For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: 48 ಗಂಟೆಗಳಲ್ಲಿಯೇ ಕೊರೊನಾವೈರಸ್‌ ಕೊಲ್ಲುತ್ತೆ ಈ ಔಷಧಿ

|

ಚೀನಾದ ವುಹಾನ್‌ ನಗರದಲ್ಲಿ ಡಿಸೆಂಬರ್ 30, 2019ರಂದು ಮತ್ತೆಯಾದ ಕೊರೊನಾವೈರಸ್‌ಗೆ ಚೀನಾ ಮಾತ್ರವಲ್ಲ ಇಡೀ ವಿಶ್ವವೇ ನಲುಗಿದೆ. ಅಂದಿನಿಂದಲೇ ಈ ಮಾರಣಾಂತಿಕ ಕೊರೊನಾವೈರಸ್ ತಡೆಗಟ್ಟಲು, ಇದನ್ನು ನಾಶಮಾಡಲು ಔಷಧಿ ಕಂಡು ಹಿಡಿಯುವ ಪ್ರಯತ್ನವನ್ನು ಬಹುತೇಕ ರಾಷ್ಟ್ರಗಳು ಮಾಡುತ್ತಿವೆ.

Anti-parasitic Drug Can Kill COVID-19 Cell Culture Within 48 Hours, Study Finds

ಇದಕ್ಕೆ ಅನೇಕರು ಔಷಧಿಯನ್ನು ಕಂಡು ಹಿಡಿದರೂ ಯಾವುದೂ ವೈಜ್ಞಾನಿಕವಾಗಿ ಸಾಬೀತಾಗಿರಲಿಲ್ಲ. ಇದೀಗ ಬಂದಿರುವ ಖುಷಿಯ ವಿಷಯ ಏನಪ್ಪಾ ಅಂದರೆ ಈ ವೈರಸ್‌ ಕೊಲ್ಲುವ ಔಷಧಿಯನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

48 ಗಂಟೆಯಲ್ಲಿಯೇ ವೈರಸ್ ನಾಶ

48 ಗಂಟೆಯಲ್ಲಿಯೇ ವೈರಸ್ ನಾಶ

ಈ ಔಷಧಿಯನ್ನು ನೀಡಿದ 48 ಗಂಟೆಗಳಲ್ಲಿ ಕೊರೊನಾವೈರಸ್ ನಾಶವಾಗುತ್ತವೆ. ಈ ಆ್ಯಂಟಿ ಪ್ಯಾರಾಸೈಟಿಕ್‌ ಔಷಧಿಯನ್ನು ಆಸ್ಟ್ರೇಲಿಯಾ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ . ಈ ಆ್ಯಂಟಿ ಪ್ಯಾರಾಸೈಟಿಕ್‌ ಔಷಧಿಗೆ FDA ಅನುಮೋದನೆಯನ್ನೂ ನೀಡಿದೆ.

ಈ ಔಷಧಿ ಅನೇಕ ವೈರಸ್‌ ಅಂದರೆ ಡೆಂಗ್ಯೂ, ಹೆಚ್‌ಐವಿ, ಇನ್‌ಫ್ಲ್ಯೂಂಜಾ, ಝೀಕಾ ವೈರಸ್ ವಿರುದ್ಧ ಕೂಡ ಹೋರಾಡುತ್ತದೆ.

ಈ ಔಷಧಿಯನ್ನು ನೀಡಿದ 48 ಗಂಟೆಗಳಲ್ಲಿ ದೇಹದಲ್ಲಿ ಕೊರೊನಾವೈರಸ್ ನಾಶವಾಗುವುದು ಎಂದು ಅಧ್ಯಯನಗಳು ಹೇಳಿವೆ.

