Latest Updates
-
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ!
ಕೊರೊನಾ ಬಂದ ಬಳಿಕ ಜನರಲ್ಲಿ ಹೆಚ್ಚಿದೆ ಡೂಮ್‌ಸ್ಕ್ರೋಲಿಂಗ್, ಇದರಿಂದಾಗುವ ಅಪಾಯವೇನು?
ಪ್ರತಿ ದಿನ ಬೆಳಗ್ಗೆ ಎದ್ದು ಇತರರಂತೆ ನಾವು ನಮ್ಮ ಪಾಡಿಗೆ ನಮ್ಮ ಕೆಲಸ ಮಾಡಿಕೊಂಡು ಕಷ್ಟಸುಖಗಳ ಸಮಭಾಗಿತ್ವದಲ್ಲಿ ಅಚ್ಚುಕಟ್ಟಾಗಿ ಜೀವನ ನಡೆಸುತ್ತಿದ್ದ ಕಾಲ ಕೇವಲ ಒಂದು ವರ್ಷದ ಹಿಂದಿನವರೆಗೂ ಎಷ್ಟು ಚೆನ್ನಾಗಿತ್ತು. ಅಲ್ಲವೇ? ಅಕ್ಕಪಕ್ಕದವರ ಅಥವಾ ಬೇರೆಯವರ ಜೊತೆ ಸಣ್ಣ ಪುಟ್ಟ ಜಗಳ, ಮನಸ್ತಾಪ ಇದ್ದರೂ ಅದನ್ನು ಅಲ್ಲೇ ಸರಿ ಮಾಡಿಕೊಂಡು ಮತ್ತೊಮ್ಮೆ ಹಾಗೋ ಹೀಗೋ ಖುಷಿಯಾಗಿ ಜೀವನ ನಡೆಸುವತ್ತ ಮನಸ್ಸು ಮಾಡಿ ಕಾಲ ಕಳೆಯುತ್ತಿದ್ದೆವು.
ಆಗಾಗ ಸಣ್ಣ ಪುಟ್ಟ ಹಬ್ಬ ಹರಿದಿನಗಳನ್ನು ಬಂಧು ಬಾಂಧವರ ಜೊತೆ ಸೇರಿ ಆಚರಿಸಿ ಖುಷಿಯಾಗಿ ಸಂಭ್ರಮವನ್ನು ಹಂಚಿಕೊಂಡು, ರಜೆ ಸಿಕ್ಕಾಗ ಅಲ್ಲಿ ಇಲ್ಲಿ ಚಿಕ್ಕ ಪುಟ್ಟ ಪ್ರವಾಸ ಕೈಗೊಂಡು ಹೇಗೋ ಕಷ್ಟದಲ್ಲೂ ಆರಾಮದಾಯಕತೆಯನ್ನು ಹುಡುಕಿಕೊಂಡು ದಿನ ದೂಡುತ್ತಿದ್ದೆವು.
ಇಷ್ಟು ಮುಗ್ಧರಾಗಿದ್ದ ನಮ್ಮೆಲ್ಲರ ಬಾಳಿನಲ್ಲಿ ಕಣ್ಣಿಗೆ ಕಾಣದ ಅಗೋಚರ ದುಷ್ಟ ಶಕ್ತಿಯೊಂದು ಪ್ರವೇಶ ಮಾಡಿ ಅತ್ಯಂತ ಕಡಿಮೆ ಸಮಯದಲ್ಲಿ ಅದೆಷ್ಟೋ ವರ್ಷಗಳಿಂದ ಕಷ್ಟ ಪಟ್ಟು ಬದುಕು ಕಟ್ಟಿಕೊಂಡಿದ್ದ ಎಲ್ಲರ ಭವಿಷ್ಯವನ್ನು ಬುಡ ಮೇಲು ಮಾಡಿಬಿಟ್ಟಿದೆ. ಅದುವೇ ವಿಶ್ವದ ಮೂಲೆ ಮೂಲೆಗಳಿಂದ ಹರಿದು ಬರುತ್ತಿರುವ ಛೀಮಾರಿಗಳನ್ನು ಚಿಲಿಪಿಲಿಯ ಸುಮಧುರ ನಾದವೆಂದು ಶಾಂತವಾಗಿ ಆಲಿಸುತ್ತಿರುವ ಚೀನಾ ದೇಶದಿಂದ ಹಾರಿ ಬಂದ ' ಕೊರೋನಾ ' ಎಂಬ ಮಹಾಮಾರಿ.
