Latest Updates
-
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್!
ಅತಿಯಾಗಿ ಆಂಟಿಬಯಾಟಿಕ್ ಬಳಸುತ್ತಿರುವ ಭಾರತೀಯರೇ ಅಪಾಯದಿಂದ ಎಚ್ಚೆತ್ತುಕೊಳ್ಳಿ!
ಭಾರತದಲ್ಲಿ ಅತಿ ಹೆಚ್ಚು ಆಂಟಿಬಯೋಟಿಕ್ ಗಳನ್ನು ಬಳಸಲಾಗುತ್ತಿರುವುದು ಶೋಚನೀಯ ಸಂಗತಿ ಎಂದಿದೆ ಲ್ಯಾನ್ಸೆಟ್ ಸಂಶೋಧನೆ. ಇದು ತುಂಬಾ ಅಪಾಯಕಾರಿ ಎಂದು ಅಭಿಪ್ರಾಯ ಪಟ್ಟಿದೆ.
ಅದರಲ್ಲೂ ಅಝಿತ್ರೋಮೈಸಿನ್ 500mg ಟ್ಯಾಬ್ಲೆಟ್ ಹಾಗೂ ಸೆಫಿಕ್ಸಿಮ್ 200mg ಟ್ಯಾಬ್ಲೆಟ್ ಅಂತೂ ಭಾರತದಲ್ಲಿ ಅತಿ ಹೆಚ್ಚಾಗಿ ಬಳಸಲಾಗುತ್ತಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಅನುಚಿತವಾದ ಆಂಟಿ ಬಯೋಟಿಕ್ ಬಳಕೆಯಿಂದ ಸಾಕಷ್ಟು ಜನ ಡ್ರಗ್ ರೆಸಿಸ್ಟೆಂಸ್ ತೊಂದರೆ ಗೀಡಾಗಿದ್ದಾರೆ ಅಂದರೆ ಔಷಧಿ ತೆಗೆದುಕೊಂಡರೂ ಅದು ತನ್ನ ಕೆಲಸವನ್ನು ನಿರ್ವಹಿಸುವುದರಲ್ಲಿ ಅಸಮರ್ಥ ವಾಗಿರುವಂತಹ ಸ್ಥಿತಿ ಅವರಲ್ಲಿ ಏರ್ಪಟ್ಟಿರುತ್ತದೆ.

ಪ್ರತಿ ಜೀವಕಗಳಿಗೆ ಪ್ರತಿರೋಧ/antibiotic resistance ಬೆಳೆಯಲು ಕಾರಣಗಳೇನು?
ಮನುಷ್ಯ ಮತ್ತು ಪ್ರಾಣಿ ಗಳಿಗೆ ಸೋಂಕನ್ನು ಹರಡುವ ಬ್ಯಾಕ್ಟೀರಿಯಾ ಗಳೇ ಔಷಧಿಗಳಿಗೆ ಪ್ರತಿರೋಧ ಶಕ್ತಿಯನ್ನು ಪಡೆದುಕೊಂಡಾಗ,
ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಬೇಕಾದ ಆಂಟಿ ಬಯೋಟಿಕ್ ಗಳು ತನ್ನ ಕೆಲಸ ನಿರ್ವಹಿಸುವಲ್ಲಿ ನಿಶಕ್ತ್ಯವಾಗುತ್ತದೆ.
ಬ್ಯಾಕ್ಟೀರಿಯಾ ಗಳೇ ಔಷಧಿಗಳಿಗೆ ಪ್ರತಿ ರೋಧ ಶಕ್ತಿಯನ್ನು ಪಡೆದಾಗ, ಆಂಟಿ ಬಯೋಟಿಕ್ ಗಳು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ನಿಷ್ಪ್ರಯೋಜನ ಗೊಳಿಸಲು ಅಥವಾ ನಿಲ್ಲಿಸಲು ಅಸಮರ್ಥವಾಗುತ್ತದೆ.
ಹೀಗೆ ಬ್ಯಾಕ್ಟೀರಿಯಾಗಳೇ ಪ್ರಬಲ ವಾದಾಗ ಪ್ರತಿರೋಧವು ಸಂಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಬ್ಯಾಕ್ಟೀರಿಯಾದ ಸೋಂಕಿಗೆ ಚಿಕಿತ್ಸೆ ನೀಡಲು ತುಂಬಾ ಕಷ್ಟವಾಗುತ್ತದೆ.

