Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಲಾಕ್‌ಡೌನ್ ಸಂದರ್ಭದಲ್ಲಿ ಇವುಗಳನ್ನು ನೀವು ತಿಳಿದಿರಲೇಬೇಕು
ಫೆಬ್ರವರಿ 24ಕ್ಕೆ ನಮ್ಮ ದೇಶದ ಪ್ರಧಾನಿ ಕೊರೊನಾವೈರಸ್ ವಿರುದ್ಧ ಯುದ್ಧ ಸಾರಿದ್ದಾರೆ. ಈ ಯುದ್ಧಕ್ಕೆ ಇಡೀ ದೇಶದ ಜನತೆ ಕೈಜೋಡಿಸಿದೆ. ದೇಶದಲ್ಲಿರುವ ಜನತೆ ಮನೆ ಬಿಟ್ಟು ಹೊರಗೆ ಬರದಂತೆ ಮನವಿ ಮಾಡಿದ್ದಾರೆ. ಕೊರೊನಾವೈರಸ್ ಎಂಬ ಮಹಾಮಾರಿ ದೇಹವನ್ನು ಹೊಕ್ಕದಿರಲು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ.
ಜನರು 21 ದಿನಗಳವರೆಗೆ ಮನೆಯಲ್ಲಿ ಇರದೇ ಹೋದರೆ ದೇಶದ ಆರ್ಥಿಕ ಸ್ಥಿತಿ 21 ವರ್ಷಗಳಷ್ಟು ಹಿಂದೆಕ್ಕೆ ಹೋಗುತ್ತದೆ ಎಂದು ಪ್ರಧಾನಿಯವರು ದೇಶದ ಆರ್ಥಿಕ ಪರಿಸ್ಥಿತಿ ಏನಾಗಬಹುದು ಎಂಬ ಎಚ್ಚರಿಕೆಯನ್ನೂ ಜನರಿಗೆ ನೀಡಿದ್ದಾರೆ.
ಭಾರತ 21 ದಿನ ಲಾಕ್‌ಡೌನ್ ಮಾಡಿರುವುದು ಕೊರೊನಾವೈರಸ್ ತಡೆಗಟ್ಟುವಲ್ಲಿ ಮಹತ್ವದ ಹೆಜ್ಜೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅನೇಕ ವೈದಕೀಯ ಪರಿಣಿತರು ಹೇಳಿದ್ದಾರೆ.
ಆದರೂ ನಮ್ಮ ಜನರಿಗೆ ಇದರ ಗಂಭೀರ ಸ್ವರೂಪದ ಅರಿವು ಇನ್ನೂ ಆಗಿಲ್ಲ. ಸ್ವಲ್ಪ ಅವಕಾಶ ಸಿಕ್ಕರೂ ಗುಂಪು-ಗುಂಪಾಗಿ ಸೇರುತ್ತಿದ್ದಾರೆ, ಇವರನ್ನು ಮನೆಯೊಳಗೆ ಸೇರಿಸಲು ಪೊಲೀಸರು ತಮ್ಮ ಪ್ರಾಣವನ್ನು ಪಣಕಿಟ್ಟು ಕಷ್ಟ ಪಡುತ್ತಿದ್ದಾರೆ.
ನಿಮ್ಮ ಹಾಗೂ ಮನೆಯವರ ಜೀವವನ್ನು ಕೊರೊನಾವೈರಸ್‌ನಿಂದ ಪಾರು ಮಾಡಲು ನೀವು ಮನೆಯಲ್ಲಿಯೇ ಉಳಿಯಿರಿ. ಮನೆಯಲ್ಲಿ ಉಳಿದರೆ ಅಗ್ಯತವಸ್ತುಗಳನ್ನು ತರುವುದು ಹೇಗೆ, ಏನೆಲ್ಲಾ ಸೌಲಭ್ಯಗಳು ಲಭ್ಯವಿರುತ್ತದೆ ಎಂಬ ಪ್ರಶ್ನೆಗಳು ಮೂಡುವುದು ಸಹಜ.
ಇಲ್ಲಿ ನಾವು ಜನರ ಮನಸ್ಸಿನಲ್ಲಿ ಸಾಮಾನ್ಯವಾಗಿ ಮೂಡುವ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿದ್ದೇವೆ. ಈ ಮಾಹಿತಿಗಳನ್ನುನತಿಳಿಯುವುದರಿಂದ ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಸಹಕಾರಿಯಾಗುವುದು.

