Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
Health tips: 5 ನಿಮಿಷದ ಜಪಾನೀಸ್ ಟವೆಲ್ ವ್ಯಾಯಾಮ ಏನಿದು, ಇದನ್ನು ಹೇಗೆ ಮಾಡುವುದು?
ಕೊಬ್ಬಿನ ಹೊಟ್ಟೆಯನ್ನು ಯಾರು ಕೂಡ ಇಷ್ಟಪಡುವುದಿಲ್ಲ. ಸ್ವಲ್ಪ ಹೊಟ್ಟೆ ಬಂದರೆ ಸಾಕು ಜನರು ಗೇಲಿ ಮಾಡುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ವಿವಿಧ ಆಹಾರ ಪದ್ದತಿ, ವ್ಯಾಯಾಮ ಮಾಡದೆ ಇರುವುದರಿಂದ ಕೊಬ್ಬಿನ ಹೊಟ್ಟೆ ಉಂಟಾಗುತ್ತಿದೆ. ಅನೇಕರು ವಿವಿಧ ವ್ಯಾಯಾಮಗಳ ಮೊರೆ ಹೋದರು ಕೊಬ್ಬಿನ ಹೊಟ್ಟೆಯನ್ನು ಕಡಿಮೆಗೊಳಿಸಲು ಅಥವಾ ಬರ್ನ್ ಮಾಡಲು ಸಾಧ್ಯವಾಗುತ್ತಿಲ್ಲ. ಅದರಲ್ಲೀ ಹೊಟ್ಟೆಯ ಕೆಳ ಭಾಗವಂತು ಬರ್ನ್ ಮಾಡಲು ಬಹಳ ಕಷ್ಟವಿದೆ. ನಿಮಗೊಂದು ತಿಳಿದಿರಲಿ ಇಂತಹ ಹೊಟ್ಟೆಯಿಂದ ಡಯಾಬಿಟಿಸ್, ಹೃದ್ರೋಗಗಳು ಸೇರಿ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

ಹೌದು, ಹೊಟ್ಟೆ ನಿಮ್ಮ ಅಂದವನ್ನು ಹಾಳುಗೆಡವುದು ಮಾತ್ರವಲ್ಲ ನಿಮ್ಮ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಹೀಗಾಗಿ ಹೊಟ್ಟೆಯನ್ನು ಕರಗಿಸುವುದು ಅಥವಾ ಬರ್ನ್ ಮಾಡುವುದು ಅತೀ ಮುಖ್ಯವಾಗಿದೆ. ಹಾಗಾದರೆ ಹೊಟ್ಟೆಯನ್ನು ಕರಗಿಸುವ ಬಗ್ಗೆ ಚಿಂತಾಕ್ರಾಂತರಾಗಿದ್ದೀರಾ..? ವರಿ ಮಾಡಬೇಡಿ ನಾವು ಹೇಳುವ ಐಡಿಯಾವನ್ನು ಪಾಲಿಸಿ. ಹೌದು, ಹೊಟ್ಟೆಯ ಕೊಬ್ಬನ್ನು ಕರಗಿಸುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ ಅಥವಾ ದುಃಖಿಸಬೇಕಾಗಿಲ್ಲ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಜನರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಕೆಲವು ಭಿನ್ನತೆಗಳಿವೆ. ಅಂತಹ ಒಂದು ತಂತ್ರವೆಂದರೆ 5 ನಿಮಿಷಗಳ ಜಪಾನೀಸ್ ಟವೆಲ್ ವ್ಯಾಯಾಮ. ಹಾಗಾದರೆ ಏನಿದು ಜಪಾನೀಸ್ ಟವೆಲ್ ವ್ಯಾಯಾಮ..? ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.
1. ಹೊಟ್ಟೆಯ ಕೊಬ್ಬಿಗಾಗಿ 5 ನಿಮಿಷಗಳ ಜಪಾನೀಸ್ ಟವೆಲ್ ವ್ಯಾಯಾಮ: ಇದು ಹೇಗೆ ಕೆಲಸ ಮಾಡುತ್ತದೆ?
