Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಪಾದಗಳಲ್ಲಿ ನೋವೇ? ಈ ಮನೆಮದ್ದು ಟ್ರೈ ಮಾಡಿ
ಕೆಲವರಿಗೆ ಪಾದಗಳಲ್ಲಿ ವಿಪರೀತ ನೋವು ಕಾಡುತ್ತಿರುತ್ತದೆ. ಅದು ಕೆಲವೊಮ್ಮೆ ಒಂದೆರಡು ದಿನಗಳಲ್ಲಿ ಮಾಯವಾಗುವುದು, ಇನ್ನು ಕೆಲವೊಮ್ಮೆ ಹಲವು ದಿನಗಳಾದರೂ ನೀವು ಹಾಗೆಯೇ ಇರುತ್ತದೆ. ನಡೆದಾಡುವಾಗ ತುಂಬಾ ನೋವು ಉಂಟಾಗುವುದು.

ಹೈಹೀಲ್ಡ್ ಚಪ್ಪಲಿ ಧರಿಸುವುದರಿಂದ, ಕೆಲವೊಂದು ದೈಹಿಕ ವ್ಯಾಯಾಮಗಳು ಕೆಲವೊಂದು ಕಾಯಿಲೆಗಳಾದ ಸಂಧಿವಾತ, ಒಬೆಸಿಟಿ, ನರಗಳಲ್ಲಿ ಹಾನಿ, ಕಾಲುಗಳಲ್ಲಿ ಕಜ್ಜಿ, ನರಹುಲಿಗಳು ಮುಂತಾದ ಸಮಸ್ಯೆಯಿಂದ ಹಿಮ್ಮಡಿಯಲ್ಲಿ ನೋವು ಕಾಣಿಸಿಕೊಳ್ಳುವುದು.
ಪಾದಗಳಲ್ಲಿ ಸ್ವಲ್ಪ ನೋವಿದ್ದರೆ ಅವುಗಳನ್ನು ಹೋಗಲಾಡಿಸಲು ಈ ಮನೆಮದ್ದುಗಳನ್ನು ಟ್ರೈ ಮಾಡಬಹುದು.

1. ಅರಿಶಿಣ
ಮೂಳೆ ಸಂಬಂಧಿತ ಸಮಸ್ಯೆಗಳಿಗೆ ಅರಿಶಿಣ ಕೂಡ ಅತ್ಯುತ್ತಮವಾದ ಮನೆಮದ್ದಾಗಿದೆ. ಇದು ಊತ, ನೋವು ಕಡಿಮೆ ಮಾಡುವಲ್ಲಿ ಸಹಕಾರಿ. ಪಾದಗಳಲ್ಲಿ ನೋವು ಕಂಡು ಬಂದರೆ ದಿನದಲ್ಲಿ 8ಗ್ರಾಂನಷ್ಟು ಅರಿಶಿಣ ನಮ್ಮ ಆಹಾರಕ್ರಮದಲ್ಲಿ ಸೇರಿಸಿ, ಸಂಧಿವಾತ ಸಮಸ್ಯೆ ಇರುವವರು ದಿನದಲ್ಲಿ 2ಗ್ರಾಂನಷ್ಟು ಅರಿಶಿಣ ಸೇವಿಸುವುದು ಒಳ್ಳೆಯದು.

2. ಶುಂಠಿ ಕಂಪ್ರೆಸ್
ಒಂದು ಚಿಕ್ಕ ತುಂಡು ಅರಿಶಿಣವನ್ನು ತುರಿದು ಒಂದು ಬೌಲ್‌ನಲ್ಲಿ ಹಾಕಿ, ಅದಕ್ಕೆ ಎರಡು ಕಪ್ ನೀರು, 2 ಚಮಚ ಚಕ್ಕೆ ಪುಡಿ ಹಾಕಿ ಆ ಮಿಶ್ರಣವನ್ನು ಸ್ವಲ್ಪ ಹೊತ್ತು ಬಿಡಿ. ಅದಕ್ಕೆ ಒಂದು ಕಾಟನ್ ಬಟ್ಟೆ ಅದ್ದಿ ಸ್ವಲ್ಪ ನೀರು ಹಿಂಡಿ, ಆ ಬಟ್ಟೆಯನ್ನು ಪಾದಗಳಿಗೆ ಒತ್ತಿ, ಈ ರೀತಿ 10-15ನಿಮಿಷ ಈ ರೀತಿ ಮಾಡಿ, ಈ ರೀತಿ ದಿದನಲ್ಲಿ ಮೂರು ಬಾರಿ ಮಾಡಿ ನೋವು ಕಡಿಮೆಯಾಗುವುದು.

3. ಆ್ಯಪಲ್ ಸೈಡರ್ ವಿನೆಗರ್
ಪಾದಗಳಲ್ಲಿ ನೋವು ಉಂಟಾಗುವುದನ್ನು ತಡೆಗಟ್ಟುವಲ್ಲಿ ಆ್ಯಪಲ್ ಸೈಡರ್ ವಿನೆಗರ್ ಪರಿಣಾಮಕಾರಿಯಾಗಿದೆ. ಒಂದು ಚಮಚ ಆ್ಯಪಲ್ ಸೈಡರ್ ವಿನೆಗರ್ ಅನ್ನು ಬೆಳಗ್ಗೆ ಒಂದು ಲೋಟ ಬಿಸಿ ನೀರಿಗೆ ಹಾಕಿ ಅದಕ್ಕೆ ಸ್ವಲ್ಪ ಜೇನು ಹಾಕಿ ಕುಡಿಯಿರಿ. ನಂತರ ಅರ್ಧ ಬಕೆಟ್ ಬಿಸಿ ನೀರಿಗೆ 1/4 ಕಪ್ ವಿನೆಗರ್ ಹಾಕಿ ಅದರಲ್ಲಿ ಪಾದಗಳನ್ನು ಇಟ್ಟು 15 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಿ. ಈ ರೀತಿ ಮಾಡುವುದರಿಂದ ಪಾದಗಳಲ್ಲಿ ನೋವು ಕಡಿಮೆಯಾಗುವುದು.

