Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಮಲಗುವ ಮೊದಲು ವೈನ್ ಕುಡಿದ್ರೆ ಹೀಗೆಲ್ಲಾ ಆಗುತ್ತಾ?
ದ್ರಾಕ್ಷಾರಸ ಅಥವಾ ವೈನ್ ಅನಾದಿ ಕಾಲದಿಂದಲೂ ಜನರಿಗೆ ಪ್ರೀಯವಾದ ಪಾನಿಯ ಅಂದ್ರೆ ತಪ್ಪಾಗೋದಿಲ್ಲ. ವೈನ್ ಕೇವಲ ಮನೋರಂಜನಾ ಉದ್ದೇಶದಿಂದ ಮಾತ್ರ ಕುಡಿಯೋದಲ್ಲ. ಇದರಿಂದ ಅನೇಕ ರೀತಿಯ ಆರೋಗ್ಯಕರ ಲಾಭಗಳು ಕೂಡ ಇದೆ.

ನಮೆಗೆಲ್ಲಾ ಗೊತ್ತಿರುವ ಹಾಗೆ ದ್ರಾಕ್ಷಿಯನ್ನು ಹುದುಗಿಸಿ ವೈನ್ ತಯಾರಿಸಲಾಗುತ್ತದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳು ಕೂಡ ಇದೆ. ಆದ್ರೆ ಮಲಗುವ ಮೊದಲು ವೈನ್ ಕುಡಿಯುವ ಅಭ್ಯಾಸ ಒಳ್ಳೆಯದಾ? ಅಷ್ಟಕ್ಕೂ ರಾತ್ರಿ ಮಲಗುವ ಮೊದಲು ಎರಡು ಲೋಟ ವೈನ್ ಕುಡಿದ್ರೆ ಏನಾಗುತ್ತೆ ಗೊತ್ತಾ? ಇದರಿಂದ ಏನಾದ್ರು ಅಡ್ಡ ಪರಿಣಾಮಗಳಾಗುತ್ತಾ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಅನ್ನೋದನ್ನ ತಿಳ್ಕೊಳ್ಳೋಣ.

ರಾತ್ರಿ ವೈನ್ ಕುಡಿದ್ರೆ ನಿದ್ದೆ ಚೆನ್ನಾಗಿ ಬರುತ್ತಾ?
ಅನೇಕರಲ್ಲಿ ಒಂದು ತಪ್ಪು ಕಲ್ಪನೆ ಇದೆ. ಅದೇನೆಂದರೆ ರಾತ್ರಿ ಮಲಗುವ ಮೊದಲು ಒಂದು ಅಥವಾ ಎರಡು ಲೋಟ ವೈನ್ ಕುಡಿದ್ರೆ ಒತ್ತಡ ಕಡಿಮೆಯಾಗುತ್ತೆ ಮತ್ತು ಹಾಯಾಗಿ ನಿದ್ದೆ ಮಾಡಬಹುದು ಅಂದುಕೊಂಡಿರ್ತಾರೆ. ಆದರೆ ತಜ್ಞರು ಮತ್ತು ಸಂಶೋದಕರು ಹೇಳುವ ಪ್ರಕಾರ ಇದು ಸುಳ್ಳು.
ಹೌದು, ಅನೇಕರು ಚೆನ್ನಾಗಿ ನಿದ್ದೆ ಬರುತ್ತೆ ಅಂತ ದ್ರಾಕ್ಷಾರಸವನ್ನು ಕುಡಿಯುತ್ತಾರೆ. ಆದ್ರೆ ವೈನ್ ಕುಡಿದ್ರೆ ನಿದ್ರೆಯ ಹೋಮಿಯೋಸ್ಟಾಸಿಸ್‌ಗೆ (homeostasis) ಅಡ್ಡಿಪಡಿಸುತ್ತಂತೆ. ವೈನ್‌ನಲ್ಲಿ ನಿದ್ರೆ ಮತ್ತು ಎಚ್ಚರವನ್ನು ನಿಯಂತ್ರಿಸುವ ಗುಣ ಇದೆಯಂತೆ. ಹಾಗಾಗಿ ವೈನ್ ಕುಡಿದರೆ ಹಾಯಾಗಿ ನಿದ್ದೆ ಬರುತ್ತೆ ಅನ್ನುವ ನಿಮ್ಮ ಕಲ್ಪನೆ ತಪ್ಪು.

