು ಆಗುವುದಿಲ್ಲ. ಇಂದಿನ ಜೀವನಶೈಲಿ, ಆಹಾರ ಪದ್ದತಿಗಳಿಂದ ಇದು ಸರ್ವೇ ಸಾಮಾನ್ಯ. ಆದರೆ ಇಂತಹ ಪರಿಸ್ಥಿತಿ ಬಂದಾಗ ಮನೆಯವರಿಂದ ಹಿಡಿದು ಊರಿನವೆರಲ್ಲ ಇದಕ್ಕೆ ಮಹಿಳೆ ಕಾರಣ ಎಂದು ಆಕೆಯ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ. ಕೆಲವು ಕಡೆ ಈ ವಿಚಾರವಾಗಿ ಮಹಿಳೆಯರನ್ನು ಅತೀ ಕೀಳಾಗಿ ಕಾಣುವುದುಂಟು.

ಆದರೆ ಇದು ನಿಜಕ್ಕೂ ತಪ್ಪು. ಯಾಕೆಂದರೆ ಒಂದು ದಂಪತಿ ಮಗುವನ್ನು ಪಡೆಯುವುದೆಂದರೆ ಇಬ್ಬರು ಅಂದರೆ ಗಂಡ ಹಾಗೂ ಹೆಂಡತಿಯ ಪಾಲು ಸಮಾನವಾಗಿ ಇರುತ್ತದೆ. ಸಂತಾನೋತ್ಪತ್ತಿ ಎನ್ನುವುದು ದ್ವಿಮುಖ ಪ್ರಕ್ರಿಯೆ. ಅಲ್ಲಿ ಪುರುಷ ಮತ್ತು ಮಹಿಳೆ ಇಬ್ಬರೂ ಫಲೀಕರಣದಲ್ಲಿ ಸಮಾನ ಪಾಲು ಹೊಂದಿರುತ್ತಾರೆ. ಮಗುವಾಗಲು ಪತಿ, ಪತ್ನಿ ಕೊಡುಗೆ ಇಕ್ವಾಲ್ ಆಗಿರುತ್ತದೆ. ಮಹಿಳೆಯರಂತೆ ಪುರುಷರಿಗೆ ಬಂಜೆತನ ಆಗುತ್ತದೆ. ಇಂಡಿಯನ್ ಸೊಸೈಟಿ ಆಫ್ ಅಸಿಸ್ಟೆಡ್ ರಿಪ್ರೊಡಕ್ಷನ್ ದಾಖಲೆಯ ಪ್ರಕಾರ, ಶೇಕಡಾ 10-14 ರಷ್ಟು ಭಾರತೀಯರು ಬಂಜೆತನದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮತ್ತು ಸ್ತ್ರೀ ಬಂಜೆತನದ ಪ್ರಮಾಣ ಪುರುಷ ಬಂಜೆತನಕ್ಕಿಂತ ಕೇವಲ ಎರಡು ಪ್ರತಿಶತ ಹೆಚ್ಚಾಗಿದೆ.
ಹಾಗಾದ್ರೆ ಬಂಜೆತನ ಎಂದಾಗ ಯಾಕೆ ಮಹಿಳೆಯರನ್ನೇ ಬೊಟ್ಟು ಮಾಡಿ ತೋರಿಸುತ್ತಾರೆ? ಪುರುಷರಿಗೂ ಬಂಜೆತನ ಆಗುತ್ತದೆ ಎನ್ನುವುದರ ಬಗ್ಗೆ ಯಾರು ಚಕಾರ ಎತ್ತುವುದಿಲ್ಲ ಯಾಕೆ? ಪುರುಷರ ಫಲವತ್ತತೆ ಬಗ್ಗೆಗ್ಗಿನ ಸತ್ಯಾಂಶ ಏನು? ಇಲ್ಲಿದೆ ಈ ಬಗ್ಗೆ ಡಿಟೇಲ್ಡ್ ಸ್ಟೋರಿ.

1. ಪುರುಷರ ಫಲವತ್ತತೆ ಬಗ್ಗೆಗ್ಗಿನ ಮಿಥ್ಯೆ ಏನು?
