Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವ್ಯಾಕ್ಸ್ ಹಚ್ಚಿದ ಹಣ್ಣುಗಳಿಂದ ಆರೋಗ್ಯದ ಮೇಲಾಗುವ ದುಷ್ಟರಿಣಾಮ
ನಾವು ತಿನ್ನುವಂತಹ ಪ್ರತಿಯೊಂದು ಆಹಾರವು ಇಂದು ಕಲುಷಿತವಾಗಿದೆ. ಮನೆಯಲ್ಲೇ ತಯಾರಿಸಿಕೊಂಡು ತಿಂದರೂ ಮಾರುಕಟ್ಟೆಯಿಂದ ತಂದಿರುವಂತಹ ತರಕಾರಿ, ಹಣ್ಣುಗಳು ಹಾಗೂ ಇತರ ಸಾಮಾಗ್ರಿಗಳು ಕಲುಷಿತವಾಗಿರುವುದು. ಇದರಲ್ಲಿ ಕಲಬೆರಕೆ, ಹಣ್ಣು ಹಾಗೂ ತರಕಾರಿಗಳು ದೀರ್ಘಕಾಲ ಬಾಳಿಕೆ ಬರಲು ಬಳಸುವಂತಹ ರಾಸಾಯನಿಕ, ಮೇಣ ಇತ್ಯಾದಿಗಳು ಸೇರಿಕೊಂಡಿವೆ.

ಹೀಗಾಗಿ ನಾವು ಏನೇ ತಿಂದರೂ ಸ್ವಲ್ಪ ಮಟ್ಟಿನ ರಾಸಾಯನಿಕವು ನಮ್ಮ ದೇಹ ಸೇರಿಕೊಳ್ಳುವುದು ಖಚಿತ. ಆದರೆ ಇಂದಿನ ದಿನಗಳಲ್ಲಿ ಹಣ್ಣುಗಳಿಗೆ ಮೇಣ (ವ್ಯಾಕ್ಸ್) ಹಚ್ಚಿಡುವುದು ಸಾಮಾನ್ಯವೆನ್ನುವಂತಾಗಿದೆ. ಇದರ ಬಗ್ಗೆ ನಾವು ತಿಳಿಯುವ.

