For Quick Alerts
ALLOW NOTIFICATIONS  
For Daily Alerts

ಸತತ ಒಂದು ವಾರ ಕಾಲ ಎಳನೀರು ಕುಡಿದರೆ ಏನಾಗುವುದು?

|

ಬೇಸಿಗೆಯಲ್ಲಿ ಅತಿಯಾದ ದಾಹ ತಣಿಸಲು ಬಳಸಲ್ಪಡುವಂತಹ ಪಾನೀಯಗಳಲ್ಲಿ ಎಳನೀರು ಕೂಡ ಒಂದು. ಇಂದು ರಸ್ತೆ ಬದಿಯಲ್ಲಿ ಎಲ್ಲೇ ನೋಡಿದರೂ ಎಳನೀರಿನ ಗಾಡಿ ನಿಮಗೆ ಸಿಕ್ಕೇ ಸಿಗುತ್ತದೆ. ಎಳನೀರನ್ನು ಕುಡಿದರೆ ನಮ್ಮ ದೇಹಕ್ಕೆ ಬೇಕಾಗುವಂತಹ ಹಲವಾರು ರೀತಿಯ ಪೋಷಕಾಂಶಗಳು ಸಿಗುವುದು. ಎಳನೀರನ್ನು ಪ್ರತಿಯೊಬ್ಬರು ಬಳಸಿಕೊಳ್ಳಬಹುದು. ಪ್ರತಿದಿನ ಒಂದು ವಾರ ಕಾಲ ಎಳನೀರು ಕುಡಿದರೆ ನಿಮ್ಮ ದೇಹವು ಅದ್ಭುತವಾಗಿ ಬದಲಾವಣೆಗಳನ್ನು ಕಾಣುವುದು.

ಚರ್ಮವು ತುಂಬಾ ನಯ, ಯೌವನಯುತ, ಶಕ್ತಿಯುತ ಹಾಗೂ ಫಿಟ್ನೆಸ್ ಹೊಂದಿರುವ ದೇಹವು ನಿಮ್ಮದಾಗುವುದು. ಎಳನೀರನ್ನು ಹೆಚ್ಚಾಗಿ ಪ್ರತಿಯೊಬ್ಬರು ಇಷ್ಟಪಡುವರು. ಇದು ರುಚಿಕರವಾಗಿರುವುದ ಮಾತ್ರವಲ್ಲದೆ, ಹಲವಾರು ರೀತಿಯ ಪೋಷಕಾಂಶಗಳು ಇದರಿಂದ ದೇಹಕ್ಕೆ ಲಭ್ಯವಾಗುವುದು. ಒಂದು ವಾರ ಕಾಲ ಎಳನೀರನ್ನು ಕುಡಿದರೆ ಅದರಿಂದ ಆರೋಗ್ಯವು ತುಂಬಾ ಸುಧಾರಣೆಯಾಗುವುದು. ಇದರಿಂದ ನಿಮಗೆ ತೂಕ ಇಳಿಸಲು ಸಾಧ್ಯವಾಗುವುದು, ಜೀರ್ಣಕ್ರಿಯೆಗೆ ಇದು ಸಹಕಾರಿ, ಶಕ್ತಿ ವರ್ಧಿಸುವುದು ಮತ್ತು ಚರ್ಮಕ್ಕೆ ಇದು ಪುರ್ನರ್ಶ್ಚೇತನ ನೀಡುವುದು.

ಪ್ರತಿರೋಧಕ ವ್ಯವಸ್ಥೆ ಸುಧಾರಣೆ ಮಾಡುವುದು

ಪ್ರತಿರೋಧಕ ವ್ಯವಸ್ಥೆ ಸುಧಾರಣೆ ಮಾಡುವುದು

ಪ್ರತಿನಿತ್ಯವು ಎಳನೀರಿನ ಸೇವನೆ ಮಾಡಿದರೆ ಅದರಿಂದ ದೇಹದ ಪ್ರತಿರೋಧಕ ವ್ಯವಸ್ಥೆಯು ಬಲಗೊಳ್ಳುವುದು ಎಂದು ಹೇಳಲಾಗುತ್ತದೆ. ಈ ಪಾನೀಯವು ದೇಹದಲ್ಲಿ ಒಸಡಿನ ಸಮಸ್ಯೆ ಮತ್ತು ಮೂತ್ರನಾಳದಲ್ಲಿ ಸೋಂಕು ಉಂಟು ಮಾಡುವಂತಹ ಬ್ಯಾಕ್ಟೀರಿಯಾವನ್ನು ದೇಹದಿಂದ ಹೊರಗೆ ಹಾಕುವುದು. ಅದೇ ರೀತಿಯಾಗಿ ಶೀತ, ಟೈಫಸ್ ಮತ್ತು ಇತರ ಕೆಲವು ಸೋಂಕಿನ ಕಾಯಿಲೆಗಳನ್ನು ಇದು ನಿವಾರಣೆ ಮಾಡುವುದು. ಚಳಿಗಾಲದಲ್ಲೂ ಕೂಡ ನೀವು ಎಳನೀರು ಕುಡಿದರೆ ಅದರಿಂದ ಆರೋಗ್ಯವು ಬಲ ಗೊಳ್ಳುವುದು.

