Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಿವು
ವಯಸ್ಸಾಗುತ್ತಿದ್ದಂತೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ಇದರಿಂದಾಗಿ ಒಂದೊಂದೇ ಆರೋಗ್ಯ ಸಮಸ್ಯೆ ಕಾಡುವುದು ಸಹಜ. ಆದರೆ ಯಾರು ವ್ಯಾಯಾಮ ಮಾಡುತ್ತಾರೋ, ಆಹಾರಕ್ರಮದ ಕಡೆ ಹೆಚ್ಚಿನ ಗಮನ ಕೊಡುತ್ತಾರೋ ಅವರಿಗೆ ವಯಸ್ಸಾದರೂ ತಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.

ರೋಗನಿರೋಧಕ ಶಕ್ತಿ ಹೊರಗಿನಿಂದ ದೇಹವನ್ನು ಪ್ರವೇಶಿಸುವ ವೈರಾಣು ಅಥವಾ ಸೋಂಕಾಣುಗಳ ವಿರುದ್ಧ ಹೋರಾಡಿ, ಅವುಗಳನ್ನು ನಾಶ ಮಾಡಿ, ದೇಹದ ಆರೋಗ್ಯ ಕಾಪಾಡುತ್ತದೆ. ವಯಸ್ಸಾದಂತೆ ಆರೋಗ್ಯಕರ ಆಹಾರಕ್ರಮದ ಮೂಲಕ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗದಂತೆ ನೋಡಿಕೊಳ್ಳಬಹುದು. ಇದು ದೇಹದಲ್ಲಿ ಸೋಂಕು, ಕಾಯಿಲೆ ವಿರುದ್ಧ ಹೋರಾಡಲು ದೇಹವನ್ನು ಸಮರ್ಥ ಮಾಡುತ್ತದೆ.
ಇದೀಗ ಕೋವಿಡ್ 19 ಬಂದಾಗಿನಿಂದ ವಯಸ್ಸಾದವರು ತಮ್ಮ ಆರೋಗ್ಯಕದ ಕಡೆ ಹೆಚ್ಚಿನ ಕಾಳಜಿ ನೀಡಬೇಕಾಗಿದೆ. ಇಲ್ಲಿ ವಯಸ್ಸಾಸದವರು ಯಾವ ಆಹಾರಗಳನ್ನು ತಿನ್ನುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂಬ ಪಟ್ಟಿ ನೀಡಿದ್ದೇವೆ ನೋಡಿ:

ಕೆಂಪಕ್ಕಿ ಅನ್ನ:
ಕೆಂಪಕ್ಕಿ ಅನ್ನದಲ್ಲಿ ನಾರಿನಂಶ ಅತ್ಯಧಿಕವಿರುತ್ತದೆ ಹಾಗೂ ವಿಟಮಿನ್ಸ್ ಹಾಗೂ ಖನಿಜಾಂಶಗಳಿರುತ್ತವೆ, ಇವುಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ. ಕೆಂಪಕ್ಕಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಿರುತ್ತದೆ, ಇದು ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕುವಲ್ಲಿಯೂ ಸಹಕಾರಿ.

ಸಿಹಿ ಗೆಣಸು
ಸಿಹಿ ಗೆಣಸಿನಲ್ಲಿ ಬೀಟಾ ಕೆರೋಟಿನ್ ಮತ್ತು ವಿಟಮಿನ್ ಎ ಅಧಿಕವಿರುವುದರಿಂದ ವಯಸ್ಸಾದವರು ಇದನ್ನು ತಿನ್ನುವುದು ಒಳ್ಳೆಯದು. ಅಲ್ಲದೆ ಇದರಲ್ಲಿರುವ ಕಾರ್ಬೋಹೈಡ್ರೇಟ್ಸ್ ಕೂಡ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದನ್ನು ವಾರದಲ್ಲಿ ಒಮ್ಮೆಯಾದರೂ ಸೇವಿಸುವುದು ಒಳ್ಳೆಯದು.

ಪಾಲಾಕ್
ಪಾಲಾಕ್‌ನಲ್ಲಿ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್, ಬೀಟಾ ಕೆರೋಟಿನ್, ವಿಟಮಿನ್ ಕೆ ಇರುವುದರಿಂದ ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇದನ್ನು ಪಲ್ಯ, ಸಾರು, ಜ್ಯೂಸ್ ಹೀಗೆ ಅನೇಕ ರುಚಿಯಲ್ಲಿ ಸವಿಯಬಹುದಾಗಿದೆ.

