Latest Updates
-
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ!
ಈ ಟಿಪ್ಸ್ ಅನುಸರಿಸಿದರೆ ಕಂಕುಳಿನ ದುರ್ವಾಸನೆಗೆ ಗುಡ್ ಬೈ ಹೇಳಬಹುದು
ಕಂಕುಳ ದುರ್ವಾಸನೆ ಎಂಥವರಿಗೂ ಮುಜುಗರ ಉಂಟುಮಾಡುತ್ತದೆ. ತಮ್ಮನ್ನು ಇತರರ ಮುಂದೆ ಆತ್ಮವಿಸ್ವಾಸದಿಂದ ಪ್ರಸ್ತುತಪಡಿಸಿಕೊಳ್ಳಲು ಕೆಟ್ಟದಾದ ಬೆವರಿನ ವಾಸನೆ ನಮ್ಮನ್ನು ಹಿಂಜರಿಯುವಂತೆ ಮಾಡಬಹುದು. ಈ ಬೆವರಿನ ಸಮಸ್ಯೆ ಎಲ್ಲರಿಗೂ ಇಲ್ಲದೆ ಇದ್ದರೂ, ಕೆಲವರಿಗೆ ಅತಿಯಾಗಿ ಕಾಡುವುದು ಸಹ ಇದೆ. ಬೆವರಿನ ದುರ್ಗಂದಕ್ಕೆ ನಮ್ಮ ಜೀವನಶೈಲಿಯೇ ಕಾರಣ ಎನ್ನುತ್ತಾರೆ ತಜ್ಞರು.

ಹೌದು ನಮ್ಮ ಆಹಾರ ಶೈಲಿ, ನಾವು ಧರಿಸುವ ಬಟ್ಟೆ, ಅನಗತ್ಯವಾಗಿ ಬಳಸುವ ಸುಗಂಧ ದ್ರವ್ಯಗಳು, ರಾಸಾನಿಕಯುಕ್ತ ಸೋಪುಗಳು, ನಿತ್ಯ ನೈರ್ಮಲ್ಯ ಕಾಪಾಡದೇ ಇರುವುದು ಇದಕ್ಕೆ ಕಾರಣ. ನೈಸರ್ಗಿಕವಾಗಿಯೇ ನಮ್ಮ ಜೀವನಶೈಲಿಯ ಬದಲಾವಣೆಯಿಂದ ಕಂಕುಳ ದುರ್ವಾಸನೆ ತಡೆಗಟ್ಟುವುದು ಹೇಗೆ ಇಲ್ಲಿದೆ ಟಿಪ್ಸ್:

1. ಆರಾಮದಾಯಕ ಬಟ್ಟೆಗಳನ್ನು ಧರಿಸಿ
ಕಂಕುಳಿನ ವಾಸನೆಯನ್ನು ನಿವಾರಿಸಲು ಅಥವಾ ನಿಯಂತ್ರಿಸಲು ಸಿಂಥೆಟಿಕ್ ಬಟ್ಟೆ ಅಥವಾ ಬಿಗಿಯಾದ ಬಟ್ಟೆ ಧರಿಸುವುದನ್ನು ತಪ್ಪಿಸಬೇಕು. ಆರಾಮದಾಯಕವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು, ಹತ್ತಿ ಬಟ್ಟೆಗಳು ನಿಮ್ಮ ಚರ್ಮಕ್ಕೆ ಉಸಿರಾಡಲು ಅನುವು ಮಾಡಿಕೊಡುತ್ತದೆ ಮತ್ತು ಬೆವರನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಈ ಕಾರಣಗಳಿಂದ ಹತ್ತಿ ಬಟ್ಟೆಯನ್ನು ಧರಿಸುವುದರಿಂದ ಅಂತಿಮವಾಗಿ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಜನರು ಬೇಸಿಗೆಯಲ್ಲಿ ತೋಳಿಲ್ಲದ ಉಡುಪುಗಳನ್ನು ಧರಿಸಲು ಇಷ್ಟಪಡುತ್ತಾರೆ, ಆದರೆ ಇದು ಚರ್ಮದ ಘರ್ಷಣೆಯನ್ನು ಹೆಚ್ಚಿಸುತ್ತದೆ, ಇದರಿಂದ ಹೆಚ್ಚು ಬೆವರು ಮತ್ತು ವಾಸನೆಗೆ ಕಾರಣವಾಗುತ್ತದೆ.

2. ಅನಗತ್ಯ ಕೂದಲನ್ನು ನಿವಾರಿಸಿ
ಕಂಕುಳಿನ ಕೂದಲು ಸಹ ನೈರ್ಮಲ್ಯಕ್ಕೆ ಅಡ್ಡಿಯಾಗಬಹುದು, ಆದ್ದರಿಂದ ಅವುಗಳನ್ನು ನಿಯಮಿತವಾಗಿ ವ್ಯಾಕ್ಸ್ ಮಾಡುವುದು ಉತ್ತಮ. ಕಂಕುಳಿನ ಕೂದಲು ಬೆವರು ಅಂಟಿಕೊಳ್ಳಲು ಹೆಚ್ಚು ಪೂರಕವಾಗಿದೆ ಮತ್ತು ಬ್ಯಾಕ್ಟೀರಿಯಾಕ್ಕೆ ಫಲವತ್ತಾದ ಸಂತಾನೋತ್ಪತ್ತಿಯ ಉತ್ತಮ ಸ್ಥಳವಾಗಿದೆ. ಆದ್ದರಿಂದ, ನಿಮ್ಮ ಕಂಕುಳನ್ನು ಸ್ವಚ್ಛವಾಗಿಟ್ಟುಕೊಳ್ಳಿ.