ಇಷ್ಟು ದಿನಗಳ ಕಾಲ ತಮ್ಮದೇ ಹಣವನ್ನು ಮನಸೋಇಚ್ಚೆ ಸರಾಗವಾಗಿ ಖರ್ಚು ಮಾಡುತ್ತಿದ್ದ ಶ್ರೀಮಂತರೂ ಕೂಡ ಇಂದು ಮಧ್ಯಮ ವರ್ಗದವರ ರೀತಿ ಹಣ ಖರ್ಚು ಮಾಡಲು ಒಂದೊಂದು ರೂಪಾಯಿಗೂ ಲೆಕ್ಕ ಹಾಕಬೇಕಾದ ಮನಸ್ಥಿತಿ ಮತ್ತು ಪರಿಸ್ಥಿತಿ ಎದುರಾಗಿದೆ. ಕೆಲವರು ಹೇಳುತ್ತಾರೆ, ಕೊರೋನಾ ಬಂದು ನಮ್ಮ ಜೀವನದಲ್ಲಿ ನಾನಾ ಆಯಾಮಗಳಲ್ಲಿ ನಮಗೆ ಒಳ್ಳೆಯ ಪಾಠ ಕಲಿಸಿಕೊಟ್ಟಿತು ಎಂದು. ನಾವು ಹಿಂದೆಂದೂ ಕಾಣದಂಥ ಹೊಸ ರೀತಿಯಲ್ಲಿ ಜೀವನ ನಡೆಸುವುದು ಹೇಗೆ ಎಂಬುದನ್ನು ಈಗ ಕಲಿತ ಅನುಭವವಾಯಿತು ಎನ್ನುವುದು ಇನ್ನು ಕೆಲವರ ವಾದ. ಅನುಭವದ ಮಾತುಗಳು ಎಂದಿಗೂ ಸತ್ಯವಾಗಿರುತ್ತವೆ. ಹಾಗಾಗಿ ನಾವು ಆಗಾಗ ಕೇಳುವ ಇಂತಹ ಹೇಳಿಕೆಗಳು ನಿಜ ಇದ್ದರೂ ಇರಬಹುದು.
ಇವೆಲ್ಲವೂ ಭೌತಿಕವಾಗಿ ಸಂಬಂಧಪಟ್ಟ ವಿಚಾರಗಳಾದರೆ, ಮಾನಸಿಕವಾಗಿ ಜನರಲ್ಲಿ ಕೆಲವೊಂದು ಹೊಸ ಬದಲಾವಣೆಗಳು ಉಂಟಾಗಿವೆ. ಒಂದು ರೀತಿ ಹೇಳಬೇಕೆಂದರೆ ಕೊರೊನ ಬಂದ ಸಮಯದಿಂದ ಜನರು ಆಲೋಚನೆ ಮಾಡುವ ಮತ್ತು ಈ ಹಿಂದೆ ಯೋಚನೆ ಮಾಡುತ್ತಿದ್ದ ದಾರಿಯೇ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ.
ಕೊರೊನ ಎಂಬ ಮಹಾಮಾರಿ ತನ್ನ ಅಟ್ಟಹಾಸವನ್ನು ಪ್ರಾರಂಭ ಮಾಡಿದ ನಂತರ ಏರುಗತಿಯಲ್ಲಿ ಸಾಗುತ್ತಿದ್ದ ಎಲ್ಲಾ ದೇಶಗಳ ಆರ್ಥಿಕ ಸ್ಥಿತಿ ನಿಧಾನವಾಗಿ ಇಳಿಮುಖವಾಗಲು ಪ್ರಾರಂಭವಾಯಿತು. ಸಾಮಾನ್ಯ ಜನರಿಗೆ ಇದು ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟ ಎನಿಸಿದರೂ, ಆರ್ಥಿಕ ವಿಶ್ಲೇಷಕರ ಪ್ರಕಾರ ಈಗ ತಾನೇ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದ ನಾವೆಲ್ಲರೂ 10 - 20 ವರ್ಷಗಳು ವಾಪಸ್ ಹೋಗಿದ್ದೇವೆ ಎಂಬುದಂತೂ ಸತ್ಯ.