ರಾತ್ರಿ ಮಲಗುವ ಮೊದಲು ಎರಡು ಲೋಟ ವೈನ್ ಕುಡಿದರೆ ಏನಾಗುತ್ತೆ?
ನಿವೇನಾದರೂ ಒಂದು ಲೋಟ ವೈನ್ ಕುಡಿದರೆ ಅದು ನಿಮ್ಮ ನಿದ್ರೆ ಮತ್ತು ಜಾಗರೂಕತೆಯನ್ನು ನಿಯಂತ್ರಿಸುವ ಕಾರ್ಯವಿಧಾನದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಯೊಬ್ಬ ಬೇಗನೆ ನಿದ್ರೆಗೆ ಜಾರಿದರೆ ನಿದ್ರೆಯ ಹೋಮಿಯೋಸ್ಟಾಸಿಸ್ ಹಾರ್ಮೋನು ಜಾಗೃತಗೊಳ್ಳುತ್ತದೆ. ಇದರಿಂದಾಗಿ ಆತ ಮಧ್ಯರಾತ್ರಿ ಅಥವಾ ಮುಂಜಾನೆ ಎಚ್ಚರಗೊಳ್ಳುವ ಸಾಧ್ಯತೆ ಹೆಚ್ಚು. ವೈನ್ ಕುಡಿದ ವ್ಯಕ್ತಿಗೆ ನಿದ್ರಿಸಲು ಒತ್ತಡ ಹೇರುತ್ತದೆ.
ವೈನ್ ಸೇವಿಸುವುದರಿಂದ ದೇಹದಿಂದ ಆಗಾಗ್ಗೆ ಮೂತ್ರ ಹೊರಹಾಕುತ್ತಲೇ ಇರಬೇಕು. ಈ ವೇಳೆ ವ್ಯಕ್ತಿಯ ನಿದ್ರಿಸುವ ದಿನನಿತ್ಯದ ವಿಧಾನಕ್ಕೆ ಅಡ್ಡಿಯುಂಟಾಗುತ್ತದೆ. ಸಂಶೋಧನೆಯ ಪ್ರಕಾರ ವೈನ್ ಕುಡಿದ್ರೆ ಆದಷ್ಟು ಬೇಗ ನಿದ್ದೆಗೆ ಜಾರಬಹುದು ಅನ್ನೋದು ಎಷ್ಟು ಸತ್ಯವೋ ಇದರ ಪರಿಣಾಮ ಮಧ್ಯರಾತ್ರಿ ಅಥವಾ ಬೆಳ್ಳಂಬೆಳಗ್ಗೆ ಎಚ್ಚರವಾಗುತ್ತದೆ. ಇದಾದ ಬಳಿಕ ಮತ್ತೆ ನಿದ್ರೆಗೆ ಜಾರುವುದು ತುಂಬಾನೇ ಕಷ್ಟ. ಇನ್ನೊಂದು ವಿಚಾರ ಅಂದ್ರೆ ದಿನನಿತ್ಯ ಮಲಗುವ ಮೊದಲು ವೈನ್ ಕುಡಿಯುವವರು ಒಂದು ಪಕ್ಷ ವೈನ್ ಕುಡಿಯುವುದನ್ನು ಬಿಟ್ಟರೆ ನಿದ್ರಾಹೀನತೆಯಂತ ಸಮಸ್ಯೆಯನ್ನು ಅನುಭವಿಸಬೇಕಾಗುತ್ತಂತೆ.

ವೈನ್ ಬದಲಾಗಿ ಬೇರೆ ಏನನ್ನು ಸೇವಿಸಿದರೆ ಚೆನ್ನಾಗಿ ನಿದ್ದೆ ಬರುತ್ತದೆ
ವೈನ್ ಸೇವಿಸದರೆ ನಿದ್ದೆ ಬರುತ್ತದೆ ನಿಜ. ಆದರೆ ಅದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಖಂಡಿತ ಒಳ್ಳೆಯದಲ್ಲ. ನಿಮ್ಮನ್ನು ಒತ್ತಾಯ ಪೂರ್ವಕವಾಗಿ ಮಲಗಲು ಪ್ರೇರೆಪಿಸುತ್ತದೆ. ಒಂದು ವೇಳೆ ನಿಮಗೆ ರಾತ್ರಿ ವೇಳೆ ನಿದ್ದೆ ಬರುವುದಿಲ್ಲ ಅಂತಾದರೆ ಖಂಡಿತ ನೀವು ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆದುಕೊಳ್ಳಿ.

