Latest Updates
-
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು? -
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು!
ಎಳನೀರು ಕುಡಿಯಲು ಸರಿಯಾದ ಸಮಯ-ಇದನ್ನು ಅನುಸರಿಸಿದರೆ ಆರೋಗ್ಯ ವೃದ್ಧಿ!
ಎಳನೀರು ಒಂದು ಜನಪ್ರಿಯ ನೈಸರ್ಗಿಕ ಪಾನೀಯವಾಗಿದ್ದು ಜಗತ್ತಿನಾದ್ಯಂತ ಹೆಚ್ಚಿನ ಜನರು ಇದನ್ನು ಕುಡಿಯುತ್ತಾರೆ. ಎಲ್ಲಾ ಊರುಗಳಲ್ಲಿಯೂ ಎಳನೀರು ದೊರೆಯುತ್ತದೆ. ಮತ್ತು ಇದು ಕಡಿಮೆ ವೆಚ್ಚದಲ್ಲಿ ದೊರೆಯುವ ಎಳೆ ನೀರು ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯುತ್ತಮ ಪಾನೀಯವಾಗಿದೆ.

ಹಿಂದಿನ ಕಾಲದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿರುವ ಎಳೆ ನೀರು ವೈದ್ಯಕೀಯ ರಂಗದಲ್ಲೂ ತನ್ನ ಕರಾಮತ್ತನ್ನು ಪ್ರದರ್ಶಿಸಿರುವಂಥದ್ದಾಗಿದೆ. ಎಳೆ ನೀರು ಕಡಿಮೆ ಪ್ರಮಾಣದ ಸಕ್ಕರೆ ಅಂಶವನ್ನು ಒಳಗೊಂಡಿರುವುದರಿಂದ ಸೋಡಾ ಮತ್ತು ಕೆಲವೊಂದು ಹಣ್ಣುಗಳ ರಸಕ್ಕಿಂತಲೂ ಇದು ಉತ್ತಮವಾಗಿದೆ. ಪಾನೀಯವನ್ನು ಎದುರು ನೋಡುತ್ತಿರುವ ಮಕ್ಕಳು ಮತ್ತು ಹಿರಿಯರಿಗೆ ಹೆಚ್ಚು ಉಪಯುಕ್ತವಾಗಿರುವ ಎಳನೀರು ನಮ್ಮ ದೇಹದಲ್ಲಿರುವ ನಿರ್ಜಲೀಕರಣದ ಸಮಸ್ಯೆಯನ್ನು ದೂರ ಮಾಡುತ್ತದೆ. ಎಳನೀರಿನ ಪ್ರಾಮುಖ್ಯತೆಯನ್ನು ಒಮ್ಮೆ ನೀವು ಅರಿತುಕೊಂಡರೆ ನೀವು ಅದನ್ನು ಸೇವಿಸದೇ ಬಿಡಲಾರಿರಿ