ಆರ್ಥಿಕ ವಿಶ್ಲೇಷಕರು ಕೊರೊನ ಪ್ರವೇಶದ ನಂತರ ಉಂಟಾಗುವ ಸಂದರ್ಭವನ್ನು ಜನರಿಗೆ ಅರ್ಥ ಮಾಡಿಸಲು ಸಾಕಷ್ಟು ಉದಾಹರಣೆಗಳನ್ನು ಕೊಟ್ಟು ಹೇಳುತ್ತಾರೆ. ಬ್ಯಾಂಕುಗಳಲ್ಲಿ ಠೇವಣಿಗಳ ಮೇಲಿನ ಬಡ್ಡಿ ದರಗಳು ಮುಂಚಿಗಿಂತ ಕಡಿಮೆ ಆಗಬಹುದು, ಸಣ್ಣ ಪುಟ್ಟ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಜನರು ಇನ್ನು ಮುಂದೆ ತೆಗೆದುಕೊಳ್ಳುವ ಸಂಬಳದಲ್ಲಿ ಇಳಿಕೆ ಕಾಣಬಹುದು, ವ್ಯಾಪಾರದ ದೃಷ್ಟಿಯಲ್ಲಿ ನೋಡುವ ಜನರು ತಮ್ಮ ವಹಿವಾಟುಗಳ ಮೇಲಿನ ಬೆಲೆಯನ್ನು ಏರಿಕೆ ಮಾಡಬಹುದು.
ಇದರಿಂದ ಮೊದಲೇ ಕಷ್ಟ ಪಟ್ಟು ಜೀವನ ಮಾಡುತ್ತಿದ್ದ ಒಬ್ಬ ಶ್ರೀಸಾಮಾನ್ಯನಿಗೆ ಮತ್ತಷ್ಟು ಕಷ್ಟವಾಗಬಹುದು ಎಂದೆಲ್ಲಾ ಹೇಳುವ ಸಾಧ್ಯತೆ ಇದೆ. ಇದನ್ನೆಲ್ಲಾ ಕೇಳುವ ಜನರಿಗೆ ಖಂಡಿತವಾಗಿ ತಲೆ ಕೆಟ್ಟು ಹೋಗುತ್ತದೆ. ಹಾಗಾದರೆ ನಮ್ಮ ಮುಂದಿನ ಜೀವನ ನಿರ್ವಹಣೆ ಹೇಗೆ? ಕೇವಲ 4 - 5 ತಿಂಗಳಲ್ಲೇ ನಮ್ಮ ಬದುಕು ಸಾಕಷ್ಟು ಬದಲಾಗಿ ಹೋಗಿದೆ. ಈ ದರಿದ್ರ ಕೊರೋನಾ ಯಾವಾಗ ನಮ್ಮ ದೇಶ ಬಿಟ್ಟು ತೊಲಗುತ್ತದೆ? ಕೊರೋನಾಗೆ ಲಸಿಕೆ ಸಿಕ್ಕಿದೆಯೇ? ಇಂದಾದರೂ ಕೊರೋನಾದ ಬಗ್ಗೆ ಶುಭ ಸುದ್ದಿ ಕೇಳುತ್ತೇವೆಯೇ? ಎಂಬೆಲ್ಲಾ ಆತಂಕಗಳು ಒಮ್ಮೆಲೇ ಸ್ಪೋಟಗೊಂಡು ಸಿಕ್ಕ ಸಿಕ್ಕ ಮಾಹಿತಿ ತಾಣಗಳನ್ನು ಜಾಲಾಡಲು ಪ್ರಾರಂಭ ಮಾಡುತ್ತಾರೆ.

doomscrolling ಎಂದರೇನು?
