Latest Updates
-
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ
ಹೃದಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ಮಹಿಳೆ ತಿಳಿದಿರಲೇಬೇಕಾದ ಸಂಗತಿಗಳಿವು
ಇತ್ತೀಚೆಗೆ ಸದ್ದಿಲ್ಲದೇ ಮನುಷ್ಯನನ್ನು ಸಾವಿನ ದವಡೆಗೆ ತಳ್ಳುವ ಖಾಯಿಲೆಯೆಂದರೆ ಅದು ಹೃದಯದ ಸಮಸ್ಯೆ. ಹೆಚ್ಚಿನವರಿಗೆ ಹೃದಯಾಘಾತದ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗದೇ ಸಾವನ್ನಪ್ಪುವುದೇ ಹೆಚ್ಚು. ವೃದ್ಧರನ್ನು ಮಾತ್ರವಲ್ಲ ವಯಸ್ಕರು, ಯುವಕರು, ಮಕ್ಕಳೂ ಇಂದು ಹೃದಯದ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವುದು ಭಯವನ್ನುಂಟು ಮಾಡುತ್ತದೆ. ಇದಕ್ಕೆಲ್ಲಾ ಕಾರಣವೆಂದರೆ ಹೃದಯದ ಸಮಸ್ಯೆಯ ಲಕ್ಷಣಗಳನ್ನು ಗುರುತಿಸದಿರುವುದು. ಮಹಿಳೆಯರೂ ಈ ಸಾಲಿನಲ್ಲಿದ್ದೀರಿ ಎನ್ನುವುದನ್ನು ಮರೆಯಬೇಡಿ. ಹೃದಯದ ಸಮಸ್ಯೆಗಳ ಬಗ್ಗೆ ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು..

1. ಕ್ಯಾನ್ಸರ್‌ಗಿಂತ ಹೃದಯದ ಖಾಯಿಲೆಯಿಂದ ಮಹಿಳೆಯರು ಸಾವನ್ನಪ್ಪುವುದು ಹೆಚ್ಚು
ಅಧ್ಯಯನದ ಪ್ರಕಾರ ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬರು ಹೃದ್ರೋಗದಿಂದ ಸಾಯುತ್ತಾರಂತೆ. ವಾಸ್ತವವಾಗಿ, ಎಲ್ಲಾ ಕ್ಯಾನ್ಸರ್‌ಗಳಿಗಿಂತ ಹೆಚ್ಚು ಮಹಿಳೆಯರು ಹೃದ್ರೋಗ ಮತ್ತು ಪಾರ್ಶ್ವವಾಯುಗಳಿಂದ ಮರಣವನ್ನಪ್ಪುತ್ತಾರೆ ಎಂದು ಫಿಲಡೆಲ್ಫಿಯಾದಲ್ಲಿನ ಇಂಡಿಪೆಂಡೆನ್ಸ್ ಬ್ಲೂ ಕ್ರಾಸ್‌ನಲ್ಲಿಯ ಮುಖ್ಯ ವೈದ್ಯಕೀಯ ಅಧಿಕಾರಿ ಹೇಳುತ್ತಾರೆ. ಹೃದ್ರೋಗವು ಯಾರಿಗೆ ಬರುತ್ತೆ, ಯಾರಿಗೆ ಬರುವುದಿಲ್ಲ ಎಂದು ಹೇಳಲಾಗದು. ಅದರಲ್ಲೂ ಮಹಿಳೆಯರು ಇತರ ಆರೋಗ್ಯ ಸಮಸ್ಯೆಗಳಿಗಿಂತ ಹೃದಯದ ಸಮಸ್ಯೆಗಳ ಬಗ್ಗೆ ವೈದ್ಯರೊಂದಿಗೆ ಮಾತನಾಡುವುದು ಕಡಿಮೆಯೇ. ಹಾಗಾಗಿ ಹೃದಯದ ಖಾಯಿಲೆ ಬಗ್ಗೆ ಸ್ವಲ್ಪ ಎಚ್ಚರ ವಹಿಸುವುದು ಒಳಿತು.