ಮಗು ಹೊಂದುವ ಬಗ್ಗೆ ನಮಗೆ ಗೊತ್ತಿಲ್ಲದ ಅನೇಕ ವಿಚಾರಗಳಿವೆ. ಸಂತಾನೋತ್ಪತ್ತಿ ಎನ್ನುವುದು ಪುರುಷ ಮತ್ತು ಮಹಿಳೆಯ ದ್ವಿಮುಖ ಪ್ರಕ್ರಿಯೆ ಎಂದು ಇಂದಿಗೂ ಅನೇಕ ಜನರಿಗೆ ತಿಳಿದಿಲ್ಲ. ಪುರುಷರ ಫಲವತ್ತತೆ ಬಗ್ಗೆ ಕೆಲ ಮಿಥ್ಯೆಗಳು ನೀವು ತಿಳಿಯಲೇಬೇಕು?

1: ಫಲವತ್ತತೆ ಅಥವಾ ಬಂಜೆತನ ಮಹಿಳೆಯ ಸಮಸ್ಯೆ!
ನಮ್ಮಲ್ಲಿ ಅನೇಕರು ಫಲವತ್ತತೆ ಮತ್ತು ಬಂಜೆತನ ಮಹಿಳೆಯರ ಸಮಸ್ಯೆ ಎಂದು ತಿಳಿದುಕೊಂಡಿದ್ದಾರೆ. ಇಂದು ಕಂಪ್ಲೀಟ್ ರಾಂಗ್. ಯಾಕೆಂದರೆ, ಮಹಿಳೆಯರಂತೆ ಪುರುಷರಿಗೂ ಸಂತಾನೋತ್ಪತ್ತಿಯಲ್ಲಿ ಪಾಲಿದೆ. ಮಹಿಳೆಯರಂತೆ ಪುರುಷರು ಬಂಜೆತನದ ಸಮಸ್ಯೆ ಎದುರಿಸುತ್ತಾರೆ. ಸಂತಾನೋತ್ಪತ್ತಿಯ ಫಲವತ್ತತೆ ವಿಚಾರದಲ್ಲಿ ಮಹಿಳೆಯರಂತೆ ಪುರುಷರ ಕೊಡುಗೆ ಅರ್ಧದಷ್ಟಿದೆ. ವರದಿಗಳ ಪ್ರಕಾರ ಶೇ.20ರಷ್ಟು ಸಂತಾನಹೀನ ದಂಪತಿಗಳ ಫಲವತ್ತತೆ ಸಮಸ್ಯೆಗೆ ಪುರುಷರೇ ನೇರ ಕಾರಣವಂತೆ. ಇನ್ನು ಸುಮಾರು ಶೇ.30 ರಷ್ಟು ದಂಪತಿಗಳ ಸಂತಾನಹೀನ ಸಮಸ್ಯೆಗೆ ಗಂಡ ಹಾಗೂ ಪತ್ನಿ ಇಬ್ಬರು ಕಾರಣ ಎಂದು ತಿಳಿಸಿದೆ.
ಪುರುಷರ ಫಲವತ್ತತೆ ಸಾಮಾನ್ಯವಾಗಿ ಅವರ ವೀರ್ಯದ ಪ್ರಮಾಣ ಮತ್ತು ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಪುರುಷರ ವೀರ್ಯದ ಗುಣಮಟ್ಟ ಕಡಿಮೆಯಿದ್ದರೆ, ಸಂಗಾತಿಯನ್ನು ಗರ್ಭಿಣಿಯಾಗಿಸಲು ಕಷ್ಟವಾಗಬಹುದು ಅಥವಾ ಅಸಾಧ್ಯವಾಗಬಹುದು. ಇನ್ನು ಮತ್ತೊಂದು ವರದಿ ಪ್ರಕಾರ, ಫಲವತ್ತತೆಯ ಸಮಸ್ಯೆಗಳಿರುವ ಸುಮಾರು 3/2 ರಷ್ಟು ಪುರುಷರಲ್ಲಿ ಕಡಿಮೆ ಸಂಖ್ಯೆ ಅಂದರೆ ಲೋ ಕೌಂಟ್ ಸ್ಪರ್ಮ್ ಇರುವುದಾಗಿ ತಿಳಿದುಬಂದಿದೆ. ಇದರಿಂದಾಗಿ ಸಂತಾನೋತ್ಪತ್ತಿ ಸಮಸ್ಯೆಗಳು ಕಾಡುತ್ತದೆ. ಇಷ್ಟೇ ಅಲ್ಲದೇ, ಸ್ಪರ್ಮ್ ಟ್ರಾವೆಲ್, ಪುರುಷರ ಲೈಂಗಿಕ ಸಮಸ್ಯೆಗಳು(ಲೋ ಸೆಕ್ಶುವಲ್ ಡ್ರೈವ್, ಪುರುಷರ ನಿಮಿರುವಿಕೆ ಸಮಸ್ಯೆ)ಕಡಿಮೆ ಮಟ್ಟದ ಹಾರ್ಮೋನುಗಳು, ವೀರ್ಯ ಪ್ರತಿಕಾಯಗಳು ಕೂಡ ಪುರುಷರ ಫಲವತ್ತತೆಗೆ ಕಾರಣವಾಗಿದೆ. ಹೀಗಾಗಿ ಮಹಿಳೆಯರಿಂದ ಮಾತ್ರ ಮಗು ಆಗುತ್ತಿಲ್ಲ ಎಂದು ದೂರುವಂತಿಲ್ಲ. ಪುರುಷರ ಈ ವಿಚಾರಗಳು ಕೂಡ ಮಗು ಆಗಲು ಇಂಪಾರ್ಟೆಂಟ್.