ಈಗಿನ ಸಂದರ್ಭದಲ್ಲಿ ನೋಡುವುದಾದರೆ ಮಾನಸಿಕ ಜ್ಞಾನದ ಅಭಿವೃದ್ಧಿಗೆ ಆನ್ಲೈನ್ ಜಾಲತಾಣಕ್ಕಿಂತ ದೊಡ್ಡ ಜ್ಞಾನದ ಖಜಾನೆ ಮತ್ತೊಂದಿಲ್ಲ. ಅಂತರ್ಜಾಲ ಎಂದ ಮೇಲೆ ಅಲ್ಲಿ ಒಳ್ಳೆಯ ಸುದ್ದಿಗಳ ಹೂರಣವೂ ಇರುತ್ತದೆ, ಅದೇ ರೀತಿ ಕೆಟ್ಟ ಸುದ್ದಿಗಳ ಮಿಶ್ರಣವೂ ಇರುತ್ತದೆ. ಮನುಷ್ಯನ ಸಹಜ ಗುಣ ಸಕಾರಾತ್ಮಕ ಫಲಿತಾಂಶಗಳಿಗಿಂತ ನಕಾರಾತ್ಮಕ ವಿಷಯಗಳ ಮೇಲೆ ಮತ್ತು ಬೇಡವೆಂದರೂ ಕೆಟ್ಟ ಸುದ್ದಿಗಳ ಮೇಲೆ ಹೆಚ್ಚು ಆಕರ್ಷಿತನಾಗಿ ಹೋಗುವುದು. ಅದರಲ್ಲೂ ಯಾವುದಾದರೂ ಒಂದು ವಿಷಯ ಮನಸ್ಸಿಗೆ ಹಿಂಸೆ ನೀಡುತ್ತದೆ ಎಂದು ಗೊತ್ತಿದ್ದರೂ ಕೂಡ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗದೇ ಅದನ್ನೇ ಪದೇ ಪದೇ ಆಲೋಚನೆ ಮಾಡುವುದು ಅಥವಾ ಅದರ ಬಗ್ಗೆಯೇ ಇನ್ನಷ್ಟು ಸಂಶೋಧನೆ ಮಾಡುವುದು ಮನುಷ್ಯನ ಸಾಮಾನ್ಯ ಗುಣಗಳಲ್ಲಿ ಒಂದು. ಸದ್ಯ ಇಂತಹ ಮನಸ್ಥಿತಿಯನ್ನು ಕೊರೋನಾ ಇನ್ನಷ್ಟು ಹೆಚ್ಚು ಮಾಡಿದೆ ಎನ್ನುವುದು ಅಂತರ್ಜಾಲ ಮತ್ತು ಮಾನಸಿಕ ಸಂಶೋಧಕರ ವಾದ. ಮನುಷ್ಯನ ಇಂತಹ ಮಾನಸಿಕ ಬದಲಾವಣೆಯನ್ನು ' doomscrolling ' (ಡೂಮ್ಸ್ಕ್ರೋಲಿಂಗ್) ಅಥವಾ ' doomsurfing ' (ಡೂಮ್ಸರ್ಫಿಂಗ್) ಎಂದು ಕರೆಯುತ್ತಾರೆ. ಇವೆರಡೂ ಕೊರೋನಾ ಬಂದ ನಂತರ ನಿಘಂಟಿಗೆ ಸೇರಿದ ಹೊಸ ಪದಗಳಾಗಿವೆ ಎನ್ನುವುದು ಕೆಲವರ ಮಾತು.

