For Quick Alerts
ALLOW NOTIFICATIONS  
For Daily Alerts

ಈ ಯೋಗ ಭಂಗಿಗಳನ್ನು ಮಾಡಿದರೆ ಶೀಘ್ರವೇ ಸುಸ್ತು ಮಾಯ

|

ನಾವೆಲ್ಲರೂ ಒಂದಿಲ್ಲೊಂದು ಒತ್ತಡದಲ್ಲಿ ಜೀವನ ನಡೆಸುತ್ತಿದ್ದೇವೆ. ನಮಗೆ ಅಗತ್ಯವಾದಾಗೆಲ್ಲ ಒತ್ತಡವನ್ನು ದೂರಮಾಡಲು ವಿಶ್ರಾಂತಿಯನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಇರಬಹುದು. ಹೀಗಾದಾಗ ನಾವು ಇನ್ನಷ್ಟು ಒತ್ತಡಕ್ಕೆ ಒಳಗಾಗಿತ್ತೇವೆ. ಇದು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ನೇರಪರಿಣಾಮ ಬೀರುತ್ತದೆ, ಜೊತೆಗೆ ವಯಸ್ಸಾಗುತ್ತಿದ್ದಂತೆ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಹಾಗಾಗಿ ಇದಕ್ಕೆ ನಾವೊಂದು ಪರಿಹಾರವನ್ನು ಕಂಡುಕೊಳ್ಳುವುದು ಅತೀ ಅವಶ್ಯಕ.

Best Yoga Poses To Try For Instant Relaxation

ನಿಮಗೆ ವಿಶ್ರಾಂತಿಯ ಅಗತ್ಯವಿದ್ದಾಗ ಮಾಡಬಹುದಾದ ಒಂದು ಒಳ್ಳೆಯ ವಿಷಯವೆಂದರೆ ಅದು ಯೋಗ. ಯೋಗದಲ್ಲಿರುವ ಹಲವು ಭಂಗಿಗಳು ನಮ್ಮ ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ನಿವಾರಿಸಬಹುದು. ಯೋಗದಲ್ಲಿನ ವಿಲೋಮಗಳು, ದೇಹ ಮಡಚುವುದು ಮತ್ತು ಒರಗಿಕೊಳ್ಳುವಂಥ ಭಂಗಿಗಳು ನಿಮಗೆ ನಿರಾಳವಾದ ಭಾವನೆಯನ್ನು ನೀಡಬಲ್ಲವು. ಹಾಗಾಗಿ ನಾವು ಹೇಳುವ ಕೆಲವು ಯೋಗ ಭಂಗಿಗಳನ್ನು ಪ್ರಯತ್ನಿಸಿ.

ಈ ಕೆಲವು ಸರಳ ಸರಣಿಯು ಆರಂಭಿಕರಿಗಾಗಿ ಮತ್ತು ಪರಿಣಿತರಿಗೆ ಸೂಕ್ತವಾಗಿದೆ. ಮಲಗುವ ಮೊದಲು ಅಥವಾ ದಿನದ ಯಾವುದೇ ಸಮಯದಲ್ಲಿ ಇದನ್ನು ಅಭ್ಯಾಸ ಮಾಡಿ, ಇದು ನೀವು ಉದ್ವಿಗ್ನತೆಯನ್ನು ಅನುಭವಿಸುತ್ತಿರುವಾಗ ನಿಮ್ಮ ಮನಸ್ಸು ಮತ್ತು ದೇಹವನ್ನು ವಿಶ್ರಾಂತಿಯಲ್ಲಿ ಇಡಲು ಒಂದು ಉತ್ತಮ ವಿಧಾನವಾಗಿದೆ.

