Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕಾಫಿ ಅತಿಯಾದರೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಂತೆ
ಬಿಸಿ ಕಾಫಿಯ ಘಮ, ಮೂಗಿಗೆ ನಾಟಿದರೆ ಸಾಕು, ಅದೆಷ್ಟು ಕಪ್ ಹೊಟ್ಟೆ ಸೇರುವುದೋ ತಿಳಿಯದು, ಅಷ್ಟು ಫೇವರೆಟ್ ಆಗಿರುತ್ತೆ ಕಾಫಿ ಕೆಲವರಿಗೆ. ದಿನ ಶುರುವಾಗೋದು ಇದ್ರಿಂದ, ದಿನ ಮುಗಿಯುದೂ ಕೂಡ ಇದೇ ಕಾಫಿಯಿಂದ. ಆದರೆ, ಕಾಫಿ ಕ್ಯಾನ್ಸರ್ ಕೋಶ ಬೆಳವಣಿಗೆಗೆ ಕಾರಣವಾಗುತ್ತೆ ಎಂಬ ಮಾತಿದೆ. ಅದೇ ರೀತಿ ಇತ್ತೀಚಿನ ಅಧ್ಯಯನವು ಅತಿಯಾದ ಕಾಫಿ ಸೇವನೆ ಮತ್ತು ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯ ನಡುವಿನ ಸಂಬಂಧವನ್ನು ಕಂಡುಹಿಡಿದಿದೆ. ಹಾಗಾದರೆ, ಆ ಅಧ್ಯಯನದಲ್ಲಿ ಏನಿದೆ ಎಂಬುದನ್ನು ಇಲ್ಲಿ ನೋಡೋಣ.


ಕಾಫಿ ಕ್ಯಾನ್ಸರ್ ಕಾರಕವೇ?
ಕಾಫಿಯೊಂದು ನೈಸರ್ಗಿಕ ರಾಸಾಯನಿಕಗಳ ಮಿಶ್ರಣವಾಗಿದ್ದು, ಕೆಫೀನ್ ಅತ್ಯಂತ ಪ್ರಸಿದ್ಧವಾದ ರಾಸಾಯನಿಕವಾಗಿದೆ. ಇದರ ಜೊತೆಗೆ ಕ್ಲೋರೊಜೆನಿಕ್ ಆಮ್ಲ, ಪುಟ್ರೆಸಿನ್‌ಗಳಂತಹ ಇತರ ರಾಸಾಯನಿಕಗಳನ್ನು ಒಳಗೊಂಡಿವೆ. ಅಷ್ಟೇ ಅಲ್ಲ, ಕಾಫಿ ಬೆಳೆ ಬೆಳೆಯುವಾಗ ಅನೇಕ ರಾಸಾಯನಿಕಗಳು, ರಸಗೊಬ್ಬರಗಳು, ಕೀಟನಾಶಕಗಳ ಬಳಕೆಯನ್ನು ಮಾಡಲಾಗುತ್ತದೆ. ಹೀಗಾಗಿ ಸರಳವಾದ ಕಾಫಿ ರಾಸಾಯನಿಕಗಳ ಕೇಂದ್ರ ಎನ್ನುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಹೆಚ್ಚಿನವರು ಕಾಫಿ ಸೇವನೆಯು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಹೇಳುವುದುಂಟು. ಯಾವುದನ್ನೇ ಅಗಲೀ, ಅತಿಯಾಗಿ ಸೇವಿಸಿದರೆ, ಅದರಿಂದ ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚು. ಇದಕ್ಕೆ ಕಾಫಿಯೂ ಹೊರತಾಗಿಲ್ಲ. ಆದರೆ, ಇದರಿಂದ ಕ್ಯಾನ್ಸರ್ ಬರುವುದೇ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ?..ಬನ್ನಿ ಇದಕ್ಕೆ ಉತ್ತರ ಈ ಕೆಳಗಿದೆ.