ಮಿಥ್ಯೆ 2: ಮಗು ಆಗಲು ಮಹಿಳೆಯರ ಆರೋಗ್ಯ ಮುಖ್ಯ!
ಮಗು ಆಗಲು ಮಹಿಳೆಯರ ಆರೋಗ್ಯ ಮುಖ್ಯ ಎನ್ನುವ ಸುಳ್ಳು ಕತೆಯನ್ನೇ ನಾವು ಈವರೆಗೆ ನಂಬಿದ್ದೇವೆ. ಆದರೆ ಮಹಿಳೆಯರ ಆರೋಗ್ಯ ಮಾತ್ರವಲ್ಲ ಪುರುಷರ ಆರೋಗ್ಯ ಕೂಡ ಸಂತಾನೋತ್ಪತ್ತಿಗೆ ಮುಖ್ಯ. ಧೂಮಪಾನ ಮಾಡುವ ಪುರುಷರು ತಮ್ಮ ಈ ಅಭ್ಯಾಸವು ಫಲವತ್ತತೆಗೆ ಅಡ್ಡಿಯಾಗುವುದಿಲ್ಲ ಎಂದು ನಂಬುತ್ತಾರೆ. ಆದರೆ ಇದು ಸುಳ್ಳು, ಧೂಮಪಾನಿಗಳಲ್ಲಿ ಪುರುಷ ಬಂಜೆತನದ ಅಪಾಯವು 30% ರಷ್ಟು ಹೆಚ್ಚಾಗಿರುತ್ತದೆ.
ಅಮೆರಿಕನ್ ಸೊಸೈಟಿ ಫಾರ್ ರಿಪ್ರೊಡಕ್ಟಿವ್ ಮೆಡಿಸಿನ್ ಸಂಸ್ಥೆಯ ಪ್ರಕಾರ, ಪುರುಷ ಬಂಜೆತನ ಪ್ರಕರಣಗಳಲ್ಲಿ 13% ಕ್ಕಿಂತ ಹೆಚ್ಚು ಪುರುಷರು ತಂಬಾಕು ಸೇವಿಸುವವರಾಗಿದ್ದಾರೆ. ಹೀಗಾಗಿ ಧೂಮಪಾನ ಕೂಡ ಪುರುಷರ ಫಲವತ್ತತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇನ್ನು ನಿರಂತರ ಮದ್ಯಪಾನ ಸೇವನೆಯಿಂದ ಲೈಂಗಿಕ ಶಕ್ತಿ ಕುಂದುತ್ತದೆ. ಮದ್ಯಪಾನದ ಚಟ ಹೊಂದಿದರೆ ಲೈಂಗಿಕತೆ ಬಗ್ಗೆ ಆಸಕ್ತಿ ದೂರವಾಗುತ್ತದೆ. ಅಲ್ಲದೇ ನಿರಂತರ ಕುಡಿತ ವೀರ್ಯದ ಶಕ್ತಿಯನ್ನು ಕುಗ್ಗಿಸುತ್ತದೆ. ಆದರೆ ಧೂಮಪಾನ ಹಾಗೂ ಮದ್ಯಪಾನದಿಂದ ಏನು ಆಗುವುದಿಲ್ಲ ಎಂದು ಪುರುಷರು ನಂಬಿದ್ದಾರೆ. ಅದಲ್ಲದೇ ಧೂಮಪಾನ ಹಾಗೂ ಮದ್ಯಪಾನದಿಂದ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತೆ ಎನ್ನುವುದು ಗೊತ್ತೆ ಇಲ್ಲ.

