Latest Updates
-
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ!
ಕೊರೊನಾವೈರಸ್ ಚಿಕಿತ್ಸೆ ಬಳಿಕವು ಮರುಕಳಿಸುವುದೇ?
ಕೊರೋನಾ ವೈರಸ್ ಸೋಂಕು ಕೆಲವೊಂದು ದೇಶಗಳಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಭಾರತದಲ್ಲೂ ಇದು ಹೆಚ್ಚಾಗಿದೆ. ಆದರೆ ಬೇರೆ ರಾಷ್ಟ್ರಗಳಷ್ಟು ವೇಗದಲ್ಲಿಲ್ಲ. ಕೆಲವು ದೇಶಗಳಲ್ಲಿ ಸೋಂಕು ಕಡಿಮೆ ಆಗುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೊಂದು ಕೆಟ್ಟ ಸುದ್ದಿಯು ಬರುತ್ತಿದೆ. ಅದೇನೆಂದರೆ ಕೊರೋನಾ ಸೋಂಕಿತ ವ್ಯಕ್ತಿಗಳು ಗುಣಮುಖರಾದ ಬಳಿಕ ಮತ್ತೊಮ್ಮೆ ಸೋಂಕಿಗೆ ಒಳಗಾಗುತ್ತಿರುವುದು!

ಕೊರೋನಾ ಸೋಂಕಿಗೆ ಒಳಗಾಗಿ ಅದರಿಂದ ಚೇತರಿಸಿಕೊಂಡು ಕೆಲವರು ಮನೆಗೆ ಹಿಂತಿರುಗಿದ್ದಾರೆ. ಆದರೆ ಅವರನ್ನು ಈಗ ಮತ್ತೆ ಸೋಂಕು ಕಾಡಲು ಆರಂಭಿಸಿದೆ. ಇದಕ್ಕೆ ತಾಜಾ ಉದಾರಣೆ ದಕ್ಷಿಣ ಕೊರಿಯಾ. ಅಲ್ಲಿ ಸುಮಾರು 51 ಮಂದಿ ಕೊರೋನಾದಿಂದ ಚೇತರಿಸಿಕೊಂಡು ಹಿಂತಿರುಗಿದ್ದರು. ಆದರೆ ಈಗ ಮರಳಿ ಸೋಂಕಿಗೆ ಒಳಗಾಗಿದ್ದಾರೆ.
ಕೊರಿಯಾದ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರ(ಕೆಸಿಡಿಸಿ) ಪ್ರಕಾರ ಡೇಗು ಮತ್ತು ಉತ್ತರ ಜಿಯೊಂಗ್‌ಸಾಂಗ್ ನಲ್ಲಿ ಚೇತರಿಕೆ ಪಡೆದುಕೊಂಡು ಹೋಗಿದ್ದ ಕೆಲವರಲ್ಲಿ ಎರಡನೇ ಸಲ ಸೋಂಕು ಕಂಡುಬಂದಿದೆ. ಇದೇ ರೀತಿಯ ಕೆಲವು ಪ್ರಕರಣಗಳು ಭಾರತದಲ್ಲಿ ಕೂಡ ಕಂಡುಬಂದಿದೆ.

ಕೋವಿಡ್-19ನಿಂದ ಬೇತರಿಕೆಯಾದವರಿಗೆ ಮತ್ತೆ ಬರುತ್ತದೆಯೇ?
ಕೊರೋನಾ ಸೋಂಕಿತರನ್ನು ಚಿಕಿತ್ಸೆ ವೇಳೆ ಹಲವಾರು ಸಲ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದೇ ವೇಳೆ 24 ಗಂಟೆಗಳ ಅಂತರದಲ್ಲಿ ಎರಡು ಪರೀಕ್ಷೆ ನಡೆಸಿ, ಅದು ನೆಗೆಟಿವ್ ಬಂದರೆ ಅವರು ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಕೊರೋನಾ ವೈರಸ್ ಸೋಂಕಿಗೆ ಒಳಗಾಗಿರುವ ಜನರು ರಕ್ಷಣಾತ್ಮಕ ಆಂಟಿಬಾಡಿ(ಪ್ರತಿಕಾಯ) ಬೆಳೆಸಿಕೊಂಡಿರುವರು. ಆದರೆ ಇದು ಸೋಂಕಿನಿಂದ ಎಷ್ಟು ಸಮಯದ ತನಕ ರಕ್ಷಣೆ ನೀಡುತ್ತದೆ ಎಂದು ಇದುವರೆಗೆ ಸ್ಪಷ್ಟವಾಗಿಲ್ಲ.