ಹಣ್ಣಿಗೆ ಮೇಣ ಹಚ್ಚಿಡುವುದು ಎಂದರೇನು?
ಹಣ್ಣುಗಳು ತಾಜಾತನ ಕಾಪಾಡಲು ಮತ್ತು ಕೆಡದಂತೆ ಇಡಲು ಹಣ್ಣುಗಳ ಮೇಲ್ಮಭಾಗಕ್ಕೆ ಮೇಣ ಹಚ್ಚಿಡುವುದು ಇಂದಿನ ದಿನಗಳಲ್ಲಿ ವ್ಯಾಪಾರಿಗಳು ಅನುಸರಿಸಿಕೊಂಡು ಬರುತ್ತಿರುವಂತಹ ತಂತ್ರವಾಗಿದೆ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ಹಲವಾರು ಜನರು ವಾದ ಮಂಡಿಸುತ್ತಿದ್ದಾರೆ. ಮೇಣದ ಪದರರಿಂದಾಗಿ ಹಣ್ಣು ಕೆಡುವುದಿಲ್ಲ ಮತ್ತು ಕೀಟಗಳು ಇದಕ್ಕೆ ಭಾದಿಸದು. ಆದರೆ ಇಂತಹ ಹಣ್ಣುಗಳು ತುಂಬಾ ವಿವಾದವನ್ನು ಉಂಟು ಮಾಡಿದೆ. ಹಣ್ಣುಗಳು ತಾಜಾವಾಗಿ ಕಂಡುಬಂದರೂ ಇದು ಮನುಷ್ಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ.
ಹಣ್ಣಿಗೆ ನೈಸರ್ಗಿಕವ ತಿನ್ನುವಂತಹ ಮೇಣ ಅಥವಾ ಕೃತಕ ಮೇಣವನ್ನು ಹಚ್ಚಿ ಪದರ ನಿರ್ಮಿಸಿ ಅದನ್ನು ರಕ್ಷಿಸಲಾಗುತ್ತದೆ. ಮೇಣವು ಹಣ್ಣಿನ ಮೇಲೆ ಒಂದು ತೆಳು ಪದರವನ್ನು ನಿರ್ಮಾಣ ಮಾಡುತ್ತದೆ. ಇದು ಹಣ್ಣುಗಳು ಸ್ವತಃ ಬಿಡುಗಡೆ ಮಾಡುವಂತಹ ನೈಸರ್ಗಿಕ ಮೇಣಕ್ಕೆ ಪರ್ಯಾಯವಾಗಿರುವುದು. ಮೇಣ ಹಚ್ಚಿಡುವ ಪ್ರಮುಖ ಕಾರಣವೆಂದರೆ ಅದು ತೇವಾಂಶ ಕಳಕೊಳ್ಳದಂತೆ, ತರುಚಿದ ಗಾಯವಾಗದಂತೆ, ದೈಹಿಕ ಹಾನಿ ಮತ್ತು ಹಣ್ಣು ಕೆಡದಂತೆ ಹಚ್ಚಲಾಗುತ್ತದೆ.
ಸೇಬಿಗೆ ಹೆಚ್ಚಾಗಿ ಕೃತಕ ಮೇಣವನ್ನು ಹಚ್ಚಲಾಗುತ್ತದೆ. ಇದರಿಂದ ಸೇಬು ಯಾವಾಗಲೂ ತಾಜಾವಾಗಿ ಕಂಡು ಜನರನ್ನು ಸೆಳೆಯುವುದು. ಮೇಣ ಹಚ್ಚದೆ ಇರುವಂತಹ ಹಣ್ಣುಗಳು ಬೇಗನೆ ಕೆಡುವುದು ಮತ್ತು ಅದು ತಮ್ಮ ಬಿಗಿತ್ವ ಕಳಕೊಳ್ಳುವುದು. ಮೇಣವು ಹಣ್ಣಿನಲ್ಲಿ ಇರುವಂತಹ ನೀರಿನಾಂಶವು ಕಳೆದುಕೊಳ್ಳದಂತೆ ತಡೆಯುತ್ತದೆ ಮತ್ತು ರುಚಿಯನ್ನು ಕಾಪಾಡುವುದು. ಮೇಣ ಹಚ್ಚಿಟ್ಟ ಹಣ್ಣುಗಳು ವಾತಾವರಣದ ಗಾಳಿ ಮತ್ತು ನೀರಿಗೆ ಪ್ರತಿರೋಧಕವಾಗಿರುವುದು.

ಹಣ್ಣುಗಳಿಗೆ ಕೃತಕ ಮೇಣ ಯಾಕೆ ಹಚ್ಚಿಡುವರು?
ಸಾಮಾನ್ಯವಾಗಿ ಹೆಚ್ಚಿನ ಹಣ್ಣುಗಳು ನೈಸರ್ಗಿಕವಾದ ಮೇಣವನ್ನು ತಾವಾಗಿಯೇ ಉತ್ಪಾದಿಸುತ್ತದೆ. ಕೊಬ್ಬು, ಮೇಣದಿಂದ ಕೂಡಿರುವಂತಹ ಹೊರಪೊರೆಯು ನಿರ್ಮಾಣವಾಗುವುದು. ಈ ನೈಸರ್ಗಿಕ ಮೇಣವು ಹಣ್ಣುಗಳಲ್ಲಿ ಮೊಶ್ಚಿರೈಸರ್ ಕಡಿಮೆ ಆಗದಂತೆ ನೋಡಿಕೊಂಡು ತಾಜಾವಾಗಿ ಇರುವಂತೆ ಕಾಪಾಡುವುದು. ಅದ್ಯಾಗೂ, ಮರದಿಂದ ಹಣ್ಣುಗಳನ್ನು ಕಿತ್ತ ಬಳಿಕ ಹಾಗೂ ಇದನ್ನು ಸಂಸ್ಕರಣೆ, ಪ್ಯಾಕ್ ಮತ್ತು ಸಾಗಾಟದ ವೇಳೆ ನೈಸರ್ಗಿಕ ಮೇಣವು ಕಿತ್ತುಹೋಗುವುದು.
ಹೀಗಾಗಿ ಹಣ್ಣಿನಲ್ಲಿ ತೇವಾಂಶ ಉಳಿಸಿಕೊಳ್ಳಲು ಕೃತಕ ಮೇಣವನ್ನು ಬಳಸಿಕೊಳ್ಳಲಾಗುತ್ತದೆ. ಇದರಿಂದ ಹಣ್ಣು ತುಂಬಾ ತಾಜಾ ಹಾಗೂ ಅದಾಗಲೇ ಕಿತ್ತು ತಂದಂತೆ ಕಂಡುಬರುವುದು. ಹಣ್ಣಿಗೆ ಹಚ್ಚುವಂತಹ ಮೇಣದಲ್ಲಿ ಪಾಲಿಸ್ಯಾಕರೈಡ್ ಗಳು, ಪ್ರೋಟೀನ್, ಕೊಬ್ಬು ಮತ್ತು ಸಂಯೋಜನೆಗಳೂ ಇವೆ. ಕೇವಲ ಹಣ್ಣಿಗೆ ಮೇಣ ಹಚ್ಚುವುದರಿಂದ ಇದು ಹಣ್ಣು ಕೊಳೆಯದಂತೆ ತಡೆಯುವುದಿಲ್ಲ, ಹೀಗಾಗಿ ಇದಕ್ಕೆ ಕೆಲವು ರಾಸಾಯನಿಕ ಕೂಡ ಬಳಕೆ ಮಾಡಲಾಗುತ್ತದೆ.