ನಿಮಗೆ ತಿಳಿದಿರಬೇಕಾದ ಅಂಶಗಳು
ಸಾವರ್ಜನಿಕ ಸಾರಿಗೆ ವ್ಯವಸ್ಥೆ ಇರುತ್ತದೆಯೇ?
ಇಲ್ಲ ರಾಜ್ಯದ ಒಳಗಾಗಲಿ, ಹೊರಗಾಗಲಿ ದೇಶದ ಯಾವುದೇ ಮೂಲೆಗಳಲ್ಲಿ ಸಾರ್ವಜನಿಕರು ಓಡಾಡುವಂತಿಲ್ಲ ಹಾಗಾಗಿ ಆಟೋ, ಟ್ಯಾಕ್ಸಿ, ಬಸ್, ಮೆಟ್ರೋ, ಟ್ರೈನ್, ವಿಮಾನ ವ್ಯವಸ್ಥೆ ಇರುವುದಿಲ್ಲ.
ಖಾಸಗಿ ವಾಹನಗಳನ್ನು ಬಿಡಲಾಗುತ್ತದೆಯೇ?
ಖಾಸಗಿ ವಾಹನಗಳಲ್ಲಿಯೂ ಓಡಾಡುವಂತಿಲ್ಲ, ಆದರೆ ಕೆಲವೊಂದು ತುರ್ತು ಸಂದರ್ಭ ಅಂದ್ರೆ ಆಸ್ಪತ್ರೆಗೆ ಹೋಗಬಹುದು.
ಇನ್ನು ಮನೆಗೆ ಅಗ್ಯತವಾದ ಸಾಮಾನುಗಳನ್ನು ತರಲು ಹೋಗಬಹುದು. ಆದರೆ ಮನೆಯಿಂದ ಒಬ್ಬರು ಹೋಗಿ ಅಗ್ಯತ ವಸ್ತುಗಳನ್ನು ತನ್ನಿ.
ಮನೆ ಕೆಲಸದವರು ಅಥವಾ ಡ್ರೈವರ್‌ಗಳು ಕೆಲಕ್ಕೆ ಬರಬಹುದಾ?
ಈಗ ಎಲ್ಲರ ಪ್ರಾಣ ಸುರಕ್ಷತೆಯಲ್ಲಿರಲು ಅವರವರ ಮನೆಯಲ್ಲಿಯೇ ಇರುವುದು ಒಳ್ಳೆಯದು. ಈಗಾಗಲೇ ಕೊರೊನಾವೈರಸ್ 3ನೇ ಹಂತಕ್ಕೆ ತಲುಪಿರುವ ಲಕ್ಷಣಗಳು ಕಂಡು ಬರುತ್ತಿವೆ. ಯಾವುದೇ ವಿದೇಶ ಪ್ರಯಾಣ ಮಾಡದವರಿಗೂ ಈಗ ಕಾಯಿಲೆ ಹರಡುತ್ತಿದೆ. ಆದ್ದರಿಂದ ಅವರು ಕೂಡ ನಿಮ್ಮ ಮನೆಗೆ ಬರುವುದು ಸೇಫ್ ಅಲ್ಲ.
ಪೆಟ್ರೋಲ್, ಗ್ಯಾಸ್ ಇವುಗಳು ಸಿಗುತ್ತದೆಯೇ?
ಹೌದು, ಪೆಟ್ರೋಲ್ ಬ್ಯಾಂಕ್, ಎಲ್‌ಪಿಜಿ, ಎಣ್ಣೆ ಏಜೆನ್ಸಿಗಳು ಕಾರ್ಯ ನಿರ್ವಹಿಸುತ್ತವೆ.