ಆಂಟಿ ಬಯೋಟಿಕ್ ರೆಸಿಸ್ಟೆನ್ಸ್ ನಿಂದ ಉಂಟಾಗುವ ಅಪಾಯಗಳು
ಹಿಂದೆ ಸಫಲವಾಗಿ ಕೆಲಸ ನಿರ್ವಹಿಸುತ್ತಿದ್ದ ಆಂಟಿ ಬಯೋಟಿಕ್ ಗಳು ತನ್ನ ಪರಿಣಾಮವನ್ನು ಬೀರುವಲ್ಲಿ ನಿಷ್ಪ್ರಯೋಜಕವಾಗುತ್ತದೆ. ಯಾರ ದೇಹದಲ್ಲಿ ಇಂತಹ ಸಮಸ್ಯೆ ಉಂಟಾಗುವುದೋ ಅವರು ಗುಣಮುಖರಾಗುವುದಿರಲಿ ಅವರ ಆರೋಗ್ಯ ಇನ್ನೂ ಹದಗೆಡುತ್ತದೆ.
ಬ್ಯಾಕ್ಟೀರಿಯಾ ಗಳ ಬೆಳವಣಿಗೆ ಹೆಚ್ಚಾಗಿ ಸೋಂಕು ಹೆಚ್ಚಾಗುವ ತನಕ ದೇಹಕ್ಕೆ ಇದು ಅರ್ಥವಾಗುವುದಿಲ್ಲ. ಎಷ್ಟೋ ಸಲ ಈ ತೊಂದರೆಯಿಂದ ಹಾಸ್ಪಿಟಲ್ ಗೆ ಅಡ್ಮಿಟ್ ಆಗಬೇಕಾಗೂ ಬರಬಹುದು.
ಇದರಿಂದ ವಿಪರೀತ ವಾಂತಿ,ಜ್ವರ ಉಂಟಾಗಿ ರೋಗಿಯು ಸಾಕಷ್ಟು ದಿನಗಳು ಬಳಲಿ ನಿಶಕ್ತರಾಗುವ ಸಾಧ್ಯತೆಗಳಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಆಂಟಿ ಬಯೋಟಿಕ್ ರೆಸಿಸ್ಟೆನ್ಸ್ ಸಮಸ್ಯೆ ಯನ್ನು ತಡೆಗಟ್ಟುವುದು ಹೇಗೆ?
- ಡಾಕ್ಟರ್ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳನ್ನು ಎಂದಿಗೂ ತೆಗೆದುಕೊಳ್ಳಬೇಡಿ.
- ರೋಗಕ್ಕೆ ಚಿಕಿತ್ಸೆ ನೀಡುತ್ತಿರುವಾಗ ಡಾಕ್ಟರ್ ಸಲಹೆಗಳನ್ನು ತಪ್ಪದೇ ಅನುಸರಿಸಿ.
- ಸಮಸ್ಯೆ ಉಂಟಾದಾಗ ನೀವಾಗೇ ಹಳೆ ಪ್ರಿಸ್ಕ್ರಿಪ್ಷನ್ ಅನುಸರಿಸಬೇಡಿ. ವೈದ್ಯರೊಂದಿಗೆ ಚರ್ಚಿಸಿ.
- ಡೋಸ್ ಗಳನ್ನು ಮರೆಯದೆ ತೆಗೆದುಕೊಳ್ಳಿ.
- ಕಾಯಿಲೆ ಗುಣವಾಗುತ್ತಿದೆ ಎಂದು ಅರ್ಧದಲ್ಲಿಯೇ ಔಷಧಿಯನ್ನು ನಿಲ್ಲಿಸಬೇಡಿ. ಪೂರ್ತಿ ಕೋರ್ಸ್ ಮುಗಿಸುವುದರಿಂದ ಪದೇ ಪದೇ ಬ್ಯಾಕ್ಟೀರಿಯಾ ಗಳು ಬೆಳೆಯುವುದಿಲ್ಲ.
- ಆಗಾಗ್ಗೆ ಕೈ ತೊಳೆಯುತ್ತಿರಿ. ದೇಹಕ್ಕೆ ಬ್ಯಾಕ್ಟೀರಿಯಾಗಳು ಸೇರದಂತೆ ನೋಡಿಕೊಳ್ಳಿ.
- ರೋಗ ನಿರೋಧಕಗಳೇ ಮಾರಕ ವಾಗದಂತೆ ಎಚ್ಚರವಹಿಸಿ.



Click it and Unblock the Notifications