4. ಬೆಳ್ಳುಳ್ಳಿ
ಒಂದು ಅಧ್ಯಯನದಲ್ಲಿ ಪಿಎಓಡಿ (peripheral arterial occlusive diseases) ಸಮಸ್ಯೆ ಇರುವ 78 ರೋಗಿಗಳಿಗೆ ಪ್ರತಿದಿನ 400ಮಿಗ್ರಾಂ ಬೆಳ್ಳುಳ್ಳಿ ಪುಡಿ ನೀಡಲಾಗಿತ್ತು. ಇದು ರಕ್ತಸಂಚಲನಕ್ಕೆ ಸಹಕಾರಿಯಾಗಿ ಅವರ ಪಾದಗಳಲ್ಲಿದ್ದ ನೋವು ಕಡಿಮೆಯಾಗುವಲ್ಲಿ ಸಹಕಾರಿಯಾಯಿತು ಎಂಬುವುದು ತಿಳಿದು ಬಂತು.
ಪಾದ ನೋವು ಇರುವವರು 3-4 ಎಸಳು ಬೆಳ್ಳುಳ್ಳಿಯನ್ನು ಸಾಸಿವೆ ಎಣ್ಣೆಯಲ್ಲಿ ಕುದಿಸಿ, ಆ ಎಣ್ಣೆಯಿಂದ ಪಾದಗಳಿಗೆ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ಪಾದಗಳಲ್ಲಿ ಕಂಡು ಬರುತ್ತಿದ್ದ ನೋವು ಕಡಿಮೆಯಾಗುವುದು. ರಾತ್ರಿ ಮಲಗುವಾಗ ಈ ರೀತಿ ಮಸಾಜ್ ಮಾಡಿ ಮಲಗಿದರೆ ನೋವು ಕಡಿಮೆಯಾಗಿ ನಿದ್ದೆ ಚೆನ್ನಾಗಿ ಬರುತ್ತದೆ.

5. ಸಾಸಿವೆ
ಸಾಸಿವೆಯನ್ನು ಹಲವಾರು ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಲಾಗುವುದು. ಅರ್ಧ ಬಕೆಟ್ ನೀರಿಗೆ ಒಂದು ಮುಷ್ಠಿಯಷ್ಟು ಸಾಸಿವೆ ಹಾಕಿ ಆ ನೀರಿನಲ್ಲಿ ಪಾದಗಳನ್ನು ಊರಿ ಅರ್ಧ ಗಂಟೆ ವಿಶ್ರಾಂತಿ ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ಕೂಡ ನೋವು ಕಡಿಮೆಯಾಗುವುದು.

6. ಇತರ ಸಲಹೆಗಳು:
- ಫಿಶ್ ಆಯಿಲ್ ಸೇವಿಸಿ
- ಬೆಳಗ್ಗೆ ಸ್ವಲ್ಪ ಹೊತ್ತು ಸೂರ್ಯನ ಬಿಸಿಲಿಗೆ ನಿಲ್ಲಿ
- ಮಲಗುವ ಮುನ್ನ ಎಳ್ಳೆಣ್ಣೆಯಿಂದ ಪಾದಗಳಿಗೆ ಮಸಾಜ್ ಮಾಡಿ
- ಅಡುಗೆ ಸೋಡಾವನ್ನು ಬಿಸಿ ನೀರಿಗೆ ಹಾಕಿ ಅದರಲ್ಲಿ ಪಾದಗಳನ್ನು ಸ್ವಲ್ಪ ಹೊತ್ತು ಇಡುವುದರಿಂದಲೂ ನೋವು ಕಡಿಮೆಯಾಗುವುದು,
- ಆಹಾರದಲ್ಲಿ ಹಸಿ ಮೆಣಸಿನಕಾಯಿ ಬಳಸಿ
- ಇನ್ನು ನೋವಿರುವ ಕಡೆ ನೀಲಗಿರಿ ಎಣ್ಣೆ ಹಚ್ಚುವುದರಿಂದಲೂ ನೋವು ಕಡಿಮೆಯಾಗುವುದು.
- ಅಡುಗೆ ಮಾಡಲು ಆಲೀವ್ ಎಣ್ಣೆ ಬಳಸಿ
ಸಲಹೆ: ಮನೆಮದ್ದುಗಳಿಂದ ನೋವು ಕಡಿಮೆಯಾಗದಿದ್ದರೆ ಬೇರೆ ಯಾವುದೋ ರೋಗ್ಯ ಸಮಸ್ಯೆಯಿಂದಾಗಿ ಆ ನೋವು ಕಾಡುತ್ತಿರಬಹುದು, ವೈದ್ಯರಿಗೆ ತೋರಿಸಿ, ಚಿಕಿತ್ಸೆ ಪಡೆದುಕೊಳ್ಳಿ.



Click it and Unblock the Notifications