Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಈ ಕೊರೊನಾ ಲಕ್ಷಣಗಳಿದ್ದರೆ ತಡಮಾಡದೆ ಆಸ್ಪತ್ರೆಗೆ ದಾಖಲಾಗಬೇಕು
ಕೊರೊನಾವೈರಸ್ ಆರ್ಭಟ ಜೋರಾಗಿದೆ. ವರ್ಷದ ಹಿಂದೆ ಬಂದಿದ ಪರಿಸ್ಥಿತಿ ಮತ್ತೊಮ್ಮೆ ನಮ್ಮ ಮುಂದಿದೆ. ಕೊರೊನಾ ಚೈನ್ ಬ್ರೇಕ್ ಮಾಡಲು ಸರ್ಕಾರ ಕರ್ಫ್ಯೂ ಜಾರಿಗೊಳಿಸಿದೆ.
ಕೊರೊನಾವೈರಸ್ ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಿರುವುದರಿಂದ ತುಂಬಾನೇ ಎಚ್ಚರಿಕೆವಹಿಸಬೇಕು ಹಾಗೂ ಒಂದು ವೇಳೆ ಸೋಂಕಿನ ಲಕ್ಷಣಗಳು ಯಾವುದೇ ಕಂಡು ಬಂದರೆ ಕೂಡಲೇ ಸ್ವಲ್ಪವೂ ನಿರ್ಲಕ್ಷ್ಯ ಮಾಡದೆ ಆಸ್ಪತ್ರೆಗೆ ಹೋಗಬೇಕು. ಅದರಲ್ಲೂ ಕೊರೊನಾ ಸೋಂಕು ಬಂದ್ರೆ ಕೆಲವೊಂದು ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬಾರದು.
ಈ ಲಕ್ಷಣಗಳು ಕಂಡು ಬಂದರೆ ಸ್ವಲ್ಪವೂ ಸಮಯ ವ್ಯರ್ಥ ಮಾಡದೆ ಐಸಿಯು ಇರುವ ಆಸ್ಪತ್ರೆಗೆ ದಾಖಲಾಗಿ:

ಇಂಥವರು ಹೋಂ ಕ್ವಾರೆಂಟೈನ್‌ನಲ್ಲಿ ಇರುವುದಕ್ಕಿಂತ ಆಸ್ಪತ್ರೆಗೆ ದಾಖಲಾಗುವುದು ಒಳ್ಳೆಯದು
ಕೊರೊನಾ ಸೋಂಕು ಇರುವ ಎಲ್ಲರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಸಣ್ಣ-ಪುಟ್ಟ ಲಕ್ಷಣಗಳಿರುವವರಿಗೆ ಮನೆಯಲ್ಲಿಯೇ ಹೋಂ ಕ್ವಾರೆಂಟೈನ್‌ನಲ್ಲಿದ್ದು ಚಿಕಿತ್ಸೆ ಪಡೆಯಬಹುದೆಂದು ವೈದ್ಯರು ಸೂಚಿಸುತ್ತಾರೆ.
ಆದರೆ ವಯಸ್ಸಾದವರು, ಏನಾದರೂ ಆರೋಗ್ಯ ಸಮಸ್ಯೆ ಇರುವವರು ಅದರಲ್ಲೂ ಸಕ್ಕರೆ ಕಾಯಿಲೆ ಇರುವವರು ಮೊದಲಿಗೆ ನಿರ್ಲಕ್ಷ್ಯ ಮಾಡದಿರುವುದು ಒಳ್ಳೆಯದು. ಈಗ ಸಂಭವಿಸಿರುವ ಎಷ್ಟೋ ಸಾವು ನೋಡಿದಾಗ ಇಂಥ ಸಮಸ್ಯೆ ಇರುವವರು ಮೊದಲಿಗೆ ಆರಾಮವಾಗಿ ಇದ್ದರೂ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಆದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು.

ನಿಮ್ಮ ಲಕ್ಷಣಗಳ ಕಡೆ ಗಮನ ನೀಡಿ
ಈಗ ಬಂದಿರುವ ರೂಪಾಂತರ ಕೊರೊನಾವೈರಸ್ ಲಕ್ಷಣಗಳು ಇದ್ದಕ್ಕಿದ್ದಂತೆ ಅಧಿಕವಾಗುವುದು. ಆದ್ದರಿಂದ ದೇಹದಲ್ಲಿ ಲಕ್ಷಣಗಳನ್ನು ಗಮನಿಸುತ್ತಾ ಇರಬೇಕು. ಅದರಲ್ಲಿ ಈ ಲಕ್ಷಣಗಳು ಕಂಡು ಬಂದರೆ ಒಂದು ಕ್ಷಣವೂ ತಡಮಾಡದೆ ಆಸ್ಪತ್ರೆಗೆ ಹೋಗುವುದು ಒಳ್ಳೆಯದು.

ಉಸಿರಾಟದಲ್ಲಿ ವ್ಯತ್ಯಾಸ ಕಂಡು ಬಂದರೆ
ಎದೆ ನೋವು, ಉಸಿರಾಟದಲ್ಲಿ ತೊಂದರೆ ಕಂಡು ಬಂದರೆ ವೈರಸ್ ನಿಮ್ಮ ಶ್ವಾಸಕೋಶಕ್ಕೆ ಅಧಿಕ ಹಾನಿ ಮಾಡಿದೆ ಎಂದರ್ಥ. ರೂಮ್‌ನಲ್ಲಿ ನಡೆದಾಡಿದಾಗ ಅಥವಾ ಸ್ಟೆಪ್ ಹತ್ತಲು ಕಷ್ಟವಾದರೆ, ಉಸಿರನ್ನು ತೆಗೆದುಕೊಳ್ಳಲು ಹಾಗೂ ಬಿಡಲು ಕಷ್ಟವಾಗುತ್ತಿದ್ದರೆ ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು, ಚಿಕಿತ್ಸೆ ತಡವಾದಷ್ಟೂ ಅಪಾಯ ಹೆಚ್ಚುವುದು.

ದೇಹದಲ್ಲಿ ಆಮ್ಲಜನಕ (ಆಕ್ಸಿಜಿನ್ ) ಪ್ರಮಾಣ ಕಡಿಮೆಯಾಗುತ್ತಿದ್ದರೆ
ಕೊರೊನಾ ಸೋಂಕಿತರ ಹೋಂ ಕ್ವಾರಂಟೈನ್‌ನಲ್ಲಿದ್ದರೆ ಆಕ್ಸಿಮೀಟರ್‌ನಿಂದ ತಮ್ಮ ದೇಹದ ಆಮ್ಲಜನಕ ಪ್ರಮಾಣವನ್ನು ಗಮನಿಸುತ್ತಾ ಇರಬೇಕು. ದೇಹದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗುತ್ತಿದ್ದರೆ ಉಸಿರಾಟದ ತೊಂದರೆ ಉಂಟಾಗುವುದು. ಆದ್ದರಿಂದ ಕೂಡಲೇ ಆಸ್ಪತ್ರೆಗೆ ಕರೆ ಮಾಡಿ.

ಎದೆ ನೋವು
ಎದೆಯಲ್ಲಿ ಯಾವುದೇ ರೀತಿಯ ನೋವು ಕಂಡು ಬಂದರೂ ನಿರ್ಲಕ್ಷ್ಯ ಮಾಡಬೇಡಿ. ಇಲ್ಲದಿದ್ದರೆ ಪರಿಸ್ಥಿತಿ ಗಂಭೀರವಾಗುವುದು.

ಒಂದು ರೀತಿಯ ಗೊಂದಲ
ಕೋವಿಡ್ 19 ಮೆದುಳು ಹಾಗೂ ನರಗಳ ಮೇಲೆ ಕೂಡ ಪರಿಣಾಮ ಬೀರುತ್ತದೆ, ಒಂದು ರೀತಿಯ ಗೊಂದಲ, ನಿದ್ದೆ ಬರುವುದು, ಸುಸ್ತು ಕಂಡು ಬರುವುದು ಕಂಡು ಬಂದರೆ ಒಂದು ವಾಕ್ಯ ಹೇಳಿ, ಅದು ಸಾಧ್ಯವಾಗದಿದ್ದರೆ ಕೂಡಲೇ ನೀವು ಆಸ್ಪತ್ರೆಗೆ ದಾಖಲಾಗಬೇಕು.

ತುಟಿಗಳು ನೀಲಿಯಾಗುವುದು
ದೇಹದಲ್ಲಿ ಆಮ್ಲಜನಕ ಕಡಿಮೆಯಾದಾಗ ತುಟಿಗಳು ನೀಲಿ ಬಣ್ಣಕ್ಕೆ ತಿರುಗುವುದು, ಈ ರೀತಿಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ.

ಕೊರೊನಾವೈರಸ್‌ನ ಸಾಮಾನ್ಯ ಲಕ್ಷಣಗಳು
ಕೊರೊನಾವೈರಸ್ ತಗುಲಿದಾಗ ಜ್ವರದ ಲಕ್ಷಣಗಳೇ ಕಂಡು ಬರುವುದು, ಆದ್ದರಿಂದ ಈ ಲಕ್ಷಣಗಳು ಕಂಡು ಬಂದರೆ ಕೊರೊನಾ ಪರೀಕ್ಷೆ ಮಾಡಿಸಿ.
* ಜ್ವರ
* ಗಂಟಲು ಕೆರೆತ
* ಶೀತ
* ಮೈಕೈ ನೋವು
ಇತರ ಯಾವ ಲಕ್ಷಣಗಳನ್ನು ನೀವು ಗಮನಿಸಬೇಕು
ಜ್ವರ, ಬೇಧಿ, ತಲೆಸುತ್ತು ಈ ರೀತಿಯ ಲಕ್ಷಣಗಳು ಕಂಡು ಬಂದರೂ ನಿರ್ಲಕ್ಷ್ಯ ಮಾಡಬೇಡಿ.
ಕೊರೊನಾ ಬಂದು ಕಷ್ಟ ಪಡುವುದಕ್ಕಿಂತ ಕೊರೊನಾ ಬರದಂತೆ ತುಂಬಾ ಜಾಗ್ರತೆವಹಿಸಿ.



Click it and Unblock the Notifications