Latest Updates
-
ಟೊಮೆಟೊ ಬೆಲೆ ಏರಿಕೆ: ಅಡುಗೆಯಲ್ಲಿ ರುಚಿ ಕೆಡದಂತೆ ಪರ್ಯಾಯ ಬಳಸುವುದು ಹೇಗೆ? -
ತಮಿಳುನಾಡು, ಕೇರಳದಲ್ಲಿ ಸಿಡಿಲು-ಮಳೆ ಅಬ್ಬರ: ಪ್ರಯಾಣಿಕರೇ ಎಚ್ಚರ, ಈ ಮುನ್ನೆಚ್ಚರಿಕೆ ಪಾಲಿಸಿ! -
ದೆಹಲಿ ಮಾಲಿನ್ಯ: ಉಸಿರುಗಟ್ಟುವ ಗಾಳಿಯಲ್ಲಿ ಆರೋಗ್ಯ ರಕ್ಷಣೆ ಹೇಗೆ? 12 ನಿಮಿಷದ ವರ್ಕೌಟ್ ಮತ್ತು ಮಾಸ್ಕ್ ಟಿಪ್ಸ್ -
ಡೇಟಿಂಗ್ ಆಪ್ ಬಳಸುವಾಗ ಎಚ್ಚರ: ಸೈಬರ್ ವಂಚನೆ ಮತ್ತು ಸೆಕ್ಸ್ಟಾರ್ಷನ್ನಿಂದ ಪಾರಾಗುವುದು ಹೇಗೆ? -
ಈರುಳ್ಳಿ ಬೆಲೆ ಇಳಿಕೆ: ಗೃಹಿಣಿಯರಿಗೆ ನಿರಾಳ, ಬಜೆಟ್ ಸ್ನೇಹಿ ಅಡುಗೆಗೆ ಈಗ ಸುಲಭ! -
ಕಿಚ್ಚ ಸುದೀಪ್-ಪ್ರೇಮ್ ಟೀಸರ್ ರಿಲೀಸ್: ಸಂಭ್ರಮಿಸಲು ಸಿದ್ಧರಾಗಿ, ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ ವಿಷಕಾರಿ ಗಾಳಿ: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 15 ನಿಮಿಷದ ವರ್ಕೌಟ್ -
ಮದುವೆ ಭರವಸೆ ವಂಚನೆ: ಹಣ ಕೊಟ್ಟು ರಾಜಿ ಮಾಡಿಕೊಳ್ಳುವವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ -
ಚಳಿಗಾಲದ ಸ್ಪೆಷಲ್: 30 ನಿಮಿಷದಲ್ಲಿ ತಯಾರಾಗುವ 5 ಹೈ-ಪ್ರೋಟೀನ್, ಡಯಾಬಿಟಿಸ್-ಸ್ಮಾರ್ಟ್ ಸೂಪ್ಗಳು! -
ಸಂವಿಧಾನ ದಿನ: ಬೆಳಿಗ್ಗೆ 11 ಗಂಟೆಗೆ ಪ್ರಸ್ತಾವನೆ ಓದಿ, ನಿಮ್ಮ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?
ತಜ್ಞರ ಪ್ರಕಾರ ದೇಹದ ಈ ಭಾಗಗಳನ್ನು ನಿತ್ಯ ಸ್ವಚ್ಚಗೊಳಿಸಲೇಬೇಕು..!
ಸ್ವಚ್ಛತೆ ಯಾವಾಗ ಜೀವನದ ಭಾಗವಾಗುತ್ತದೆ ಬಹುತೇಕ ಆರೋಗ್ಯ ಸಮಸ್ಯೆಗಳು ಹತ್ತಿರವೂ ಸುಳಿಯುವುದಿಲ್ಲ ಕೊರೊನಾ ಸೇರಿದಂತೆ. ಸ್ವಚ್ಚತೆಯ ಪ್ರಾಥಮಿಕ ಅಂಶ ನಿತ್ಯ ಶುದ್ಧವಾಗಿ ಸ್ನಾನ ಮಾಡುವುದು. ಪ್ರತಿದಿನ ಸ್ನಾನ ಮಾಡುವುದು ವೈಯಕ್ತಿಕ ನೈರ್ಮಲ್ಯದ ವಿಷಯ. ನಿಮ್ಮನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಲವಾರು ರೋಗಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಆದರೆ ನಿಮಗೆ ಗೊತ್ತೆ, ಕೆಲವು ವರದಿಗಳ ಪ್ರಕಾರ ಪ್ರತಿದಿನ ನೀವು ನಿಮ್ಮ ದೇಹವನ್ನು ಸ್ಕ್ರಬ್ ಮಾಡುವ ಅಗತ್ಯವಿಲ್ಲ. ಬದಲಾಗಿ ನಿತ್ಯ ನಾರಿನಿಂದ ಉಜ್ಜುವುದು ಅನಾರೋಗ್ಯಕ್ಕೆ ಸಹ ಕಾರಣವಾಗುತ್ತದೆ ಎನ್ನಲಾಗುತ್ತದೆ. ಹೆಚ್ಚು ಸ್ನಾನ ಮಾಡುವುದರಿಂದ ಆರೋಗ್ಯಕರ ಬ್ಯಾಕ್ಟೀರಿಯಾ ಸಹ ತೊಳೆಯಬಹುದು, ಚರ್ಮವು ಶುಷ್ಕ, ಬಿರುಕು, ತುರಿಕೆ ಮತ್ತು ಕಿರಿಕಿರಿಯುಂಟು ಮಾಡುತ್ತದೆ.
ನೀವು ಪ್ರತಿದಿನ ಸ್ನಾನ ಮಾಡುತ್ತೀರೋ ಇಲ್ಲವೋ ಎಂಬುದು ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು. ಆದರೆ ಒಂದನ್ನು ಮಾತ್ರ ನೆನಪಿಡಿ, ತಜ್ಞರ ಸಲಹೆಯ ಪ್ರಕಾರ ದೇಹದ ಈ ಮೂರಯ ಭಾಗಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲೇಬೇಕು. ಇದು ಬಹಳ ಮುಖ್ಯವಾಗುತ್ತದೆ, ಅವು ಯಾವುವು ಎಂದು ಮುಂದೆ ತಿಳಿಯೋಣ:

