Latest Updates
-
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್!
ಬಿಳುಪು ಹೋಗುತ್ತಿದೆಯೇ? ಈ ಆಯುರ್ವೇದ ಮದ್ದು ಟ್ರೈ ಮಾಡಿ
ಸ್ತ್ರೀಯರಿಗೆ ಬಿಳುಪು ಹೋಗುವುದು ಸಹಜ ಹಾಗೂ ಆರೋಗ್ಯಕರ ಕೂಡ ಹೌದು. ಇದು ಜನನೇಂದ್ರೀಯಗಳನ್ನು ಸೋಂಕಾಣುಗಳಿಂದ ರಕ್ಷಿಸುತ್ತದೆ. ಆದರೆ ಕೆಲವರಿಗೆ ಮಿತಿ ಮೀರಿ ಬಿಳುಪು ಹೋಗಲಾರಂಭಿಸುವುದು, ಈ ರೀತಿ ಕಂಡು ಬಂದರೆ ನಿರ್ಲಕ್ಷ್ಯ ಮಾಡುವಂತಿಲ್ಲ.
ಬಿಳುಪು ಯಾವ ರೀತಿ ಹೋಗುತ್ತಿದ್ದರೆ ನಿರ್ಲಕ್ಷ್ಯ ಮಾಡಬಾರದು?
ಮೊದಲೇ ಹೇಳಿದಂತೆ ಬಿಳುಪು ಹೋಗುವುದು ಸಹಜ. ಆದರೆ ಬಿಳುಪು ಹೋಗುವಾಗ ಅದರ ಬಣ್ಣದಲ್ಲಿ ವ್ಯತ್ಯಾಸ ಅಥವಾ ಕೆಲವೇ ಗಂಟೆಗಳಲ್ಲಿ ನಿಮ್ಮ ಒಳ ಉಡುಪು ಒದ್ದೆಯಾದ ಅನುಭವ, ದುರ್ವಾಸನೆ, ಬಿಳುಪು ಚೀಸ್ ರೀತಿಯಲ್ಲಿ ಗಟ್ಟಿ-ಗಟ್ಟಿಯಾಗಿ ಹೋಗುವುದು ಈ ರೀತಿ ಕಂಡು ಬಂದರೆ ನಿರ್ಲಕ್ಷ್ಯ ಮಾಡಬಾರದು.
ಬಿಳುಪು ಅತಿಯಾಗಿ ಹೋಗಲಾರಂಭಿಸಿದಾಗ ಸುಸ್ತು, ತಲೆನೋವು, ಮಲಬದ್ಧತೆ ಈ ಬಗೆಯ ಸಮಸ್ಯೆಗಳೂ ಕಂಡು ಬರುವುದು, ಬಿಳುಪು ಹೋಗುವುದರಲ್ಲಿ ವ್ಯತ್ಯಾಸ ಹವಾರು ಕಾರಣಗಳಿಂದಾಗಿ ಉಂಟಾಗುತ್ತದೆ.
ಬಿಳುಪು ಗಟ್ಟಿಯಾಗಿ ಹೋಗುತ್ತಿದ್ದು, ತುರಿಕೆ ಇದೆಯೇ?
ಬಿಳುಪು ಗಟ್ಟಿಯಾಗಿ ಹೋಗುತ್ತಿದ್ದು ಅದರ ಜೊತೆ ತುರಿಕೆ ಇದ್ದರೆ ಫಂಗಲ್ ಸೋಂಕಿನಿಂದಾಗಿ ಈ ರೀತಿಯಾಗುವುದು. ಇನ್ನು ಮಧುಮೇಹವಿದ್ದಾಗಲೂ ಈ ರೀತಿಯ ಸಮಸ್ಯೆ ಕಂಡು ಬರುವುದು.
ಬಿಳುಪು ಸ್ವಲ್ಪ ಹಸಿರು-ಹಳಸಿ ಮಿಶ್ರಿತ ಬಣ್ಣದಲ್ಲಿದೆಯೇ? ತುಂಬಾ ದುರ್ವಾಸನೆ ಬೀರುತ್ತಿದೆಯೇ?
ಬ್ಯಾಕ್ಟಿರಿಯಾ ಸೋಂಕು ತಗುಲಿದಾಗ ಈ ರೀತಿಯಾಗುವುದು. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಲೂ ಈ ರೀತಿ ಉಂಟಾಗುವುದು.ಇನ್ನು ಈ ಸೋಂಕು ಟಾಯ್ಲೆಟ್ ಮುಖಾಂತರ ಕೂಡ ಹರಡುವುದು.
ಬಿಳುಪು ಕಂದು ಬಣ್ಣದಲ್ಲಿದ್ದರೆ?
ಗರ್ಭಕಂಠಕ್ಕೆ ತೊಂದರೆಯಾದಾಗ ಈ ರೀತಿ ಕಂಡು ಬರುವುದು. ಸಿಸ್ಟ್, ಸರ್ವಿಕಲ್ ಪಾಲಿಪ್, ಕ್ಯಾನ್ಸರ್ ಈ ಬಗೆಯ ಸಮಸ್ಯೆ ಇದ್ದಾಗ ಈ ರೀತಿ ಕಂಡು ಬರುವುದು.
ಇನ್ನು ಹದಿಹರೆಯದ ಪ್ರಾಯದಲ್ಲಿ ಹಾಗೂ ಗರ್ಭಿಣಿಯರಲ್ಲಿ ಅಧಿಕ ಬಿಳುಪು ಹೋಗುವುದು ಕಂಡು ಬರುವುದು. ಇದು ಹಾರ್ಮೋನ್‌ಗಳ ವ್ಯತ್ಯಾಸದಿಂದಾಗಿ ಕಂಡು ಬರುವುದು. ಇದು ಸಹಜವಾಗಿದ್ದು ಯಾವುದೇ ಆತಂಕ ಪಡಬೇಕಾಗಿಲ್ಲ.

ಬಿಳುಪು ಹೋಗುವುದು ತಡೆಗಟ್ಟಲು ಆಯುರ್ವೇದ ಮನೆಮದ್ದು
1. ಬೆಂಡೆಕಾಯಿ
100 ಗ್ರಾಂ ಬೆಂಡೆಕಾಯಿ ತೆಗೆದು ಅದನ್ನು ಒಂದು ಲೀಟರ್ ನೀರಿಗೆ ಹಾಕಿ 15-20 ನಿಮಿಷ ಕುದಿಸಿ. ನಂತರ ತಣ್ಣಗಾದ ಮೇಲೆ ಆ ನೀರನ್ನು ಆಗಾಗ ಕುಡಿಯಿರಿ. ನೀವು ಬೇಕಾದರೆ ಈ ನೀರಿನ ಜೊತೆ ಆಯುರ್ವೇದ ಚೂರ್ಣ ಮಿಕ್ಸ್ ಮಾಡಬಹುದು.

2. ನೆಲ್ಲಿಕಾಯಿ
ನೆಲ್ಲಿಕಾಯಿ ಹೇಗೆ ಬಳಸಿದರೂ ಆರೋಗ್ಯಕರ. ನೆಲ್ಲಿಕಾಯಿಯನ್ನು ಹಾಗೆ ಬೇಕಾದರೆ ತಿನ್ನಬಹುದು ಅಥವಾ ಪುಡಿ ಮಾಡಿ ತಿನ್ನಬಹುದು. ನೆಲ್ಲಿಕಾಯಿ ದಿನಾ ತಿನ್ನಿ, ಬಿಳುಪು ಹೋಗುವ ಸಮಸ್ಯೆ ಕಡಿಮೆಯಾಗುವುದು. ನೆಲ್ಲಿಕಾಯಿ ಜ್ಯೂಸ್ ತೆಗೆದುಕೊಳ್ಳಬಹುದು ಅಥವಾ ನೆಲ್ಲಿಕಾಯಿ ಪುಡಿಯನ್ನು ನೀರಿನಲ್ಲಿ ಮಿಕ್ಸ್ ಮಾಡಿ ಸೇವಿಸಬಹುದು.

3. ದಾಳಿಂಬೆ
ಬಿಳುಪು ಹೆಚ್ಚಾಗಿ ಸುಸ್ತು, ತಲೆಸುತ್ತು ಈ ಬಗೆಯ ಸಮಸ್ಯೆ ಕಂಡು ಬರುತ್ತಿದ್ದರೆ ದಾಳಿಂಬೆ ಸೇವಿಸಿ. ಪ್ರತಿದಿನ ದಾಳಿಂಬೆ ಜ್ಯೂಸ್ ಕುಡಿಯಿರಿ. ಪ್ರತಿದಿನ ಬೆಳಗ್ಗೆ ಒಂದು ಲೋಟ ದಾಳಿಂಬೆ ಜ್ಯೂಸ್ ಕುಡಿಯಿರಿ.

4.ಸೀಬೆಕಾಯಿ ಎಲೆ
ಸೀಬೆಕಾಯಿ ಎಲೆಯನ್ನು ಅನೇಕ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಲಾಗುವುದು. ಸೀಬೆಕಾಯಿ ಎಲೆ ಬಳಸಿ ಬಿಳುಪು ಹೋಗುವುದು ಕೂಡ ತಡೆಯಬಹುದು. ಸ್ವಲ್ಪ ಸೀಬೆಕಾಯಿ ಎಲೆ ತಂದು ಅದನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಬೆಳಗ್ಗೆ ಕುಡಿಯಿರಿ. ಬಿಳುಪು ಹೋಗುವುದು ಬೇಗನೆ ನಿಲ್ಲಲು ದಿನದಲ್ಲಿ ಎರಡು ಬಾರಿ ಕುಡಿಯಿರಿ.

5. ಶುಂಠಿ
ಶುಂಠಿಯನ್ನು ಬಿಳುಪು ಹೋಗುವುದು ತಡೆಗಟ್ಟಲು ಮನೆಮದ್ದಾಗಿ ಕೂಡ ಬಳಸಬಹುದು. ಒಂದು ಲೀಟರ್ ನೀರಿಗೆ 2 ಚಮಚ ಶುಂಠಿ ಪುಡಿ ಹಾಕಿ ಮಿಕ್ಸ್ ಕುಡಿಯಿರಿ, ಅಥವಾ ಸ್ವಲ್ಪ ಶುಂಠಿ ತೆಗೆದು ಜಗಿದು ಕೂಡ ತಿನ್ನಬಹುದು. ಈ ರೀತಿ ಮೂರು ವಾರಗಳ ಮಾಡಿದರೆ ಫಲಿತಾಂಶ ತಿಳಿಯುವುದು.

6 ಅರಿಶಿಣ
ಅರಿಶಿಣ ಕೂಡ ಅದಿಕ ಬಿಳುಪು ಹೋಗುವುದು ತಡೆಗಟ್ಟಲು ಪರಿಣಾಮಕಾರಿ. ಒಂದು ಚಮಚ ಅರಿಶಿಣ ಪುಡಿ ಅಥವಾ ಒಂದು ತುಂಡು ಅರಿಶಿಣವನ್ನು ಎರಡು ಎಸಳು ಬೆಳ್ಳುಳ್ಳಿ ಜೊತೆ ದಿನಾ ತಿನ್ನಿ. ಈ ರೀತಿ ಪ್ರತಿದಿನ ಮಾಡಿದರೆ ಕೆಲವೇ ವಾರಗಳಲ್ಲಿ ಒಳ್ಳೆಯ ಫಲಿತಾಂಶ ಕಾಣುವಿರಿ.
7. ಬಾಳೆಹಣ್ಣು
ಅಧಿಕ ಬಿಳುಪು ಹೋಗುತ್ತಿದ್ದರೆ ಪ್ರತಿದಿನ ಒಂದು ಬಾಳೆಹಣ್ಣು ತಿನ್ನಿ. ಇದರಲ್ಲಿರುವ ಪೋಷಕಾಂಶಗಳು ಸುಸ್ತು ಕೂಡ ಕಡಿಮೆ ಮಾಡುತ್ತದೆ.
ಇತರ ಟಿಪ್ಸ್
* ಕರಿದ ಪದಾರ್ಥಗಳು, ಖಾರ ಅಧಿಕವಿರುವ ಪದಾರ್ಥಗಳು, ಹುಳಿ ಪದಾರ್ಥಗಳು, ಮೈದಾ, ಉಪ್ಪಿನಕಾಯಿ , ಹುದುಗು ಬರಿಸಿದ ಆಹಾರ, ಚೀಸ್, ಮದ್ಯ ಈ ಬಗೆಯ ಆಹಾರ ಸೇವಿಸಬೇಡಿ.
* ಮೊಸರು ಸೇವಿಸಿ, ಆದರೆ ರಾತ್ರಿ ಹೊತ್ತಿನಲ್ಲಿ ಸೇವಿಸಬೇಡಿ.
* ಜನನೇಂದ್ರೀಯವನ್ನು ಸ್ವಚ್ಛವಾಗಿಡಿ
* ನೈಲಾನ್ ಪ್ಯಾಂಟೀಸ್ ಬಳಸಬೇಡಿ, ಕಾಟನ್ ಪ್ಯಾಂಟೀಸ್ ಬಳಸಿ.
* ಲೈಂಗಿಕಕ್ರಿಯೆಗೆ ಮುಂಚೆ ನಿಮ್ಮ ಸಂಗಾತಿ ಬಳಿ ಅವರ ಖಾಸಗಿ ಭಾಗ ತೊಳೆಯಲು ಹೇಳಿ
* ಅಸುರಕ್ಷಿತ ಲೈಂಗಿಕ್ರಿಯೆ ನಡೆಸಬೇಡಿ
* ಸ್ವಂತ ಚಿಕಿತ್ಸೆ ಮಾಡಬೇಡಿ
* ತುಂಬಾ ಸುವಾಸನೆ ಸೋಪು ಬಳಸಬೇಡಿ, ಸುಗಂಧದ್ರವ್ಯ ಬಳಸಬೇಡಿ
* ಸಾಕಷ್ಟು ನೀರು ಕುಡಿಯಿರಿ.



Click it and Unblock the Notifications