2. ಹತ್ತು ಮಹಿಳೆಯರಲ್ಲಿ ಒಂಭತ್ತು ಮಂದಿ ಮಹಿಳೆಯರಲ್ಲಿ ಹೃದ್ರೋಗ ಅಪಾಯಕಾರಿ
ಈಗಾಗಲೇ ಇರುವ ಹೃದಯದ ಸಮಸ್ಯೆ, ಜನನ ನಿಯಂತ್ರಣ ಮಾತ್ರೆಗಳ ಸೇವನೆ, ಧೂಮಪಾನ, ಅನಾರೋಗ್ಯಕರ ಆಹಾರ ಮತ್ತು ವ್ಯಾಯಾಮದ ಕೊರತೆಯು ಮಹಿಳೆಯರಲ್ಲಿ ಹೃದ್ರೋಗಕ್ಕೆ ಕಾರಣವಾಗುತ್ತಂತೆ. 90ಪ್ರತಿಶತದಷ್ಟು ಮಹಿಳೆಯರು ಕನಿಷ್ಠ ಒಂದಾದರೂ ಅಪಾಯಕಾರಿ ಅಂಶವನ್ನು ಹೊಂದಿರುತ್ತಾರೆ. ಇನ್ನು ಈ ಅಪಾಯಕಾರಿ ಅಂಶಗಳನ್ನು ಹೊಂದಿರದ ಮಹಿಳೆಯರಿಗೂ ಹೃದ್ರೋಗ ಭಾದಿಸುತ್ತದೆ ಎನ್ನುವುದನ್ನು ಮರೆಯಬೇಡಿ.

3. ಇಪ್ಪತ್ತರ ನಂತರ ರುಟೀನ್ ಚೆಕಪ್ ಮರೆಯಬಾರದು
ಹೆಚ್ಚಿನವರು ಸಮಸ್ಯೆ ಬಂದಾಗ ಮಾತ್ರವೇ ವೈದ್ಯರಲ್ಲಿಗೆ ಓಡುತ್ತಾರೆ. ಆದರೆ ಇದು ತಪ್ಪು ಇಪ್ಪತ್ತನೇ ವಯಸ್ಸಿನಲ್ಲೇ ಹೃದಯ ಸಂಬಂಧೀ ರುಟೀನ್ ಚೆಕ್‌ಅಪ್ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ. ಯಾಕೆಂದರೆ ಇಪ್ಪತ್ತರ ಹರೆಯದ ಆರಂಭದಿಂದ ಹೃದಯದ ಸಮಸ್ಯೆಗಳು ಆರಂಭವಾಗುತ್ತವೆ. ಈ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮುಂದೆ ಪರಿಸ್ಥಿತಿಯು ಇನ್ನಷ್ಟು ಹದಗೆಡಬಹುದು. ಹೃದಯ ಸಂಬಂಧಿ ಚೆಕಪ್‌ಗಳನ್ನು ನಿಮ್ಮ ಜನರಲ್ ಡಾಕ್ಟರ್ ಅವರ ಮೂಲಕವೇ ಮಾಡಿಸಿಕೊಳ್ಳಬಹುದು. ನಿಮ್ಮ ರಕ್ತದೊತ್ತಡ, ಕೊಲೆಸ್ಟ್ರಾಲ್, ತೂಕ ಮತ್ತು ಗ್ಲುಕೋಸ್ ಮಟ್ಟವನ್ನು ಪರೀಕ್ಷೆ ಮಾಡುವ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳಿದೆಯಾ ಎನ್ನುವುದನ್ನು ನೋಡಬಹುದು. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಹೃದಯದ ಸಮಸ್ಯೆ ಇದ್ದರೆ ವರ್ಷಕ್ಕೊಮ್ಮೆಯಾದರೂ ಇಸಿಜಿ ಅಥವಾ ಇಕೆಜಿ ಮಾಡಿಸಿಕೊಳ್ಳಿ.

