Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2019 ಮೇ 25 ವಿಶ್ವ ಥೈರಾಯ್ಡ್ ದಿನ-ನೀವು ತಿಳಿಯಲೇಬೇಕಾದ ಸಂಗತಿಗಳು
ವಿಶ್ವದೆಲ್ಲೆಡೆಯಲ್ಲಿ ಮೇ 25ರಂದು ವಿಶ್ವ ಥೈರಾಯ್ಡ್ ದಿನವನ್ನಾಗಿ ಆಚರಿಸಲಾಗುತ್ತದೆ. 2018ರಲ್ಲಿ ವಿವಿಧ ರೀತಿಯ ಥೈರಾಯ್ಡ್ ಸಮಸ್ಯೆಗಳು ಸುಮಾರು 42 ಮಿಲಿಯನ್ ಭಾರತೀಯರಲ್ಲಿ ಕಂಡುಬಂದಿದೆ. ಇನ್ನು ಹೆಚ್ಚಿನದ್ದು ಇನ್ನು ಪತ್ತೆಯಾಗದೆ ಇರಬಹುದು. ಥೈರಾಯ್ಡ್ ಎನ್ನುವುದು ದೊಡ್ಡ ಮಟ್ಟದ ಸಮಸ್ಯೆ ಎಂದು ಪರಿಗಣಿಸದೆ ಇದ್ದರೂ ಅದರಿಂದ ಹಲವಾರು ರೀತಿಯ ಬದಲಾವಣೆಗಳು ದೇಹದಲ್ಲಿ ಕಾಣಿಸಿಕೊಳ್ಳುವುದು.

ಥೈರಾಯ್ಡ್ ಸಮಸ್ಯೆ ಎಂದರೇನು?
ಥೈರಾಯ್ಡ್ ಗ್ರಂಥಿಗಳು ಅತಿಯಾಗಿ ಅಥವಾ ಕಾರ್ಯನಿರ್ವಹಿಸದೆ ಇರುವುದನ್ನು ಥೈರಾಯ್ಡ್ ಸಮಸ್ಯೆ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿರುವಂತಹ ಥೈರಾಯ್ಡ್ ಸಮಸ್ಯೆಗಳೆಂದರೆ ಅದು ಹೈಪರ್ ಥೈರಾಯ್ಡಿಸಮ್(ಥೈರಾಯ್ಡ್ ಚಟುವಟಿಕೆಯಲ್ಲಿ ಅಸಾಮಾನ್ಯ ಏರಿಕೆ)ಹೈಪೋಥೈರಾಯ್ಡಿಸಮ್(ಥೈರಾಯ್ಡ್ ಚಟುವಟಿಕೆಯಲ್ಲಿ ಅಸಾಮಾನ್ಯ ಕುಗ್ಗುವಿಕೆ), ಥೈರಾಯ್ಡಿಟಿಸ್(ಥೈರಾಯ್ಡ್ ಗ್ರಂಥಿಯಲ್ಲಿ ಉರಿಯೂತ), ಗಳಗಂಡ ಮತ್ತು ಥೈರಾಯ್ಡ್ ಕ್ಯಾನ್ಸರ್.
ಥೈರಾಯ್ಡ್ ಸಮಸ್ಯೆಯನ್ನು ಗುರುತಿಸುವುದು ತುಂಬಾ ಸುಲಭ ಮತ್ತು ಅದಕ್ಕೆ ಚಿಕಿತ್ಸೆ ಕೂಡ ಸರಳವಾಗಿದೆ. ಥೈರಾಯ್ಡ್ ಗ್ರಂಥಿಯಲ್ಲಿ ಊತವು ಸಾಮಾನ್ಯವಾಗಿ ಕಾಣುವುದು ಮತ್ತು ಇದಕ್ಕೆ ತುಂಬಾ ಎಚ್ಚರಿಕೆಯಿಂದ ಆರೈಕೆ ಮಾಡಬೇಕಾಗಿದೆ. ಇದು ಪತ್ತೆಯಾದ ತಕ್ಷಣವೇ ರೋಗಿಯು ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆರಂಭದಲ್ಲೇ ಪತ್ತೆ ಮಾಡಿಕೊಂಡು ಚಿಕಿತ್ಸೆ ನೀಡಿದರೆ ಥೈರಾಯ್ಡ್ ನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬಹುದು.