ಮೊಟ್ಟೆ
ಮೊಟ್ಟೆಯಲ್ಲಿ ಪ್ರೊಟೀನ್ ಹಾಗೂ ವಿಟಮಿನ್ಸ್ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದನ್ನು ವಯಸ್ಸಾದ ಮೇಲೆ ಪ್ರತಿದಿನ ಒಂದು ಸೇವಿಸಿದರೆ ಒಳ್ಳೆಯದು. ಇದು ದೇಹಕ್ಕೆ ಅಗ್ಯತವಾದ ಪ್ರೊಟೀನ್ ಹಾಗೂ ಪೋಷಕಾಂಶ ಒದಗಿಸುತ್ತದೆ.

ಮೊಸರು
ಮೊಸರು ತಿನ್ನುವುದರಿಂದ ಹೊಟ್ಟೆ ಆರೋಗ್ಯ ವೃದ್ಧಿಯಾಗುವುದು. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಚಯಾಪಚಯ ಕ್ರಿಯೆ ಚೆನ್ನಾಗಿ ನಡೆಯಬೇಕು. ಇದು ಹೊಟ್ಟೆಯಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

ಗಿಡ ಮೂಲಿಕೆಗಳು
ಆಹಾರದಲ್ಲಿ ಗಿಡ ಮೂಲಿಕೆಗಳು ಕೂಡ ಹೆಚ್ಚಾಗಿ ಇರಲಿ. ಶುಂಠಿ, ಅರಿಶಿಣ, ಒರೆಗ್ನೋ, ಇನ್ನು ಸಂಬಾರ ಪದಾರ್ಥಗಳಾದ ಚಕ್ಕೆ, ಲವಂಗ ಇವೆಲ್ಲಾ ಅಡುಗೆಯಲ್ಲಿ ಇರಲಿ. ಅಲ್ಲದೆ ಕೆಲವೊಂದು ಆಯುರ್ವೇದ ಔಷಧಗಳನ್ನು ಕೂಡ ತೆಗೆದುಕೊಳ್ಳಬಹುದು. ಹೀಗೆ ಮಾಡುವುದರಿಂದ ವಯಸ್ಸಾದಾಗ ಕಾಡುವ ಅನೇಕ ಸಮಸ್ಯೆಗಳನ್ನು ದೂರವಿಡಬಹುದು.

ತೆಳು ಮಾಂಸ
ವಯಸ್ಸಾಗುತ್ತಿದ್ದಂತೆ ಜೀರ್ಣಕ್ರಿಯೆ ಸಾಮಾರ್ಥ್ಯ ಸ್ವಲ್ಪ ಕಡಿಮೆಯಾಗುವುದರಿಂದ ಕೊಬ್ಬಿನಂಶ ಕಡಿಮೆ ಇರುವ ಮಾಂಸಾಹಾರ ಸೇವನೆ ಮಾಡಿ. ಮೀನು ತಿನ್ನಿ. ಇದರಿಂದ ವಿಟಮಿನ್ ಇ ಹಾಗೂ ಒಮೆಗಾ 3 ಕೊಬ್ಬಿನಂಶ ದೊರೆಯುತ್ತದೆ. ಈ ಆಹಾರಗಳು ದೇಹವನ್ನು ಅನೇಕ ಕಾಯಿಲೆಯಿಂದ ರಕ್ಷಿಸುತ್ತದೆ. ದೇಹದಲ್ಲಿ ಪ್ರೊಟೀನ್ ಹಾಗೂ ವಿಟಮಿನ್ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

ನೀರು
ಸಾಕಷ್ಟು ನೀರು ಕುಡಿಯಿರಿ, ಅದರಲ್ಲೂ ಬೆಚ್ಚಗಿನ ನೀರು ಕುಡಿಯಿರಿ. ದಿನಕ್ಕೆ ಒಂದು ಲೋಟ ತಾಜಾ ಹಣ್ಣಿನ ಜ್ಯೂಸ್ ಕುಡಿಯಿರಿ. ಹೀಗೆ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ. ಇನ್ನು ಸಣ್ಣ ಪುಟ್ಟ ಶೀತ, ಕೆಮ್ಮು ಹೋಗಲಾಡಿಸಲು ಕಷಾಯ ಮಾಡಿ ಕುಡಿಯಿರಿ. ಸೂಪ್ ಕೂಡ ಒಳ್ಳೆಯದು. ಹೀಗೆ ಮಾಡುವುದರಿಂದ ದೇಹವು ಚಟುವಟಿಕೆಯಿಂದ ಇರುವುದು.
ಹೀಗೆ ಆರೋಗ್ಯಕರ ಆಹಾರಕ್ರಮ ಪಾಲಿಸುವುದರ ಜೊತೆಗೆ ದಿನದಲ್ಲಿ ಅರ್ಧಗಂಟೆ ವಾಕಿಂಗ್ ಅಥವಾ ಯೋಗಕ್ಕೆ ಮೀಸಲಿಡಿ, ಧ್ಯಾನ ಮಾಡಿ, ಇವೆಲ್ಲಾ ಆರೋಗ್ಯ ವೃದ್ಧಿಗೆ ಸಹಕಾರಿ.



Click it and Unblock the Notifications