ಮಿಥ್ಯೆ 3: ಪುರುಷರ ಫಲವಂತಿಕೆಗೆ ಎಷ್ಟು ವಯಸ್ಸಾದರೂ ಕುಗ್ಗುವುದಿಲ್ಲ
ನಮ್ಮಲ್ಲಿ ಪುರುಷರ ಫಲವಂತಿಗೆ ಎಷ್ಟು ವಯಸ್ಸಾದರೂ ಕಡಿಮೆ ಆಗುವುದಿಲ್ಲ ಅನ್ನುವ ನಂಬಿಕೆ ಇದೆ. ಆದರೆ ಇದು ಸುಳ್ಳು. ತಜ್ಞರ ಪ್ರಕಾರ, ನಲವತ್ತೈದರ ಬಳಿಕ ಪುರುಷರ ವೀರ್ಯಾಣುಗಳ ಗುಣಮಟ್ಟ ಕುಸಿಯುತ್ತಾ ಸಾಗುತ್ತದೆ. ಆದರೆ ಎಲ್ಲರಲ್ಲಿಯೂ ಅಲ್ಲ, ಅಪರೂಪದಲ್ಲಿ ಕೆಲವು ಪುರುಷರಲ್ಲಿ ಅರವತ್ತರ ಬಳಿಕವೂ ವೀರ್ಯಾಣುಗಳು ಉತ್ತಮ ಗುಣಮಟ್ಟವನ್ನೇ ಹೊಂದಿರುತ್ತವೆ. ಆದರೆ ಅಚ್ಚರಿ ಎಂದರೆ ವೀರ್ಯಾಣುಗಳ ಉತ್ಪಾದನೆ ಮಾತ್ರ ಪುರುಷರಲ್ಲಿ ಜೀವನಪರ್ಯಂತ ಇರುತ್ತದೆ. ಹೀಗಾಗಿಯೇ ನಾವು 60 ವರ್ಷದ ವೃದ್ದ ಮಗುವಿಗೆ ಜನ್ಮ ನೀಡಿದ ಎನ್ನುವ ಸುದ್ದಿಯನ್ನು ಓದಿರುತ್ತೇವೆ. ಇದು ಎಲ್ಲರ ಬಾಳಲ್ಲೂ ನಡೆಯುವುದಿಲ್ಲ. ಕೆಲವರಲ್ಲಿ ವಯಸ್ಸಾದರೂ ಉತ್ತಮ ವೀರ್ಯ ಇರುತ್ತದೆ. ಆದರೆ ಸೈನ್ಸ್ ಪ್ರಕಾರ ನಲವತ್ತೈದರ ಬಳಿಕ ಪುರುಷರ ವೀರ್ಯಾಣುಗಳ ಗುಣಮಟ್ಟ ಕುಸಿಯುತ್ತಾ ಸಾಗುತ್ತದೆ.

ಮಿಥ್ಯೆ 4 : ಪುರುಷರ ಲೋ ಕೌಂಟ್ ಸ್ಪರ್ಮ್
ಅನೇಕರಿಗೆ ಮಗು ಆಗುವುದೆಂದರೆ ಪುರುಷರ ಸ್ಪರ್ಮ್ ನಿಂದ ಎನ್ನುವುದು ಗೊತ್ತು ಆದರೆ ಅವರ ಸ್ಪರ್ಮ್ ಲೋ ಕೌಂಟ್ ಆಗಿದ್ದರೆ ಮಗು ಹುಟ್ಟಲು ಸಾಧ್ಯವಿಲ್ಲ ಎನ್ನುತ್ತಾರೆ ವೈದ್ಯರು. ಹೌದು, ಪುರುಷರ ಜೀವನ ಶೈಲಿ ಹಾಗೂ ಆಹಾರ ಪದ್ದತಿಯಿಂದ ಇತ್ತೀಚಿನ ದಿನಗಳಲ್ಲಿ ಲೋ ಸ್ಪರ್ಮ್ ಕೌಂಟ್ ಹೆಚ್ಚುತ್ತಿದೆ. ಅನುವಂಶಿಕ ಕಾರಣಗಳಿಂದಲೂ ಪುರುಷರಲ್ಲಿ ಲೋ ಕೌಂಟ್ ಸ್ಪರ್ಮ್ ಸಮಸ್ಯೆ ಕಾಡುತ್ತಿದೆ. ಒಂದು ಮಿಲಿಲೀಟರ್ ನಲ್ಲಿ 40 ರಿಂದ ಮಿಲಿಯನ್ ವೀರ್ಯಾಣುಗಳಿದ್ದರೆ ಮಾತ್ರ ಫಲವಂತಿಕೆ ಸಾಧ್ಯ . ಇಲ್ಲದಿದ್ದರೆ ಪುರುಷರಲ್ಲಿ ಕಡಿಮೆ ವೀರ್ಯಾಣುಗಳ ಎಣಿಕೆ ಸಮಸ್ಯೆ ಕಾಣುತ್ತದೆ. ವೀರ್ಯಾಣುಗಳ ಅಸಹಜ ಗಾತ್ರ, ಆಕಾರದ ಸಮಸ್ಯೆ ಕೂಡ ಪುರುಷರಲ್ಲಿ ಕಾಣುತ್ತದೆ. ಇದಕ್ಕೆ ಬೇಕಾದ ಮದ್ದನ್ನು ವೈದ್ಯಲೋಕ ಕೊಡುತ್ತಿದೆ. ಹಾಗಿದ್ದರೂ ಈ ಸಮಸ್ಯೆ ಬಗ್ಗೆ ಯಾರು ಕೂಡ ಚಕಾರವೆತ್ತುತ್ತಿಲ್ಲ.

