Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಿಳೆಯರಲ್ಲಿ ಫಲವತ್ತತೆ ಹೆಚ್ಚಲು ಗೆಣಸು ಪರಿಣಾಮಕಾರಿ
ಗೆಣಸು ಎಂದರೆ ಹೆಚ್ಚಿನವರಿಗೆ ತಾತ್ಸಾರ ಭಾವನೆ. ಇದನ್ನು ತಿನ್ನುವುದು ತಮ್ಮ ಘನತೆಗೆ ಕುಂದು ತರುವುದು ಎಂದು ಕೆಲವರು ಭಾವಿಸಿರುವರು. ಆದರೆ ಉಸೇನ್ ಬೋಲ್ಟ್ ನಂತಹ ವಿಶ್ವದ ಅಗ್ರ ಕ್ರೀಡಾಳುಗಳು ಕೂಡ ಗೆಣಸು ಸೇವಿಸಿ ತಮ್ಮ ಆರೋಗ್ಯ ಕಾಪಾಡಿಕೊಂಡಿದ್ದಾರೆ ಎಂದರೆ ನೀವು ನಂಬಲೇಬೇಕು.
ನಮ್ಮ ಪೂರ್ವಜರು ಕೂಡ ಹಿಂದೆ ಕಾಡಿನಲ್ಲಿ ಸಿಗುತ್ತಿದ್ದ ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದರು. ಗೆಣಸಿನಲ್ಲಿ ಇರುವ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ತುಂಬಾ ಒಳ್ಳೆಯದು ಮತ್ತು ಇದು ಆರೋಗ್ಯವನ್ನು ಕಾಪಾಡುವುದು ಎಂದು ಹಲವಾರು ಅಧ್ಯಯನಗಳು ಕೂಡ ಹೇಳಿವೆ.

ಕಾಡು ಗೆಣಸನ್ನು ಅದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣದಿಂದಾಗಿ ಚರ್ಮದ ಆರೈಕೆಯ ಉತ್ಪನ್ನಗಳಲ್ಲಿ ಕೂಡ ಬಳಕೆ ಮಾಡುವರು. ಒಂದು ಕಪ್ ಗೆಣಸಿನಲ್ಲಿ 158 ಕ್ಯಾಲರಿ ಇದೆ. 5 ಗ್ರಾಂ ನಾರಿನಾಂಶ, 19 ಮಿ.ಗ್ರಾಂ. ಕ್ಯಾಲ್ಸಿಯಂ ಮತ್ತು 17 ಮಿ.ಗ್ರಾಂ ವಿಟಮಿನ್ ಸಿ ಇದೆ.
ಗೆಣಸು ಸೇವನೆ ಮಾಡುವುದರಿಂದ ದೇಹದಲ್ಲಿ ಬೊಜ್ಜು ತಡೆಯಬಹುದು ಮತ್ತು ಪ್ರತಿರೋಧಕ ಶಕ್ತಿಯನ್ನು ಇದು ಹೆಚ್ಚಿಸುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ಈ ಲೇಖನದಲ್ಲಿ ಗೆಣಸಿನಿಂದ ಸಿಗುವಂತಹ ಆರೋಗ್ಯ ಲಾಭಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಓದಲು ತಯಾರಾಗಿ.

ಗೆಣಸಿನಿಂದ ಸಿಗುವ ಆರೋಗ್ಯ ಲಾಭಗಳು ಯಾವುದು?
ನೆಲದಡಿಯಲ್ಲಿ ಬೆಳೆಯುವಂತಹ ಗೆಣಸು ತುಂಬಾ ರುಚಿಕರವಾಗಿರುವಂತಹ ತರಕಾರಿಯಾಗಿದ್ದು, ಇದನ್ನು ಪುರಾತನ ಕಾಲದಿಂದಲೂ ಆಹಾರವಾಗಿ ವಿವಿಧ ರೂಪದಲ್ಲಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಗಡ್ಡೆ ತರಕಾರಿ ಆಗಿರುವಂತಹ ಗೆಣಸಿನಿಂದ ಸಿಗುವ ಲಾಭಗಳು ಇಲ್ಲಿವೆ.