ಆನ್ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ಜನರು
ಆನ್ಲೈನ್ ಜಗತ್ತು ಹೆಚ್ಚು ವಿಸ್ತಾರಗೊಳ್ಳಲು ಪ್ರಾರಂಭ ಮಾಡಿದ ನಂತರ ದೂರದ ಸುದ್ದಿ ಮಾಧ್ಯಮಗಳೆಲ್ಲಾ ಇಂದು ನಮ್ಮ ಅಂಗೈಯಲ್ಲೇ ಸಿಗುತ್ತಿವೆ. ಅದರಲ್ಲೂ ಜನರ ಮನಸ್ಸಿಗೆ ತುಂಬಾ ಹತ್ತಿರವಾಗಿರುವ ಮತ್ತು ಪ್ರತಿ ದಿನ ಹೆಚ್ಚು ಬಳಕೆಯಲ್ಲಿರುವ ಸ್ನೇಹಿತರ ಬಳಗವನ್ನು ಹೊಂದಿರುವ ಅಂತರ್ಜಾಲ ಸ್ಪಾಟ್ ಗಳೆಂದರೆ ಅದು ಸಾಮಾಜಿಕ ಜಾಲತಾಣಗಳು. ಇಂದು ಸಾಮಾಜಿಕ ಜಾಲ ತಾಣಗಳಾದ ಫೇಸ್ಬುಕ್, ಟ್ವಿಟರ್, ವಾಟ್ಸಪ್, ಇನ್ಸ್ಟಾಗ್ರಾಮ್ ಇತ್ಯಾದಿಗಳ ವ್ಯಾಪ್ತಿ ಎಷ್ಟಿದೆಯೆಂದರೆ ಇಂದು ನಡೆದ ಘಟನೆಯನ್ನು ಮರುದಿನ ಬೆಳಗ್ಗೆ ದಿನಪತ್ರಿಕೆಗಳಲ್ಲಿ ನೋಡುತ್ತಿದ್ದ ಜನರಿಗೆ ಈ ಕ್ಷಣವೇ ಒದಗಿಸುವಷ್ಟು ಮುಂದುವರೆದಿವೆ. ಪರಿಸ್ಥಿತಿ ಹೀಗಿರಬೇಕಾದರೆ ಜನರಿಗೂ ಕೂಡ ತಮ್ಮ ಸುತ್ತಮುತ್ತ ಏನಾಗುತ್ತಿದೆ? ಇದರಿಂದ ನಮ್ಮ ಮೇಲೆ ಏನು ಪ್ರಭಾವ ಬೀರುತ್ತದೆ? ಎಂದು ತಿಳಿದುಕೊಳ್ಳುವ ತವಕ ಇದ್ದೇ ಇರುತ್ತದೆ.
ಇದಕ್ಕೆ ಒಂದು ಉದಾಹರಣೆಯನ್ನು ನೋಡಿ ಹೇಳುವುದಾದರೆ ಇತ್ತೀಚಿಗಷ್ಟೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರಿಗೆ ಕೊರೋನಾ ಪಾಸಿಟಿವ್ ಎಂದು ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಲು ಪ್ರಾರಂಭವಾಯಿತು. ಇದರ ಬೆನ್ನಲ್ಲೇ ಏರಿಕೆ ಕಂಡು ಸ್ವಲ್ಪ ಸ್ವಲ್ಪವೇ ಕಡಿಮೆಯಾಗುತ್ತಿದ್ದ ಚಿನ್ನದ ಬೆಲೆ ವಿಶ್ವದಾದ್ಯಂತ ಮತ್ತೊಮ್ಮೆ ಏರಿಕೆ ಕಾಣಲು ಪ್ರಾರಂಭವಾಯಿತು. ಒಬ್ಬ ಸಾಮಾನ್ಯ ಮನುಷ್ಯನಿಗೆ ಯಾರಿಗೋ ಕೊರೊನ ಬಂದರೆ ನಮ್ಮ ಮನೆಯ ಪಕ್ಕದ ಚಿನ್ನದ ಅಂಗಡಿಯಲ್ಲಿ ಏಕೆ ಇಂತಹ ಬದಲಾವಣೆ? ಎಂಬುದನ್ನು ಅರ್ಥಮಾಡಿಕೊಳ್ಳಲು ಕಷ್ಟ ಎನಿಸಬಹುದು. ಆದರೂ ಕೂಡ ಇದು ಸತ್ಯ. ಇದೇ ರೀತಿ ವಿಶ್ವದ ಯಾವುದೋ ಮೂಲೆಯಲ್ಲಿ ನಡೆಯುವ ನಮಗೆ ಸಂಬಂಧವಿಲ್ಲದ ಘಟನೆಗಳು ನಮ್ಮ ಮೇಲೆ ಅದೆಷ್ಟು ಪ್ರಭಾವ ಬೀರುತ್ತವೆ ಎಂದರೆ ನಾವು ಇದರಿಂದ ಚೇತರಿಸಿಕೊಳ್ಳುವುದು ಹೇಗೆ ಎನ್ನುವ ಹೊಸ ಯೋಚನೆ ನಮ್ಮಲ್ಲಿ ಶುರುವಾಗುತ್ತದೆ.