ಕೋವಿಡ್ ಚಕಿತ್ಸೆ ನಂತರ
ಚಿಕಿತ್ಸೆ ಬಳಿಕ ಮರಳಿ ಸ್ವಲ್ಪ ಸಮಯದಲ್ಲೇ ಕೋವಿಡ್-19 ಪಾಸಿಟಿವ್ ಆದ ಜನರಲ್ಲಿ ವೈರಸ್ ಮತ್ತೆ ಸಕ್ರಿಯಗೊಂಡಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಕೊರೋನಾ ವೈರಸ್ ಸೋಂಕು ಮಧ್ಯಮ ಪ್ರಮಾಣದಲ್ಲಿ ಇರುವಂತಹ ಜನರಿಗೆ ಚಿಕಿತ್ಸೆ ನೀಡಿದ ಬಳಿಕ ಸೋಂಕಿನ ಲಕ್ಷಣಗಳೂ ಸಂಪೂರ್ಣವಾಗಿ ದೇಹದಿಂದ ಹೊರಗೆ ಹೋಗಲು ಇನ್ನೂ ಎಂಟು ದಿನಗಳು ಬೇಕಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಇಂತಹ ಸೋಂಕಿತರನ್ನು ಸತತ ಎರಡು ಸಲ ಪಾಲಿಮರೇಸ್ ಚೈನ್ ರಿಯಾಕ್ಷನ್(ಪಿಸಿಆರ್) ಪರೀಕ್ಷೆಗೆ ಒಳಪಡಿಸಿ, ಅದರಲ್ಲಿ ನೆಗೆಟಿವ್ ಬಂದಿರುವುದು ದೃಢವಾಗಿರುವುದು ಮತ್ತು ಅವರನ್ನು ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಕೂಡ ಮಾಡಲಾಗಿರುತ್ತದೆ.
ಕೋವಿಡ್ -19 ಸೋಂಕಿತರ ಥ್ರಾಟ್ ಸ್ವಾಬ್ ಪಡೆದು ಅಧ್ಯಯನಕ್ಕೆ ಒಳಪಡಿಸಿ ಇದನ್ನು ವಿಶ್ಲೇಷಣೆ ಮಾಡಲಾಗಿದೆ. ಅರ್ಧದಷ್ಟು ಜನರಲ್ಲಿ ಲಕ್ಷಣಗಳು ಹೋದ ಬಳಿಕವೂ ಕೆಲವು ಮಂದಿಯಲ್ಲಿ ಈ ವೈರಸ್ ಹಾಗೆ ಇರುತ್ತದೆ ಎಂದು ಹೇಳಿದೆ. ಜ್ವರ, ಕೆಮ್ಮು, ನೋವು ಮತ್ತು ಗಂಟಲಕುಳಿಯಲ್ಲಿ ನೋವು ಇದರ ಕೆಲವು ಲಕ್ಷಣಗಳಾಗಿವೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಕೊರೋನಾ: ಇದರ ಸಂಬಂಧವೇನು?
ಕೋವಿಡ್-19 ಸೋಂಕಿತರು ಚೇತರಿಕೆ ಪಡೆದುಕೊಂಡ ಬಳಿಕವೂ ಸೋಂಕು ಅವರಲ್ಲಿ ಇರಬಹುದು. ಇದರಿಂದ ಇಂತಹ ಡಿಸ್ಚಾರ್ಜ್ ಆಗಿ ಹೋದವರಿಗೆ ಮತ್ತು ಸೋಂಕಿತರಿಗೆ ನೀಡುವಂತಹ ಚಿಕಿತ್ಸೆಯು ಒಂದೇ ರೀತಿಯಲ್ಲಿ ಇರಬೇಕು ಎಂದು ಅಧ್ಯಯನಗಳು ಹೇಳಿವೆ.
ಕೋವಿಡ್-19 ಸೋಂಕಿತರಿಗೆ ಕೆಲವು ರೋಗನಿರೋಧಕ ಮಾತ್ರೆಗಳನ್ನು ನೀಡಲಾಗುತ್ತದೆ. ಇದರಿಂದಾಗಿ ಅವರು ಮತ್ತೆ ಕೋವಿಡ್-19ಗೆ ಒಳಗಾಗುವ ಸಾಧ್ಯತೆ ಇರುವುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಡಿಸ್ಚಾರ್ಜ್ ಆಗಿರುವಂತಹ ಸೋಂಕಿತನ ರೋಗನಿರೋಧಕ ಶಕ್ತಿಯು ಕಡಿಮೆ ಇದ್ದರೆ ಇದು ಮರಳು ಸಾಧ್ಯತೆಯು ಹೆಚ್ಚಾಗಿರುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಕೊನೇ ಮಾತು
ಕೊರೋನಾ ಸೋಂಕಿನಿಂತ ಚೇತರಿಸಿಕೊಳ್ಳುತ್ತಿರುವುದು ತುಂಬಾ ಒಳ್ಳೆಯ ವಿಚಾರ. ವೈದ್ಯಕೀಯ ವಿಜ್ಞಾನವು ಈ ವೈರಸ್, ವೈರಸ್ ನ ರೂಪಾಂತರ ಮತ್ತು ಮನುಷ್ಯನ ಪ್ರತಿರೋಧಕ ವ್ಯವಸ್ಥೆಯು ಅದಕ್ಕೆ ಪ್ರತಿಕ್ರಿಯಿಸುವ ಬಗ್ಗೆ ಇನ್ನಷ್ಟು ಸಂಶೋಧನೆ ಮಾಡುತ್ತಲಿದೆ.



Click it and Unblock the Notifications