ಅಗಲ-ಕಾಲುಗಳ ಮುಂದೆ ಬಾಗಿದ ಭಂಗಿ (ಪ್ರಸರಿತ ಪಾದೋತ್ತಾಸನ)

ಅಗಲ-ಕಾಲುಗಳ ಮುಂದೆ ಬಾಗಿದ ಭಂಗಿ (ಪ್ರಸರಿತ ಪಾದೋತ್ತಾಸನ)

ನೇರವಾಗಿ ನಿಂತು ನಿಮ್ಮ ಕಾಲುಗಳನ್ನು ಅಗಲವಾಗಿಸಿ. ನಿಮ್ಮ ಕಾಲ್ಬೆರಳುಗಳನ್ನು ಸ್ವಲ್ಪ ತಿರುಗಿಸಿ. ಸೊಂಟ ಬಗ್ಗಿಸಿ ಮುಂದಕ್ಕೆ ಬಾಗಿ. ಭುಜಕ್ಕೆ ನೇರವಾಗಿ ನಿಮ್ಮ ಕೈಗಳನ್ನು ಮ್ಯಾಟ್ ಮೇಲೆ ಇಡಿ. ತಲೆ ಮತ್ತು ಕುತ್ತಿಗೆಯನ್ನು ಬಿಡಲು ನಿಮ್ಮ ಮೊಣಕಾಲನ್ನು ಸಡಿಲಿಸಿ. ನಿಧಾನಕ್ಕೆ ನಿಂತ ಭಂಗಿಗೆ ಮರಳಿ.

ಹಲ್ಲಿಯ ಭಂಗಿ

ಹಲ್ಲಿಯ ಭಂಗಿ

ಕೈಯನ್ನು ನೆಲಕ್ಕೆ ತಾಗಿಸಿ ದೇಹವನ್ನು ಬಗ್ಗಿಸಿ ನಿಲ್ಲಿ. ಬಲಗಾಲನ್ನು ಬಲ ಕೈಯ ಹತ್ತಿರ ತಂದು ಎಡ ಕಾಲನ್ನು ನೆಲಕ್ಕೆ ತಾಗಿಸಿ, ನಿಮ್ಮ ಕಾಲು ಸಾಕಷ್ಟು ದೂರ ಇದ್ದು ಬಲ ಕಾಲು ನೇರವಾಗಿರಬೇಕು. ಭುಜವು ಆರಾಮದಾಯಕ ಭಂಗಿಯಲ್ಲಿರುವ ಭುಜವನ್ನು ಉದ್ದಕ್ಕೆ ಬಿಡುವ ಅಥವಾ ಬೆಂಡಾಗಿಸುವ ಭಂಗಿಯನ್ನು ಆರಿಸಿಕೊಳ್ಳಿ. ಉಸಿರನ್ನು ೨೦ ಸೆಕೆಂಡುಗಳ ಕಾಲ ನಿಲ್ಲಿಸಿ. ನಿಧಾನಕ್ಕೆ ಮುಂದಕ್ಕಿಟ್ಟ ಕಾಲನ್ನು ಹಿಂದಕ್ಕೆ ಇಡಿ. ಇದೇ ವ್ಯಾಯಾಯಮನ್ನು ಇನ್ನೊಂದು ಕಾಲಿಗೂ ಮಾಡಿ.

ಸಿಂಹದ ಭಂಗಿ

ಸಿಂಹದ ಭಂಗಿ

ಹೊಟ್ಟೆಯ ಮೇಲೆ ಮಲಗಿ. ಮೊಣಕೈಯನ್ನು ಭುಜದ ನೇರಕ್ಕೆ ತಂದು ಎದೆಯನ್ನು ಮೇಲಕ್ಕೆ ಎತ್ತಿ. ಭುಜವನ್ನು ಸ್ವಲ್ಪ ಕೆಳಗೆ ತನ್ನಿ ಹಾಗೂ ಮುಂಗೈಯನ್ನು ನಿಧಾನಕ್ಕೆ ಕೆಳಗೆ ಒತ್ತಿ. ಮುಂದಕ್ಕೆ ನೋಡಿ ಹಾಗೂ ಗದ್ದವನ್ನು ನಿಧಾನಕ್ಕೆ ಕೆಳಗೆ ತನ್ನಿ.

