Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ರೌನಿ ಚಾಕೋಲೇಟ್ ತಿನ್ನೋದ್ರಿಂದ ಆರೋಗ್ಯಕ್ಕೆ ತುಂಬಾನೆ ಪ್ರಯೋಜನವಿದೆಯಂತೆ ಗೊತ್ತಾ!
ಚಾಕೋಲೇಟ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಎಲ್ಲರಿಗೂ ಚಾಕೋಲೇಟ್ ಇಷ್ಟ. ಅದರಲ್ಲಲೂ ಬ್ರೌನಿ ಚಾಕೋಲೇಟ್ ಹೆಚ್ಚಿನವರ ಫೇವರೆಟ್.. ಆದ್ರೆ ಚಾಕೋಲೇಟ್ ಸೇವನೆ ಆರೋಗ್ಯಕ್ಕೆ ಹಾನಿಕಾರ ಎಂದೇ ನಂಬಿರುವವರು ಹೆಚ್ಚು. ಅದರೆ ಇದು ನಿಜವಲ್ಲ. ಮಿತವಾಗಿ ಸೇವಿಸಿದರೆ ಎಲ್ಲವೂ ಒಳ್ಳೆಯದೇ ನಮ್ಮ ದೇಹಕ್ಕೆ. ಯಾವಾಗ ಅತಿಯಾಗುವುದೋ, ಆಗಲೇ ಸಮಸ್ಯೆಯಾಗುವುದು. ಅದೇ ರೀತಿ ಈ ಬ್ರೌನಿ ಚಾಕೋಲೇಟ್ ಅಥವಾ ಕೇಕ್‌ಗಳ ಕಥೆಯೂ. ಇದನ್ನು ಮಿತವಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಅವು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ದೈನಂದಿನ ಆಹಾರಕ್ರಮಕ್ಕೆ ಉತ್ತಮ:
ನಿಮ್ಮ ಆಹಾರದಲ್ಲಿ ಬ್ರೌನಿ ಚಾಕೋಲೇಟ್‌ಗಳನ್ನು ಸೇರಿಸುವುದು ಉತ್ತಮ. ಇವು ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ತುಂಬಿಸುತ್ತವೆ. ಬೇಕಿದ್ದಲ್ಲಿ ಬ್ರೌನಿ ಮಿಶ್ರಣಕ್ಕೆ ಬಾದಾಮಿಯನ್ನು ಸೇರಿಸಬಹುದು, ಇದರಿಂದ ರುಚಿ ಜೊತೆಗೆ ಆರೋಗ್ಯವೂ ವೃದ್ಧಿಸುವುದು. ಒಂದು ನೆನಪಿಡಿ. ನೀವು ಯಾವುದನ್ನು ಸೇವಿಸಲು ಬಯಸುತ್ತೀರೋ ಅದನ್ನು ಮಿತವಾಗಿ ಸೇವಿಸಿ, ಅದು ನಿಮಗೆ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಆರೋಗ್ಯವಾಗಿರಲು ಮಿತವಾಗಿರುವುದು ಮೂಲ ಮಂತ್ರ.