ಜನರಲ್ಲಿ ಹೆಚ್ಚುತ್ತಿದೆ ನೆಗೆಟಿವ್ ಆಲೋಚನೆಗಳು
ಡೂಮ್ಸ್ಕ್ರೋಲಿಂಗ್ ಕೇವಲ ಆನ್ಲೈನ್ ಮಾಧ್ಯಮಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಜನರ ಮನಸ್ಥಿತಿಗೆ ಸಂಬಂಧಪಟ್ಟ ವಿಚಾರ ಆಗಿರುವುದರಿಂದ ವಿವಿಧ ಆಯಾಮಗಳಲ್ಲಿ ಇದನ್ನು ವಿಶ್ಲೇಷಿಸಬಹುದು. ಕೊರೋನಾದ ವಿಚಾರವನ್ನು ಪದೇ ಪದೇ ಟಿವಿಯಲ್ಲಿ ಬೇಡವೆಂದರೂ ನೋಡಲು ಮುಂದಾಗುವುದು, ಅಕ್ಕಪಕ್ಕದವರ ಬಳಿ ಕುಳಿತು ಕೇವಲ ಕೊರೋನಾದ ನಕಾರಾತ್ಮಕತೆಯ ಬಗ್ಗೆ ಚರ್ಚೆ ಮಾಡುವುದು, ಸ್ನೇಹಿತರ ಜೊತೆ, ಬಂಧು - ಮಿತ್ರರ ಜೊತೆ ಫೋನ್ ಮಾಡಿ ಕೊರೊನಾದಿಂದ ಅವರು ಆಸ್ಪತ್ರೆ ಸೇರಿದರಂತೆ, ಇವರು ಪ್ರಾಣ ಕಳೆದುಕೊಂಡರಂತೆ, ನಮ್ಮ ಏರಿಯಾದಲ್ಲಿ ಕೊರೋನಾದ ಇಷ್ಟು ಹೊಸ ಪ್ರಕರಣಗಳು ದಾಖಲಾದವು ಎನ್ನುವ ಬಗ್ಗೆ ಮಾತನಾಡುವುದು ಎಲ್ಲವೂ ಕೂಡ ಜನರ ಮನಸ್ಥಿತಿ ದಿನದಿಂದ ದಿನಕ್ಕೆ ಹೇಗೆ ಭಯ ತುಂಬಿದ ವಾತಾವರಣದ ಒಳಗೆ ಹೋಗುತ್ತಿದೆ ಎಂಬುದನ್ನು ತಿಳಿಸಿಕೊಡುತ್ತದೆ.

ಡೂಮ್‌ಸ್ಕ್ರೋಲಿಂಗ್‌ನಿಂದಾಗಿ ಹಾಳಾಗುತ್ತಿದೆ ಆರೋಗ್ಯ
ಈಗಾಗಲೇ ಅವಿಭಕ್ತ ಕುಟುಂಬದಿಂದ ಬೇರೆಯಾಗಿ ಕೇವಲ ಗಂಡ ಹೆಂಡತಿ ಮತ್ತು ತಮ್ಮ ಮಕ್ಕಳು ಮಾತ್ರ ನಮ್ಮ ಕುಟುಂಬ ಎನ್ನುವ ಮಟ್ಟಿಗೆ ಎಲ್ಲಾ ಕುಟುಂಬಗಳು ಬಂದು ನಿಂತಿವೆ. ಇದರ ಜೊತೆಗೆ ಕೇವಲ ನಾವೊಬ್ಬರೇ ಚೆನ್ನಾಗಿದ್ದರೆ ಸಾಕು ಎನ್ನುವ ಮನಸ್ಥಿತಿ ಬೇರೆ. ಇಂತಹ ಸಮಯದಲ್ಲಿ ಕೊರೋನಾದ ಪ್ರಭಾವದಿಂದ ಉಂಟಾಗುವ ಕೆಟ್ಟ ಆಲೋಚನೆಗಳು ಮನುಷ್ಯನ ಮನಸ್ಥಿತಿಯನ್ನು ಇನ್ನಷ್ಟು ಹಾಳುಮಾಡುತ್ತವೆ.