ಸೇತುವೆ ಭಂಗಿ

ಸೇತುವೆ ಭಂಗಿ

ಅಂಗಾತವಾಗಿ ಮಲಗಿ. ಕಾಲನ್ನು ಬಗ್ಗಿಸಿ ಪಾದವನ್ನು ನೆಲಕ್ಕೆ ಇಡಿ. ಎರಡೂ ಕಾಳುಗಳನ್ನು ಜೊತೆಗೆ ಇಡದೆ ಸ್ವಲ್ಪ ಅಂತರದಲ್ಲಿಡಿ. ಪಾದ ಮತ್ತು ಕಾಲನ್ನು ನೆಲಕ್ಕೆ ಒತ್ತಿ ದೇಹವನ್ನು ಮೇಲಕ್ಕೆ ಎತ್ತಿ. ಎಷ್ಟು ಸಾಧ್ಯವೋ ಅಷ್ಟು ಮೇಲೆ ದೇಹವನ್ನು ತೆಗೆದುಕೊಂಡು ಹೋಗಿ. ನಿಮ್ಮ ದೇಹ ಆರಾಮದಾಯಕವೂ ಆಗಿರಬೇಕು ಜೊತೆಗೆ ಆಧಾರವೂ ಸರಿಯಾಗಿರಬೇಕು. ನಿಮ್ಮ ಕೈ ನೆಲದ ಮೇಲೆ ಇರಲಿ ಹಾಗೂ ಅಂಗೈ ಮೇಲ್ಮುಖವಾಗಿರಲಿ.

ಐಚ್ಛಿಕ ಭಂಗಿ

ಐಚ್ಛಿಕ ಭಂಗಿ

ಭುಜವನ್ನು ಮೇಲಕ್ಕೆ ಎತ್ತಿ ಕಿವಿಯ ಸಮಕ್ಕೆ ತನ್ನಿ.

ಮುಂದಕ್ಕೆ ಬಗ್ಗುವ ಭಂಗಿ.

ಸೊಂಟದ ಅಗಲಕ್ಕೆ ತಕ್ಕಂತೆ ನೇರವಾದ ಭಂಗಿಯಲ್ಲಿ ನಿಲ್ಲಿ. ಮೊಣಕಾಲನ್ನು ಸ್ವಲ್ಪವೇ ಸಡಿಲವಾಗಿ ಬಿಟ್ಟು ಮುಂದಕ್ಕೆ ಬಾಗಿ. ಮೊಣಕೈ ಗಳನ್ನು ಒಂದಕ್ಕೆ ಒಂದು ವಿರುದ್ಧವಾಗಿ ಇಡಿ. ನಿಮ್ಮ ತೋಳು, ತಲೆ ಮತ್ತು ಕುತ್ತಿಗೆಯನ್ನು ಭಾರವಾಗುವಂತೆ ನೊಡಿಕೊಳ್ಳಿ. ಬೆನ್ನಿನ ಕೆಳಭಾಗದಿಂದ ಒತ್ತಡವನ್ನು ಕಡಿಮೆ ಮಾಡುವಂತೆ ದೇಹವನ್ನು ಚಲಿಸಿ. ಮೊಣಕಾಲನ್ನು ಮತ್ತಷ್ಟು ಬೆಂಡಾಗುವಂತೆ ಮಾಡಿ ದೇಹದ ಭಾರವನ್ನು ಮುಂದಕ್ಕೆ ತನ್ನಿ. ನಿಧಾನಕ್ಕೆ ನಿಲ್ಲುವ ಭಂಗಿಗೆ ಮರಳಿ ಬನ್ನಿ.

ಈ ಮೇಲಿನ ಯೋಗ ಭಂಗಿಗಳು ನಿಮ್ಮಲ್ಲಿ ವಿಶ್ರಾಂತಿಯ ಅನುಭವವನ್ನು ನೀಡುತ್ತವೆ.

English summary

Best Yoga Poses To Try For Instant Relaxation

Here we are discussing about 5 best Yoga Poses To Try For Instant Relaxation. We all have stress. But how we deal with it is a whole different story. The next time you need to unwind after a long day, try a few of our favorite yoga inversions, forward folds and reclining poses to help. Read more.
X
Desktop Bottom Promotion