Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಕೊರೊನಾವೈರಸ್: ಅವಶ್ಯಕವಾಗಿ ನಾವು ಮಾಡಬೇಕಾಗಿರುವುದೇನು?
ಈಗ ನಮ್ಮೆಲ್ಲರ ದಿನ ಬೆಳಗಾಗಿ ಮಲಗುವವರೆಗೆ ಕೊರೊನಾದ್ದೇ ಸುದ್ದಿ. ಸಂಜೆ ಆಗುತ್ತಿದ್ದಂತೆ ಈ ದಿನ ಎಷ್ಟು ಸೋಂಕಿತರಿದ್ದಾರೆ, ಯಾವೆಲ್ಲಾ ಏರಿಯಾಗಳಿಗೆ ಸೋಂಕು ಹರಡಿದೆ ಎಂದು ಭಯದಿಮದ ವರದಿಯನ್ನು ಎದುರು ನೋಡುತ್ತಿರುತ್ತೇವೆ.

ಜನರು ತುಂಬಾ ಭಯಭೀತರಾಗಿದ್ದಾರೆ. ಭಯಭೀತರಾಗುವುದರಿಂದ ಈ ವೈರಸ್ ಸೋಲಿಸಲು ಸಾಧ್ಯವಿಲ್ಲ, ಬದಲಿಗೆ ನಾವು ಕೆಲವೊಂದು ಕಾರ್ಯಗಳನ್ನು ಮಾಡಿದರೆ, ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಕೊರೊನಾ ಹರಡುವುದನ್ನು ತಡೆಯಬಹುದಾಗಿದೆ. ಈ ಲೇಖನದಲ್ಲಿ ಕೊರೊನಾ ತಡೆಗಟ್ಟಲು ಏನು ಮಾಡಬೇಕು ಎಮಬುವುದರ ಬಗ್ಗೆ ಮಾಹಿತಿ ನೋಡಿ ಇಲ್ಲಿದೆ:

ಭಯ ಬೀಳುತ್ತೀರಾ ಅಥವಾ ಅವಶ್ಯಕ ಮುನ್ನೆಚ್ಚರಿಕೆ ವಹಿಸುತ್ತೀರಾ?
ಕೊರೊನಾಗೆ ಭಯ ಭೀತರಾಗುವುದರಿಂದ ಈ ಸಮಸ್ಯೆಯನ್ನು ಇಲ್ಲವಾಗಿಸಲು ಸಾಧ್ಯವಿಲ್ಲ. ಕೊರೊನಾ ಎದುರಿಸಲು ನಾವೆಲ್ಲಾ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಿದ್ಧವಾಗಬೇಕು. ಅನ್‌ಲಾಕ್ ಆಗಿದ್ದ ನಿಯಮಗಳು ಈಗ ಮತ್ತೆ ಬಿಗಿಯಾಗುತ್ತಾ ಬರುತ್ತಿವೆ. ಹೋಟೆಲ್, ಸ್ಕೂಲ್, ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ.
ಜನರಿಗೆ ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ, ಯಾರಿಗೆ ಕೊರೊನಾ ಬರುತ್ತೆ, ಹೇಗೆ ಕೊರೊನಾ ಹರಡುತ್ತಿದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದರೂ ಕೊರೊನಾ ವೈರಸ್ ಬಾಧಿಸುತ್ತಿದೆ. ಇನ್ನು ಕೆಲವರು ನಿರ್ಲಕ್ಷ್ಯದಿಂದಾಗಿ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ.
ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಹೋದರೆ ಆಸ್ಪತ್ರೆಯ ಸಿಬ್ಬಂದಿಗೂ ಪರಿಸ್ಥಿತಿ ನಿಭಾಯಿಸಲು ಕಷ್ಟವಾಗುತ್ತದೆ. ಯಾರನ್ನು ಉಳಿಸಿಕೊಳ್ಳಬೇಕು ಎಂದು ಸ್ಪೇನ್, ಇಟಲಿಯಲ್ಲಿ ಉಂಟಾದ ಪರಿಸ್ಥಿತಿ ಉಂಟಾಗಬಹುದು. ಆದ್ದರಿಂದ ಈ ಸಮಯದಲ್ಲಿ ನಾವು ಎಷ್ಟು ಎಚ್ಚರಿಕೆಯಿಂದ ಇರುತ್ತೇವೋ ಅಷ್ಟೇ ಒಳ್ಳೆಯದು.

ಶತಕದಲ್ಲಿ ಕಾಡಿದ ಭೀಕರ ಪಿಡುಗು
ಹಿಂದೆ ಅನೇಕ ಕಾಯಿಲೆಗಳು ಮನುಷ್ಯರನ್ನು ಕಾಡಿದ್ದೆವು. H1N1 2009ರಲ್ಲಿ ಕಾಡಿತ್ತು. 1918ರಲ್ಲಿ ಸ್ಪೇನಿಷ್ ಫ್ಲೂ ಅಂತ ಕಾಣಿಸಿಕೊಂಡು ಅನೇಕ ಜನರನ್ನು ಬಲಿ ತೆಗೆದುಕೊಂಡಿತ್ತು. ಆದರೆ ಕೊರೊನಾವೈರಸ್ ಈ ಎಲ್ಲಾ ವೈರಸ್‌ಗಿಂತ ಭೀಕರವಾಗಿದೆ. ಕೊರೊನಾ ವೈರಸ್ ವ್ಯಕ್ತಿಯಿಂದ ವ್ಯಕ್ತಿಯಿಂದ ಬೇಗನೆ ಹರಡುವುದಾದರೂ ಸಾವಿನ ಸಂಖ್ಯೆ ಕಡಿಮೆಯಿದೆ. ಹಾಗಂತ ಕೊರೊನಾ ವೈರಸ್ ನಿರ್ಲಕ್ಷ್ಯ ಮಾಡುವಂತಿಲ್ಲ, ರೋಗ ನಿರೋಧಕ ಶಕ್ತಿ ಚೆನ್ನಾಗಿರುವವರು ಚೇತರಿಸಿಕೊಳ್ಳುತ್ತಿದ್ದಾರೆ, ಇಲ್ಲದವರು ಸಾವಿನ ಕದ ತಟ್ಟುತ್ತಿದ್ದಾರೆ.