ಅಪ್ಪಿತಪ್ಪಿ ಕೊರೊನ ಬಂದುಬಿಟ್ಟರೆ ಯಾರ ಜೊತೆಯೂ ಬೆರೆಯಲು, ಮಾತನಾಡಲು ಸಾಧ್ಯವಾಗುವುದಿಲ್ಲ. ಕೇವಲ ಒಂದು ಕೊಠಡಿಯಲ್ಲಿ ಒಬ್ಬರೇ ಇರಬೇಕು ಎನ್ನುವುದನ್ನು ಆಲೋಚನೆ ಮಾಡಿ ತಲೆಯಲ್ಲಿ ಕೇವಲ ನಕಾರಾತ್ಮಕ ಆಲೋಚನೆಗಳು ಅಡ್ಡಾಡಲು ಪ್ರಾರಂಭವಾಗುತ್ತವೆ. ಇದರಿಂದ ನಿದ್ರೆ ಹಾಳಾಗುತ್ತದೆ, ಆರೋಗ್ಯ ಹಾಳಾಗುತ್ತದೆ, ಆಹಾರದ ಪದ್ಧತಿ ಬದಲಾಗುತ್ತದೆ, ಯಾವುದೇ ಕಾಯಿಲೆ ಇಲ್ಲದವರಿಗೂ ಕೂಡ ಕೇವಲ ಕೆಟ್ಟ ಮಾನಸಿಕ ಆಲೋಚನೆಗಳಿಂದ ದೇಹದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆಯಿಂದ ರಕ್ತದ ಒತ್ತಡ, ಮಧುಮೇಹ, ಬೊಜ್ಜು ಉಂಟಾಗಿ ಆಸ್ಪತ್ರೆಯ ಕದ ತಟ್ಟುವಂತೆ ಮಾಡುವ ಸಾಧ್ಯತೆ ಇದೆ. ಇದರ ಜೊತೆಗೆ ಒಬ್ಬ ಒಳ್ಳೆಯ ವ್ಯಕ್ತಿಗೆ ಕೆಟ್ಟ ಚಟಗಳು ಸ್ನೇಹಿತರಂತೆ ಬಂದು ಅಂಟಿಕೊಳ್ಳುತ್ತವೆ. ಒಟ್ಟಿನಲ್ಲಿ ಮನುಷ್ಯನ ಜೀವನ ಹೇಳತೀರದಷ್ಟು ಬದಲಾಗಿ ಹೋಗುತ್ತದೆ ಮತ್ತು ಹಾಳಾಗಿ ಹೋಗುತ್ತದೆ.

ಒಬ್ಬ ಮನುಷ್ಯನ ಕೆಟ್ಟ ಮಾನಸಿಕ ಸ್ಥಿತಿ ಇಷ್ಟೆಲ್ಲಾ ಅನರ್ಥಗಳಿಗೆ ದಾರಿಮಾಡಿಕೊಡುವುದೇ?