ಈ ಬಗ್ಗೆ ತಿಳಿದಿರಲಿ
ಪ್ರಾರ್ಥನಾ ಮಂದಿರಗಳಿಗೆ ಹೋಗಬಹುದೇ?
ಇಲ್ಲ, ಯಾವುದೇ ಕಾರಣಕ್ಕೆ ಮಂದಿರ, ಚರ್ಚ್, ಮಸೀದಿಗಳಿಗೆ ಹೋಗುವಂತಿಲ್ಲ. ಇಲ್ಲಿಗೆ ಜನ ಗುಂಪು-ಗುಂಪಾಗಿ ಹೋಗುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ನಿಮ್ಮ-ನಿಮ್ಮ ಮನೆಯಲ್ಲಿಯೇ ಈ ಕೊರೊನಾವೈರಸ್ ಬೇಗನೆ ಇಲ್ಲವಾಗಲಿ ಅಂತ ಪ್ರಾರ್ಥಿಸಿ.
ಆಸ್ಪತ್ರೆಗೆ ಹೋಗಬಹುದು?
ಸಣ್ಣ-ಪುಟ್ಟ ಸಮಸ್ಯೆಗೆ ಈಗ ಆಸ್ಪತ್ರೆಗೆ ಹೋಗಬೇಡಿ. ದೇಹದ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸ ಕಂಡರೆ ಮೊದಲು ವೈದ್ಯರಿಗೆ ಕರೆ ಮಾಡಿ ಮಾಹಿತಿ ನೀಡಿ. ಅವರು ಬರೋಕೆ ಹೇಲಿದರೆ ಮಾತ್ರ ಹೋಗಿ. ಇನ್ನು ನೀವು ಯಾವುದಾದರೂ ಕಾಯಿಲೆಗೆ ಮದ್ದು ತೆಗೆದುಕೊಳ್ಳುತ್ತಿದ್ದರೆ ವೈದ್ಯರ ಸಲಹೆ ಕೇಳಿ ಒಂದು ತಿಂಗಳಿಗೆ ಆಗುವಷ್ಟು ಮದ್ದು, ಮಾತ್ರೆ ತಂದಿಡಿ.
ಫುಡ್ ಆರ್ಡರ್ ಮಾಡಬಹುದಾ?
ಹೌದು, ಫುಡ್ ಡೆಲಿವರಿ ಸೌಲಭ್ಯವಿದೆ. ಸ್ವಿಗ್ಗಿ, ಜೊಮೆಟೊ ಇವುಗಳಲ್ಲಿ ಆರ್ಡರ್ ಮಾಡಿದರೆ ಆಹಾರ ದೊರೆಯುತ್ತದೆ.

ಯಾವೆಲ್ಲಾ ಸೌಲಭ್ಯಗಳಿರುತ್ತದೆ?
ಎಟಿಎಂ ಸೌಲಭ್ಯ ಇರುತ್ತದಾ?
ಯೆಸ್.
ನಾಯಿ ಜೊತೆ ವಾಕಿಂಗ್ ಹೋಗಬಹುದಾ?
ಹೋಗಬಹುದು, ಆದರೆ ಈ ಸಮಯದಲ್ಲಿ ಹೋಗದಿರುವುದೇ ಕ್ಷೇಮ.
ಯಾವೆಲ್ಲಾ ಸೌಲಭ್ಯಗಳಿರುತ್ತದೆ?
ಪೊಲೀಸ್, ಕೋರ್ಟ್, ಆರೋಗ್ಯ, ಪೊಲೀಸ್, ಅಗ್ನಿಶಾಮಕ ದಳ, ಮುನ್ಸಿಪಾಲಿಟಿ ಸೇವೆ ದಿನಸಿ ಸಾಮಾನು ಅಂಗಡಿ, ಹಾಲಿನ ಅಂಗಡಿ ಹೀಗೆ ಅಗ್ಯತವಿರುವ ಎಲ್ಲಾ ವಸ್ತುಗಳು ಹಾಗೂ ಸೌಲಭ್ಯಗಳು ದೊರೆಯುತ್ತವೆ.

ಏನು ಮಾಡಬೇಕು? ಏನು ಮಾಡಬಾರದು?
ಏನು ಮಾಡಬೇಕು?
* ಆಗಾಗ ನಿಮ್ಮ ಕೈಗಳನ್ನು ತೊಳೆಯುತ್ತಾ ಇರಿ
* ಹೊರಗಿನಿಂದ ತಂದಂಥ ಹಾಲು, ಮತ್ತಿತರ ತರಕಾರಿ, ಹಣ್ಣು ವಸ್ತುಗಳನ್ನು ತೊಳೆದು ಇಡಿ.
* ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಿ.
* ಆರೋಗ್ಯಕರ ಆಹಾರ ತಿನ್ನಿ.
ಏನು ಮಾಡಬಾರದು?
* ಅನವಶ್ಯಕವಾಗಿ ಹೊರಗಡೆ ತಿರುಗಾಡಿಬೇಡಿ.
* ತುರ್ತು ಸಂದರ್ಭದಲ್ಲಿ ಹೊರಗಡೆ ಹೋಗುವಾಗ ಮುಖಕ್ಕೆ ಮಾಸ್ಕ್ ಧರಿಸಿ..
* ಆತಂಕ ಪಡಬೇಡಿ, ಎಚ್ಚರಿಕೆವಹಿಸಿ ಕೋವಿಡ್ 19 ವಿರುದ್ಧ ಹೋರಾಡಿ.



Click it and Unblock the Notifications