ಸರಿಯಾದ ಸಮಯದಲ್ಲಿ ಕುಡಿದರೆ ಇದರ ಪ್ರಯೋಜನ ದುಪ್ಪಟ್ಟಾಗಲಿದೆ
ದಿನದ ಯಾವುದೇ ಸಮಯದಲ್ಲೂ ನೀವು ಎಳೆ ನೀರು ಕುಡಿಯಬಹುದು. ಆದರೆ ಇದನ್ನು ಸರಿಯಾದ ಸಮಯದಲ್ಲಿ ಕುಡಿದರೆ ಇದು ಖಂಡಿತವಾಗಿಯೂ ಹೆಚ್ಚಿನ ಆರೋಗ್ಯ ಲಾಭವನ್ನು ನೀಡಲಿದೆ. ಇದರಿಂದ ನೀವು ಎಳೆ ನೀರು ಕುಡಿಯುವಂತಹ ಸರಿಯಾದ ಸಮಯವನ್ನು ತಿಳಿದುಕೊಳ್ಳಬೇಕಾಗಿದೆ. ಹೀಗೆ ಮಾಡಿದರೆ ಅದರ ಗರಿಷ್ಠ ಲಾಭವನ್ನು ಪಡೆಯಬಹುದು. ಬೇರೆಲ್ಲಾ ಪಾನೀಯಗಳನ್ನು ಸೇವಿಸಲು ನಿಮಗೆ ಒಂದು ಸಮಯ ಎನ್ನುವುದು ಇದೆ. ಆದರೆ ಎಳನೀರು ಕುಡಿಯಲು ಯಾವುದೇ ಸಮಯವಿಲ್ಲ. ಇದನ್ನು ನೀವು ಹಗಲಿನಲ್ಲಿ ಅಥವಾ ರಾತ್ರಿ ವೇಳೆ ಸೇವಿಸಬಹುದು. ಆದರೆ ಒಂದು ನಿಗದಿತ ಸಮಯದಲ್ಲಿ ಇದನ್ನು ಕುಡಿಯುವುದರಿಂದ ನಿಮಗೆ ತುಂಬಾ ಲಾಭ ಸಿಗಲಿದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದು
ಬೆಳಗ್ಗೆ ನೀವು ಎದ್ದ ಬಳಿಕ ನಿತ್ಯಕರ್ಮಗಳನ್ನು ಮುಗಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದರಿಂದ ತುಂಬಾ ಲಾಭವಾಗಲಿದೆ. ಎಳನೀರಿನಲ್ಲಿ ಲೌರಿಕ್ ಆಮ್ಲವಿದೆದ್ದು, ಇದು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು, ಚಯಾಪಚಯ ಕ್ರಿಯೆ ವೃದ್ಧಿಸುವುದು ಮತ್ತು ತೂಕ ಕಳೆದುಕೊಳ್ಳಲು ಇದು ನೆರವಾಗುವುದು. ಗರ್ಭಿಣಿಯರು ನಿರ್ಜಲೀಕರಣ ಮತ್ತು ಮಲಬದ್ಧತೆ ನಿವಾರಣೆ ಮಾಡಲು ಎಳನೀರನ್ನು ಕುಡಿಯಲೇಬೇಕು. ಇದು ಬೆಳಗ್ಗಿನ ಅನಾರೋಗ್ಯ ಕಡಿಮೆ ಮಾಡುವುದು ಮತ್ತು ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವಂತಹ ಎದೆಯುರಿ ಸಮಸ್ಯೆ ಕಡಿಮೆ ಮಾಡುವುದು.

ವ್ಯಾಯಾಮದ ಮೊದಲು ಅಥವಾ ಬಳಿಕ
ಎಳೆ ನೀರು ಒಂದು ಕ್ರೀಡಾ ಪಾನೀಯವಾಗಿದೆ ಎಂದು ಹೇಳಲಾಗುತ್ತದೆ. ಯಾಕೆಂದರೆ ಇದು ದೇಹಕ್ಕೆ ನೀರಿನಾಂಶವನ್ನು ನೀಡುವುದು ಮತ್ತು ಶಕ್ತಿ ವರ್ಧಿಸುವುದು. ಇದರಿಂದ ವ್ಯಾಯಾಮಕ್ಕೆ ಮೊದಲು ಇದು ಒಳ್ಳೆಯದು. ವ್ಯಾಯಾಮದ ಬಳಿಕ ನೀವು ಎಳೆ ನೀರು ಸೇವನೆ ಮಾಡಿದರೆ ಅದರಿಂದ ದೇಹವು ಕಳೆದುಕೊಂಡಿರುವಂತಹ ವಿದ್ಯುದ್ವಿಚ್ಛೇದಗಳನ್ನು ಮರಳಿ ಪಡೆಯಲು ನೆರವಾಗುವುದು. ಎಳೆ ನೀರು ಕುಡಿಯುವುದರಿಂದ ನಿಶ್ಯಕ್ತಿ ಹೋಗಲಾಡಿಸಬಹುದು ಮತ್ತು ಶಕ್ತಿ ಮರಳಿ ಪಡೆಯಬಹುದು. ಇದು ಒಂದು ರೀತಿಯಲ್ಲಿ ಶಕ್ತಿ ಪೇಯವಾಗಿದೆ.

ಊಟದ ಮೊದಲು ಅಥವಾ ಬಳಿಕ
ನೀವು ಊಟಕ್ಕೆ ಮೊದಲು ಒಂದು ಎಳೆ ನೀರು ಕುಡಿದರೆ ಅದರಿಂದ ಹೊಟ್ಟೆ ತುಂಬಿದಂತೆ ಆಗುವುದು ಮತ್ತು ನೀವು ಅತಿಯಾಗಿ ತಿನ್ನುವುದು ಕಡಿಮೆ ಆಗುವುದು. ಇದರಲ್ಲಿ ಕ್ಯಾಲರಿ ಕಡಿಮೆ ಇದೆ ಮತ್ತು ಹೊಟ್ಟೆಗೆ ಕೂಡ ಇದು ಒಳ್ಳೆಯದು. ಎಳೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ನೆರವಾಗುವುದು. ಇದು ಜೀರ್ಣಕ್ರಿಯೆ ಸುಧಾರಿಸುವುದು ಮತ್ತು ಊಟದ ಬಳಿಕ ಹೊಟ್ಟೆ ಉಬ್ಬರ ತಡೆಯುವುದು. ಎಳೆ ನೀರು ಕುಡಿಯುವುದರಿಂದ ಅದು ದೇಹದಲ್ಲಿ ವಿದ್ಯುದ್ವಿಚ್ಛೇದವನ್ನು ಸಮತೋಲನ ಕಾಪಾಡುವುದು ಮತ್ತು ಇದರಿಂದ ರಕ್ತದೊತ್ತಡವು ನಿಯಂತ್ರಣದಲ್ಲಿ ಇರುವುದು ಮತ್ತು ಜೀರ್ಣಕ್ರಿಯೆ ಸುಧಾರಣೆ ಆಗುವುದು.