ಈಗ ಏನು ಮಾಡಬೇಕು?
ಮೊದಲಿಗೆ ನಾವು ಮಾಡಬೇಕಾಗಿರುವುದು ಈ ಕಾಯಿಲೆ ಹರಡುವುದನ್ನು ತಡೆಯಬೇಕು. ಕೈಗಳನ್ನು ಆಗಾಗ ತೊಳೆಯುವುದು, ಮುಖವನ್ನು ಮುಟ್ಟದಿರುವುದು ಮಾಡಿದರೆ ಸಾಕಾಗುವುದಿಲ್ಲ. ಕೊರೊನಾವೈರಸ್ ತಡೆಗಟ್ಟುವಲ್ಲಿ ಇದು ಅವಶ್ಯಕವಾದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ.
ಇಷ್ಟೊಂದು ಪ್ರಮಾಣದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದರೂ ಇನ್ನೂ ಜನರು ಜವಾಬ್ದಾರಿಯಿಲ್ಲದೆ ವರ್ತಿಸುತ್ತಿದ್ದಾರೆ. ಹಾಗಂತ ಎಲ್ಲವನ್ನೂ ಕ್ಯಾನ್ಸಲ್ ಮಾಡಿ, ಯಾರ ಜೊತೆ ಮಾತನಾಡಲೇ ಬೇಡಿ ಎಂದು ಹೇಳುತ್ತಿಲ್ಲ. ನಾವು ಕೆಲಸ ಕಾರ್ಯಗಳಿಗೆ ಹೋಗುವಾಗ, ಹೊರಗಡೆ ತರಕಾರಿ ತರಲು ಹೋಗುವಾಗ ಅಂತರ ಕಾಯ್ದುಕೊಳ್ಳಬೇಕು. ಈ ರೀತಿ ಎಚ್ಚರಿಕೆ ವಹಿಸಿದರೆ ಶೇ. 40ರಷ್ಟು ರೋಗ ಹರಡುವುದನ್ನು ತಡೆಗಟ್ಟಬಹುದಾಗಿದೆ.

ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಿ
ಕೊರೊನಾ ವೈರಸ್ ಮನುಷ್ಯನ ದೈಹಿಕ ಆರೋಗ್ಯ ಮಾತ್ರ ಹಾಳು ಮಾಡುತ್ತಿಲ್ಲ, ಆರ್ಥಿಕ ಪರಿಸ್ಥಿತಿಯನ್ನು ಕೂಡ ಹದಗೆಡಿಸಿದೆ. ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಉದ್ಯಮಿಗಳು ವ್ಯವಹಾರ ಇಲ್ಲದೆ ಪರಿದಾಡುತ್ತಿದ್ದಾರೆ. ಇವೆಲ್ಲಾ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತಿದೆ. ಇದು ದೈಹಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ.
ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಹೀಗೆ
- ದಿನಾ ಬೆಳಗ್ಗೆ ಪ್ರಾಣಯಾಮ ಮಾಡಿ
- ಆರೋಗ್ಯಕರ ಆಹಾರ ಸೇವಿಸಿ
- ಇತರ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ
- ಬಿಸಿ ಬಿಸಿ ನೀರು ಕುಡಿಯಿರಿ
- ಹೊರಗಿನಿಂದ ತರುವ ವಸ್ತುಗಳನ್ನು ತೊಳೆದು ಒಳಗಿಡಿ.
- ಮನೆ ಸ್ವಚ್ಛವಾಗಿಡಿ
- ಜ್ವರ, ಕೆಮ್ಮು, ನೆಗಡಿ ಇರುವವರಿಂದ ಅಂತರ ಕಾಯ್ದುಕೊಳ್ಳಿ.
- ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಕೈಯಲ್ಲಿ ಹಿಡಿದುಕೊಳ್ಳಿ.
ಇದೀಗ ಕರ್ನಾಟಕದಲ್ಲಿ ಡಾ. ಗಿರಿಧರ್ ಕಜೆಯವರು ನೀಡಿದ ಆಯುರ್ವೇದ ಔಷಧಿ ಫಲಕಾರಿಯಾಗಿದೆ. ಇನ್ನು ಕೊರೊನಾ ಚಿಕಿತ್ಸೆ ಅಂತ ಗ್ಲೆನ್ಮಾರ್ಕ್ ಕಂಪನಿ ಕೂಡ ಔಷಧಿ ತಯಾರಿಸಿದೆ. ಇವೆಲ್ಲಾ ಸ್ವಲ್ಪ ಮಟ್ಟಿಗೆ ಭರವಸೆ ಮೂಡಿಸಿದ್ದು, ಬೇಗನೆ ಕೊರೊನಾದಿಂದ ಭಾರತ ಮುಕ್ತವಾಗಲಿ.



Click it and Unblock the Notifications