Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಕೆಂಪು ಮಾಂಸ-ಬಿಳಿ ಮಾಂಸ: ಇದರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು
ಆರೋಗ್ಯಕಾರಿ ಹಾಗೂ ಫಿಟ್ ಆಗಿ ಜೀವನ ನಡೆಸಲು ಪೋಷಕಾಂಶಗಳು, ಖನಿಜಾಂಶಗಳು, ವಿಟಮಿನ್ ಗಳು ಹಾಗೂ ಪ್ರೋಟೀನ್ ಇರುವಂತಹ ಆಹಾರ ಸೇವೆಯು ಅತೀ ಅಗತ್ಯವಾಗಿ ಇರುವುದು. ಆಹಾರ ಕ್ರಮದಲ್ಲಿ ಮಾಂಸ ಸೇರಿಸಿಕೊಳ್ಳುವ ಕಾರಣದಿಂದ ಪ್ರೋಟೀನ್ ದೇಹಕ್ಕೆ ಲಭ್ಯವಾಗುವುದು. ಪ್ರೋಟೀನ್ ಸಮೃದ್ಧವಾಗಿರುವಂತಹ ಮಾಂಸದಲ್ಲಿ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇವೆ. ಆದರೆ ಇಲ್ಲಿ ಕಾಡುವಂತಹ ಪ್ರಶ್ನೆಯೆಂದರೆ ಯಾವ ಮಾಂಸವು ದೇಹಕ್ಕೆ ಒಳ್ಳೆಯದು ಎನ್ನುವುದು? ಕೆಂಪು ಮಾಂಸ ಅಥವಾ ಬಿಳಿ ಮಾಂಸ? ಆರೋಗ್ಯಕ್ಕೆ ಯಾವುದು ಒಳ್ಳೆಯದು?
ಕುರಿ, ಆಡು ಮತ್ತು ಹಂದಿ ಮಾಂಸವನ್ನು ಕೆಂಪು ಮಾಂಸ ಎಂದು ಪರಿಗಣಿಸಲಾಗಿದೆ. ಕೋಳಿ, ಮೀನು ಮತ್ತು ಬಾತುಕೋಳಿ ಮಾಂಸವನ್ನು ಬಿಳಿ ಮಾಂಸ ಎಂದು ಪರಿಗಣಿಸಲಾಗಿದೆ. ಕೆಂಪು ಮಾಂಸ ಕಡಿಮೆ ಮಾಡಿ, ಬಿಳಿ ಮಾಂಸವನ್ನು ಹೆಚ್ಚು ತಿನ್ನಬೇಕು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಇದು ಹಾಗೇನಿಲ್ಲ, ಎರಡರಲ್ಲೂ ಕೂಡ ತನ್ನದೇ ಆಗಿರುವಂತಹ ಕೆಲವೊಂದು ಲಾಭಗಳು ಹಾಗೂ ಅಡ್ಡಪರಿಣಾಮಗಳು ಇವೆ. ಇದರಲ್ಲಿ ಯಾವುದು ಹೆಚ್ಚು ಆರೋಗ್ಯಕಾರಿ ಎಂದು ತಿಳಿಯಿರಿ.

ಕೆಂಪು ಮಾಂಸ
ಕೆಂಪು ಮಾಂಸದಲ್ಲಿ ಸೂಕ್ಷ್ಮ ಪೋಷಕಾಂಶಗಳು ಅಧಿಕವಾಗಿದೆ ಮತ್ತು ಇದು ಹಲವಾರು ಪೋಷಕಾಂಶ ಲಾಭಗಳನ್ನು ನೀಡುವುದು. ಸೂಕ್ಷ್ಮ ಪೋಷಕಾಂಶಗಳಾಗಿರುವಂತಹ ಸತು, ಕಬ್ಬಿನಾಂಶ, ಬಿ6 ಮತ್ತು ವಿಟಮಿನ್ ಬಿ12, ಥೈಮೆನ್ ಮತ್ತು ರಿಬೊಫ್ಲಾವಿನ್ ಬಿಳಿ ಮಾಂಸಕ್ಕಿಂತ ಹೆಚ್ಚಾಗಿ ಕೆಂಪು ಮಾಂಸದಲ್ಲಿ ಕಾಣಿಸಿಕೊಳ್ಳುವುದು. ಕೇವಲ ಸಸ್ಯಾಹಾರಿಗಳು ಮತ್ತು ಬಿಳಿ ಮಾಂಸ ಮಾತ್ರ ಸೇವಿಸುವಂತಹ ವ್ಯಕ್ತಿಗಳು ತಮ್ಮ ಆಹಾರ ಕ್ರಮದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಇಂತಹ ಪೋಷಕಾಂಶಗಳನ್ನು ಅವರು ಬೇರೆ ಮೂಲಗಳಿಂದ ಪಡೆಯಬೇಕು. ಕೆಂಪು ಮಾಂಸ ಸೇವನೆ ಮಾಡಿದರೆ ಅದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆ ಮಾಡಬಹುದು.