3. ಶುಭ್ರವಾದ ಬಟ್ಟೆ ಧರಿಸಿ
ನಿತ್ಯ ಶುದ್ಧವಾಗಿ ಸ್ನಾನ ಮಾಡದೇ ಇರುವುದು ಸಹ ಬೆವರಿನ ದುರ್ಗಂಧಕ್ಕೆ ಕಾರಣ. ಇನ್ನೂ ಮುಖ್ಯವಾಗಿ ನಿಯಮಿತವಾಗಿ ಬಟ್ಟೆಗಳನ್ನು ತೊಳೆಯುವುದು ಅತ್ಯಗತ್ಯ, ವಿಶೇಷವಾಗಿ ನಿಮ್ಮ ದೇಹದ ಬೆವರುವ ಪ್ರದೇಶಗಳೊಂದಿಗೆ ಸಂಪರ್ಕಕ್ಕೆ ಬರುವ ಬಟ್ಟೆಗಳನ್ನು ನಿತ್ಯ ಬದಲಿಸಲೇಬೇಕು. ಅತಿಯಾದ ಸುಗಂಧವಿರುವ ಮಾರ್ಜಕಗಳನ್ನು ಬಳಸುವುದನ್ನು ತಪ್ಪಿಸಿ ಮತ್ತು ಬಟ್ಟೆಗಳನ್ನು ಸರಳವಾದ, ಕಠಿಣವಲ್ಲದ ಸೋಪಿನಿಂದ ತೊಳೆಯಿರಿ. ನೀವು ಕಂಕುಳಿನ ವಾಸನೆಯನ್ನು ತಡೆಗಟ್ಟಲು ಮರುದಿನ ನಿಮ್ಮ ಬಟ್ಟೆಗಳನ್ನು ತೊಳೆಯದೆ ಅವುಗಳನ್ನು ಪುನರಾವರ್ತಿಸಬೇಡಿ.

4. ಕಟುವಾದ ಆಹಾರವನ್ನು ತಪ್ಪಿಸಿ
ನಮ್ಮ ದೇಹದ ದುರ್ಗಂದಕ್ಕೆ ಆಹಾರ ಸಹ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಏನು ತಿನ್ನುತ್ತೇವೋ ಅದು ನಮ್ಮ ಕಂಕುಳಿನ ಮತ್ತು ಒಟ್ಟಾರೆ ದೇಹದ ವಾಸನೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಕೆಲವು ಕಟುವಾದ ಆಹಾರಗಳಾದ ಮೆಣಸು, ಬೆಳ್ಳುಳ್ಳಿ, ಈರುಳ್ಳಿ ಮತ್ತು ಕೆಲವು ಮಸಾಲೆಗಳು ದೇಹದಿಂದ ವಾಸನೆಯನ್ನು ಹೊರಸೂಸಬಹುದು ಮತ್ತು ಕಂಕುಳಲ್ಲಿ ವಾಸನೆಯನ್ನು ಉಂಟುಮಾಡಬಹುದು. ಈ ಆಹಾರಗಳು ಹೆಚ್ಚಿನ ಸಲ್ಫರ್ ಅಂಶವನ್ನು ಹೊಂದಿರುವುದರಿಂದ ಅದು ನಮ್ಮ ರಕ್ತಕ್ಕೆ ಹೋಗಿ, ಉಸಿರಾಟವನ್ನು ಮಾಡುವ ಮೂಲಕ ಬೆವರು ಕೆಟ್ಟ ವಾಸನೆಯನ್ನು ನೀಡುತ್ತದೆ.

5. ಬ್ಯಾಕ್ಟೀರಿಯಾ ವಿರೋಧಿ ಸೋಪುಗಳನ್ನು ಪ್ರಯತ್ನಿಸಿ
ಹೆಚ್ಚಿನ ಜನರು ದೇಹದ ಬೆವರು/ದುರ್ಗಂಧವನ್ನು ಮರೆಮಾಡಲು ಸಾಕಷ್ಟು ಡಿಯೋಡ್ರೆಂಟ್ ಮತ್ತು ಸುಗಂಧ ದ್ರವ್ಯಗಳನ್ನು ಬಳಸುತ್ತಾರೆ. ಇನ್ನು ತುಂಬಾ ಸೂಕ್ಷ್ಮ ಚರ್ಮವನ್ನು ಹೊಂದಿರುವವರಿಗೆ ಈ ಡಿಯೋಡರೆಂಟ್‌ಗಳು ಕಿರಿಕಿರಿ ಅಥವಾ ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ.
ಅದಕ್ಕಾಗಿ ಡರ್ಮಟಾಲಜಿಸ್ಟ್ ಪ್ರಕಾರ, ಬ್ಯಾಕ್ಟೀರಿಯಾ ವಿರೋಧಿ ಸೋಪ್‌ಗಳನ್ನು ಬಳಸುವುದು ಅತ್ಯಂತ ಪ್ರಯೋಜನಕಾರಿ ಎನ್ನುತ್ತಾರೆ. ಕ್ಲೋಟ್ರಿಮಜೋಲ್ ಪೌಡರ್ ಅಥವಾ ಯಾವುದೇ ಸೌಮ್ಯವಾದ ಟಾಲ್ಕ್ನಂತಹ ಶಿಲೀಂಧ್ರ ವಿರೋಧಿ ಪುಡಿ ಕೂಡ ಬೆವರು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ತಾಜಾತನದ ಭಾವನೆಯನ್ನು ನೀಡುತ್ತದೆ.



Click it and Unblock the Notifications