ಹಣ್ಣುಗಳಿಗೆ ಮೇಣ ಹಚ್ಚುವ ವಿಧಾನಗಳು ಯಾವುದು?
ಹಣ್ಣುಗಳಿಗೆ ಮೇಣ ಹಚ್ಚುವ ಪ್ರಕ್ರಿಯೆಯು ಯಂತ್ರ ಅಥವಾ ಹಾಗೆ ಕೈಗಳಿಂದ ಮಾಡಬಹುದು. ಈ ವೇಳೆ ಮೇಣದ ಪದರವನ್ನು ಹಚ್ಚುವ ಸಂದರ್ಭದಲ್ಲಿ ಹಣ್ಣನ್ನು ನೀರು, ಆಲ್ಕೋಹಾಲ್. ಆಲ್ಕೋಹಾಲ್ ಮತ್ತು ನೀರಿನ ಮಿಶ್ರಣದಲ್ಲಿ ಅದ್ದಿಡಲಾಗುತ್ತದೆ.
ಪ್ಲಾಸ್ಟಿಸೈಜರ್‌ಗಳು, ಸೂಕ್ಷ್ಮಾಣು ವಿರೋಧಿ, ಖನಿಜಾಂಶಗಳು, ವಿಟಮಿನ್ ಗಳು, ಬಣ್ಣ ಅಥವಾ ರುಚಿಯನ್ನು ಈ ಪ್ರಕ್ರಿಯೆ ವೇಳೆ ಸೇರಿಸಲಾಗುತ್ತದೆ. ಸೊಲ್ಯೂಷನ್ ನಲ್ಲಿ ಹಣ್ಣುಗಳನ್ನು ಅದ್ದಿಟ್ಟು, ಸ್ಪ್ರೇ ಮಾಡಿ, ಬ್ರಷ್ ನಿಂದ ಹಚ್ಚಲಾಗುತ್ತದೆ ಮತ್ತು ಇದರ ಬಳಿಕ ಅವುಗಳನ್ನು ಒಣಗಿಸಲಾಗುತ್ತದೆ.

1. ಕೈಗಳಿಂದ ಉಜ್ಜುವಿಕೆ
ತುಂಬಾ ನಯವಾದ ಬ್ರಷ್ ಅಥವಾ ಬಟ್ಟೆ ಬಳಸಿಕೊಂಡು ಹಣ್ಣುಗಳಿಗೆ ಕೈಗಳಿಂದ ಮೇಣವನ್ನು ಹಚ್ಚಲಾಗುತ್ತದೆ. ತಿನ್ನಬಹುದಾದ ಮೇಣ ಹಚ್ಚಿದ ಬಳಿಕ ಹಣ್ಣುಗಳನ್ನು 15 ನಿಮಿಷ ಕಾಲ ಗಾಳಿಯಲ್ಲಿ ಒಣಗಿಸಲಾಗುತ್ತದೆ. ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ ಮತ್ತು ಕಾರ್ಮಿಕರು ಕೂಡ.