ಚರ್ಮದ ಆರೋಗ್ಯಕ್ಕೆ ಒಳ್ಳೆಯದು
ಗೆಣಸಿನಲ್ಲಿ ಡಿಯೋಸ್ಜೆನಿನ್ ಎನ್ನುವ ಸಸ್ಯಜನ್ಯ ಸ್ಟಿರಾಯ್ಡ್ ಇದ್ದು, ಋತುಬಂಧ ಆಗುವ ವೇಳೆ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ವಯಸ್ಸಾಗುವ ಲಕ್ಷಣಗಳನ್ನು ಇದು ತಡೆಯುವುದು. ಇದನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿದಾಗ ಅದರಿಂದ ಒಳ್ಳೆಯ ಪರಿಣಾಮವು ಕಂಡುಬಂದಿದೆ. ಆದರೆ ಮನುಷ್ಯರಿಗೆ ಚರ್ಮಕ್ಕೆ ಇದು ಎಷ್ಟು ಲಾಭಕಾರಿ ಎಂದು ಇನ್ನಷ್ಟು ಪ್ರಯೋಗಗಳನ್ನು ನಡೆಸಬೇಕಾಗಿದೆ.

ತೂಕ ಇಳಿಕೆಗೆ ಸಹಕಾರಿ
ಗ್ಲುಕೋಮನ್ನನ್ ಎನ್ನುವ ಅಂಶವು ಗೆಣಸಿನಲ್ಲಿ ಇರುವುದು. ಹೀಗಾಗಿ ಗೆಣಸನ್ನು ಬಳಸಿದರೆ ತೂಕ ಕಡಿಮೆ ಮಾಡಬಹುದು. ದಿನಕ್ಕೆ 2-4 ಗ್ರಾಂ ಗೆಣಸು ಸೇವಿಸಿದರೆ ಇದರಲ್ಲಿ ಇರುವಂತಹ ನಾರಿನಾಂಶವು ಹೊಟ್ಟೆಯಲ್ಲಿ ಪದರವಾಗಿ ನಿರ್ಮಾಣಗೊಂಡು ಹೊಟ್ಟೆ ತುಂಬಿರುವಂತೆ ಮಾಡುವುದು. ಇದರಿಂದ ತಿನ್ನುವ ಬಯಕೆ ಕಡಿಮೆ ಆಗುವುದು ಮತ್ತು ತೂಕ ಇಳಿಸಲು ಇದು ಸಹಕಾರಿ.

ಫಲವತ್ತತೆ ಹೆಚ್ಚಿಸುವುದು
ಗೆಣಸಿನಲ್ಲಿ ಫಲವತ್ತತೆ ಹೆಚ್ಚಿಸುವ ಗುಣಗಳು ಇದೆ ಎಂದು ಅಧ್ಯಯನಗಳು ಕಂಡುಕೊಂಡಿದೆ. ಹಾರ್ಮೋನ್ ಬದಲಿ ಚಿಕಿತ್ಸೆಗೆ ನೈಸರ್ಗಿಕ ಹಾರ್ಮೋನ್ ತುಂಬಾ ಜನಪ್ರಿಯವಾಗಿದೆ. ಕಾಡು ಗೆಣಸಿನಲ್ಲಿ ಇರುವಂತಹ ಈ ಅಂಶವು ಕೆಲವು ಮಹಿಳೆಯರಿಗೆ ತುಂಬಾ ಪರಿಣಾಮಕಾರಿ ಆಗಿದೆ. ಗೆಣಸಿನಲ್ಲಿ ನೈಸರ್ಗಿಕದತ್ತವಾದ ಪ್ರೊಜೆಸ್ಟರಾನ್ ಅಂಶವಿದೆ.

ಋತುಬಂಧದ ಸಮಸ್ಯೆಗಳಿಗೆ ಪರಿಹಾರ
ಕಾಡು ಗೆಣಸಿನಲ್ಲಿ ಕಂಡುಬರುವಂತಹ ಡಿಯೋಸ್ಜೆನಿನ್ ಎನ್ನುವ ಅಂಶವನ್ನು ಸೆಕ್ಸ್ ಹಾರ್ಮೋನ್ ಗಳ ಸಮಸ್ಯೆಯ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತದೆ. ಇದನ್ನು ಗರ್ಭನಿರೋಧಕ ಹಾಗೂ ಋತುಬಂಧ ಹಾಗೂ ಋತುಚಕ್ರದ ಮೊದಲು ಕಾಣಿಸಿಕೊಳ್ಳುವ ಸಮಸ್ಯೆ ನಿವಾರಿಸಲು ಬಳಸಲಾಗುವುದು. ಈ ಅಂಶವು ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಉಂಟು ಮಾಡದೆ ಋತುಬಂಧದಿಂದ ಬರುವ ಕೆಲವು ಲಕ್ಷಣಗಳನ್ನು ನಿವಾರಣೆ ಮಾಡುವುದು.
ಮನೆಮದ್ದುಗಳಲ್ಲಿ ಕೂಡ ಕೆಲವು ಸಲ ಗೆಣಸನ್ನು ಬಳಸಿಕೊಂಡು ಋತುಬಂಧ ಹಾಗೂ ಋತುಚಕ್ರದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇದು ಸೆಕ್ಸ್ ಹಾರ್ಮೋನ್ ಹೆಚ್ಚಿಸುವುದು, ಕಾಮಾಸಕ್ತಿ ವೃದ್ಧಿಸುವುದು ಎಂದು ಕೆಲವು ಅಧ್ಯಯನಗಳು ಹೇಳಿವೆ.

ಮಧುಮೇಹಕ್ಕೆ ಚಿಕಿತ್ಸೆ
ಇನ್ಸುಲಿನ್ ಸ್ರವಿಸುವಿಕೆ ಕಡಿಮೆ ಆಗುವುದು ಅಥವಾ ಆಗದೆ ಇರುವ ಪರಿಣಾಮವಾಗಿ ಮಧುಮೇಹ ಕಂಡುಬರುವುದು. ಗೆಣಸಿನಿಂದ ಗ್ಲುಕೋಸ್ ಚಯಾಪಚಯ ಸುಧಾರಣೆ ಮಾಡಬಹುದು ಎಂದು ಇಲಿಗಳ ಮೇಲೆ ನಡೆಸಿರುವಂತಹ ಅಧ್ಯಯನಗಳು ಹೇಳಿವೆ. ಮನುಷ್ಯರಿಗೆ ಇದನ್ನು ಅಳವಡಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ.
ಗೆಣಸಿನಲ್ಲಿ ಇರುವಂತಹ ಸಕ್ಕರೆಯು ನೈಸರ್ಗಿಕವಾಗಿದ್ದು, ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಬಳಸಿಕೊಂಡು ಸಿಹಿಗಾಗಿ ಆಗುವ ಬಯಕೆ ಕಡಿಮೆ ಮಾಡಬಹುದು. ಇದರಲ್ಲಿ ಇರುವಂತಹ ಅಲಾಂಟೊಯಿನ್ ಎನ್ನುವ ಅಂಶವು ಆಕ್ಸಿಡೇಟಿವ್ ಒತ್ತಡವನ್ನು ನಿರ್ವಹಿಸುವುದು. ಇದು ಯಕೃತ್ ನ ಕಾರ್ಯ ಸುಧಾರಣೆ ಮಾಡುವ ಜತೆಗೆ ಇನ್ಸುಲಿನ್ ಮತ್ತು ಗ್ಲುಕೋಸ್ ಮಟ್ಟವನ್ನು ಇದು ನಿರ್ವಹಿಸುವುದು.

ಉರಿಯೂತದ ವಿರುದ್ಧ ಹೋರಾಡುವುದು
ಕಾಡು ಗೆಣಸಿನಲ್ಲಿ ಸಪೊನಿನ್ ಎನ್ನುವ ಅಂಶವಿದ್ದು, ಇದು ಉರಿಯೂತ ನಿವಾರಿಸಲು ತುಂಬಾ ಪರಿಣಾಮಕಾರಿ ಆಗಿದೆ. ಇದರಿಂದ ಗೆಣಸು ಉರಿಯೂತ ಕಡಿಮೆ ಮಾಡುವುದು ಮ್ತು ಹೊಟ್ಟೆ ಮತ್ತು ಶ್ರೋಣಿಯ ಭಾಗದ ಸ್ನಾಯುಗಳಿಗೆ ಆರಾಮ ನೀಡುವುದು. ವಿವಿಧ ಕಾಯಿಲೆಗಳಿಂದ ಬರುವಂತಹ ಉರಿಯೂತವನ್ನು ಸಪೊನಿನ್ಸ್ ನ ಆಂಟಿಆಕ್ಸಿಡೆಂಟ್ ಗುಣವು ದೂರ ಮಾಡುವುದು.

ಕ್ಯಾನ್ಸರ್ ತಡೆಯಲು ನೆರವಾಗುವುದು
ಗೆಣಸಿನಲ್ಲಿ ಇರುವಂತಹ ಡಿಯೋಸ್ಜೆನಿನ್ ನ್ನುವ ಅಂಶವು ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಆಗಿ ಕೆಲಸ ಮಾಡಿ, ಕಾನ್ಸರ್ ಕಾರಕಗಳನ್ನು ತಡೆಯುವುದು. ಇದರಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳು ಕೂಡ ಇದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.
ಗೆಣಸು ಇರುವಂತಹ ಆಹಾರ ಕ್ರಮವನ್ನು ಅಳವಡಿಸಿಕೊಂಡರೆ ಅದರಿಂದ ಕರುಳಿನ ಕ್ಯಾನ್ಸರ್ ನ ಗೆಡ್ಡೆ ಬೆಳೆಯುವುದನ್ನು ತಡೆಯಬಹುದು ಎಂದು ಅಧ್ಯಯನಗಳು ತಿಳಿಸಿವೆ. ಆದರೆ ಇದನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಲು ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ.

ಮೆದುಳಿನ ಕಾರ್ಯಕ್ಷಮತೆ ವೃದ್ಧಿಸುವುದು
ಗೆಣಸಿನಲ್ಲಿ ಪೊಟಾಶಿಯಂ ಅಂಶವಿದೆ ಮತ್ತು ಇದು ಮೆದುಳಿನ ನರಗಳ ಚಟುವಟಿಕೆ ಮತ್ತು ಅರಿವಿನ ಕಾರ್ಯ ಹೆಚ್ಚಿಸುವುದು. ಡಿಯೋಸ್ಜೆನಿನ್ ಎನ್ನುವ ಅಂಶವು ಗೆಣಸಿನಲ್ಲಿ ಇರುವ ಕಾರಣದಿಂದಾಗಿ ಇದು ಮೆದುಳಿನ ಆರೋಗ್ಯ ಕಾಪಾಡುವುದು ಮತ್ತು ನರಕೋಶದ ಬೆಳವಣಿಗೆ ಹೆಚ್ಚಿಸುವುದು. ಇದು ನೆನಪಿನ ಶಕ್ತಿ ಮತ್ತು ಕಲಿಯುವ ಕೌಶಲ್ಯವನ್ನು ಹೆಚ್ಚಿಸಿದೆ ಎಂದು ಅಧ್ಯನಗಳು ಹೇಳಿವೆ.

ಜೀರ್ಣಕ್ರಿಯೆ ಆರೋಗ್ಯ ಸುಧಾರಣೆ
ಗೆಣಸಿನಲ್ಲಿ ಪ್ರತಿರೋಧಕ ಪಿಷ್ಠ, ಹೀರಿಕೊಳ್ಳಬಹುದಾದ ಗ್ಲೈಕೊಪ್ರೋಟೀನ್ ಮತ್ತು ಆಹಾರದ ನಾರಿನಾಂಶವಿದೆ. ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಗೆಣಸು ಸಣ್ಣ ಕರುಳಿನಲ್ಲಿ ಜೀರ್ಣಕ್ರಿಯೆ ಕಿಣ್ವಗಳ ಚಟುವಟಿಕೆ ವೃದ್ಧಿಸುವುದು.
ಇದೆಲ್ಲವೂ ಗೆಣಸಿನ ಕೆಲವು ಆರೋಗ್ಯ ಲಾಭಗಳು. ಪೋಷಕಾಂಶಗಳಿಂದ ಸಮೃದ್ಧವಾಗಿರುವಂತಹ ತರಕಾರಿಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಗೆಣಸಿನಲ್ಲಿ ಇರುವಂತಹ ಪೋಷಕಾಂಶಗಳು
ಗೆಣಸಿನಲ್ಲಿ ನಾರಿನಾಂಶ, ಖನಿಜಾಂಶ ಮತ್ತು ವಿಟಮಿನ್ ಗಳು ಇವೆ. ಇದರಲ್ಲಿ ಉನ್ನತ ಮಟ್ಟದ ತಾಮ್ರ, ಮ್ಯಾಂಗನೀಸ್ ಮತ್ತು ಪೊಟಾಶಿಯಂ ಇದೆ.



Click it and Unblock the Notifications