ಥೈರಾಯ್ಡ್ ಸಮಸ್ಯೆಗೆ ಮಹಿಳೆಯರು ಗುರಿಯಾಗುವುದು ಹೆಚ್ಚು
ಭಾರತದಲ್ಲಿ ಥೈರಾಯ್ಡ್ ಸಮಸ್ಯೆಯು ಹೆಚ್ಚಾಗುತ್ತಲೇ ಇದ್ದು, ಅದು ಕೂಡ ಮಹಿಳೆಯರಲ್ಲಿ ಇದು ಅತಿಯಾಗಿ ಕಾಣಿಸುತ್ತಿದೆ. ಯಾಕೆಂದರೆ ಮಹಿಳೆಯರಲ್ಲಿ ಹಾರ್ಮೋನು ಅಸಮತೋಲನ ಕಾಣಿಸಿಕೊಳ್ಳುವುದರಿಂದ ಥೈರಾಯ್ಡ್ ಸಮಸ್ಯೆಯು ಬರುವುದು. ಮಹಿಳೆಯರು ಹಾರ್ಮೋನು ಬದಲಾವಣೆಗೆ ತುಂಬಾ ಸೂಕ್ಷ್ಮವಾಗಿರುವರು ಮತ್ತು ಐಯೋಡಿನ್ ಕೊರತೆಯಿಂದಾಗಿ ಅವರಲ್ಲಿ ಥೈರಾಯ್ಡ್ ನ ಸಮಸ್ಯೆಯು ಮತ್ತಷ್ಟು ಹೆಚ್ಚಾಗುವುದು.

ಥೈರಾಯ್ಡ್ ಸಮಸ್ಯೆಗೆ ಮಹಿಳೆಯರು ಗುರಿಯಾಗುವುದು ಹೆಚ್ಚು
ಅದರಲ್ಲೂ ಗರ್ಭಿಣಿಯರಲ್ಲಿ ಥೈರಾಯ್ಡ್ ಸಮಸ್ಯೆಯು ಹೆಚ್ಚಾಗುವುದು. ಯಾಕೆಂದರೆ ಥೈರಾಯ್ಡ್ ಕಾರ್ಯನಿರ್ವಹಿಸದೆ ಇರಬಹುದು. ಹಾರ್ಮೋನು ಮಟ್ಟದಲ್ಲಿನ ಅಸಮತೋಲನದಿಂದಾಗಿ ಮಹಿಳೆಯರಲ್ಲಿ ಅಸಾಮಾನ್ಯ ಋತುಚಕ್ರ, ಅಸಮತೋಲಿತ ಅಥವಾ ಇಲ್ಲದೆ ಇರುವ ಅಂಡೋತ್ಪತ್ತಿ ಆವರ್ತನ, ಕಲ್ಲು ನಿರ್ಮಾಣ, ಗರ್ಭಪಾತ, ಅಕಾಲಿಕ ಹೆರಿಗೆ, ಪ್ರಸಾವನಂತರದ ಥೈರಾಯ್ಡ್, ಪ್ರಸಾವನಂತರದ ರಕ್ತಸ್ರಾವ ಮತ್ತು ಋತುಬಂಧ ಬೇಗನೆ ನಡೆಯುವುದು ಆಗಬಹುದು. ನಿಯಮಿತ ವ್ಯಾಯಾಮ ಮತ್ತು ಆಹಾರ ಕ್ರಮವನ್ನು ಸರಿಯಾಗಿ ಇಟ್ಟುಕೊಳ್ಳುವ ಮೂಲಕವಾಗಿ ಐಯೋಡಿನ್ ಕೊರತೆ ನೀಗಿಸಬಹುದು. ಥೈರಾಯ್ಡ್ ಸಮಸ್ಯೆ ನಿವಾರಣೆ ಮಾಡಲು ದಿನಕ್ಕೆ 150ಎಂಸಿಜಿಯಷ್ಟು ಐಯೋಡಿನ್ ಸೇವನೆ ಮಾಡಬೇಕು. ಗರ್ಭಿಣಿ ಹಾಗೂ ಹೆರಿಗೆಯಾದ ಮಹಿಳೆಯರಿಗೆ ಈ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿ ಇರುವುದು.