ಮಿಥ್ಯೆ 5 : ಲೈಂಗಿಕ ದೌರ್ಬಲ್ಯ ಎನ್ನುವ ಮತ್ತೊಂದು ಸತ್ಯ
ನಮ್ಮ ಜಗತ್ತಿನಲ್ಲಿ ಅನೇಕ ದಂಪತಿಗಳಿಗೆ ಮಕ್ಕಳಾಗಿರುವುದಿಲ್ಲ. ಅದಕ್ಕೆ ಪುರುಷರಲ್ಲಿರುವ ನೂನ್ಯತೆಗಳು ಕೂಡ ಕಾರಣವಾಗಿರಬಹುದು. ಹೌದು, ಅನೇಕ ಪುರುಷರಿಗೆ ಲೈಂಗಿಕ ದೌರ್ಬಲ್ಯ ಕಾಡುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆಗಲೇ ಹೇಳಿದ ಹಾಗೇ ಜೀವನ ಶೈಲಿ, ಅನುವಂಶಿಕತೆ, ಆಹಾರ ಪದ್ದತಿಯಿಂದ ಲೈಂಗಿಕ ದೌರ್ಬಲ್ಯದ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಅನೇಕರಿಗೆ ಸೆಕ್ಸ್ ಬಗ್ಗೆ ಕೊಂಚವೂ ಅಸಕ್ತಿ ಇರುವುದಿಲ್ಲ. ಮದುವೆ ಆದರೂ ಸೆಕ್ಸ್ ಮಾಡಿರುವುದಿಲ್ಲ. ಮಕ್ಕಳು ಮಾಡಲು ಟ್ರೈ ಕೂಡ ಮಾಡಿರುವುದಿಲ್ಲ. ಇನ್ನು ಅನೇಕ ಪುರುಷರಿಗೆ ಉದ್ರೇಕ ಸಾಧ್ಯವಾಗದಿರುವುದು ಕೂಡ ಮತ್ತೊಂದು ಲೈಂಗಿಕ ದೌರ್ಬಲ್ಯ. ಕೆಲವು ಪುರುಷರಿಗೆ ನಿಮಿರುವಿಕೆ ಸಮಸ್ಯೆ ಕೂಡ ಇರುತ್ತದೆ.
ಹೀಗೆ ಇವುಗಳೆಲ್ಲ ಯಾರು ತಿಳಿಸದ ಪುರುಷರ ಫಲವತ್ತತೆ ಬಗ್ಗೆಗ್ಗಿನ ಕಟು ಸತ್ಯವಾಗಿದೆ. ಆದರೆ ಮಗು ಆಗದಕ್ಕೆ ಮಹಿಳೆಯರನ್ನು ದೂಷಿಸುತ್ತಾರೆ. ಸದ್ಯದ ವೈದ್ಯಲೋಕದಿಂದಾಗಿ ಸಂತಾನೋತ್ಪತ್ತಿಯ ಯಾವುದೇ ಸಮಸ್ಯೆ ಇದ್ದರೂ ನಿವಾರಿಸಬಹುದಾಗಿದೆ. ಪುರುಷ ಅಥವಾ ಮಹಿಳೆಯರಲ್ಲಿ ಯಾವುದೇ ಸಮಸ್ಯೆ ಇದ್ದರೂ ನಿವಾರಿಸಿ ಮಗುವನ್ನು ಪಡೆಯಬಹುದಾಗಿದೆ.



Click it and Unblock the Notifications











