Latest Updates
-
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ!
ಮೂಳೆಗಳ ಆರೋಗ್ಯಕ್ಕೆ ಟಾಪ್ 8 ಆಹಾರಗಳು
ನಾವು ವಯಸ್ಸಾದ ಮೇಲೆ ಮೊಳೆಗೆ ಸಂಬಂಧಿಸಿದ ಸಮಸ್ಯೆ ಕಾಡಲಾರಂಭಿಸಿದ ಮೇಲೆ ಮೂಳೆಯ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕಿಂತ ಪ್ರತಿನಿತ್ಯ ಮೂಳೆಗಳ ಆರೋಗ್ಯದ ಕಡೆ ಗಮನ ನೀಡಬೇಕು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಮೂಳೆಗಳ ಆರೋಗ್ಯಕ್ಕೆ ಅವಶ್ಯಕವಾದ ಆಹಾರಗಳನ್ನು ಸೇವಿಸಬೇಕು.

ಮೂಳೆಗಳ ಆರೋಗ್ಯಕ್ಕೆ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಇರುವ ಆಹಾರ ತುಂಬಾನೇ ಒಳ್ಳೆಯದು. ವಿಟಮಿನ್ ಡಿ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ವಿಟಮಿನ್ ಡಿ ನಿಮಗೆ ಆಹಾರಕ್ಕಿಂತ ಹೆಚ್ಚಾಗಿ ಸೂರ್ಯನ ಬೆಳಕಿನಲ್ಲಿ ಸಿಗುತ್ತದೆ. ಪ್ರತಿದಿನ ಬೆಳಗ್ಗೆ (8 ಗಂಟೆಯ ಒಳಗೆ) ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ನಿಲ್ಲುವುದು ಒಳ್ಳೆಯದು. ಇನ್ನು ಕ್ಯಾಲ್ಸಿಯಂ ಅಧಿಕವಿರುವ ಆಹಾರಗಳನ್ನು ಸೇವಿಸಬೇಕು. ನಾವಿಲ್ಲಿ ಯಾವೆಲ್ಲಾ ಆಹಾರಗಳು ಮೂಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಮೊಸರು
ಮೊಸರನ್ನು ತಿನ್ನುವುದು ಅನೇಕ ಕಾರಣಗಳಿಂದ ಒಳ್ಳೆಯದು. ಇದನ್ನು ನಿಮ್ಮ ಪ್ರತಿನಿತ್ಯದ ಆಹಾರಕ್ರಮದಲ್ಲಿ ಸೇರಿಸುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಒಂದು ಮುಕ್ಕಾಲು ಕಪ್ ಮೊಸರು ತಿಂದರೆ 260ರಿಂದ 270ರಷ್ಟು ಕ್ಯಾಲ್ಸಿಯಂ ಇರುತ್ತದೆ. ನಿಮ್ಮ ದೇಹಕ್ಕೆ ದಿನದಲ್ಲಿ ಅಗ್ಯವಿರುವ ಕ್ಯಾಲ್ಸಿಯಂನಲ್ಲಿ ಶೇ. 30ರಷ್ಟು ಮೊಸರಿನಿಂದಲೇ ಸಿಗುತ್ತದೆ.

ಟೋಫು
ವೇಗನ್ ಡಯಟ್ ಪಾಲಿಸುವವರಿಗೆ ಎಲ್ಲಾ ಬಗೆಯ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ, ಆದರೆ ಟೋಫು ಅನ್ನು ಎಲ್ಲರೂ ಸೇವಿಸಬಹುದಾಗಿದೆ. ಇದರಲ್ಲಿ ಕ್ಯಾಲ್ಸಿಯಂ ಹಾಗೂ ಮೂಳೆಯನ್ನು ಸದೃಢವಾಗಿಸುವ ಮ್ಯಾಂಗನೀಸ್ ಅಂಶವಿದ್ದು ಇದನ್ನು ತಿನ್ನುವುದರಿಂದ ಮೂಳೆಯಲ್ಲಿರುವ ಖನಿಜಾಂಶಗಳ ಸಾಂದ್ರತೆ ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ. ಒಮ್ಮೆ ಸರ್ವ್ ಮಾಡುವ ಟೋಫುವಿನಲ್ಲಿ 200-520 ಮಿಗ್ರಾಂ ಪ್ರೊಟೀನ್ ಇದ್ದು ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಸಾಲಮೋನ್
ಸಾಲಮೋನ್ ಮೀನಿನಲ್ಲಿ ಒಮೆಗಾ 3, ವಿಟಮಿನ್ ಡಿ ಇದ್ದು ಮೂಳೆಯ ಆರೋಗ್ಯಕ್ಕೆ ತುಂಬಾನ ಒಳ್ಳೆಯದು. ಇದರಲ್ಲಿರುವ ವಿಟಮಿನ್ ಡಿ ದೇಹವು ಆಹಾರದಲ್ಲಿನ ಕ್ಯಾಲ್ಸಿಯಂ ಹೆಚ್ಚು ಹೀರಿಕೊಳ್ಳುವಂತೆ ಮಾಡುತ್ತದೆ. 2.5ಗ್ರಾಂ ಸಾಲಮೋನ್ ತಿಂದರೆ ಅದರಲ್ಲಿ 400-600 IUನಷ್ಟು ವಿಟಮಿನ್ ಡಿ ಹಾಗೂ 200 ಮಿಗ್ರಾಂ ಕ್ಯಾಲ್ಸಿಯಂ ದೊರೆಯುವುದು.