ಜಪಾನೀಸ್ ಐದು ನಿಮಿಷ ಟವೆಲ್ ವ್ಯಾಯಾವು ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ನಿಂದ ಜನಪ್ರಿಯಗೊಂಡಿತು. ಇದು 5 ನಿಮಿಷಗಳ ವ್ಯಾಯಾಮವಾಗಿದ್ದು ಅದು ಕೇವಲ 10 ದಿನಗಳಲ್ಲಿ ನಿಮ್ಮ ಅಬ್ಸ್ ಅನ್ನು ಚಪ್ಪಟೆಗೊಳಿಸುತ್ತದೆ. ಇದು ಸ್ವಲ್ಪ ಅಸಂಭವವೆಂದು ತೋರುತ್ತದೆಯಾದರೂ, ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕಳೆದುಕೊಳ್ಳಲು ಈ ವ್ಯಾಯಾಮ ನಿಮಗೆ ಸಹಾಯ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯಬೇಡ.
ಇನ್ನು ಜಪಾನ್‌ನ ರಿಫ್ಲೆಕ್ಸೋಲಜಿ ಮತ್ತು ಮಸಾಜ್ ತಜ್ಞ ಡಾ ತೋಶಿಕಿ ಫುಕುಟ್ ಸುಡ್ಜಿ ಹತ್ತು ವರ್ಷಗಳ ಹಿಂದೆ ಜನರು ದೇಹದ ಉತ್ತಮ ಆಕಾರವನ್ನು ಪಡೆಯಲು ಸಹಾಯ ಮಾಡಲು ಜಪಾನೀಸ್ ಟವೆಲ್ ತಂತ್ರವನ್ನು ರಚಿಸಿದ್ದಾರೆ. ಈ ತಂತ್ರವು ಬೆನ್ನಿನ ಅಸ್ವಸ್ಥತೆಯನ್ನು ನಿವಾರಿಸಲು, ಬೆನ್ನು ಬಲಪಡಿಸಲು ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಅಲ್ಲದೇ ಶ್ರೋಣಿಯ ಸ್ನಾಯುಗಳ ತಪ್ಪು ಜೋಡಣೆಯಿಂದ ಉಂಟಾಗುವ ಹೊಟ್ಟೆಯ ಕೊಬ್ಬಿನ ಹೆಚ್ಚುವರಿ ಪದರವನ್ನು ಕಡಿಮೆ ಮಾಡಲು ಈ ತಂತ್ರವು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಈ ವ್ಯಾಯಾಮದ ನಿರಂತರ ಅಭ್ಯಾಸವು ಪೆಲ್ವಿಸ್ ಪ್ಲೇಸ್‌ಮೆಂಟ್‌ನಲ್ಲಿ ಸ್ಥಳಾಂತರವನ್ನು ಸರಿಪಡಿಸುತ್ತದೆ ಮತ್ತು ಒಬ್ಬ ವ್ಯಕ್ತಿಯು ಹೊಟ್ಟೆಯ ಕೊಬ್ಬಿನ ಹೆಚ್ಚುವರಿ ಪದರವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಡಾ. ಫುಕುಟ್ಸುಡ್ಜಿ ಈ ವ್ಯಾಯಾಮದ ಹಿಂದಿನ ವಿಜ್ಞಾನ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದು, ಈ ವ್ಯಾಯಾಮವು ನಿಮ್ಮ ಬೆನ್ನುಮೂಳೆ ಮತ್ತು ಸೊಂಟದ ಜೋಡಣೆಯನ್ನು ಸರಿಪಡಿಸುತ್ತದೆ, ಇದು ನಿಮ್ಮ ಕಿಬ್ಬೊಟ್ಟೆಯ ಪ್ರದೇಶದ ಸುತ್ತಲೂ ಕೊಬ್ಬು ಸಂಗ್ರಹಗೊಳ್ಳಲು ಮುಖ್ಯ ಕಾರಣವಾಗಿದೆ. ವೈದ್ಯರು ಈ ತೂಕ ನಷ್ಟ ವಿಧಾನವನ್ನು ಜಪಾನಿನ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.
2. 5 ನಿಮಿಷಗಳ ಜಪಾನೀಸ್ ವ್ಯಾಯಾಮವನ್ನು ಮಾಡುವುದು ಹೇಗೆ ?
ನಿಮ್ಮ ಕೊಬ್ಬಿನ ಹೊಟ್ಟೆಯನ್ನು ಕರಗಿಸುವುದು ಮತ್ತು ಅದನ್ನು ಸರಿಯಾದ ಆಕಾರದಲ್ಲಿಡಲು ಜಪಾನೀಸ್ ಟವೆಲ್ ವ್ಯಾಯಾಮವನ್ನು ಹೇಗೆ ಮಾಡುವುದು ಎಂಬುದು ಹಂತ ಹಂತದಲ್ಲಿ ಇಲ್ಲಿ ತಿಳಿಸಲಾಗಿದೆ.