ಹೈಪೋಥೈರಾಯ್ಡಿಸಮ್ ನ ಲಕ್ಷಣಗಳು
ಹೈಪೋಥೈರಾಯ್ಡಿಸಮ್ ಎನ್ನುವುದು ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಥೈರಾಯ್ಡ್ ಹಾರ್ಮೋನು ಉತ್ಪತ್ತಿ ಮಾಡಲು ವಿಫಲವಾದ ವೇಳೆ ಉಂಟಾಗುವುದು. ಇದು ಥೈರಾಯ್ಡ್ ಗ್ರಂಥಿ, ಪಿಟ್ಯುಟರಿ ಗ್ರಂಥಿ, ಅಥವಾ ಹೈಪೋಥಾಲಮಸ್ನಲ್ಲಿ ಸಮಸ್ಯೆಯನ್ನು ಉಂಟು ಮಾಡುವುದು. ಇದು ಗಳಗಂಡ ಉಂಟಾಗದಂತೆ ಮಾಡುವುದು ಮತ್ತು ಥೈರಾಯ್ಡ್ ಗ್ರಂಥಿಗಳು ಹಿಗ್ಗುವಂತೆ ಮಾಡುವುದು. ಸಾಮಾನ್ಯ ಹೈಪೋಥೈರಾಯ್ಡಿಸಮ್ ನ ಕೆಲವೊಂದು ಲಕ್ಷಣಗಳು ಈ ರೀತಿಯಾಗಿ ಇದೆ.
*ನಿಶ್ಯಕ್ತಿ
*ಏಕಾಗ್ರತೆ ಕೊರತೆ
*ಒಣ ಚರ್ಮ
*ಮಲಬದ್ಧತೆ
*ಚಳಿಯ ಅನುಭವ
*ದ್ರವ ಶೇಖರಣೆ/ತೂಕ ಹೆಚ್ಚಳ
ಸ್ನಾಯುಗಳು ಮತ್ತು ಗಂಟು ನೋವು
*ಖಿನ್ನತೆ
*ಕೂದಲು ಉದುರುವಿಕೆ
*ಸುದೀರ್ಘ ಅಥವಾ ಅತಿಯಾಗಿ ರಕ್ತಸ್ರಾವ ಆಗುವುದು. ಕಡಿಮೆ ಋತುಚಕ್ರದ ದಿನಗಳು.
*ಅಮೆನೋರಿಯಾ(ಹಾರ್ಮೋನು ಅಸಮತೋಲನದಿಂದ ಉಂಟಾಗುವ ಸಮಸ್ಯೆ) ಇದು ಋತುಚಕ್ರವನ್ನು ಕೆಲವು ತಿಂಗಳುಗಳು ಅಥವಾ ದೀರ್ಘ ಸಮಯದವರೆಗೆ ನಿಲ್ಲಿಸಬಹುದು.