ಪ್ರೂನ್ಸ್ (ಒಣ ಪ್ಲಮ್)
ಪ್ರೂನ್ಸ್ ಅಂದರೆ ಒಣಗಿಸಿದ ಪ್ಲಮ್ , ಇದು ನಿಮಗೆ ಸೂಪರ್ ಮಾರ್ಕೆಟ್‌ಗಳಲ್ಲಿ, ಆನ್‌ಲೈನ್‌ನಲ್ಲಿ ಕೂಡ ಸಿಗುತ್ತದೆ. ಇದನ್ನು ಸ್ನ್ಯಾಕ್ಸ್ ಆಗಿ ಬಳಸಬಹುದಾಗಿದ್ದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದಿನಾ 5-6 ಪ್ರೂನ್ಸ್ ತಿನ್ನುವುದರಿಂದ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ವಿಟಮಿನ್ ಕೆ ಇದ್ದು ಮುಳೆಗಳ ಮೆಟಾಬಲಿಸಂಗೆ ಒಳ್ಳೆಯದು.

ಬೂತಾಯಿ ಅಥವಾ ಮತ್ತಿಮೀನು
ಮತ್ತಿಮೀನು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಅಧಿಕವಿರುತ್ತದೆ. ಎರಡರಿಂದ ಮೂರು ಮತ್ತಿ ಮೀನು ತಿಂದರೆ ನಿಮಗೆ 380 ಮಿಗ್ರಾಂನಷ್ಟು ಕ್ಯಾಲ್ಸಿಯಂ ದೊರೆಯುತ್ತದೆ. ಈ ಮೀನಿನಲ್ಲಿ ಇತರ ಆಹಾರಗಳಲ್ಲಿ ಇರುವುದಕ್ಕಿಂತ ಅಧಿಕ ಕ್ಯಾಲ್ಸಿಯಂ ಇರುತ್ತದೆ. ಮುಳ್ಳು ಸ್ವಲ್ಪ ಅಧಿಕವಿರುವ ಈ ಮೀನು ರುಚಿಯಲ್ಲಿ ಸೂಪರ್ ಆಗಿರುತ್ತದೆ.

ಮೊಟ್ಟೆ
ಮೊಟ್ಟೆಯಲ್ಲಿ ದಿನದಲ್ಲಿ ಅವಶ್ಯಕವಾದ ವಿಟಮಿನ್‌ಗಳಲ್ಲಿ ಶೇ.6ರಷ್ಟು ಮಾತ್ರ ಇರುವುದಾದರೂ ಇದನ್ನು ಆಹಾರಕ್ರಮದಲ್ಲಿ ಸೇರಿಸುವುದರಿಂದ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಪಾಲಾಕ್, ಮತ್ತಿತರ ಸೊಪ್ಪುಗಳು
ಸೊಪ್ಪುಗಳಲ್ಲಿ ಕ್ಯಾಲ್ಸಿಯಂ ಅಧಿಕವಿರುತ್ತದೆ. ನಿಮಗೆ ದಿನನಿತ್ಯ ಅವಶ್ಯಕವಿರುವ ಕ್ಯಾಲ್ಸಿಯಂನಲ್ಲಿ ಶೇ. 25ರಷ್ಟು ಒಂದು ಕಪ್ ಸೊಪ್ಪಿನಲ್ಲಿ ಸಿಗುತ್ತದೆ. ಇದರಲ್ಲಿ ನಾರಿನಂಶ, ಕಬ್ಬಿಣದಂಶ, ವಿಟಮಿನ್ ಎ ಇದ್ದು ದೇಹವು ಕ್ಯಾಲ್ಸಿಯಂ ಹೀರಿಕೊಳ್ಳು ಸಹಾಯ ಮಾಡುತ್ತದೆ. ಇದರಿಂದ ಮೂಳೆಗಳ ಆರೋಗ್ಯ ವೃದ್ಧಿಸುವುದು.

ತುನಾ ಮೀನು
ಇದು ಕೂಡ ಕೊಬ್ಬಿನಂಶ ಅಧಿಕವಿರುವ ಮತ್ತೊಂದು ಮೀನಾಗಿದೆ. ಇದರಲ್ಲಿ ದಿನನಿತ್ಯ ಅವಶ್ಯಕವಾದ ಕ್ಯಾಲ್ಸಿಯಂನಲ್ಲಿ ಶೇ. 39ರಷ್ಟು ದೊರೆಯುವುದು. ಅಲ್ಲದೆ ಇದರಲ್ಲಿ ವಿಟಮಿನ್ ಡಿ ಕೂಡ ಇರುವುದರಿಂದ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.
ಈ ಆಹಾರಗಳಲ್ಲಿ ಯಾವುದಾದರೂ ಒಂದು ಬಗೆಯ ಆಹಾರವಾದರೂ ದಿನನಿತ್ಯ ಸೇವಿಸುವುದರಿಂದ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.



Click it and Unblock the Notifications
