Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಜಾಯಿಕಾಯಿಯಲ್ಲಿರುವ ಈ ಆರೋಗ್ಯ ಗುಣಗಳು ನಿಮಗೆ ಗೊತ್ತೇ?
ಭಾರತ ಸಾಂಬಾರ ಪದಾರ್ಥಗಳ ತವರು. ಸಾಂಬಾರ ಪದಾರ್ಥಗಳ ವ್ಯಾಪಾರಕ್ಕಾಗಿ ಬಂದಂತಹ ವಿದೇಶಿಗರು ನಮ್ಮ ಮೇಲೆ ದಬ್ಬಾಳಿಕೆ ಮಾಡಿದರು ಎನ್ನುವುದು ಈಗ ಇತಿಹಾಸ. ಸಾಂಬಾರ ಪದಾರ್ಥಗಳಲ್ಲಿ ಇರುವಂತಹ ಆರೋಗ್ಯ ಅಂಶಗಳು ಭಾರತೀಯರಿಗೆ ಮೊದಲಿನಿಂದಲೂ ತಿಳಿದಿತ್ತು ಎನ್ನುವುದಕ್ಕೆ ಇದೇ ಸಾಕ್ಷಿ.

ವಿದೇಶದಲ್ಲಿ ಹೆಚ್ಚು ಸಾಂಬಾರ ಪದಾರ್ಥಗಳನ್ನು ಬಳಸದೆ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಆದರೆ ಭಾರತದಲ್ಲಿ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ ತನಕ ಪ್ರತಿಯೊಂದು ಕಡೆಯೂ ಯಾವುದಾದರೂ ಒಂದು ಸಾಂಬಾರ ಪದಾರ್ಥವನ್ನು ಬಳಸಲಾಗುತ್ತದೆ. ಸಾಂಬಾರ ಪದಾರ್ಥಗಳು ಹವಾಮಾನಕ್ಕೆ ಅನುಗುಣವಾಗಿ ದೇಹವನ್ನು ಕಾಪಾಡುವುದು. ಯಾವುದೇ ಖಾದ್ಯವಾದರೂ ವಿಶೇಷ ರುಚಿ ನೀಡುವಂತಹ ಸಾಂಬಾರ ಪದಾರ್ಥಗಳಲ್ಲಿ ಜಾಯಿಕಾಯಿ ಕೂಡ ಒಂದು.
ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯವಾಗಿರುವಂತಹ ಜಾಯಿಕಾಯಿಯು ಹಲವಾರು ಆರೋಗ್ಯ ಲಾಭಗಳನ್ನು ನೀಡುವುದು. ಇದರಲ್ಲಿ ವಿವಿಧ ರೀತಿಯ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ, ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ರಕ್ತದಲ್ಲಿನ ಸಕ್ಕರೆ, ಅಧಿಕರ ರಕ್ತದೊತ್ತಡ, ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿ ಜಾಯಿಕಾಯಿಯು ತುಂಬಾ ಪರಿಣಾಮಕಾರಿ ಆಗಿರುವುದು. ಇದರಲ್ಲಿ ಒತ್ತಡ ಹಾಗೂ ಆತಂಕ ಕಡಿಮೆ ಮಾಡುವ ಗುಣಗಳು ಇವೆ.
ಜಾಯಿಕಾಯಿಯಿಂದ ಸಿಗುವ ಲಾಭಗಳ ಬಗ್ಗೆ ತಿಳಿಯೋಣ…

