Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವ ಜನಸಂಖ್ಯಾ ದಿನ 2019 : ನೀವು ತಿಳಿದಿರಬೇಕಾದ ವಿಚಾರಗಳು
ಇಂದು ವಿಶ್ವ ಜನಸಂಖ್ಯಾ ದಿನ. 1989ರಲ್ಲಿ ವಿಶ್ವಸಂಸ್ಥೆಯು ವಿಶ್ವ ಜನಸಂಖ್ಯಾ ದಿನವನ್ನು ಆಚರಣೆ ಮಾಡಲು ನಿರ್ಧಾರ ಮಾಡಿತು. ಇದರ ಬಳಿಕ ಪ್ರತೀ ವರ್ಷ ವಿಶ್ವ ಜನಸಂಖ್ಯಾ ದಿನವನ್ನು ಆಚರಣೆ ಮಾಡಲಾಗುತ್ತಿದೆ. ವಿಶ್ವ ಮಟ್ಟದಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗಿ ಆಗುತ್ತಿರುವಂತಹ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಸಂಸ್ಥೆಯು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸುತ್ತದೆ.
2009ರ ಥೀಮ್ ಈ ವರ್ಷ "ಕುಟುಂಬ ಯೋಜನೆ ಮಾನವ ಹಕ್ಕು" ಎನ್ನವ ಥೀಮ್ ನ್ನು ವಿಶ್ವ ಜನಸಂಖ್ಯಾ ದಿನಕ್ಕಾಗಿ ಹಾಕಿಕೊಂಡಿದೆ.

ವಿಶ್ವ ಜನಸಂಖ್ಯಾ ದಿನದ ಧ್ಯೇಯಗಳು
ಕಳೆದ ಮೂರು ದಶಗಳಿಂದ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಜನಸಂಖ್ಯಾ ಹೆಚ್ಚಳ, ಕಡಿಮೆ ಜನಸಂಖ್ಯೆ ಮತ್ತು ಜನನ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇಂದು ವಿಶ್ವದ ಜನಸಂಖ್ಯೆಯು 7 ಬಿಲಿಯನ್ ಇದೆ ಮತ್ತು ವಿಶ್ವಸಂಸ್ಥೆಯ ವರದಿಯ ಪ್ರಕಾರ ಇದು ತೀವ್ರ ಗತಿಯಲ್ಲಿ ಏರುತ್ತಲಿದೆ ಮತ್ತು ಪ್ರತೀ ವರ್ಷ ಸುಮಾರು 83 ಮಿಲಿಯನ್ ಜನರನ್ನು ಇದಕ್ಕೆ ಸೇರಿಸಿಕೊಳ್ಳುತ್ತಿದೆ.
ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ಯುಎನ್ ಎಫ್ ಪಿಎ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವಂತಹ ಸಂದೇಶದಲ್ಲಿ ಸರ್ಕಾರವು ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಆರೈಕೆಗೆ ಹೆಚ್ಚಿನ ಮಟ್ಟದ ಬದ್ಧತೆಯನ್ನು ಪ್ರದರ್ಶಿಸಬೇಕು ಎಂಧು ಹೇಳಿದೆ. 1994ರಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಜನಸಂಖ್ಯಾ ಕಾನ್ಫರೆನ್ಸ್ ನಲ್ಲಿ ಇದಕ್ಕೆ ಹೆಚ್ಚಿನ ಎಲ್ಲಾ ರಾಷ್ಟ್ರಗಳು ಒಪ್ಪಿಗೆ ಸೂಚಿಸಿದ್ದವು.
ಯುಎನ್ ಎಫ್ ಪಿಎ ಎಂದರೇನು?
ಯುಎನ್ ಎಫ್ ಪಿಎ ಯು ಕುಟುಂಬ ಯೋಜನೆ ಮಾಡಲು ನೆರವಾಗುವುದು. ಇದಕ್ಕಾಗಿ ಅದು ಗರ್ಭನಿರೋಧಕಗಳನ್ನು ನೀಡಿ ದೇಶದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು. ಯುಎನ್ ಎಫ್ ಪಿಎ ಕುಟುಂಬ ಯೋಜನೆಗೆ ರೂಪಿಸುವಂತ ಯೋಜನೆಗಳನ್ನು ಬೆಂಬಲಿಸುವುದು.
ವಿಶ್ವ ಸಂಸ್ಥೆ ಜನಸಂಖ್ಯಾ ನಿಧಿ(ಯುಎನ್ ಎಫ್ ಪಿಎ)ಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವಂತಹ ಡಾ. ನತಾಲಿಯಾ ಕನೆಮ್ ಅವರು ಹೇಳುವ ಪ್ರಕಾರ, ಕುಟುಂಬ ಯೋಜನೆಯು ಕೇವಲ ಮಾನವ ಹಕ್ಕಿನ ವಿಚಾರ ಮಾತ್ರವಲ್ಲ, ಇದು ಮಹಿಳಾ ಸಬಲೀಕರಣ, ಬಡತನ ನಿವಾರಣೆ ಮತ್ತು ಅಭಿವೃದ್ಧಿಯಲ್ಲಿ ಸಮತೋಲನ ಕಾಪಾಡಿಕೊಳ್ಳುವುದಾಗಿದೆ. ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಯುಎನ್ ಎಫ್ ಪಿಯು ಕುಟುಂಬ ಯೋಜನೆಗಳಿಗೆ ನೆರವಾಗುವುದು. ಇಲ್ಲಿ ಅದು ಸಂಪೂರ್ಣ ಆಧುನೀಕರಣವಾಗಿರುವಂತಹ ಗರ್ಭನಿರೋಧಕ, ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ ಬಲಪಡಿಸುವುದು ಮತ್ತು ಲಿಂಗ ಸಮಾನತೆಯನ್ನು ಬೆಂಬಲಿಸುವುದು.