2. ಅದ್ದಿಡುವುದು
ಪ್ಯಾರಾಫಿನ್ ಮೇಣದಲ್ಲಿ ಹಣ್ಣುಗಳನ್ನು ಅದ್ದಿಟ್ಟು ಈ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಹಣ್ಣುಗಳನ್ನು ಪ್ಯಾರಾಫಿನ್ ನಲ್ಲಿ ಅದ್ದಿಟ್ಟ ವೇಳೆ ಅದು ಮೇಣದ ಪದರವನ್ನು ನಿರ್ಮಿಸುವುದು. ಹಣ್ಣುಗಳನ್ನು ಪ್ಯಾರಾಫಿನ್ ಮಿಶ್ರಣದಿಂದ ತೆಗೆದ ಕೂಡಲೇ ಅದು ಗಟ್ಟಿಯಾಗುವುದು.

3. ಬ್ರಶ್ ಬಳಸಿ
ಇದು ಒಂದು ಯಾಂತ್ರಿಕೃತ ವಿಧಾನವಾಗಿದೆ ಮತ್ತು ಇದು ಹಣ್ಣುಗಳ ಮೇಲೆ ಮೇಣದ ಪದರವನ್ನು ಹಚ್ಚುತ್ತಲಿರುತ್ತದೆ. ತಿನ್ನುವಂತಹ ಮೇಣವನ್ನು ಬಳಸಿದರೂ ಬ್ರಶ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೇಣವು ಇರಬೇಕು. ಮೇಣವನ್ನು ಸ್ಪ್ರೇ ಮೂಲಕವು ಹಣ್ಣುಗಳಿಗೆ ಹಚ್ಚಬಹುದಾಗಿದೆ.

ಮೇಣ ಹಚ್ಚಿರುವ ಹಣ್ಣುಗಳು ತಿನ್ನಲು ಸುರಕ್ಷಿತವೇ?
ಹಣ್ಣುಗಳಿಗೆ ಹಚ್ಚಿರುವಂತಹ ಮೇಣವು ತಿನ್ನಬಹುದೇ ಅಥವಾ ಬೇಡವೇ ಎನ್ನುವುದು ಅದಕ್ಕೆ ಬಳಸಿರುವಂತಹ ಮೇಣವನ್ನು ಅವಲಂಬಿಸಿರುವುದು. ಆಹಾರ ದರ್ಜೆಯ ಮೇಣವು ತಿನ್ನಲು ಅಡ್ಡಿಯಿಲ್ಲವೆಂದು ವೈಜ್ಞಾನಿಕ ಅಧಿಕಾರಿಗಳು ಹೇಳುತ್ತಾರೆ. ಈ ತಿನ್ನುವಂತಹ ಮೇಣವು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಯಾಕೆಂಧರೆ ಇದನ್ನು ದೇಹವು ಹೀರಿಕೊಳ್ಳಲು ವಿಘಟಿಸುವುದಿಲ್ಲ ಮತ್ತು ಹಾಗೆ ಹೊರಗೆ ಹಾಕುವುದು.
ಆದರೆ ಹೆಚ್ಚಿನ ಹಣ್ಣಿನ ಮೇಣವನ್ನು ಮೊರ್ಫೋಲಿನ್ ಮತ್ತು ಅದರ ಉತ್ಪನ್ನಗಳ ಜತೆಗೆ ಮಿಶ್ರಣ ಮಾಡಲಾಗಿರುತ್ತದೆ. ಇದರಿಂದ ತುಂಬಾ ತೆಳುವಾಗಿ ಮೇಣವನ್ನು ಹಚ್ಚಬಹುದಾಗಿದೆ. ಆಹಾರದಲ್ಲಿ ಇರುವಂತಹ ನೈಟ್ರೇಟ್ ಜತೆಗೆ ಸೇರಿಕೊಂಡು ಮೊರ್ಫೋಲಿನ್ ರಾಸಾಯನಿಕ ನೈಟ್ರೋಸೆಟ್ ನಿಂದ ಎನ್-ನೈಟ್ರೊಸೊಮಾರ್ಫೋಲಿನ್ ಆಗಿ ಪರಿವರ್ತನೆಗೊಳ್ಳುವುದು. ಇದು ಕ್ಯಾನ್ಸರ್ ಕಾರವಾಗಿ ಕೆಲಸ ಮಾಡುವುದು.
ಮೊರ್ಫೋಲಿನ್ ಯಕೃತ್ ಅಥವಾ ಕಿಡ್ನಿ ಕಾರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಮಾರ್ಫೋಲಿನ್ ಮಟ್ಟವು 0.03-0.3ಪಿಪಿಎಂ ಇದ್ದರೆ ಆಗ ಮನುಷ್ಯರ ಆರೋಗ್ಯದ ಮೇಲೆ ಇದು ಹೆಚ್ಚು ಪರಿಣಾಮ ಬೀರದು. ಆದರೆ ಇದಕ್ಕಿಂತ ಹೆಚ್ಚಿನ ಮಟ್ಟದ ಮಾರ್ಫೋಲಿನ್ ವಿಷಕಾರಿ ಮತ್ತು ಅಸುರಕ್ಷಿತವಾಗಿರುವುದು. ನಿರಂತರವಾಗಿ ಮೇಣ ಹಚ್ಚಿಟ್ಟ ಹಣ್ಣುಗಳು ಮತ್ತು ತರಕಾರಿ ಸೇವನೆ ಮಾಡಿದರೆ ಅದರಿಂದ ಕೆಲವು ಜನರಲ್ಲಿ ಕ್ಯಾನ್ಸರ್ ನ ಅಪಾಯವು ಬರುವುದು.