ಜಾಯಿಕಾಯಿ ಎಂದರೇನು?
ಇಂಡೋನೇಶಿಯಾ ತವರಾಗಿರುವಂತಹ ಜಾಯಿಕಾಯಿಯು ತುಂಬಾ ಸುವಾಸನೆ ನೀಡುವ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಉಷ್ಣ ಹಾಗೂ ಖಾರ ರುಚಿ ಹೊಂದಿದೆ. ಹೀಗಾಗಿ ಇದನ್ನು ಕೆಲವೊಂದು ಪಾನೀಯ, ಕಾಫಿ ಪಾನೀಯಗಳ ಅಲಂಕಾರಗಳಿಗೆ ಬಳಕೆ ಮಾಡಲಾಗುತ್ತದೆ. ಚೀಸ್ ಹಾಗೂ ಕ್ರೀಮ್ ಹೊಂದಿರುವ ಖಾದ್ಯಗಳಿಗೆ ಇದು ಒಳ್ಳೆಯ ರೀತಿ ಹೊಂದಾಣಿಕೆ ಆಗುವುದು.

1. ಕ್ಯಾನ್ಸರ್ ಅಪಾಯವನ್ನು ತಗ್ಗಿಸಲು ನೆರವಾಗುವುದು
ಹಾಗೆ ಸುಮ್ಮನೆ ನಮ್ಮ ಹಿರಿಯರು ಈ ಮಸಾಲೆಗಳನ್ನು ಅಡುಗೆಗೆ ಬಳಸುತ್ತಿರಲಿಲ್ಲ. ಈಗ ನೋಡಿ ಸಂಶೋಧನೆಗಳು ಕೂಡ ಇದರಲ್ಲಿ ಇರುವಂತಹ ಆರೋಗ್ಯ ಗುಣಗಳನ್ನು ಪತ್ತೆ ಮಾಡಿದೆ. ಜಾಯಿಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಇದ್ದು, ಇದು ಕ್ಯಾನ್ಸರ್ ನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಜಾಯಿಕಾಯಿ ಎಣ್ಣೆಯಲ್ಲಿ ಫ್ರೀ ರ್ಯಾಡಿಕಲ್ ಶೇಖರಿಸುವ ಚಟುವಟಿಕೆ ಇದೆ ಮತ್ತು ಇದನ್ನು ಕ್ಯಾನ್ಸರ್ ವಿರೋಧಿ ಔಷಧಿಯಲ್ಲಿ ಬಳಸಬಹುದಾಗಿದೆ. ಜಾಯಿಕಾಯಿಯು ಕರುಳಿನಲ್ಲಿ ಗಡ್ಡೆ ಬೆಳೆಯುವುದನ್ನು ತಗ್ಗಿಸಿ ಕರುಳಿನ ಕ್ಯಾನ್ಸರ್ ತಡೆಯುವುದು.

2. ಮಧುಮೇಹ ಚಿಕಿತ್ಸೆಗೆ ಸಹಕಾರಿ
ಜಾಯಿಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ ಮತ್ತು ಇದು ಬೇರೆ ಮಸಾಲೆಗಳ ಜತೆಗೆ ಸೇರಿಸಿದರೆ ಅದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದು. ಜಾಯಿಕಾಯಿ ಸಾರವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುವಲ್ಲಿ ಪರಿಣಾಮ ಬೀರುವುದು. ಮಧುಮೇಹ ಚಿಕಿತ್ಸೆಗೆ ಜಾಯಿಕಾಯಿ ಸಮರ್ಥವೇ ಎನ್ನುವ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಲಿದೆ. ಮಧುಮೇಹಿಗಳಲ್ಲಿ ಕಂಡುಬರುವ ದೀರ್ಘಕಾಲಿಕ ಉರಿಯೂತದ ನೋವು ಸಮಸ್ಯೆಗೆ ಇದು ಪರಿಹಾರ ನೀಡುವುದು.