ಆರೋಗ್ಯಕರ ಜೀರ್ಣಕ್ರಿಯೆಗೆ ಸಹಕಾರಿ:
ಚಾಕೊಲೇಟ್‌ಗಳು ನೈಸರ್ಗಿಕವಾಗಿ ಫೈಬರ್‌ನಿಂದ ತುಂಬಿದ್ದು, ಇವು ಆರೋಗ್ಯಕರ ಜೀರ್ಣಕ್ರಿಯೆಗೆ ಅವಶ್ಯಕ. ನೀವು ಬ್ರೌನಿಗಳನ್ನು ಒಟ್ಟಾರೆಯಾಗಿ ಸೇವಿಸಿದಾಗ, ಇದು ಆರೋಗ್ಯಕರ ಕರುಳಿನ ಚಲನೆಯನ್ನು ಉತ್ತೇಜಿಸಿ, ಮಲಬದ್ಧತೆ ಮತ್ತು ಅತಿಸಾರವನ್ನು ತಡೆಯುತ್ತದೆ. ಈ ಮೂಲಕ ದೇಹದಲ್ಲಿ ಸಂಗ್ರಹವಾದ ಅನಗತ್ಯ ಕೊಲೆಸ್ಟ್ರಾಲ್ ಅನ್ನು ಅಳಿಸಿಹಾಕುತ್ತದೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು:
ಬ್ರೌನಿಯು ಡಾರ್ಕ್ ಚಾಕೊಲೇಟ್ ನ್ನು ಹೊಂದಿರುವುದರಿಂದ ಹಲವಾರು ಕಾಯಿಲೆಗಳಿಂದ ನಿಮ್ಮ ಹೃದಯವನ್ನು ರಕ್ಷಿಸುವಲ್ಲಿ ಇದು ಉತ್ತಮವಾಗಿದೆ. ಡಾರ್ಕ್ ಚಾಕೊಲೇಟ್‌ಗಳು ಕಹಿಯಾಗಿದ್ದರೂ, ಇದು ಹೃದಯರಕ್ತನಾಳದ ಆರೋಗ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ತಕ್ಷಣವೇ ಶಕ್ತಿಯನ್ನು ಹೆಚ್ಚಿಸುವುದು:
ಬ್ರೌನಿಗಳು ಕ್ಯಾಲೊರಿಗಳಿಂದ ತುಂಬಿರುವುದರಿಂದ, ದಿನವಿಡೀ ಸಕ್ರಿಯವಾಗಿರಲು ತ್ವರಿತ ಶಕ್ತಿಯನ್ನು ನೀಡುತ್ತವೆ. ಆದ್ದರಿಂದ, ನೀವು ಹಸಿದಿರುವಾಗ ಅಥವಾ ಶಕ್ತಿ ಕಳೆದುಕೊಂಡಾಗ ಅದನ್ನು ಲಘು ಆಹಾರವಾಗಿ ಸೇವಿಸಬಹುದು.. ಇದು ನಿಮಗೆ ಅಗತ್ಯವಿರುವ ಶಕ್ತಿಯನ್ನು ಪೂರೈಸುತ್ತದೆ.

ರೋಗ ನಿರೋಧಕ ಶಕ್ತಿ ವೃದ್ಧಿ:
ಉತ್ಕರ್ಷಣ ನಿರೋಧಕಗಳ ಉಪಸ್ಥಿತಿಯು ನಿಮ್ಮ ದೇಹವನ್ನು ಸರಿಯಾಗಿ ಇಡುತ್ತದೆ. ಡಾರ್ಕ್ ಚಾಕೊಲೇಟ್‌ಗಳು ಮತ್ತು ಕೋಕೋ ಪೌಡರ್ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲಗಳಾಗಿವೆ, ಅದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ತಮ್ಮ ಪಾತ್ರವನ್ನು ಮಾಡುತ್ತದೆ.

ಮಕ್ಕಳಿಗೆ ಆರೋಗ್ಯಕರ ತಿಂಡಿ:
ನಿಮ್ಮ ಮಕ್ಕಳು ಬ್ರೌನಿಗಳನ್ನು ತಿನ್ನಲು ಇಷ್ಟಪಡುತ್ತದ್ದರೆ, ಒಳ್ಳೆಯದು. ಏಕೆಂದರೆ, ಬ್ರೌನಿಗಳು ನಿಮ್ಮ ಮಕ್ಕಳಿಗೆ ನೀಡಬಹುದಾದ ಅತ್ಯುತ್ತಮ ಮತ್ತು ಆರೋಗ್ಯಕರ ತಿಂಡಿಗಳಲ್ಲಿ ಒಂದಾಗಿದೆ ಏಕೆಂದರೆ ಇವು ನಿಮ್ಮ ಮಗುವಿನ ಜೀರ್ಣಕ್ರಿಯೆಯಿಂದ ಹಿಡಿದು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದೆ.



Click it and Unblock the Notifications