ಮಲಗುವ ಮೊದಲು
ಸಿಹಿ ಹಾಗೂ ತುಂಬಾ ಒಳ್ಳೆಯ ರುಚಿ ಹೊಂದಿರುವ ಎಳೆ ನೀರು ಮಾನಸಿಕವಾಗಿಯು ಪರಿಣಾಮ ಬೀರುವುದು. ಇದರಿಂದ ಆತಂಕವು ಕಡಿಮೆ ಆಗುವುದು ಮತ್ತು ಹೃದಯದ ಬಡಿತ ನಿಧಾನವಾಗಿಸುವುದು. ಒತ್ತಡ ನಿವಾರಣೆ ಮಾಡಲು ಮತ್ತು ಮನಸ್ಸನ್ನು ಶಾಂತವಾಗಿರಿಸಲು ನೀವು ಮಲಗುವ ಮೊದಲು ಒಂದು ಎಳೆ ನೀರು ಕುಡಿಯಿರಿ. ಅದಾಗ್ಯೂ, ಮಲಗುವ ಮೊದಲು ನೀವು ಎಳೆ ನೀರು ಕುಡಿದರೆ ಅದರಿಂದ ದೇಹದಲ್ಲಿ ಇರುವ ಎಲ್ಲಾ ವಿಷಕಾರಿ ಅಂಶವನ್ನು ಹೊರಹಾಕಲು ನೆರವಾಗುವುದು ಮತ್ತು ಮೂತ್ರಕೋಶವನ್ನು ಅದು ಶುದ್ಧೀಕರಿಸುವುದು. ಸೋಂಕನ್ನು ಇದು ತಡೆಯುವುದರ ಜತೆಗೆ ಕಿಡ್ನಿಗೆ ಬರುವ ಸಮಸ್ಯೆಯನ್ನು ನಿವಾರಣೆ ಮಾಡುವುದು.

ನಶೆಯಿಂದ ಹೊರಗೆ ಬರಲು
ನಿಮಗೆ ಹ್ಯಾಂಗ್ ಓವರ್ ನಿಂದ ಹೊರಗೆ ಬರಬೇಕು ಎಂದಾದರೆ ಆಗ ನೀವು ಒಂದು ಎಳೆ ನೀರು ಸೇವಿಸಿ. ಆಲ್ಕೋಹಾಲ್ ನಿಂದ ನಿರ್ಜಲೀಕರಣ ಉಂಟಾಗುವುದು. ಇದರಿಂದಾಗಿ ತಲೆನೋವು ಕಾಡುವುದು ಮತ್ತು ಮರುದಿನ ಬೆಳಗ್ಗೆ ವಾಕರಿಕೆ ಕೂಡ ಬರಬಹುದು. ಇದೆರಡನ್ನು ಎಳೆ ನೀರು ನಿವಾರಣೆ ಮಾಡುವುದು ಮತ್ತು ದೇಹದಲ್ಲಿ ವಿದ್ಯುದ್ವಿಚ್ಛೇದಗಳನ್ನು ಸ್ಥಾಪಿಸುವ ಮೂಲಕ ದೇಹವು ಉತ್ತಮ ಭಾವನೆ ಹೊಂದುವಂತೆ ಮಾಡುವುದು. ಎಳನೀರಿನಲ್ಲಿ ಕೆಲವೊಂದು ಪ್ರಮುಖ ಪೋಷಕಾಂಶಗಳಾಗಿರು ಪೊಟಾಶಿಯಂ, ಮೆಗ್ನಿಶಿಯಂ, ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಆಹಾರದ ನಾರಿನಾಂಶಗಳು ಇವೆ. ಇದರಿಂದ ಎಳೆ ನೀರು ತುಂಬಾ ಆರೋಗ್ಯಕಾರಿ ಮತ್ತು ತಾಜಾತನ ನೀಡುವಂತಹ ಪಾನೀಯವಾಗಿದೆ.



Click it and Unblock the Notifications