ಕೈ ಸಂದುಗಳು / ಕಂಕುಳು
ನಿಮ್ಮ ದೇಹದದಿಂದ ಅತಿ ಹೆಚ್ಚು ಬೆವರು ಹೊರಬರುವ ಸ್ಥಳ ಕೈ ಸಂದುಗಳು. ನೀವು ಬಹಳಷ್ಟು ಬೆವರಿದಾಗ ಚರ್ಮದ ಮೇಲೆ ಬ್ಯಾಕ್ಟೀರಿಯಾದ ಶೇಖರಣೆಯಿಂದಾಗಿ ನಿಮ್ಮ ದೇಹವು ಅಹಿತಕರ ವಾಸನೆಯನ್ನು ಉಂಟು ಮಾಡುತ್ತದೆ. ಕೈ ಸಂದುಗಳಂತಹ ಚರ್ಮದ ಮಡಿಕೆಗಳಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯು ಅತ್ಯಧಿಕವಾಗಿದೆ. ಇದು ನಿಮ್ಮ ಕಂಕುಳನ್ನು ತುಂಬಾ ವಾಸನೆ ಬರುವಂತೆ ಮಾಡುತ್ತದೆ, ತುರಿಕೆ ಮತ್ತು ಉರಿಯೂತಕ್ಕೆ ಕಾರಣವಾಗುತ್ತದೆ. ಪ್ರತಿದಿನ ಸೋಪು ಮತ್ತು ನೀರಿನಿಂದ ನಿಮ್ಮ ಕಂಕುಳನ್ನು ಸ್ವಚ್ಛಗೊಳಿಸುವುದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಮತ್ತು ಅದರ ಬೆಳವಣಿಗೆಯನ್ನು ತಡೆಯುತ್ತದೆ. ಇದು ಚರ್ಮದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ದೇಹದ ವಾಸನೆಯನ್ನು ಉತ್ತಮಗೊಳಿಸುತ್ತದೆ ಅಲ್ಲದೆ, ನಿಮ್ಮನ್ನು ತಾಜಾ ಆಗಿಡುತ್ತದೆ.

ತೊಡೆಸಂದು
ನೀವು ಪ್ರತಿದಿನ ಸ್ನಾನ ಮಾಡದಿರಲು ನಿರ್ಧರಿಸಿದರೂ ಸಹ, ನಿಮ್ಮ ತೊಡೆಸಂದು ಪ್ರದೇಶವನ್ನು ಸ್ವಚ್ಛಗೊಳಿಸಬೇಕು ಮತ್ತು ನಿಮ್ಮ ಒಳ ಉಡುಪುಗಳನ್ನು ಪ್ರತಿದಿನ ಬದಲಾಯಿಸಬೇಕು. ಜನನಾಂಗದ ಸುತ್ತ ಮಡಚಿಕೊಂಡಿರುವ ಚರ್ಮ ಮತ್ತು ಕೂದಲು ಲಕ್ಷಾಂತರ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ, ಇದು ಸೋಂಕು ಮತ್ತು ವಾಸನೆಗೆ ಕಾರಣವಾಗುತ್ತದೆ. ಇದು ಗಂಭೀರ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಸಹ ನಿಮಗೆ ಉಂಟುಮಾಡಬಹುದು.
ಆದ್ದರಿಂದ ಬೆಚ್ಚಗಿನ ನೀರು ಮತ್ತು ಸಾಬೂನಿನಿಂದ ನಿಮ್ಮ ಖಾಸಗಿ ಭಾಗಗಳನ್ನು ಸ್ವಚ್ಛಗೊಳಿಸುವುದರಿಂದ ಸೂಕ್ಷ್ಮ ಚರ್ಮವನ್ನು ಮೃದುವಾಗಿ ಮತ್ತು ಬೆವರು ಮುಕ್ತವಾಗಿಡಬಹುದು.