ಅಧ್ಯಯನ ವರದಿ

ಅಧ್ಯಯನ ವರದಿ

ಇದರ ಕುರಿತ ಅಧ್ಯಯನ ತಂಡವನ್ನು ಮುನ್ನೆಡೆಸಿದ ಡಾ. ಕೈಲೆ ವ್ಯಾಗ್‌ಸ್ಟಾಫ್ ಹೇಳುವ ಪ್ರಕಾರ ಇದನ್ನು ಒಂದು ಬಾರಿ ಚುಚ್ಚಿದರೆ ಎಲ್ಲಾ ವೈರಲ್ RNA 48 ಗಂಟೆಗಳಲ್ಲಿ ನಾಶವಾಗುವುದು, 24 ಗಂಟೆಗಳಲ್ಲಿಯೇ ವೈರಸ್‌ಗಳ ಸಂಖ್ಯೆ ಕ್ಷೀಣಿಸುವುದು ಅಧ್ಯಯದಲ್ಲಿ ತಿಳಿದು ಬಂದಿದೆ ಎಂದಿದ್ದಾರೆ.

ಈ ಔಷಧಿ ನೀಡಿದಾಗ ದೇಹದ ಜೀವಕಣಗಳಲ್ಲಿ ಹರಡಿದ್ದ SARS-CoV-2 ಸೋಂಕಾಣುಗಳನ್ನು 24 ಗಂಟೆಗಳಲ್ಲಿ ಶೇ, 93ರಷ್ಟು , 48 ಗಂಟೆಗಳಲ್ಲಿ ಶೇ. 98.6ರಷ್ಟು ನಾಶ ಪಡಿಸುತ್ತದೆ.

ಇನ್ನೂ ಮನುಷ್ಯನಿಗೆ ಈ ಔಷಧಿ ನೀಡಿಲ್ಲ

ಇನ್ನೂ ಮನುಷ್ಯನಿಗೆ ಈ ಔಷಧಿ ನೀಡಿಲ್ಲ

ಆದರೂ ಈ ಔಷಧಿಯನ್ನು ಇನ್ನೂ ಕೊರೊನಾವೈರಸ್‌ ಸೋಂಕಿತರಿಗೆ ನೀಡಲು ಪ್ರಾರಂಭಿಸಿಲ್ಲ, ಏಕೆಂದರೆ ಇದರ ಬಗ್ಗೆ ಇನ್ನೂ ಕೆಲವು ಅಧ್ಯಯನಗಳು ನಡೆದ ಬಳಿಕವಷ್ಟೇ ನೀಡಲಾಗುವುದು. ಡಾ. ಕೈಲೆ ವ್ಯಾಗ್‌ಸ್ಟಾಫ್ ಅವರು ಈ ಕುರಿತು ಹೇಳುತ್ತಾ'ಇದರ ಬಗ್ಗೆ ಪರೀಕ್ಷೆಗಳು ನಡೆಯುತ್ತಿವೆ. ಇದು ಕೊರೊನಾವೈರಸ್ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆಯೇ ಎಂದು ಅಧ್ಯಯನಗಳು ನಡೆಯುತ್ತಿವೆ. ಇದೊಂದು ಸೇಫ್‌ ಡ್ರಗ್‌ (ಇತರ ಅಡ್ಡಪರಿಣಾಮ ಉಂಟು ಮಾಡದ) ಆಗಿದೆ. ಮನುಷ್ಯರ ದೇಹದಲ್ಲಿ ಇದನ್ನು ಪ್ರಯೋಗಿಸಿದಾಗ ಹೇಗೆ ಪರಿಣಾಮ ಬೀರುತ್ತದೆ(ಲ್ಯಾಬ್‌ನಲ್ಲಿ ಇಲಿಗಳ ಮೇಲೆ ಪ್ರಯೋಗಿಸಿದಾಗ ಯಶಸ್ವಿಯಾಗಿದೆ) ಎಂಬುವುದೇ ನಮ್ಮ ಮುಂದಿನ ಹೆಜ್ಜೆ ಆಗಿದೆ' ಎಂದಿದ್ದಾರೆ.

ಈ ಔಷಧಿಯಿಂದ ಕೋವಿಡ್ 19 ಸಾಮಾಜಿಕ ಪಿಡುಗು ಇಲ್ಲವಾಗುವುದೇ?

ಈ ಔಷಧಿಯಿಂದ ಕೋವಿಡ್ 19 ಸಾಮಾಜಿಕ ಪಿಡುಗು ಇಲ್ಲವಾಗುವುದೇ?