ಸುಖನಿದ್ದೆಗೆ ಈ ಟಿಪ್ಸ್‌ನ ಪಾಲೋ ಮಾಡಿ
* ವಾಲ್‌ನಟ್ ನಿದ್ರಾಹೀನತೆಗೆ ಸಹಾಯ ಮಾಡುತ್ತದೆ. ಏಕೆಂದರೆ ಇದು ಪ್ರೋಟಿನ್ ಮತ್ತು ಪೊಟ್ಯಾಷಿಯಂ ಅನ್ನು ಒಳಗೊಂಡಿರುತ್ತದೆ. ಮತ್ತು ನೈಸರ್ಗಿಕವಾಗಿ ನಿದ್ರಿಸಲು ಸಹಕರಿಸುತ್ತದೆ.
* ಸಂಜೆ ಸಲಾಡ್ ಸೇವಿಸುವುದರಿಂದ ನಿಮ್ಮ ಮೆದುಳಿಗೆ ವಿಶ್ರಾಂತಿ ನೀಡಲು ನೆರವಾಗುತ್ತದೆ
* ಸರಿಯಾಗಿ ನಿದ್ದೆ ಮಾಡಲು ನಮ್ಮ ದೇಹಕ್ಕೆ ವಿಟಮಿನ್ ಬಿ6 ನ ಅಗತ್ಯವಿದೆ. ಇದು ಮೆಲಟೋನಿನ್ ಮತ್ತು ಸೆರಟೋನಿನ್ ಅನ್ನು ಬಿಡುಗಡೆಗೊಳಿಸುತ್ತದೆ. ಬಾಳೆಹಣ್ಣು ಮತ್ತು ಬಿಸಿಯಾದ ಹಾಲು ಕುಡಿಯುವುದರಿಂದ ದೇಹವು ವಿಶ್ರಾಂತಿದಾಯಕವಾಗಿ ನಿದ್ರಿಸಲು ಸಹಕರಿಸುತ್ತದೆ.
* ಬ್ರೆಡ್, ಪಾಸ್ತಾದಂತಹ ಆಹಾರಗಳು ಕೂಡ ನಿದ್ರಿಸಲು ಸಹಕರಿಸುತ್ತದೆ. ಇದನ್ನು ಸೇವಿಸಿದ ಮೇಲೆ ರಕ್ತದಲ್ಲಿನ ಸಕ್ಕರೆ ಹಾಗೂ ಇನ್ಸುಲಿನ್ ಮಟ್ಟ ಹೆಚ್ಚಾಗುತ್ತದೆ. ಮತ್ತು ಇದು ನಮ್ಮನ್ನು ದಣಿಯುವಂತೆ ಮಾಡುತ್ತದೆ.
* ಸರಿಯಾದ ನಿದ್ರಾಕ್ರಮ ನಿಮ್ಮದಾಗಬೇಕೆಂದರೆ ನೀವು ನಿದ್ರೆಗೆ ಜಾರುವ ಒಂದು ಗಂಟೆಯ ಮೊದಲು ಟಿವಿ, ಕಂಪ್ಯೂಟರ್, ಮೊಬೈಲ್ ಅನ್ನು ದೂರವಿಡಬೇಕು. ಇದರಿಂದ ಪ್ರತಿನಿತ್ಯ ಆರೋಗ್ಯಕರ ನಿದ್ದೆ ನಿಮ್ಮದಾಗುತ್ತದೆ.
* ವ್ಯಾಯಾಮ ಮತ್ತು ಯೋಗ ಪ್ರತಿನಿತ್ಯ ಮಾಡುವುದರಿಂದ ಕೂಡ ಆರೋಗ್ಯಕರವಾಗಿ ನಿದ್ರಿಸಬಹುದು.
* ಬಿಸಿ ನೀರಿನಿಂದ ಸ್ನಾನ ಮಡುವುದರಿಂದ ನಮ್ಮ ದೇಹದ ಉಷ್ಣತೆ ಕಡಿಮೆಯಾಗಿ ಆದಷ್ಟು ಬೇಗ ನಮ್ಮನ್ನು ನಿದ್ರೆಗೆ ತಳ್ಳುತ್ತದೆ.
ಕೊನೆಯದಾಗಿ ಏನೆಂದರೆ ಪ್ರತಿನಿತ್ಯ ಮಲಗುವ ಮೊದಲು ವೈನ್ ಕುಡಿಯುವುದು ಖಂಡಿತ ಆರೋಗ್ಯಕರ ಅಭ್ಯಾಸವಲ್ಲ. ಇದು ನಿಮ್ಮನ್ನು ಮಧ್ಯವ್ಯಸನಿಗಳನ್ನಾಗಿ ಮಾಡಬಹುದು. ಅಷ್ಟೇ ಅಲ್ಲ, ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ ಆರೋಗ್ಯದ ಸಮಸ್ಯೆಯೂ ಎದುರಾಗಬಹುದು.



Click it and Unblock the Notifications