3. ಅಧಿಕ ರಕ್ತದೊತ್ತಡ ನಿಯಂತ್ರಿಸುವುದು
ಜಾಯಿಕಾಯಿಯಲ್ಲಿ ಕೆಲವೊಂದು ಪ್ರಮುಖ ಸಾರಭೂತ ತೈಲವಾಗಿರುವಂತಹ ಲಿನಲೂಲ್ ಇದೆ. ಲಿನಲೂಲ್ ಸ್ನಾಯುಗಳನ್ನು ಹಾಗೂ ರಕ್ತನಾಗಳಿಗೆ ಶಮನಕಾರಿ ಆಗಿರುವುದು ಮತ್ತು ಇದರಿಂದ ರಕ್ತದೊತ್ತಡ ಕಡಿಮೆ ಮಾಡಬಹುದು. ಪ್ರಾಣಿಗಳ ಮೇಲೆ ನಡೆಸಿರುವಂತಹ ಸಂಶೋಧನೆಯಲ್ಲಿ ಲಿನಲೂಲ್ ರಕ್ತದೊತ್ತಡ ಕಡಿಮೆ ಮಾಡುವ ಗುಣ ಹೊಂದಿದೆ ಎಂದು ಸಾಬೀತಾಗಿದೆ. ಮನುಷ್ಯರ ಮೇಲೆ ಈ ಅಧ್ಯಯನವು ನಡೆಯಬೇಕಾಗಿದೆ.

4. ಸಂಧಿವಾತ ನೋವು-ಉರಿಯೂತ ತಗ್ಗಿಸುವುದು
ಸಂಧಿವಾತದಲ್ಲಿ ಮುಖ್ಯವಾಗಿ ಕಂಡುಬರುವಂತಹ ಉರಿಯೂತದ ಸಮಸ್ಯೆಯನ್ನು ಜಾಯಿಕಾಯಿಯು ನಿವಾರಣೆ ಮಾಡುವುದು. ಜಾಯಿಕಾಯಿಯಲ್ಲಿ ಇರುವ ಉರಿಯೂತ ಶಮನಕಾರಿ ಗುಣವು ಗಂಟು ನೋವು ಮತ್ತು ಸಂಧಿವಾತದಿಂದ ಕಾಣಿಸಿಕೊಳ್ಳುವ ಉರಿಯೂತ ಕಡಿಮೆ ಮಾಡುವುದು. ಜಾಯಿಕಾಯಿಯಲ್ಲಿ ಉನ್ನತ ಮಟ್ಟದ ಮೈರಿಸ್ಟಿಸಿನ್, ಎಲಿಮಿಸಿನ್ ಮತ್ತು ಯುಜೆನಾಲ್ ಎನ್ನುವ ಅಂಶವಿದೆ. ಹೀಗಾಗಿ ಉರಿಯೂತ ಕಡಿಮೆ ಮಾಡಲು ಇದು ಸಹಕಾರಿ ಆಗಿದೆ.

5. ನಿದ್ರಾಹೀನತೆ ತಡೆಯುವುದು
ಒತ್ತಡದ ಬದುಕಿನಲ್ಲಿ ನಿದ್ರೆ ಎನ್ನುವುದು ಕೂಡ ಕೈಗೆಟುಕದಂತಾಗಿದೆ. ಕೆಲವರಿಗೆ ನಿದ್ರಿಸಲು ಕೂಡ ಸಮಯವಿಲ್ಲ. ಇನ್ನು ಕೆಲವರಿಗೆ ಅತಿಯಾದ ಒತ್ತಡದಿಂದ ನಿದ್ರೆ ಬರಲ್ಲ. ಹೀಗಾಗಿ ಜಾಯಿಕಾಯಿಯು ಒತ್ತಡ ಕಡಿಮೆ ಮಾಡಿ ನಿದ್ರಾಹೀನತೆ ಸಮಸ್ಯೆ ನಿವಾರಣೆ ಮಾಡುವುದು. ಮೈರಿಸ್ಟಿಸಿನ್, ಎಲಿಮಿಸಿನ್ ಎನ್ನುವ ಅಂಶವು ಮನುಷ್ಯನ ಮೆದುಳಿಗೆ ಆರಾಮ ನೀಡುವ ಗುಣ ಹೊಂದಿದೆ. ಇದು ನಿದ್ರೆ ಭರಿಸುವ ಕೆಲಸ ಮಾಡುವ ಗುಣ ಹೊಂದಿದೆ. ಇದು ಮನಸ್ಥಿತಿ ಸುಧಾರಿಸುವುದು ಮತ್ತು ನಿದ್ರಾಹೀನತೆ ದೂರ ಮಾಡುವುದು. ಹಿಂದಿನ ಕಾಲದಲ್ಲಿ ಇದನ್ನು ಒತ್ತಡ ಕಡಿಮೆ ಮಾಡಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಜಾಯಿಕಾಯಿಯನ್ನು ಔಷಧಿಯಾಗಿ ಬಳಸಲಾಗುತ್ತಿತ್ತು.

6. ಜೀರ್ಣಕ್ರಿಯೆ ಸುಧಾರಿಸುವುದು
ಜಾಯಿಕಾಯಿಯಲ್ಲಿ ಇರುವ ಕಾರ್ಮಿನೇಟಿವ್ ಗುಣವು ವಾಯು ತುಂಬುವುದನ್ನು ತಡೆಯುವುದು. ಜಾಯಿಕಾಯಿಯು ಅತಿಸಾರ ಕಡಿಮೆ ಮಾಡುವ ಗುಣ ಹೊಂದಿದೆ. ಇದರಲ್ಲಿ ಇರುವಂತಹ ನಾರಿನಾಂಶವು ಕರುಳಿನ ಚಲನೆಗೆ ತುಂಬಾ ನೆರವಾಗುವುದು.

7. ನೋವು ಕಡಿಮೆ ಮಾಡುವುದು
ಜಾಯಿಕಾಯಿ ಎಣ್ಣೆಯು ಮುಖ್ಯವಾಗಿ ನೋವು ಹಾಗೂ ಸೆಳೆತ ಕಡಿಮೆ ಮಾಡುವುದು. ಇದನ್ನು ಗಂಟು ಹಾಗೂ ಸ್ನಾಯುಗಳ ನೋವಿಗೆ ಹಚ್ಚಿಕೊಂಡ ವೇಳೆ ಪರಿಣಾಮಕಾರಿ ಆಗಿರುವುದು. ಇದರಲ್ಲಿ ಇರುವ ಯುಜೆನಾಲ್ ಎನ್ನುವ ಅಂಶವು ಉರಿಯೂತ ಶಮನಕಾರಿ ಗುಣ ಹೊಂದಿದೆ ಮತ್ತು ಉರಿಯೂತದಿಂದ ಕಾಡುವ ನೋವು ಕಡಿಮೆ ಮಾಡುವುದು.

8. ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವುದು
ಜಾಯಿಕಾಯಿಯು ಕೊಲೆಸ್ಟ್ರಾಲ್ ತಗ್ಗಿಸುವ ಗುಣ ಹೊಂದಿದೆ ಎನ್ನುವುದು ಇಲಿಗಳ ಮೇಲೆ ನಡೆಸಿರುವಂತಹ ಅಧ್ಯಯನದಿಂದ ಸಾಬೀತಾಗಿದೆ. ಅಧಿಕ ಕೊಲೆಸ್ಟ್ರಾಲ್ ನಿಂದಾಗಿ ಯಕೃತ್ ನಲ್ಲಿ ಕಂಡುಬರುವ ವಿಷಕಾರಿ ಅಂಶವನ್ನು ಹೊರಹಾಕಲು ಜಾಯಿಕಾಯಿ ಸಾರವು ಪ್ರಮುಖ ಪಾತ್ರ ವಹಿಸುತ್ತದೆ.

9. ದಂತ ಆರೋಗ್ಯ ಸುಧಾರಿಸುವುದು
ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವ ಜಾಯಿಕಾಯಿ ಹಲ್ಲಿನ ಆರೋಗ್ಯಕ್ಕೆ ತುಂಬಾ ನೆರವಾಗುವುದು. ಇದು ಹಲ್ಲಿನ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುವುದು. ದಂತದ ಸೋಂಕಿಗೆ ಕಾರಣವಾಗುವಂತಹ ಕೆಲವು ರೋಗಕಾರಕಗಳ ವಿರುದ್ಧ ಇದು ಹೋರಾಡುವುದು.

10. ಒತ್ತಡ ಹಾಗೂ ಆತಂಕ ನಿವಾರಣೆ ಮಾಡುವುದು
ಜಾಯಿಕಾಯಿಯಲ್ಲಿ ಖಿನ್ನತೆ ವಿರೋಧಿ ಗುಣಗಳು ಇವೆ. ಸಿರೊಟೊನಿನ್ ಅಂಶವನ್ನು ಹೆಚ್ಚಿಸುವ ಮೂಲಕ ಇದು ಖಿನ್ನತೆ ಕಡಿಮೆ ಮಾಡುವುದು. ಆದರೆ ಖಿನ್ನತೆಗೆ ಬಳಸುವ ಔಷಧಿ, ಥೆರಪಿಗೆ ಇದು ಪರ್ಯಾಯವಾಗದು ಎಂದು ಗಮನದಲ್ಲಿಟ್ಟುಕೊಳ್ಳಬೇಕಾದ ವಿಚಾರವಾಗಿದೆ. ಇದರಲ್ಲಿ ಮೆದುಳನ್ನು ಉತ್ತೇಜಿಸುವ ಕೆಲವೊಂದು ಅಂಶವಿದೆ. ಇದರಿಂದಾಗಿ ಮಾನಸಿಕ ಬಳಲಿಕೆ, ಒತ್ತಡ ಕಡಿಮೆ ಮಾಡಿ, ಮಾನಸಿಕ ಚಟುವಟಿಕೆಗೆ ವೃದ್ಧಿಸುವುದು. ಜಾಯಿಕಾಯಿಯು ಮೆದುಳಿನಲ್ಲಿ ಸಿರೊಟೊನಿನ್ ಮತ್ತು ಡೊಪಮೈನ್ ಎನ್ನುವ ಹಾರ್ಮೋನ್ ಗಳ ಉತ್ಪತ್ತಿಯನ್ನು ಉತ್ತೇಜಿಸುವ ಗುಣ ಹೊಂದಿದೆ. ಇದರಿಂದಾಗಿ ಮೆದುಳು ಖಿನ್ನತ ಮತ್ತು ಆತಂಕದ ವಿರುದ್ಧ ಹೋರಾಡುವುದು.

11. ಮೊಡವೆ ವಿರುದ್ಧ ಹೋರಾಡುವುದು
ಜಾಯಿಕಾಯಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ. ಇದು ಮೊಡವೆ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಚರ್ಮದಲ್ಲಿನ ಸೋಂಕು, ಸಂಧಿವಾತ ಮತ್ತು ಪಾರ್ಶ್ವವಾಯು ಚಿಕಿತ್ಸೆಗೆ ಇದನ್ನು ಬಾಹ್ಯವಾಗಿ ದೇಹಕ್ಕೆ ಬಳಸಬಹುದು. ಇದರಲ್ಲಿ ಚರ್ಮವನ್ನು ಬಿಳಿಯಾಗಿಸುವಂತಹ ಗುಣಗಳು ಕೂಡ ಇವೆ. ಜಾಯಿಕಾಯಿಯಲ್ಲಿರುವಂತಹ ಲಿಗ್ನಾನ್, ಮೆಲನಿನ್ ಉತ್ಪತ್ತಿಯನ್ನು ಹೆಚ್ಚಿಸಿ ವರ್ಣದ್ರವ್ಯವನ್ನು ಸರಿಪಡಿಸುವುದು.