ಮೇಣದಲ್ಲಿ ಅದ್ದಿಟ್ಟ ಹಣ್ಣುಗಳ ಸೇವನೆಯಿಂದ ಆಗುವ ಅಪಾಯಗಳು ಯಾವುದು?
ಹಣ್ಣುಗಳಿಗೆ ಮೇಣದ ಜತೆಗೆ ಕೆಲವೊಮದು ಸಂರಕ್ಷಕವಾಗಿರುವಂತಹ ಗ್ಲಿಸರಾಲ್ಸ್, ಲ್ಯಾಕ್ಟಿಕ್ ಆಮ್ಲ ಅಥವಾ ಅಸಿಟಿಕ್ ಆಮ್ಲವನ್ನು ಬಳಸಲಾಗುತ್ತದೆ. ಇದರ ಹೊರತಾಗಿ ಹಣ್ಣುಗಳ ಮೇಣದಲ್ಲಿ ಸಂರಕ್ಷಕಗಳು, ಸೂಕ್ಷ್ಮಾಣು ವಿರೋಧಿ ಮತ್ತು ವಿನ್ಯಾಸ ಹೆಚ್ಚಿಸುವ ಅಂಶಗಳನ್ನು ಸೇರಿಸಲಾಗುತ್ತದೆ.
ಮೊರ್ಫೊಲಿನ್ ಇರುವಂತಹ ಹಣ್ಣುಗಳ ಮೇಣವು ತುಂಬಾ ತೆಳುವಾದ ಪದರವನ್ನು ನೀಡುವುದು. ಮೊರ್ಫೋಲಿನ್ ಪ್ರಮಾಣವು ಒಂದು ಕೆಜಿಗೆ 4.3ಎನ್ ಜಿ ಸುರಕ್ಷಿತವಾಗಿರುವುದು. ಮೊರ್ಫೋಲಿನ್ ಮತ್ತು ಇತರ ಕೆಲವು ರಾಸಾಯನಿಕಗಳನ್ನು ನಿರಂತರವಾಗಿ ಸೇವನೆ ಮಾಡಿದರೆ ಅದರಿಂದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ.
ಕೃತಕ ಮೇಣವನ್ನು ಬಳಸಿದರೆ ಅದರಿಂದ ಉಂಟಾಗುವ ಕೆಲವೊಂದು ಆರೋಗ್ಯದ ಅಪಾಯಗಳು ಈ ರೀತಿಯಾಗಿದೆ.
1. ಕ್ಯಾನ್ಸರ್ ಅಪಾಯ
ಹಣ್ಣು ಮತ್ತು ತರಕಾರಿಗಳಿಗೆ ಮೊರ್ಫೋಲಿನ್ ನ್ನು ಸಾಮಾನ್ಯವಾಗಿ ದ್ರಾವಕವಾಗಿ ಬಳಸಲಾಗುತ್ತದೆ. ಮೊರ್ಫೋಲಿನ್ ತಾನಾಗಿಯೇ ಆರೋಗ್ಯದ ಮೇಲೆ ಯಾವುದೇ ರೀತಿಯ ಹಾನಿ ಉಂಟು ಮಾಡುವುದಿಲ್ಲ. ಆದರೆ ಇದು ದೇಹದ ಒಳಗೆ ಹೋದ ಬಳಿಕ ಅದು ನೈಟ್ರೇಟ್ ಜತೆಗೆ ಸೇರಿಸಿಕೊಂಡು ನೈಟ್ರೊಸೊಮಾರ್ಫೋಲಿನ್ ಆಗಿ ಪರಿವರ್ತನೆಗೊಳ್ಳುವುದು. ಇದು ಕ್ಯಾನ್ಸರ್ ಕಾರಕವಾಗಿದೆ. ಇದು ಯಕೃತ್ ಮತ್ತು ಕಿಡ್ನಿ ಕ್ಯಾನ್ಸರ್ ಗೆ ಕಾರಣವಾಗಬಹುದು.