ಕುಟುಂಬ ಯೋಜನೆಗೆ ಮಾನವ ಹಕ್ಕುಗಳ 9 ಗುಣಮಟ್ಟವನ್ನು ಸೇರಿಸಿಕೊಳ್ಳಲು ವಿಶ್ವಸಂಸ್ಥೆಯು ಪಟ್ಟಿ ಮಾಡಿದೆ. ಅದು ಈ ರೀತಿಯಾಗಿದೆ.
ತಾರತಮ್ಯ ಮಾಡದಿರುವುದು ಯಾವುದೇ ಜಾತಿ, ಲಿಂಗ, ಭಾಷೆ, ಧರ್ಮ, ರಾಜಕೀಯ ಪಕ್ಷ, ರಾಷ್ಟ್ರೀಯತೆ, ವಯಸ್ಸು, ಆರ್ಥಿಕ ಸ್ಥಿತಿ, ವಾಸಸ್ಥಳ, ವೈಕಲ್ಯ, ವೈವಾಹಿಕ ಅರ್ಹತೆ, ಲಿಂಗ ಪತ್ತೆ ಅಥವಾ ಲೈಂಗಿ ಉದ್ದೇಶವನ್ನು ಇಟ್ಟುಕೊಂಡು ಕುಟುಂಬ ಯೋಜನೆಯ ಮಾಹಿತಿಯನ್ನು ತಡೆ ಹಿಡಿಯಬಾರದು ಎಂದು ಹೇಳಿದೆ.
ಲಭ್ಯತೆ
ರಾಷ್ಟ್ರಗಳು ತಮ್ಮ ಜನರಿಗೆ ಕುಟುಂಬ ಯೋಜನೆಯ ಸಾಮಗ್ರಿಗಳು ಮತ್ತು ಸೇವೆಯು ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ ನೋಡಿಕೊಳ್ಳಬೇಕು.
ಸ್ವೀಕಾರ
ಗರ್ಭನಿರೋಧಕ ಸೇವೆ ಮತ್ತು ಮಾಹಿತಿಯಿಂದ ಒಂದು ಗೌರವಾರ್ಹ ರೂಪದಲ್ಲಿ ನೀಡಬೇಕು. ಆಧುನಿಕ ವೈದ್ಯಕೀಯ ನೀತಿಶಾಸ್ತ್ರವನ್ನು ಗೌರವಿಸಬೇಕು ಮತ್ತು ಇದನ್ನು ಸ್ವೀಕರಿಸುವವರ ಸಂಸ್ಕೃತಿಯನ್ನು ಗೌರವಿಸಬೇಕು.
ಒಳ್ಳೆಯ ಗುಣಮಟ್ಟ
ಕುಟುಂಬ ಯೋಜನೆಯ ಮಾಹಿತಿಯನ್ನು ಸ್ಪಷ್ಟ ಸಂವಹನದ ಮೂಲಕ ಮತ್ತು ವೈಜ್ಞಾನಿಕವಾಗಿ ನಿಖರವಾಗಿ ತಿಳಿಸಬೇಕು.
ಮಾಹಿತಿಯಾಧಾರಿತ ನಿರ್ಧಾರ ತೆಗೆದುಕೊಳ್ಳುವುದು
ಪ್ರತಿಯೊಬ್ಬ ವ್ಯಕ್ತಿಯು ಸಂಪೂರ್ಣ ಸ್ವಾಯತ್ತತೆ, ಒತ್ತಡ ಮುಕ್ತ, ದಬ್ಬಾಳಿಕೆ ಮತ್ತು ತಪ್ಪು ನಿರೂಪಣೆಯ ಮುಕ್ತವಾಗಿ ಕುಟುಂಬ ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಆಗಬೇಕಾಗಿದೆ.
ಖಾಸಗಿತನ ಮತ್ತು ವಿಶ್ವಾಸಾರ್ಹತೆ
ಕುಟುಂಬ ಯೋಜನೆ ಬಗ್ಗೆ ಮಾಹಿತಿ ಮತ್ತು ಸೇವೆ ಪಡೆದುಕೊಳ್ಳುವ ವೇಳೆ ಪ್ರತಿಯೊಬ್ಬ ವ್ಯಕ್ತಿಯು ತನ್ನ ಖಾಸಗಿತನ ಉಳಿಸಿಕೊಳ್ಳುವಂತಹ ಹಕ್ಕನ್ನು ಹೊಂದಿರುವರು.
ಭಾಗಿಯಾಗುವುದು
ಆರೋಗ್ಯ ವಿಚಾರ ಸಹಿತ ಜನರಿಗೆ ಇದರಲ್ಲಿ ಭಾಗಿಯಾಗುವ ಬಗ್ಗೆ ಮಾಹಿತಿ ನೀಡಬೇಕು.
ಹೊಣೆಗಾರಿಕೆ
ಆರೋಗ್ಯ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ, ನಾಯಕರು ಮತ್ತು ಯೋಜನೆಗಳನ್ನು ರೂಪಿಸುವವರು ಜನರಿಗೆ ಹೊಣೆಗಾರರಾಗಿ ಇರಬೇಕು. ಕುಟುಂಬ ಯೋಜನೆಯು ಮಾನವ ಹಕ್ಕು ಎಂದು ಅವರು ಜನರಿಗೆ ಮನವರಿಕೆ ಮಾಡಿಕೊಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications