Latest Updates
-
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ
ಈ ಲಕ್ಷಣ ಗೋಚರವಾದ್ರೆ ಖಂಡಿತ ನಿಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗಿದೆ ಎಂದರ್ಥ..!
ನಮ್ಮ ದೇಹಕ್ಕೆ ಬೊಜ್ಜಿನ ಅವಶ್ಯತೆ ಇದೆ. ಹಾಗಂತ ಆ ಬೊಜ್ಜು ಅವಶ್ಯಕತೆಗಿಂತ ಹೆಚ್ಚಾದರೆ ಸಮಸ್ಯೆ ಎದುರಾಗಲಿದೆ. ಅನೇಕರಲ್ಲಿ ನಾವು ಬೊಜ್ಜು ಅಂದ್ರೆ ಕೊರೆಸ್ಟ್ರಾಲ್ ಸಮಸ್ಯೆಯನ್ನು ಕಾಣ್ತಿವಿ. ಒಂದು ಸಾರಿ ನಮ್ಮ ದೇಹದಲ್ಲಿ ಬೊಜ್ಜಿನ ಸಮಸ್ಯೆ ಉಲ್ಬಣವಾದ್ರೆ ಅದನ್ನು ನಿವಾರಿಸೋದು ತುಂಬಾನೇ ಕಷ್ಟ.

ಕೆಲವೊಂದು ಬಾರಿ ನಮ್ಮ ದೇಹದಲ್ಲಿ ಬೊಜ್ಜಿನ ಅಂಶ ಹೆಚ್ಚಾಗಿರೋದು ನಮಗೆ ಗೊತ್ತಾಗುತ್ತದೆ. ಆದರೆ ಮತ್ತೂ ಕೆಲವು ಬಾರಿ ನಮ್ಮ ಅರಿವಿಗೆ ಬಾರದ ರೀತಿಯಲ್ಲಿ ನಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ನಮ್ಮ ದೇಹದಲ್ಲೇ ಆಗೋ ಕೆಲವೊಂದು ಬದಲಾವಣೆಗಳು ನಮ್ಮಲ್ಲಿ ಬೊಜ್ಜಿನ ಅಂಶ ಹೆಚ್ಚಾಗಿದೆ ಅನ್ನೋದನ್ನ ಸೂಚಿಸುತ್ತದೆ. ಅಷ್ಟಕ್ಕು ಯಾವುದು ಆ ಬದಲಾವಣೆಗಳು ಅನ್ನೋದನ್ನ ನೋಡೋಣ.
ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣವೇನು?
ನಮ್ಮ ದೇಹದಲ್ಲಿ ಬೊಜ್ಜಿನ ಅಂಶ ಹೆಚ್ಚಾಗಲು ಅನೇಕ ಕಾರಣಗಳಿದೆ. ಅವುಗಳಲ್ಲಿ ಮುಖ್ಯವಾಗಿ ಕೊಬ್ಬಿನಂಶ ಹೊಂದಿರುವ ಆಹಾರದ ಅತಿಯಾದ ಸೇವನೆ, ವ್ಯಾಯಾಮ ಮಾಡದಿರುವುದು, ಕುಡಿತ, ಸಿಗರೇಟ್ ಸೇವನೆ, ಅತಿಯಾದ ತೂಕ ಏರಿಕೆ ಇತ್ಯಾದಿ ಕಾರಣಗಳು. ಬೊಜ್ಜಿನ ಸಮಸ್ಯೆ ಒಂದು ರೀತಿ ಸೈಲೆಂಟ್ ಕಿಲ್ಲರ್ ಇದ್ದ ಹಾಗೆ ಈ ಸಮಸ್ಯೆ ನಿಧಾನವಾಗಿ ಹೆಚ್ಚಾಗಿ ನಮ್ಮನ್ನು ದೀರ್ಘಕಾಲದವರೆಗೂ ಕಾಡುತ್ತದೆ. ಕೆಲವೊಂದು ಬಾರಿ ನಿಮ್ಮ ಬೆರಳುಗಳು ಮತ್ತು ಕಲ್ಬೆರಳುಗಳು ಈ ರೋಗ ಲಕ್ಷಣಗಳನ್ನು ತೋರಿಸುತ್ತದೆ.
ಕೊಲೆಸ್ಟ್ರಾಲ್ ರೋಗ ಲಕ್ಷಣಗಳನ್ನು ಪತ್ತೆ ಹಚ್ಚೋದ್ಹೇಗೆ?
ಕೊಲೆಸ್ಟ್ರಾಲ್ ರೋಗಲಕ್ಷಣಗಳನ್ನು ಅನೇಕ ರೀತಿಯಲ್ಲಿ ನಾವು ಪತ್ತೆ ಹಚ್ಚಬಹುದು. ನಮ್ಮ ಅಂಗೈ, ಪಾದ, ಕೈ ಹಾಗೂ ಕಾಲಿನ ಬೆರಳುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮೊದಲನೇಯದಾಗಿ ದೇಹದಲ್ಲಿ ಬೊಜ್ಜಿನ ಅಂಶ ಹೆಚ್ಚಾಗಿದೆ ಎಂದು ಇದು ನಮಗೆ ಎಚ್ಚರಿಸುತ್ತದೆ. ಈ ಚಿಹ್ನೆಗಳು ಕೊಲೆಸ್ಟ್ರಾಲ್‌ನ ಶೇಖರಣೆಯ ಪರಿಣಾಮವಾಗಿರಬಹುದು, ಅದು ಕಾಲುಗಳು ಮತ್ತು ಕೈಗಳಲ್ಲಿನ ರಕ್ತನಾಳಗಳನ್ನು ಮುಚ್ಚುತ್ತದೆ. ಹೀಗಾಗಿ ನಮಗೆ ನೋವಿನ ಅನುಭವವಾಗುತ್ತದೆ.
ತುರಿಕೆ, ಬಿಳಿ, ಹಳದಿ ಚರ್ಮ ಇದರ ಲಕ್ಷಣ
* ಅತಿಯಾದ ಕೊಲೆಸ್ಟ್ರಾಲ್ ಚರ್ಮದ ಅಡಿಯಲ್ಲಿ ಕೊಬ್ಬಿನ ಬೆಳವಣಿಗೆಗೆ ಕಾರಣವಾಗುತ್ತದೆ. ಇದನ್ನು ಕ್ಸಾಂಥೋಮಾ (Xanthoma) ಎಂದು ಕರೆಯಲಾಗುತ್ತದೆ. ಇವುಗಳು ಪಾದಗಳು ಮತ್ತು ಕೈಗಳ ಮೇಲೆ ಕಂಡುಬರುವ ಬೆಳವಣಿಗೆಯಾಗಿದೆ. ಕ್ಸಾಂಥೋಮಸ್(Xanthomas) ನೋವು ರಹಿತವಾಗಿರುತ್ತದೆ. ಆದರೆ ಸ್ಪರ್ಶಿಸಿದಾಗ ಮೃದು ಅನುಭವವಾಗುತ್ತದೆ. ಕೆಲವೊಂದು ಸಾರಿ ತುರಿಸಿದ ಅನುಭವವಾಗುತ್ತದೆ.
* ಇತರ ರೋಗ ಲಕ್ಷಣಗಳು ಕಾಲುಗಳು ಮತ್ತು ಪಾದಗಳಲ್ಲಿನ ದೈಹಿಕ ಬದಲಾವಣೆಗಳನ್ನು ಕಾಣಬಹುದು. ಇದರ ಪರಿಣಾಮವಾಗಿ ಉಗುರುಗಳು ಮತ್ತು ಚರ್ಮದ ಬಿಳಿ ಅಥವಾ ಹಳದಿ ಬಣ್ಣವು ಕಂಡುಬರುತ್ತದೆ. ವೈದ್ಯರ ಪ್ರಕಾರ, ನಿಮ್ಮ ಕಾಲ್ಬೆರಳ ಉಗುರುಗಳು ಹೆಚ್ಚು ನಿಧಾನವಾಗಿ ಬೆಳೆಯಬಹುದು ಅಥವಾ ದಪ್ಪವಾಗಬಹುದು ಅಥವಾ ಹೆಚ್ಚಿನ ಕೊಲೆಸ್ಟ್ರಾಲ್ ಇರುವಾಗ ನಿಮ್ಮ ಉಗುರುಗಳು ವಿರೂಪಗೊಳ್ಳಬಹುದು.
ಬೊಜ್ಜಿನ ಸಮಸ್ಯೆ ಬಾರದ ಹಾಗೆ ತಡೆಗಟ್ಟೋದ್ಹೇಗೆ?
ಬೊಜ್ಜಿನ ಸಮಸ್ಯೆ ಎದುರಾದ್ರೆ ಅದಕ್ಕೆ ಏಕಾಏಕಿ ಪರಿಹಾರ ಸಿಗೋದಿಲ್ಲ. ದೀರ್ಘಕಾಲದ ಚಿಕಿತ್ಸೆಯಿಂದ ಪರಿಹಾರ ಕಂಡುಕೊಳ್ಳಬಹುದು. ರಕ್ತನಾಳಗಳು ಮತ್ತು ಅಪಧಮನಿಗಳಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಗಟ್ಟಲು ಕೆಲವೊಂದು ಪರಿಹಾರೋಪಾಯಗಳು ಇಲ್ಲಿದೆ.
* ಸರಿಯಾದ ತೂಕ ಕಾಪಾಡಿಕೊಳ್ಳಿ
* ನಿತ್ಯ ವ್ಯಾಯಾಮ ಮಾಡಿ
* ಮಧ್ಯಪಾನ ನಿಯಂತ್ರಣದಲ್ಲಿರಲಿ
* ಧೂಮಪಾನ ಬಿಟ್ಟುಬಿಡಿ
* ಫೈಬರ್ ಅಧಿಕವಾಗಿರುವ ಅಥವಾ ಕಡಿಮೆ ಕೊಬ್ಬು, ಉಪ್ಪು ಮತ್ತು ಸಕ್ಕರೆ ಸೇರಿಸಿದ ಆಹಾರವನ್ನು ಅಭ್ಯಾಸ ಮಾಡಿಕೊಳ್ಳಿ.
ಈ ರೀತಿಯ ಅನುಭವ ನಿಮಗೂ ಆಗಿದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ನಿಮ್ಮ ಆರೋಗ್ಯದ ಬಗ್ಗೆ ವಿಚಾರಿಸಿ. ಇಲ್ಲವಾದಲ್ಲಿ ಇದರಿಂದಾಗಿ ಮುಂದೊಂದು ದಿನ ನೀವು ಮಹಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