ಪ್ರತಿಯೊಂದರಲ್ಲೂ ಕೆಲವೊಂದು ಅಡ್ಡಪರಿಣಾಮಗಳು ಇರುವುದು. ಕೆಂಪು ಮಾಂಸವು ಉನ್ನತ ಮಟ್ಟದ ಪೋಷಕಾಂಶಗಳನ್ನು ಹೊಂದಿದ್ದರೂ ಇದರಲ್ಲಿ ಅಧಿಕ ಕೊಬ್ಬು, ಸ್ಯಾಚುರೇಟೆಡ್ ಕೊಬ್ಬು ಇದೆ. ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಿರುವ ಕಾರಣದಿಂದಾಗಿ ಇದು ಹೃದಯದ ಕಾಯಿಲೆ ಮತ್ತು ಪಾರ್ಶ್ವವಾಯು ಸಮಸ್ಯೆ ಹೆಚ್ಚು ಮಾಡಬಹುದು. ಕೆಂಪು ಮಾಂಸ ಹೆಚ್ಚೆಚ್ಚು ಸೇವನೆ ಮಾಡಿದಂತೆ ಅದರಿಂದ ಕೊಲೆರೆಕ್ಟಲ್ ಕ್ಯಾನ್ಸರ್ ಅಪಾಯವು ಹೆಚ್ಚಾಗುವುದು. ಕೆಂಪು ಮಾಂಸವನ್ನು ಅಧಿಕ ಬೆಂಕಿಯಲ್ಲಿ ಗ್ರಿಲ್ ಅಥವಾ ಬೇಯಿಸಿದ ವೇಳೆ ಅದು ಕಾರ್ಸಿನೋಜೆಕ್ ನ್ನು ಉತ್ಪತ್ತಿ ಮಾಡುವುದು. ಇದು ಕ್ಯಾನ್ಸರ್ ಕಾರಕವಾಗಿದೆ. ಇದರಿಂದ ಅಧಿಕ ಉಷ್ಣತೆಯಲ್ಲಿ ಬೇಯಿಸಿದ ಆಹಾರ ಕಡೆಗಣಿಸಬೇಕು. ಕ್ಯಾನ್ಸರ್ ಅಪಾಯ ತಪ್ಪಿಸಲು ವಾರಕ್ಕೆ 455 ಗ್ರಾಂಕ್ಕಿಂತ ಹೆಚ್ಚು ಕೆಂಪು ಮಾಂಸ ಸೇವನೆ ಮಾಡಬಾರದು ಎಂದು ಅಧ್ಯಯನಗಳು ಹೇಳುತ್ತವೆ.
ಬಿಳಿ ಮಾಂಸ
ಬಿಳಿ ಮಾಂಸವನ್ನು ಪಾಲಟ್ರಿ ಮಾಂಸ ಎಂದು ಕರೆಯಲಾಗುತ್ತದೆ. ಬಿಳಿ ಮಾಂಸದಲ್ಲಿ ತುಂಬಾ ಕಡಿಮೆ ಕ್ಯಾಲರಿ, ಕಡಿಮೆ ಕೊಬ್ಬು ಮತ್ತು ಕಡಿಮೆ ಸ್ಯಾಚುರೇಟೆಡ್ ಕೊಬ್ಬು ಇದೆ. 140 ಗ್ರಾಂ ಚಿಕನ್ ಬ್ರೆಸ್ಟ್ ನಲ್ಲಿ 130ಕೆಸಿಎಎಲ್, 2.6 ಗ್ರಾಂ ಕೊಬ್ಬು(0.7 ಸ್ಯಾಚುರೇಟೆಡ್ ಕೊಬ್ಬು) ಮತ್ತು 66 ಮಿ.ಗ್ರಾಂ. ಕೊಲೆಸ್ಟ್ರಾಲ್ ಇದೆ. 140 ಬೀಫ್ ನಲ್ಲಿ 250 ಕೆಸಿಎಎಲ್, 9 ಗ್ರಾಂ ಕೊಬ್ಬು(4 ಗ್ರಾಂ ಸ್ಯಾಚುರೇಟೆಡ್ ಕೊಬ್ಬು) ಮತ್ತು 105 ಮಿ.ಗ್ರಾಂ ಕೊಲೆಸ್ಟ್ರಾಲ್ ಇದೆ.
ಇದರಿಂದ ಕೆಂಪು ಮಾಂಸದಲ್ಲಿ ಬಿಳಿ ಮಾಂಸಕ್ಕಿಂತ ಎರಡು ಪಟ್ಟು ಹೆಚ್ಚು ಕ್ಯಾಳರಿ ಮತ್ತು ಎರಡು ಪಟ್ಟು ಹೆಚ್ಚು ಕೊಬ್ಬು, ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇದೆ. ಚರ್ಮದೊಂದಿಗೆ ಕೋಳಿ ಮಾಂಸ ಸೇವನೆ ಮಾಡಲು ಬಯಸುತ್ತಿದ್ದರೆ ಆಗ ನೀವು ಇಷ್ಟೇ ಪ್ರಮಾಣದ ಕ್ಯಾಲರಿ, ಕೊಬ್ಬು ಪಡೆಯುವಿರಿ.
ಯಾವುದನ್ನು ತಿನ್ನಬಹುದು?
ಕೆಂಪು ಮತ್ತು ಬಿಳಿ ಮಾಂಸದಲ್ಲಿ ಅದರದ್ದೇ ಆಗಿರುವಂತಹ ಲಾಭಗಳು ಮತ್ತು ಅಡ್ಡಪರಿಣಾಮಗಳು ಇದೆ. ನೀವು ಮಾಂಸ ಸೇವನೆ ಮಾಡುತ್ತಲಿದ್ದರೆ ಆಗ ನೀವು ಬೇರೆ ಆಹಾರವನ್ನು ಕೂಡ ಸೇರಿಸಿಕೊಂಡು ಸಮತೋಲಿತ ಆಹಾರ ಸೇವಿಸಿ. ಕೆಂಪು ಮಾಂಸಕ್ಕಿಂತ ಹೆಚ್ಚಾಗಿ ಬಿಳಿ ಮಾಂಸ ಸೇವಿಸಿ. ಆದರೆ ಎರಡರ ಲಾಭಗಳನ್ನು ಪಡೆದುಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


