ಅಕಾಲಿಕ ಬಿಳಿಕೂದಲಿಗೂ, ಹೃದ್ರೋಗಕ್ಕೂ ಸಂಬಂಧವಿದೆಯೇ? ಸಂಶೋಧನೆ ಹೇಳೋದೇನು?

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಅಥವಾ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಜನರ ಸಾವಿಗೆ ಕಾರಣವಾಗುತ್ತಿವೆ. ಇದಕ್ಕೆ ಅನಾರೋಗ್ಯಕರ ಜೀವನಶೈಲಿ ಪ್ರಮುಖ ಕಾರಣವಾದರೆ, ಅರ್ಥವಾಗದೇ ಇರುವಂತಹ ಕಾರಣಗಳು ಅನೇಕ. ಇದೀಗ ಹೃದ್ರೋಗಕ್ಕೆ ಸಂಬಂಧಿಸಿದಂತೆ ಹೊಸದೊಂದು ಅಂಶವನ್ನು ಸಂಶೋಧಕರು ಕಂಡುಕೊಂಡಿದ್ದು, ಹಲವರ ಆಶ್ಚರ್ಯಕ್ಕೆ ಕಾರಣವಾಗಿದೆ.

ಅಂದಹಾಗೇ, ಹೃದ್ರೋಗಕ್ಕೆ ಸಂಬಂಧಿಸಿದ ಅಂಶವೆಂದರೆ, ಬಿಳಿಕೂದಲು..! ಹೌದು, ಬಿಳಿಕೂದಲಿನ ಸಮಸ್ಯೆ ವಯಸ್ಸಾದಂತೆ ಸಹಜವಾದರೂ, ಕೆಲವರಲ್ಲಿ ಅಸಹಜ ವಯಸ್ಸಿಗೆ ಬಿಳಿ ಅಥವಾ ಬೂದು ಬಣ್ಣದ ಕೂದಲು ಕಂಡುಬರುತ್ತವೆ. ಆದರೆ, ಈ ಅಕಾಲಿಕ ಬಿಳಿಕೂದಲು ಪುರುಷರಲ್ಲಿ ಹ್ರದ್ರೋಗ ಅಥವಾ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು ಎಂಬುದನ್ನು ಸಂಶೋಧನೆಯೊಂದು ಕಂಡುಹಿಡಿದಿದೆ. ಈ ಕುರಿತ ಸಂಪೂರ್ಣ ಮಾಹಿತಿ ನಿಮಗಾಗಿ...

ಹೃದ್ರೋಗ ಮತ್ತು ಬಿಳಿ ಕೂದಲು: ಸಂಶೋಧನೆ ಏನು ಹೇಳುತ್ತದೆ?

ಹೃದ್ರೋಗ ಮತ್ತು ಬಿಳಿ ಕೂದಲು: ಸಂಶೋಧನೆ ಏನು ಹೇಳುತ್ತದೆ?

ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ನಡೆಸಿದ ಅಧ್ಯಯನದ ಪ್ರಕಾರ, ಪುರುಷರಲ್ಲಿ ಬೋಳುತಲೆ ಹಾಗೂ ಅಕಾಲಿಕ ಬಿಳಿಕೂದಲಿನ ಸಮಸ್ಯೆಯು ಬಣ್ಣವು ಬೊಜ್ಜುಗಿಂತ ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು ಎಂದು ಕಂಡುಹಿಡಿದಿದೆ. ಅಂದರೆ, ಅಕಾಲಿಕಾಗಿ ಬಿಳಿಕೂದಲು ಕಾಣಿಸಿಕೊಳ್ಳುವವರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಂದರ್ಭ ಹೆಚ್ಚಾಗಿರುತ್ತದೆ.

ಏನಿದು ಸಂಶೋಧನೆ?:

ಏನಿದು ಸಂಶೋಧನೆ?:

ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಹೃದ್ರೋಗ ಹಾಗೂ ಬಿಳಿ ಕೂದಲಿಗೆ ಸಂಬಂಧಿಸಿದಂತೆ ಸಂಶೋಧನೆಯೊಂದು ನಡೆಸಿತ್ತು. ಈ ಸಂಶೋಧನೆಗೆ, 42 ರಿಂದ 64 ವರ್ಷ ವಯಸ್ಸಿನ 545 ವಯಸ್ಕ ಪುರುಷರನ್ನು ಒಳಪಡಿಸಿದ್ದಾರೆ. ಇದರ ಫಲಿತಾಂಶದ ಪ್ರಕಾರ, ಹೃದಯ ಸಮಸ್ಯೆಯ ಲಕ್ಷಣಗಳನ್ನ ಹೊಂದಿರುವ ಸುಮಾರು 80 ಪ್ರತಿಶತದಷ್ಟು ವಯಸ್ಕ ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಬೂದು ಅಥವಾ ಬಿಳಿ ಕೂದಲನ್ನು ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಹಾಗಂತ, ಬಿಳಿ ಕೂದಲು ಹೊಂದಿದ್ದರೆ, ಆತನಿಗೆ ಹೃದಯ ಸಮಸ್ಯೆ ಇದೆ ಎಂದರ್ಥವಲ್ಲ. ಇದು ನಿಮ್ಮ ಆರೋಗ್ಯದಲ್ಲಿ ಏನೋ ಏರುಪೇರಾಗಿದೆ ಎಂಬುದನ್ನು ಸೂಚಿಸುತ್ತದೆ. ಹಾಗಾಗಿ ಈ ಕೂದಲು ಬೆಳ್ಳಗಾಗಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಹೃದ್ರೋಗ ಅಥವಾ ಹೃದಯ ಸಮಸ್ಯೆಯ ಸಂಭವನೀಯ ಲಕ್ಷಣಗಳು:

ಹೃದ್ರೋಗ ಅಥವಾ ಹೃದಯ ಸಮಸ್ಯೆಯ ಸಂಭವನೀಯ ಲಕ್ಷಣಗಳು:

ಎದೆನೋವು

ಉಸಿರಾಟದಲ್ಲಿ ತೊಂದರೆ

ಅನಿಯಮಿತ ಹೃದಯ ಬಡಿತ

ವಾಕರಿಕೆ, ಅಜೀರ್ಣ, ಎದೆಯುರಿ, ಅಥವಾ ಹೊಟ್ಟೆ ನೋವು

ತಲೆತಿರುಗುವಿಕೆ ಅಥವಾ ತಲೆತಿರುಗುವಿಕೆಯ ಭಾವನೆ

ಆಯಾಸ

ವಿಪರೀತ ಬೆವರುವುದು

ಗೊರಕೆ ಹೊಡೆಯುವುದು

ಗಂಟಲು ಅಥವಾ ದವಡೆಯ ನೋವು

ಕೆಮ್ಮು

ದೇಹದ ಎಡಭಾಗದಲ್ಲಿ ನೋವು

ಊದಿಕೊಂಡ ಕಾಲುಗಳು, ಪಾದಗಳು ಮತ್ತು ಮೊಣಕಾಲುಗಳು

ಕೂದಲು ಉದುರುವಿಕೆ

ಕೆಲವೊಮ್ಮೆ, ಹೃದ್ರೋಗವು ಯಾವುದೇ ಲಕ್ಷಣಗಳನ್ನು ತೋರುವುದಿಲ್ಲ. ಅಂತಹ ವ್ಯಕ್ತಿಗೆ ಹೃದಯಾಘಾತವಾಗುವವರೆಗೆ ರೋಗನಿರ್ಣಯ ಮಾಡಲಾಗುವುದಿಲ್ಲ. ಆದ್ದರಿಂದ, ಲಕ್ಷಣಗಳನ್ನು ಹೊಂದಿದ್ದರೆ, ಆದಷ್ಟು ಬೇಗ ವೈದ್ಯರನ್ನ ಭೇಟಿಯಾಗುವುದು ಉತ್ತಮವಾಗಿದೆ. ಇದರಿಂದ ಮುಂದಾಗುವ ಅನಾಹುತಗಳನ್ನು ತಡೆಯಬಹುದಾಗಿದೆ.

ಅಕಾಲಿಕ ಬಿಳಿಕೂದಲಿಗೆ ಕಾರಣಗಳು:

ಅಕಾಲಿಕ ಬಿಳಿಕೂದಲಿಗೆ ಕಾರಣಗಳು:

ಅಕಾಲಿಕ ಬಿಳಿಕೂದಲಿಗೆ ಸಾಮಾನ್ಯ ಕಾರಣಗಳೆಂದರೆ ಒತ್ತಡ, ಅಣುವಂಶೀಯತೆ, ಥೈರಾಯ್ಡ್ ಅಸ್ವಸ್ಥತೆ, ವಿಟಮಿನ್ ಬಿ 12 ಕೊರತೆ, ಧೂಮಪಾನ, ಇತ್ಯಾದಿ. ಆದ್ದರಿಂದ ಉತ್ತಮ ಆರೋಗ್ಯಕರ ಜೀವನಶೈಲಿ ರೂಢಿಸಿಕೊಂಡರೆ ಇಂತಹ ಸಮಸ್ಯೆಗಳಿಂದ ಆದಷ್ಟು ದೂರವಿರಬಹುದು.

ಇದಕ್ಕೇನು ಪರಿಹಾರ?:

1.ಆರೋಗ್ಯಕರ ಜೀವನಶೈಲಿ ಅನುಸರಿಸುವುದು

2.ವ್ಯಾಯಾಮ ಮಾಡುವುದು

3.ಸರಿಯಾದ ಆಹಾರ ಸೇವಿಸುವುದು

4.ದೇಹದ ತೂಕವನ್ನು ಸರಿಯಾಗಿ ಕಾಪಾಡಿಕೊಳ್ಳುವುದು

5.ಮಧ್ಯಪಾನ, ಧೂಮಪಾನದಿಂದ ದೂರವಿರುವುದು

English summary

Is premature greying normal? Study says it could hint deadly disease

Here we talking about Is premature greying normal? Study says it could hint deadly disease, read on
X
Desktop Bottom Promotion