ಹೈಪರ್ ಥೈರಾಯ್ಡಿಸಮ್ ನ ಲಕ್ಷಣಗಳು
*ಥೈರಾಯ್ಡ್ ಹಾರ್ಮೋನು ಅತಿಯಾಗಿ ಸ್ರಾವವಾಗುವ ಮೂಲಕ ಹೈಪರ್ ಥೈರಾಯ್ಡಿಸಮ್ ಎನ್ನುವುದು ಉಂಟಾಗುವುದು. ಹೈಪೋಥೈರಾಯ್ಡಿಸಮ್ ನಂತೆ ಇದು ಸಾಮಾನ್ಯವಲ್ಲ. ಹೈಪೋಥೈರಾಯ್ಡಿಸಮ್ ನ ಲಕ್ಷಣಗಳು ಚಯಾಪಚಯ ಕ್ರಿಯೆ ಹೆಚ್ಚಿಸುವುದು. ಕೆಲವೊಂದು ಸಂದರ್ಭದಲ್ಲಿ ಲಕ್ಷಣಗಳು ಕಾಣಿಸದೆ ಇರಬಹುದು. ಹೈಪರ್ ಥೈರಾಯ್ಡಿಸಮ್ ನಿಂದಾಗಿ ಗಳಗಂಡ ಉಂಟಾಗಬಹುದು.
ಕೆಲವೊಂದು ಲಕ್ಷಣಗಳು ಈ ರೀತಿಯಾಗಿ ಇದೆ.
*ನಡುಕ
*ಧೈರ್ಯಕುಂದುವುದು
*ಹೃದಯ ಬಡಿತ ಹೆಚ್ಚಾಗುವುದು
*ಬಳಲಿಕೆ
*ಉಷ್ಣತೆಗೆ ಅಸಹಿಷ್ಣುತೆ
*ಹೊಟ್ಟೆಯ ಕ್ರಿಯೆಯಲ್ಲಿ ವೃದ್ಧಿ
*ಕಾರಣವಿಲ್ಲದೆ ತೂಕ ಕಡಿಮೆ ಆಗುವುದು

ಥೈರಾಯ್ಡ್ ಸಮಸ್ಯೆ ಪತ್ತೆ ಮಾಡುವುದು ಹೇಗೆ
ಕೆಲವೊಂದು ದೈಹಿಕ ಪರೀಕ್ಷೆಗಳೊಂದಿಗೆ ಥೈರಾಯ್ಡ್ ಸಮಸ್ಯೆ ಪತ್ತೆ ಮಾಡಲು ಕೆಲವೊಂದು ವಿಶೇಷ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಥೈರಾಯ್ಡ್ ಹಾರ್ಮೋನುಗಳ ಮಟ್ಟವನ್ನು ಅಳೆಯಲು ರಕ್ತ ಪರೀಕ್ಷೆ ಮಾಡಲಾಗುತ್ತದೆ ಮತ್ತು ಟಿಎಸ್ ಎಚ್(ಥೈರಾಯ್ಡ್ ಉತ್ತೇಜನ್ ಹಾರ್ಮೋನು) ಪರೀಕ್ಷೆ ಮಾಡಲಾಗುತ್ತದೆ. ನಿಮಗೆ ಮೇಲಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೆ ಆಗ ನೀವು ಥೈರಾಯ್ಡ್ ಮಟ್ಟ ಪರೀಕ್ಷೆ ಮತ್ತು ಟಿಎಸ್ ಎಚ್ ನ್ನು ಪರೀಕ್ಷೆ ಮಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು.
ಕೆಲವೊಂದು ಸಂದರ್ಭದಲ್ಲಿ ಥೈರಾಯ್ಡ್ ಸಮಸ್ಯೆಯನ್ನು ವೈದ್ಯಕೀಯ ಚಿಕಿತ್ಸೆ ಮೂಲಕ ನಿರ್ವಹಣೆ ಮಾಡಬಹುದು ಮತ್ತು ಇದು ಪ್ರಾಣಹಾನಿ ಉಂಟು ಮಾಡುವುದಿಲ್ಲ. ಕೆಲವೊಂದು ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಅಗತ್ಯ ಕೂಡ ಬೀಳಬಹುದು. ಥೈರಾಯ್ಡ್ ಕ್ಯಾನ್ಸರ್ ನ ಬಗ್ಗೆ ಕೂಡ ಸರಿಯಾಗಿ ಪರೀಕ್ಷೆ ಮಾಡಿಸಬೇಕು ಮತ್ತು ಕೆಲವೊಂದು ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಮಾಡದೆ ಥೈರಾಯ್ಡ್ ಕ್ಯಾನ್ಸರ್ ಎನ್ನುವುದು ಇಡೀ ದೇಹಕ್ಕೆ ವ್ಯಾಪಿಸುವುದು.



Click it and Unblock the Notifications