ಪಾದಗಳು
ಪಾದಗಳು ದೇಹದ ಅತ್ಯಂತ ನಿರ್ಲಕ್ಷಿಸಲ್ಪಟ್ಟ ಭಾಗಗಳಲ್ಲಿ ಒಂದಾಗಿದೆ, ವಿಶೇಷವಾಗಿ ನೈರ್ಮಲ್ಯಕ್ಕೆ ಬಂದಾಗ. ಜನರು ಸಾಮಾನ್ಯವಾಗಿ ಶವರ್ನಲ್ಲಿ ಜಿಗಿಯುತ್ತಾರೆ, ಇಡೀ ದೇಹವನ್ನು ಸ್ಕ್ರಬ್ ಮಾಡುತ್ತಾರೆ ಮತ್ತು ಇಡೀ ದೇಹದ ಕಲ್ಮಶ ಪಾದದ ಮೂಲಕ ಕೆಳಗೆ ಹೋಗುತ್ತದೆ, ಅಂತಿಮವಾಗಿ ಪಾದವನ್ನು ತೊಳೆಯುವವರು ಕಡಿಮೆಯೇ. ಆದರೆ ನಿಮ್ಮ ಪಾದಗಳಿಗೆ ಅದಕ್ಕಿಂತ ಹೆಚ್ಚಿನ ಗಮನ ಖಂಡಿತ ಬೇಕು. ಇದು ನಿಮ್ಮ ಬೆವರು ಸಂಗ್ರಹಗೊಳ್ಳುವ ಸಾಮಾನ್ಯ ಪ್ರದೇಶವಾಗಿದೆ, ವಿಶೇಷವಾಗಿ ನೀವು ದಿನವಿಡೀ ಸಾಕ್ಸ್ ಧರಿಸಿದರೆ ಪ್ರತಿದಿನ ಅವುಗಳನ್ನು ಸ್ವಚ್ಛಗೊಳಿಸುವುದರಿಂದ ದುರ್ವಾಸನೆ ತಡೆಯಬಹುದು. ಸ್ವಚ್ಛತೆಯಿಂದಾಗಿ ಬೆರಳುಗಳ ಸಂದಿಯಲ್ಲಿನ ಕಸ, ಧೂಳು ಇತರ ಸೋಂಕು ಹರಡದಂತೆ ತಡೆಯುತ್ತದೆ.

ನೀವು ಸ್ವಚ್ಛಗೊಳಿಸಲೇಬೇಕಾದ ಇತರ ದೇಹದ ಭಾಗಗಳು
ನಿಸ್ಸಂಶಯವಾಗಿ, ನಾವು ಸ್ನಾನಕ್ಕೆ ಬಂದಾಗ ನಾವು ದೇಹದ ಪ್ರತಿಯೊಂದು ಭಾಗಕ್ಕೂ ಸೋಪ್ ಅನ್ನು ಅನ್ವಯಿಸಲು ಪ್ರಯತ್ನಿಸುತ್ತೇವೆ ಮತ್ತು ಅದನ್ನು ಚೆನ್ನಾಗಿ ಸ್ಕ್ರಬ್ ಮಾಡುತ್ತೇವೆ. ಆದರೆ ದೇಹದ ಕೆಲವು ಭಾಗಗಳಿಗೆ ಹೆಚ್ಚಿನ ಕಾಳಜಿಯ ಅಗತ್ಯವಿರುತ್ತದೆ ಮತ್ತು ಸ್ನಾನ ಮಾಡುವಾಗ, ನೀವು ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಕಂಕುಳು, ತೊಡೆಸಂದು ಮತ್ತು ಪಾದಗಳನ್ನು ಹೊರತುಪಡಿಸಿ, ಬ್ಯಾಕ್ಟೀರಿಯಾದ ಆಶ್ರಯ ಪ್ರದೇಶವೆಂದು ಪರಿಗಣಿಸಲಾದ ದೇಹದ ಕೆಲವು ಭಾಗಗಳು ಇಲ್ಲಿವೆ:
ಬೆರಳಿನ ಉಗುರುಗಳ ಅಡಿ
ಕಿವಿಗಳ ಹಿಂದೆ
ಹೊಕ್ಕಳು
ನಿಮ್ಮ ಕತ್ತಿನ ಹಿಂಭಾಗ



Click it and Unblock the Notifications