ದೇಹದ ಮೇಲೆ ಕಾಫಿಯ ಪ್ರಭಾವ
ಕಾಫಿ ಕ್ಯಾನ್ಸರ್ಗೆ ಕಾರಣವಾಗುವುದೇ ಎಂಬ ವಿಚಾರದ ಮೇಲೆ, ಈಗಾಗಲೇ ಹಲವಾರು ಅಧ್ಯಯನಗಳು ನಡೆದಿವೆ. ಅವುಗಳಲ್ಲಿ ಕೆಲವು ಕಾಫಿ ಸಾಮಾನ್ಯವಾಗಿ ಕ್ಯಾನ್ಸರ್ಗಳೊಂದಿಗೆ ಸಂಬಂಧ ಹೊಂದಿಲ್ಲ ಎಂದು ತೋರಿಸುತ್ತದೆ. ಆದರೆ ಇನ್ನು ಕೆಲವು ಅಧ್ಯಯನಗಳು ಕಾಫಿಯನ್ನು ಶ್ವಾಸಕೋಶದ ಕ್ಯಾನ್ಸರ್ ಅಪಾಯದೊಂದಿಗೆ ಸಂಯೋಜಿಸಲಾಗಿದೆ. ಆದರೆ ಇದಕ್ಕೆ ಯಾವುದೇ ನಿರ್ಣಾಯಕ ಪುರಾವೆಗಳು ಲಭ್ಯವಿಲ್ಲ.
ಆದ್ದರಿಂದ, ಕಾಫಿ ನೇರವಾಗಿ ಕ್ಯಾನ್ಸರ್ಗೆ ಕಾರಣವಾಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದನ್ನು ಸಾಬೀತುಪಡಿಸಲು ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ಅಗತ್ಯವಿದೆ. ಇದರ ಜೊತೆಗೆ ಕಾಫಿಯಲ್ಲಿರುವ ಪಾಲಿಫಿನಾಲ್‌ಗಳು ಕ್ಯಾನ್ಸರ್ ಮತ್ತು ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದಂತಹ ಇತರ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತವೆ ಎಂದು ತಿಳಿದುಬಂದಿದೆ.

ಕಾಫಿ ಮತ್ತು ಕ್ಯಾನ್ಸರ್ ನಡುವೆ ಸಂಬಂಧವಿದೆಯೇ?
2020 ರಲ್ಲಿ ಪ್ರಕಟವಾದ ಅಧ್ಯಯನವು ಕ್ಯಾನ್ಸರ್ ಮತ್ತು ಕಾಫಿ ಸೇವನೆಯ ನಡುವಿನ ಸಂಬಂಧವನ್ನು ಕಂಡುಹಿಡಿಯಲಯ ಮಾಡಿದ ಹಿಂದಿನ ಎಲ್ಲಾ ಅಧ್ಯಯನಗಳ ಮೆಟಾ-ವಿಶ್ಲೇಷಣೆ ಮಾಡಿದೆ. ಆ ವಿಷಯದ ಒಟ್ಟು 36 ವಿಭಿನ್ನ ಪೇಪರ್‌ಗಳನ್ನು ಅಧ್ಯಯನ ಮಾಡಿದ ನಂತರ, ಎಂಡೊಮೆಟ್ರಿಯಲ್ ಕ್ಯಾನ್ಸರ್, ಲಿವರ್ ಕ್ಯಾನ್ಸರ್, ಮೆಲನೋಮಸ್, ಬಾಯಿಯ ಕ್ಯಾನ್ಸರ್ ಮತ್ತು ಫಾರಂಜಿಲ್ ಕ್ಯಾನ್ಸರ್‌ಗಳ ವಿರುದ್ಧ ಕಾಫಿ ರಕ್ಷಣಾತ್ಮಕವಾಗಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಇದನ್ನು ಕ್ಯಾನ್ಸರ್ ರೀಸರ್ಚ್ ಫಾರ್ ಇಂಟರ್ನ್ಯಾಷನಲ್ ಏಜೆನ್ಸಿಯು ಈ ಸಂಶೋಧನೆಯನ್ನು ಒಪ್ಪಿಕೊಂಡಿದೆ. ಅಂದರೆ, ಕ್ಯಾನ್ಸರ್ ಹಾಗೂ
ಕಾಫಿಗೆ ನೇರ ಸಂಬಂಧವಿಲ್ಲ ಎಂಬುದು ಈ ಮೂಲಕ ತಿಳಿದುಬರುತ್ತದೆ.

ಮಿತವಾಗಿದ್ದರೆ ತಪ್ಪಿಲ್ಲ
ಕಾಫಿ ಸುರಕ್ಷಿತವಾಗಿದ್ದು, ಬಹಳ ಹಿಂದಿನಿಂದಲೂ ಇದನ್ನು ಸೇವಿಸಲಾಗುತ್ತಿದೆ. ಆದರೆ, ಅತಿಯಾಗಿ ಸೇವಿಸುವ ಮುನ್ನ ಎಚ್ಚರವಿರಲಿ, ಏಕೆಂದರೆ,ಅತಿಯಾದರೆ, ಅಮೃತವೂ ವಿಷವಾಗುವುದು ಎಂಬ ಮಾತನ್ನು ನೀವು ಕೇಳಿರಬೇಕು. ಸಣ್ಣ ಪ್ರಮಾಣದಲ್ಲಿ ಸೇವಿಸಿದರೆ, ಯಾವುದೇ ಪರಿಣಾಮ ಉಂಟಾಗುವುದಿಲ್ಲ.



Click it and Unblock the Notifications