ಖಂಡಿತ ಹೌದು. ನಮ್ಮ ಪ್ರತಿ ದಿನದ ಕಾರ್ಯ ಚಟುವಟಿಕೆಗಳು, ನಮ್ಮ ದೈಹಿಕ ಶಕ್ತಿ ಸಾಮರ್ಥ್ಯ, ನಮ್ಮ ಇಷ್ಟ ಕಷ್ಟಗಳು, ನೋವು - ನಲಿವುಗಳು, ಸುಖ - ದುಃಖಗಳು ಎಲ್ಲವೂ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳಿಂದ ನಿಯಂತ್ರಣವಾಗಿರುತ್ತವೆ. ಒಂದು ವೇಳೆ ನಾವು ಖುಷಿಯಾಗಿದ್ದರೆ, ಅದಕ್ಕೆ ಕಾರಣ ನಮ್ಮ ದೇಹದಲ್ಲಿ 'feel good' ಹಾರ್ಮೋನ್ ಉತ್ಪತ್ತಿಯಾಗುತ್ತಿರುತ್ತದೆ. ಒಂದು ವೇಳೆ ನಾವು ಯಾವುದೋ ಒಂದು ಸಂದರ್ಭಕ್ಕೆ ಸರಿಯಾಗಿ ಸ್ಪಂದಿಸಲಾಗದೆ ವಿಪರೀತ ಬೇಸರವಾಗಿ ಒಂದು ಕಡೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರೆ, ಆಗ ನಮ್ಮ ಮೆದುಳಿನಲ್ಲಿ ಮಾನಸಿಕ ಒತ್ತಡಕ್ಕೆ ಸಂಬಂಧಪಟ್ಟ ಮತ್ತು ನಮ್ಮ ಮಾನಸಿಕ ಒತ್ತಡವನ್ನು ಹೆಚ್ಚು ಮಾಡುವಂತಹ 'stress' ಹಾರ್ಮೋನ್ ಉತ್ಪತ್ತಿಯಾಗುತ್ತಿರುತ್ತದೆ. ಸಂಶೋಧಕರ ಪ್ರಕಾರ ನಮ್ಮ ದೇಹದಲ್ಲಿ ಇರುವ ಎಲ್ಲಾ ಹಾರ್ಮೋನುಗಳು ನಮಗೆ ಸಹಕಾರಿಯಾಗಿಯೇ ಕೆಲಸ ಮಾಡುತ್ತವೆ. ಆದರೆ ಎಲ್ಲವೂ ಒಂದು ಮಿತಿಯಲ್ಲಿರಬೇಕು ಅಷ್ಟೇ. ಮಿತಿಮೀರಿ ಉತ್ಪತ್ತಿಯಾಗುವುದರಿಂದ ಮೇಲೆ ಹೇಳಿದ ಸಮಸ್ಯೆಗಳು ಹೆಚ್ಚಾಗಿ ಕಾಣಬಹುದು.

ಮನಸ್ಸನ್ನು ಹುಚ್ಚು ಕುದುರೆಯಂತೆ ಓಡಲು ಬಿಡಬೇಡಿ
ನಮ್ಮ ಪ್ರತಿಯೊಂದು ಆಗುಹೋಗುಗಳಿಗೂ ನಮ್ಮ ಮನಸ್ಸೇ ಕಾರಣ. ಹಾಗಾಗಿ ಹುಚ್ಚುಕುದುರೆಯಂತೆ ಓಡುವ ನಮ್ಮ ಮನಸ್ಸನ್ನು ನಾವು ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಕಲೆಯನ್ನು ಕಲಿತುಕೊಳ್ಳಬೇಕು. ಸುಖ ಬಂದಾಗ ಹಿಗ್ಗಬಾರದು, ಕಷ್ಟ ಬಂದಾಗ ಕುಗ್ಗಬಾರದು ಎಂಬ ಮಾತಿನಂತೆ ಈಗ ಬಂದಿರುವ ಕೊರೋನಾದ ಪರಿಸ್ಥಿತಿಯನ್ನು ಕಷ್ಟವೆಂದು ಭಾವಿಸಿ ಸಾಧ್ಯವಾದಷ್ಟು ಸಾಮಾನ್ಯ ರೀತಿಯಲ್ಲಿ ಇದನ್ನು ನೋಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಏಕೆಂದರೆ ಇಂದು ಇಡೀ ಜಗತ್ತು ಕೊರೋನಾದ ಅಧೀನದಲ್ಲಿದೆ. ಹಾಗಾಗಿ ಕಷ್ಟ ಎನ್ನುವುದು ಕೇವಲ ನಮ್ಮೊಬ್ಬರಿಗೆ ಬಂದಿಲ್ಲ. ನಮಗಿಂತಲೂ ಕಷ್ಟ ಪಡುತ್ತಿರುವವರು ನಮ್ಮ ಸುತ್ತಮುತ್ತ ಸಾಕಷ್ಟು ಜನರಿದ್ದಾರೆ. ಅಂತಹವರಿಂದ ನಾವು ಕಲಿಯುವ ಪಾಠ ಬಹಳಷ್ಟಿದೆ. ಅಲ್ಲವೇ?



Click it and Unblock the Notifications