1. ಈ ವ್ಯಾಯಾಮಕ್ಕಾಗಿ, ನೀವು ಮೊದಲು ಮಾಡ ಬೇಕಾಗಿರುವ ಕೆಲಸ ಒಂದು 4-ಇಂಚಿನ ಅಗಲದ ಟವೆಲ್ ಅನ್ನು ತೆಗೆದುಕೊಂಡು ಅದನ್ನು ಸಿಲಿಂಡರ್ ಮತ್ತು ಚಾಪೆಯ ರೂಪದಲ್ಲಿ ಮಡಚಿಕೊಳ್ಳುವುದು ಅಥವಾ ಸುತ್ತಿಕೊಳ್ಳುವುದು.
2. ಬಳಿಕ ಯೋಗದ ಮ್ಯಾಟ್ ನಲ್ಲಿ ಕುಳಿತುಕೊಳ್ಳಿ ಈಗಾಗಲೇ ಮಡಚಿರುವ ಟವೆಲ್ ಅನ್ನು ನಿಮ್ಮ ಸೊಂಟದ ಹಿಂದೆ ಅಂದರೆ ಹಿಂದಿನ ಸೊಂಟದ ಬಳಿ ಹಿಡಿದುಕೊಳ್ಳಿ.
3. ಈಗ ಮೆಲ್ಲಗೆ ಬೆನ್ನು ಹಾಕಿ ಮ್ಯಾಟ್ ಮೇಲೆ ಮಲಗಿ ಗಮನಿಸಿ ಈ ವೇಳೆ ಟವೆಲ್ ನಿಮ್ಮ ಹೊಟ್ಟೆ ಹಿಂದೆ ಇರಬೇಕು. ಅಂದರೆ ಹೊಕ್ಕುಳಕ್ಕೆ ಸಮನಾಗಿ ಟವೆಲ್ ಅನ್ನು ಹೊಟ್ಟೆಯ ಹಿಂಬದಿಯಲ್ಲಿ ಇರಿಸಿ.
4. ಇನ್ನು ನಿಮ್ಮ ಪಾದಗಳು ಭುಜದ ಅಗಲವನ್ನು ಹೊರತುಪಡಿಸಿ ನಿಮ್ಮ ಕಾಲ್ಬೆರಳುಗಳು ಪರಸ್ಪರ ಸ್ಪರ್ಶಿಸುತ್ತವೆ ಎಂದು ಖಚಿತಪಡಿಸಿಕೊಳ್ಳಿ.
5. ಇನ್ನು ನೀವು ನಿಮ್ಮ ಕೈಗಳನ್ನು ಹಿಂದಕ್ಕೆ ಚಾಚಿ ಅಂಗೈಗಳು ಒಂದಕ್ಕೊಂದು ತಾಗಿಕೊಂಡು ಕೆಳಮುಖವಾಗಿ ಚಾಚಿ.
6. ನಂತರ ನಿಮ್ಮ ಫೋನ್/ಮೊಬೈಲ್‌ನಲ್ಲಿ 5 ನಿಮಿಷಗಳ ಟೈಮರ್ ಅನ್ನು ಇರಿಸಿ ಮತ್ತು ಈ ಪೊಸಿಷನ್ ನಲ್ಲೇ ಇರಿ.
7. 5 ನಿಮಿಷದ ಅಲಾರ್ಮ್ ಬಳಿಕ ಮೆಲ್ಲಗೆ ಒಂದೇ ಬಾರಿ ಎದ್ದೇಳಿ, ಜರ್ಕ್ ಹಾಕಿ ಏಳಬೇಡಿ.
ಹೀಗೆ ನೀವು ಹತ್ತು ಬಾರಿ ದಿನ ನಿತ್ಯ ಮಾಡಿದರೆ ನಿಮ್ಮ ಸೊಂಟ, ಬೆನ್ನು ನೋವು ದೂರವಾಗುತ್ತದೆ ಅಲ್ಲದೇ ನಿಮ್ಮ ಹೊಟ್ಟೆ ಕರಗುತ್ತದೆ. ಈ ರೀತಿ ಹತ್ತು ದಿನ ಪ್ರಯತ್ನಿಸಿ ಇದರ ಫಲಿತಾಂಶ ಹೇಗಿದೆ ಎನ್ನುವುದನ್ನು ನೀವು ಪರೀಕ್ಷಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