ಜಾಯಿಕಾಯಿಯಲ್ಲಿ ಇರುವ ಪೋಷಕಾಂಶ ಮೌಲ್ಯಗಳು
ಜಾಯಿಕಾಯಿಯಲ್ಲಿ ಕೆಲವೊಂದು ಪ್ರಬಲ ಪೋಷಕಾಂಶಗಳು ಇವೆ. ಆದರೆ ನೀವು ಇದನ್ನು ಅತಿಯಾಗಿ ಸೇವನೆ ಮಾಡಬಾರದು.
ದಿನಕ್ಕೆ ಎಷ್ಟು ಜಾಯಿಕಾಯಿ ಒಳ್ಳೆಯದು?
ದಿನಕ್ಕೆ 15 ಗ್ರಾಂಗಿಂತ ಹೆಚ್ಚಿನ ಜಾಯಿಕಾಯಿ ಬಳಕೆ ಮಾಡಿದರೆ ಅದರಿಂದ ತಲೆತಿರುಗುವಿಕೆ, ಭ್ರಮೆ, ತೀವ್ರ ವಾಕರಿಕೆ, ಬಾಯಿ ಒಣಗುವ ಸಮಸ್ಯೆ ಕಾಡಬಹುದು. ಮಿತಿ ಮೀರಿದ ಪ್ರಮಾಣದ ಬಳಕೆಯಿಂದಾಗಿ ಈ ಸಮಸ್ಯೆಯು ಕಾಡುವುದು ಎಂದು ಕೆಲವು ಅಧ್ಯಯನಗಳು ಹೇಳೀವೆ.

ಜಾಯಿಕಾಯಿ ಅಡ್ಡಪರಿಣಾಮಗಳು
ಭ್ರಮೆ ಮತ್ತು ಇತರ ಕೆಲವು ಮಾನಸಿಕ ಅಡ್ಡಪರಿಣಾಮಗಳು
ನಿರಂತರವಾಗಿ ಜಾಯಿಕಾಯಿ ತಿಂದರೆ ಅದರಿಂದ ವಾಕರಿಕೆ, ವಾಂತಿ, ಭ್ರಮೆ, ಹೃದಯವು ಅತಿಯಾಗಿ ಸ್ಪಂದಿಸುವಂತಹ ಸಮಸ್ಯೆಯು ಕಾಡಬಹುದು. ಜಾಯಿಕಾಯಿಯಲ್ಲಿ ಇರುವಂತಹ ಮೈರಿಸ್ಟಿಸಿನ್ ಎಣ್ಣೆಯಿಂದಾಗಿ ಇದೆಲ್ಲ ಸಮಸ್ಯೆ ಬರುವುದು. ಜಾಯಿಕಾಯಿಯನ್ನು ಮಕ್ಕಳಿಂದ ದೂರವಿಡಬೇಕು ಎಂದು ಅಧ್ಯಯನಗಳು ಹೇಳಿವೆ.

ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸಮಸ್ಯೆ
ಜಾಯಿಕಾಯಿ ಅತಿಯಾಗಿ ಸೇವಿಸಿದರೆ ಅದರಿಂದ ಗರ್ಭಪಾತ ಮತ್ತು ಜನ್ಮಸಂಬಂಧಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬಾಣಂತಿಯರಿಗೆ ಇದರಿಂದ ಯಾವ ರೀತಿಯ ಪರಿಣಾಮ ಬೀರುವುದು ಎಂದು ಯಾವುದೇ ಅಧ್ಯಯನಗಳು ಇದುವರೆಗೆ ಹೇಳಿಲ್ಲವಾದರೂ ಇದನ್ನು ದೂರವಿಡುವುದು ಒಳ್ಳೆಯದು. ಜಾಯಿಕಾಯಿಯು ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಸಾವು ಸಂಭವಿಸುವ ಅಪರೂಪದ ಘಟನೆಗಳು ನಡೆಯಬಹುದು.