2. ಯಕೃತ್ ಮತ್ತು ಕಿಡ್ನಿಗೆ ಹಾನಿ
ಹಣ್ಣು ಮತ್ತು ತರಕಾರಿಗಳಲ್ಲಿ ಮೇಣಕ್ಕೆ ಬಳಕೆ ಮಾಡುವಮತಹ ಮೊರ್ಫೋಲಿನ್ ಅಂಶವು ದೇಹದಲ್ಲಿ ಸರಿಯಾಗಿ ಹೀರಿಕೊಳ್ಳುವುದು ಮತ್ತು ಇದು ದೇಹದ ದ್ರವದೊಂದಿಗೆ ಸೇರುವುದು. ಆದರೆ ನಿತ್ಯವೂ ಹಣ್ಣು ಮತ್ತು ತರಕಾರಿ ರೂಪದಲ್ಲಿ ಇದು ನಮ್ಮ ದೇಹದೊಳಗೆ ಹೋದರೆ ಅದು ಕಿಡ್ನಿ ಮತ್ತು ಯಕೃತ್ ನ ಕಾರ್ಯದ ಮೇಲೆ ಪರಿಣಾಮ ಬೀರುವುದು.

3. ಅಲರ್ಜಿ
ಹಣ್ಣು ಮತ್ತು ತರಕಾರಿಗಳ ಸಂರಕ್ಷಣೆಗೆ ಬಳಕೆ ಮಾಡುವಂತಹ ಹೆಚ್ಚಿನ ಸಾಮಗ್ರಿ ಅಲರ್ಜಿಕಾರಕವಾಗಿರುವುದು. ಈ ಅಲರ್ಜಿಕಾರಕಗಳಲ್ಲಿ ಪ್ರೋಟೀನ್ ಅಂಶಗಳಾಗಿರುವಂತಹ ಸೋಯಾ, ಹಾಲೊಡಲು ಪ್ರೋಟೀನ್, ನೆಲಗಡಲೆ ಪ್ರೋಟೀನ್ ಮತ್ತು ಕ್ಯಾಸೀನ್ ಇದೆ.
ಹಣ್ಣುಗಳಿಗೆ ಹಚ್ಚಿರುವ ಮೇಣದಿಂದ ಬರುವ ಆರೋಗ್ಯದ ಅಪಾಯ ತಪ್ಪಿಸಲು ಕ್ರಮಗಳು
ಮೇಣದ ಪದರ ನಿರ್ಮಾಣದಲ್ಲಿ ಎನ್ ಎಂಒಆರ್ ನ್ನು ತುಂಬಾ ಕಡಿಮೆ ಪ್ರಮಾಣದಲ್ಲ ಬಳಕೆ ಮಾಡಿದರೂ ಅದನ್ನು ನಿತ್ಯವೂ ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ತುಂಬಾ ಅಪಾಯವಿರುವುದು. ಈ ಸಮಸ್ಯೆ ಮತ್ತು ಆರೋಗ್ಯ ಸಮಸ್ಯೆ ತಡೆಯಲು ನೀವು ಕೆಲವೊಂದು ಕ್ರಮಗಳನ್ನು ಪಾಲಿಸಿಕೊಂಡು ಹೋಗಬೇಕಾಗುತ್ತದೆ.