ಕೊರೊನಾವೈರಸ್‌ಗೆ ಔಷಧಿ ಕುರಿತು ಮಾತು ಮುಂದುವರೆಸುತ್ತಾ ' ಇದೀಗ ನಾವೆಲ್ಲಾ ಕೊರೊನಾ ವೈರಸ್‌ ಎಂಬ ಸಾಂಕ್ರಾಮಿಕ ಪಿಡುಗು ಎದುರಿಸುತ್ತಿದ್ದೇವೆ, ಆದರೆ ನಮ್ಮ ಔಷಧಿಯನ್ನು ಮುನುಷ್ಯರ ದೇಹಕ್ಕೆ ನೀಡಲು ಇನ್ನೂ ಅನುಮತಿ ಸಿಕ್ಕಿಲ್ಲ, ನಮ್ಮ ಪ್ರಯತ್ನ ಯಶಸ್ವಿಯಾದರೆ ಕೂಡಲೇ ವಿಶ್ವದ ಎಲ್ಲಾ ಮಾರುಕಟ್ಟೆಯಲ್ಲಿ ಈ ಔಷಧಿ ದೊರೆಯುವಂತೆ ಮಾಡಿ, ಕೊರೊನಾ ತಡೆಗಟ್ಟಬಹುದು' ಎಂದಿದ್ದಾರೆ.

ಕೊರೊನಾವೈರಸ್

ಕೊರೊನಾವೈರಸ್

  • ಕೊರೊನಾವೈರಸ್‌ ಎಂಬ ಸಾಂಕ್ರಾಮಿಕ ಪಿಡುಗು ಬಗ್ಗೆ ತುಂಬಾ ಎಚ್ಚರವಹಿಸಬೇಕು.
  • ಸಾಮಾಜಿಕ ಅಂತರ ಕಾಯ್ದುಕೊಳ್ಳಿ
  • ಲಾಕ್‌ಡೌನ್‌ ಸಂದರ್ಭದಲ್ಲಿ ಹೊರಗಡೆ ಹೋಗದಿದ್ದರೆ ಈ ಕಾಯಿಲೆ ಬರಲ್ಲ
  • ಹೊರಗಡೆ ಹೋಗುವಾಗ ಮುಖಕ್ಕೆ ಮಾಸ್ಕ್ ಧರಿಸಿ.
  • ಕೆಮ್ಮುವಾಗ, ಸೀನುವಾಗ ಟಿಶ್ಯೂ ಹಿಡಿಯಿರಿ.
  • ಕೋವಿಡ್ 19 ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಮನೆಯಲ್ಲಿ ಇತರರಿಂದ ದೂರಸರಿದು, ವೈದ್ಯರಿಗೆ ಮಾಹಿತಿ ತಿಳಿಸಿ.
  • ಕೊರೊನಾವೈರಸ್ ಬಗ್ಗೆ ಭಯ ಬೇಡ, ಇದರಿಂದ ಚೇತರಿಸಿಕೊಂಡವರು ನಮ್ಮೆಲ್ಲರಿಗೆ ಸ್ಪೂರ್ತಿ ತುಂಬುತ್ತಿದ್ದಾರೆ. ಆದ್ದರಿಂದ ಭಯದಿಂದ ಮಾನಸಿಕ ಧೈರ್ಯ ಕಡಿಮೆ ಮಾಡಿಕೊಳ್ಳಬೇಡಿ. ಪರಿಸ್ಥಿತಿಯನ್ನು ಮುನ್ನೆಚ್ಚರಿಕೆಯಿಂದ ನಿಭಾಯಿಸಿದರೆ ಇದರ ವಿರುದ್ಧ ಖಂಡಿತ ಗೆಲುವು ಸಾಧ್ಯ.

English summary

Anti-parasitic Drug Can Kill COVID-19 Cell Culture Within 48 Hours, Study Finds

The anti-parasitic drug ivermectin is an FDA-approved drug that has been shown to be effective in vitro against many viruses including dengue, HIV, influenza and Zika virus.
Story first published: Tuesday, April 7, 2020, 9:54 [IST]
X
Desktop Bottom Promotion