4. ಮಹಿಳೆಯರಲ್ಲಿ ಹೃದ್ರೋಗ ಲಕ್ಷಣ ಗುರುತಿಸುವುದು ಕಷ್ಟ
ಹೃದ್ರೋಗದ ಲಕ್ಷಣಗಳು ಪುರುಷರು ಹಾಗೂ ಮಹಿಳೆಯರಲ್ಲಿ ಒಂದೇ ರೀತಿ ಇರುವುದಿಲ್ಲ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಪುರುಷರಲ್ಲಿ, ಸಾಮಾನ್ಯ ಹೃದಯಾಘಾತದ ಲಕ್ಷಣವೆಂದರೆ ಎಡ-ಬದಿಯ ಎದೆ ನೋವು ಅಥವಾ ಒತ್ತಡ, ಕೆಲವೊಮ್ಮೆ ತೋಳಿನ ಕೆಳಗೆ ಅಥವಾ ದವಡೆಯವರೆಗೆ ಹರಡುವ ನೋವು. ಆದರೆ ಮಹಿಳೆಯರಲ್ಲಿ ಈ ಲಕ್ಷಣಗಳು ಭಿನ್ನ. ಮಹಿಳೆಯರಲ್ಲಿ ಆಯಾಸ, ವಾಕರಿಕೆ, ಉಸಿರಾಟದ ತೊಂದರೆ, ಬೆನ್ನುನೋವು, ಅಜೀರ್ಣ, ದವಡೆ ನೋವು ಮುಂತಾದ ಲಕ್ಷಣಗಳ ಮೂಲಕ ಹೃದಯಾಘಾತವನ್ನು ಪತ್ತೆಹಚ್ಚಬಹುದು. ನಿಮ್ಮಲ್ಲಿ ಏನಾದರೂ ಈ ಲಕ್ಷಣಗಳು ಕಂಡುಬಂದರೆ ತಪ್ಪದೇ ತುರ್ತುಚಿಕಿತ್ಸೆ ಪಡೆಯುವ ಮೂಲಕ ಸಂಭವನೀಯ ಅಪಾಯವನ್ನು ತಡೆಗಟ್ಟಬಹುದು.

5. ಮಹಿಳೆಯರಿಗೆ ಸಿಪಿಆರ್ ಮಾಡುವ ಸಾಧ್ಯತೆ ಕಡಿಮೆ
ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರಿಗೆ ಹೃದಯಾಘಾತವಾದಾಗ ಸಿಪಿಆರ್ ಮಾಡಲು ಮುಂದೆ ಬರುವುದು ಕಡಿಮೆ. ಹೀಗಾಗಿ ಬದುಕುಳಿಯುವ ಸಾಧ್ಯತೆಗಳು ಕಡಿಮೆಯಾಗುತ್ತಿವೆ. ಮಹಿಳೆ ಎನ್ನುವ ಕಾರಣಕ್ಕಾಗಿ ಸಿಪಿಆರ್ ಮಾಡುವ ಮೂಲಕ ಮಹಿಳೆಯನ್ನು ಮುಟ್ಟಲು ಹಿಂಜರಿಯುವವರೇ ಹೆಚ್ಚು. ಸಿಪಿಆರ್ ಮಾಡಬೇಕಾದಾಗ ಎದೆಯನ್ನು ಒತ್ತಬೇಕಾಗುತ್ತದೆ ಈ ಕಾರಣಕ್ಕಾಗಿ ಸಾರ್ವಜನಿಕವಾಗಿ ಮಹಿಳೆಗೆ ಹೃದಯಾಘಾತವಾದಾಗ ಸಿಪಿಆರ್ ಮಾಡಲು ಯಾರೂ ಮುಂದೆ ಬರುವುದಿಲ್ಲ. ಅಧ್ಯಯನದ ಪ್ರಕಾರ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ ನಂತರ ಪುರುಷರು ಬದುಕುಳಿಯುವ ಸಾಧ್ಯತೆ ಮಹಿಳೆಯರಿಗಿಂತ 23ಪ್ರತಿಶತ ಹೆಚ್ಚಂತೆ.

6. ಸಿಪಿಆರ್ ಬಾಯಿಯಿಂದ ಬಾಯಿಯ ಮೂಲಕ ಮಾಡುವ ಅಗತ್ಯವಿಲ್ಲ
ಸಿಪಿಆರ್ ಅನ್ನು ಎದೆಯ ಮೇಲೆ ಕೈಯನ್ನು ಒತ್ತುವ ಮೂಲಕ ಮಾಡಲಾಗುತ್ತದೆ. ಬಾಯಿಯಿಂದ ಬಾಯಿಗೆ ಸಿಪಿಆರ್ ಮಾಡುವ ಅಗತ್ಯವಿಲ್ಲ. ಸಿಪಿಆರ್ ಮಾಡುವ ವಿಧಾನವೆಂದರೆ,
೧ ವ್ಯಕ್ತಿಯು ಸ್ಪಂದಿಸುತ್ತಿದ್ದಾರೆಯೇ ಎಂದು ಪರಿಶೀಲಿಸಿ. ಹೃದಯ ಸ್ತಂಭನದಿಂದ ಬಳಲುತ್ತಿರುವ ಯಾರಾದರೂ ಉಸಿರಾಡಲು ಅಥವಾ ಚಲಿಸಲು ಸಾಧ್ಯವಾಗುವುದಿಲ್ಲ ಮತ್ತು ಅವರು ನೀಲಿ ಬಣ್ಣಕ್ಕೆ ತಿರುಗಬಹುದು.
೨. ಎರಡನೆಯದಾಗಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿ.
೩ ಕೈಗಳಿಂದ ಮಾತ್ರ ಸಂಕೋಚನಗಳನ್ನು ಪ್ರಾರಂಭಿಸಿ. ಪ್ರತಿ ನಿಮಿಷಕ್ಕೆ 120 ಕಂಪ್ರೆಷನ್‌ಗಳ ರೀತಿಯಲ್ಲಿ ಎದೆಯ ಮಧ್ಯಭಾಗದಲ್ಲಿ ಗಟ್ಟಿಯಾಗಿ ಮತ್ತು ವೇಗವಾಗಿ ತಳ್ಳಿರಿ. ಇದು ಹೃದಯ ಬಡಿತಕ್ಕೆ ಸಹಾಯ ಮಾಡುತ್ತದೆ.

7. ನೀವು ಫಿಟ್ ಆಗಿದ್ದೀರೆಂದರೆ ಹ್ರದ್ರೋಗ ಬಾರದು ಎಂದು ಭಾವಿಸಬೇಡಿ
ಸಾಮಾನ್ಯವಾಗಿ ಫಿಟ್ ಆಗಿರೋರಿಗೆ ಯಾವ ಖಾಯಿಲೆಯೂ ಬರೋದಿಲ್ಲ ಎನ್ನುತ್ತಾರೆ. ಆದರೆ ನೀವು ತುಂಬಾ ಫಿಟ್ ಆಗಿದ್ದರೂ ಹಂಡ್ರೆಡ್ ಪರ್ಸೆಂಟ್ ನಿಮಗೆ ಹ್ರದ್ರೋಗ ಬರೋದೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅತಿಯಾಗಿ ತಿನ್ನುವುದು ಮತ್ತು ಜಡ ಜೀವನಶೈಲಿಯಂತಹ ವಿಷಯಗಳು ಹೃದಯದ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತವೆ. ಆದರೆ ನೀವು ತೆಳ್ಳಗಿದ್ದರೂ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಹೊಂದಿರಬಹುದು . ನಿಮ್ಮ ಆಹಾರ ಪದ್ಧತಿಯಿಂದ ಹಿಡಿದು, ಇತರರು ಮಾಡುವ ಧೂಮಪಾನದಿಂದಲೂ ನಿಮಗೆ ಹೃದಯದ ಸಮಸ್ಯೆ ಬರಬಹುದು.

8. ರೋಗಲಕ್ಷಣಗಳಿಲ್ಲದಿದ್ದರೂ ನಿಮಗೆ ಹೃದಯದ ಸಮಸ್ಯೆಯಿರಬಹುದು
ಕೆಲವು ಹ್ರದ್ರೋಗದ ಲಕ್ಷಣಗಳು ಮಹಿಳೆಯರಲ್ಲಿ ಕಂಡುಬರದೇ ಇರಬಹುದು. ವೇಗವಾಗಿ ನಡೆಯುವಾಗ, ವ್ಯಾಯಾಮ ಮಾಡಿದ ನಂತರ ಉಸಿರಾಟದ ತೊಂದರೆ ಮತ್ತು ರಾತ್ರಿಯ ನಿದ್ದೆಯಲ್ಲಿ ಆಯಾಸವೂ ಹೃದಯದ ಸಮಸ್ಯೆಯ ಲಕ್ಷಣವಾಗಿರಬಹುದು. ನೀವು ಸಾಮಾನ್ಯವಾಗಿ ಮಾಡುವ ಚಟುವಟಿಕೆಗಳನ್ನೂ ಇತ್ತೀಚೆಗೆ ಮಾಡಲು ಕಷ್ಟವಾಗುತ್ತಿದೆ ಎಂದೆನಿಸಿದರೆ ಖಂಡಿತವಾಗಿಯೂ ಗಮನಿಸಬೇಕಾದದ್ದೇ. ನಿಮ್ಮ ಚಟುವಟಿಕೆಗಳನ್ನು ಗಮನಿಸುವ ಮೂಲಕ, ವ್ಯಾಯಾಮ ಮಾಡುವ ಮೂಲಕ ನಿಮ್ಮ ದೈಹಿಕ ಆರೋಗ್ಯದ ಮೇಲೆ ಗಮನ ಹರಿಸಬಹುದು.
9. ಹಾರ್ಮೋನ್ ಉತ್ಪಾದನೆಯ ಮೇಲೆ ಗಮನವಿಡುವುದು
ನಿಮ್ಮ ದೇಹದ ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡುವುದು ನಿಮ್ಮ ಹೃದಯವನ್ನು ಆರೋಗ್ಯಕರವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಈಸ್ಟ್ರೋಜೆನ್ ಹಾರ್ಮೋನ್ ಹೃದಯಕ್ಕೆ ರಕ್ಷಣಾತ್ಮಕವಾಗಿದೆ. ಆದ್ದರಿಂದ ಮೆನೋಪಾಸ್ ನಂತರ ಈ ಹಾರ್ಮೋನ್ ಉತ್ಪಾದನೆ ಕಡಿಮೆಯಾಗುವುದರಿಂದ ಹೃದ್ರೋಗದ ಅಪಾಯ ಮೆನೋಪಾಸ್ ನಂತರ ಹೆಚ್ಚಾಗುತ್ತದೆ. ನಿಮ್ಮ ಮನೆಯಲ್ಲಿ ಅಮ್ಮ ಅಥವಾ ಅತ್ತೆ ಇನ್ಯಾರಾದಾರೂ ಮಹಿಳಾ ಹಿರಿಯ ಸದಸ್ಯರಿದ್ದರೂ ಅವರ ಮೆನೋಪಾಸ್‌ನ ನಂತರ ಆಗಾಗ ಹೃದಯದ ಆರೋಗ್ಯ ಪರೀಕ್ಷೆ ಮಾಡಿಸುವುದು ಉತ್ತಮ.



Click it and Unblock the Notifications