ಮೂರು ಸೂತ್ರ ಅಳವಡಿಸಿ
ಹಣ್ಣು ಮತ್ತು ತರಕಾರಿಗಳನ್ನು ಒರೆಸಿ, ತೊಳೆಯಿರಿ ಮತ್ತು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಅದ್ದಿಟ್ಟುಕೊಳ್ಳಿ. ಹಣ್ಣುಗಳನ ಮೇಲೆ ಹಚ್ಚಿರುವ ಮೇಣವನ್ನು ತೆಗೆಯಲು ಬ್ರಶ್ ನಿಂದ ಸ್ಕ್ರಬ್ ಮಾಡಿ.
ಕೃತಕ ತಾಜಾತನಕ್ಕೆ ಮಾರು ಹೋಗಬೇಡಿ
ತುಂಬಾ ಹೊಳೆಯುವಂತಹ ಹಣ್ಣು ಹಾಗೂ ತರಕಾರಿಗಳತ್ತ ನೀವು ಮಾರು ಹೋಗಬೇಡಿ.

ಸ್ಥಳೀಯ ಮತ್ತು ಋತುವಿಗೆ ಅನುಗುಣ ಖರೀದಿಸಿ
ಸ್ಥಳೀಯ ಮತ್ತು ಋತುಮಾನದಲ್ಲಿ ಸಿಗುವಂತಹ ಹಣ್ಣುಗಳನ್ನು ಮಾತ್ರ ಖರೀದಿ ಮಾಡಿ. ಯಾಕೆಂದರೆ ದೀರ್ಘಕಾಲ ಕೆಡದಂತೆ ಇಡಲು ಮೇಣ ಬಳಸುವರು. ಸ್ಥಳೀಯ ರೈತರು ಅಥವಾ ಮಾರುಕಟ್ಟೆಯಿಂದ ಹಣ್ಣುಗಳನ್ನು ಖರೀದಿ ಮಾಡಿ.
ಲೇಬಲ್ ಅನ್ನು ಗಮನವಿಟ್ಟು ಓದಿ
ಹಣ್ಣುಗಳಿಗೆ ಹಚ್ಚುವಂತಹ ಮೇಣವು ಪ್ರಾಣಿಗಳ ಅಥವಾ ತರಕಾರಿ ಮೇಣವೇ ಎಂದು ಲೇಬಲ್ ನಲ್ಲಿ ಹಾಕುವಂತೆ ಎಫ್ ಡಿಎ ನಿಯಮ ರೂಪಿಸಿದೆ. ಹೀಗಾಗಿ ನೀವು ತುಂಬಾ ಗಮನವಿಟ್ಟು ಲೇಬಲ್ ನಲ್ಲಿ ಓದಿ.

ನೈಸರ್ಗಿಕ ಮೇಣವನ್ನು ಬಳಸಿ
ನೈಸರ್ಗಿಕವಾದ ಮೇಣವಾಗಿರುವ ಅಲೋವೆರಾ ಅಥವಾ ಚಿಟೋಸನ್ ಮೇಣ ಬಳಕೆ ಮಾಡಿದ್ದಾರೆಯಾ ಎಂದು ನೀವು ತಿಳಿಯಿರಿ. ಇದು ತುಂಬಾ ನೈಸರ್ಗಿಕವಾಗಿರುವುದು ಮತ್ತು ಯಾವುದೇ ರಾಸಾಯನಿಕವು ಇರುವುದಿಲ್ಲ.
ಹಣ್ಣುಗಳ ಸಿಪ್ಪೆ ತೆಗೆದು ತಿನ್ನಿ
ಹಣ್ಣುಗಳಿಗೆ ಬಳಸುವಂತಹ ಮೇಣದ ಬಗ್ಗೆ ನಿಮಗೆ ಅಪಾಯವಿದೆ ಎಂದು ಅನಿಸುತ್ತಲಿದ್ದರೆ ಆಗ ನೀವು ಹಣ್ಣುಗಳ ಸಿಪ್ಪೆ ತೆಗೆದು ತಿನ್ನಿ.
--



Click it and Unblock the Notifications