ಜಾಯಿಕಾಯಿ ಮನೆಮದ್ದು
ಜಾಯಿಕಾಯಿಯನ್ನು ವೈವಿಧ್ಯವಾಗಿ ಬಳಸಿ
ಜಾಯಿಕಾಯಿ ಬಳಸುವುದು ಹೇಗೆ?
ಜಾಯಿಕಾಯಿಯನ್ನು ಕೇವಲ ಮಸಾಲೆಯಾಗಿ ಬಳಕೆ ಮಾಡುವ ಬದಲು ಇದರ ಚಾ ಮಾಡಿಕೊಂಡು ಸೇವಿಸಿದರೆ ಅದರಲ್ಲಿನ ಆರೋಗ್ಯ ಲಾಭಗಳು ಸಿಗುವುದು.
ಜಾಯಿಕಾಯಿಯನ್ನು ಚರ್ಮ ಹಾಗೂ ಬಾಯಿಯ ಆರೈಕೆಯಲ್ಲಿ ಈ ರೀತಿಯಾಗಿ ಬಳಕೆ ಮಾಡಬಹುದು.
ಜಾಯಿಕಾಯಿ ಚಾ ತಯಾರಿಸುವುದು ಹೇಗೆ?
ಬಿಸಿ ನೀರಿಗೆ ಜಾಯಿಕಾಯಿ ಹುಡಿ(3 ಗ್ರಾಂಕ್ಕಿಂತಲೂ ಕಡಿಮೆ) ಹಾಕಿ. ಇದಕ್ಕೆ ಒಂದು ತುಂಡು ಶುಂಠಿ ಹಾಕಿ. ಇದು 2-3 ನಿಮಿಷ ಕಾಲ ಹಾಗೆ ಇರಲಿ. ಇದರ ಬಳಿಕ ಸೋಸಿಕೊಂಡು ಕುಡಿಯಿರಿ.
ನಿದ್ರೆ ಸುಖಕರವಾಗಿರಬೇಕಾದರೆ ಆಗ ನೀವು ಒಂದು ಲೋಟ ಬಿಸಿ ಹಾಲಿಗೆ ಚಿಟಿಕೆ ಜಾಯಿಕಾಯಿ ಹುಡಿ ಹಾಕಿ ಕುಡಿಯಿರಿ.
ಜಾಯಿಕಾಯಿ ಬಳಸಿ ಮೊಡವೆ ನಿವಾರಿಸುವುದು ಹೇಗೆ?
ಮೊಡವೆ ನಿವಾರಣೆ ಮಾಡಲು ಜಾಯಿಕಾಯಿ ಬಳಸುವುದು ತುಂಬಾ ಸುಲಭ. ಎರಡರಿಂದ ಮೂರು ಜಾಯಿಕಾಯಿಯ ಬೀಜವನ್ನು ಜಜ್ಜಿಕೊಳ್ಳಿ ಮತ್ತು ಇದನ್ನು ಹಾಲಿಗೆ ಹಾಕಿ ಪೇಸ್ಟ್ ಮಾಡಿ. ಮುಖವನ್ನು ಬಿಸಿ ನೀರಿನಿಂದ ತೊಳೆಯಿರಿ ಮತ್ತು ಇದರ ಬಳಿಕ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ. ಕೆಲವು ಗಂಟೆ ಹಾಗೆ ಬಿಟ್ಟು ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.
ದಂತ ಆರೋಗ್ಯಕ್ಕೆ ಜಾಯಿಕಾಯಿ ಬಳಕೆ ಹೇಗೆ?
ಸ್ವಲ್ಪ ಜಾಯಿಕಾಯಿ ಹುಡಿ ಮತ್ತು ಸ್ವಲ್ಪ ಒರೆಗಾನೊ ಎಣ್ಣೆ ಮಿಶ್ರಣ ಮಾಡಿಕೊಂಡು ಅದರಿಂದ ಹಲ್ಲುಜ್ಜಬಹುದು. ಇದನ್ನು ವಾರದಲ್ಲಿ ಕೆಲವು ಸಲ ಬಳಕೆ ಮಾಡಿ.



Click it and Unblock the Notifications