ಶಕ್ತಿ ವೃದ್ಧಿ ಮಾಡುವುದು

ಶಕ್ತಿ ವೃದ್ಧಿ ಮಾಡುವುದು

ಎಳನೀರಿನಲ್ಲಿ ಥೈರಾಯ್ಡ್ ಹಾರ್ಮೋನು ಇದೆ. ಇದರಿಂದ ಕೋಶಗಳ ಮಟ್ಟದಲ್ಲಿ ಇದು ಶಕ್ತಿ ಹೆಚ್ಚು ಮಾಡುವುದು. ಒಂದು ವಾರಗಳ ಕಾಲ ದಿನಿತ್ಯ ಎಳನೀರು ಕುಡಿದರೆ, ಆತ ನಿಮಗೆ ತುಂಬಾ ಆರಾಮ, ಸ್ಪೂರ್ತಿ, ಚೆನ್ನಾಗಿ ತಿನ್ನುವ, ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದು.

ಕಿಡ್ನಿಗೆ ತುಂಬಾ ಒಳ್ಳೆಯದು

ಕಿಡ್ನಿಗೆ ತುಂಬಾ ಒಳ್ಳೆಯದು

ಎಳನೀರು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಹಾಕಲು ತುಂಬಾ ನೆರವಾಗುವುದು ಮತ್ತು ಕಿಡ್ನಿ ಕಲ್ಲನ್ನು ತೆಗೆಯುವುದು. ಇದು ನೈಸರ್ಗಿಕ ಮೂತ್ರವರ್ಧಕವಾಗಿರುವ ಕಾರಣದಿಂದಾಗಿ ಮೂತ್ರಕೋಶವನ್ನು ಇದು ಶುದ್ಧೀಕರಿಸುವುದು, ಮೂತ್ರನಾಳದ ರಕ್ಷಣೆ ಮಾಡುವುದು ಮತ್ತು ಕಿಡ್ನಿಗೆ ಕಾಯಿಲೆಗಳು ಬರದಂತೆ ಇದು ತಡೆಯುವದು. ಕಿಡ್ನಿ ಸಮಸ್ಯೆ ಇರುವಂತಹ ವ್ಯಕ್ತಿಗಳು ಪ್ರತಿನಿತ್ಯ ಎಳನೀರನ್ನು ಒಂದು ವಾರ ಕಾಲ ಕುಡಿದರೆ ಅದರಿಂದ ಕಾಯಿಲೆಯು ಪರಿಣಾಮಕಾರಿಯಾಗಿ ಕಡಿಮೆ ಆಗುವುದು.

Most Read:ಎಳನೀರು ಕುಡಿಯಲು ಸರಿಯಾದ ಸಮಯ-ಇದನ್ನು ಅನುಸರಿಸಿದರೆ ಆರೋಗ್ಯ ವೃದ್ಧಿ!

ಜೀರ್ಣಕ್ರಿಯೆ ಸುಧಾರಿಸುವುದು

ಜೀರ್ಣಕ್ರಿಯೆ ಸುಧಾರಿಸುವುದು

ಎಳನೀರು ನಿಮಗೆ ತುಂಬಾ ಒಳ್ಳೆಯದು ಯಾಕೆಂದರೆ ಇದರಲ್ಲಿ ಉತ್ತಮ ಮಟ್ಟದ ನಾರಿನಾಂಶವಿದೆ. ಇದು ಹೊಟ್ಟೆಯಲ್ಲಿ ಆಮ್ಲವನ್ನು ತಟಸ್ಥಗೊಳಿಸಿ, ಆಹಾರವು ತುಂಬಾ ಸುಲಭವಾಗಿ ಜೀರ್ಣವಾಗಲು ನೆರವಾಗುವುದು. ಜೀರ್ಣಕ್ರಿಯೆ ವ್ಯವಸ್ಥೆಗೆ ನೆರವಾಗುವ ಕಾರಣದಿಂದಾಗಿ ದೇಹವು ಹೆಚ್ಚಿನ ಶಕ್ತಿ ಪಡೆಯುವುದು ಮತ್ತು ಜೀರ್ಣಕ್ರಿಯೆ ಸಮಸ್ಯೆಯನ್ನು ತುಂಬಾ ಕಡಿಮೆ ಮಾಡುವುದು.

ತೂಕ ಇಳಿಕೆ

ತೂಕ ಇಳಿಕೆ

ಒಂದು ವಾರ ಕಾಲ ನೀವು ಪ್ರತಿನಿತ್ಯ ಎಳನೀರು ಕುಡಿದರೆ, ಆಗ ನೀವು ದೇಹದ ತೂಕ ಇಳಿಸಿಕೊಳ್ಳಬಹುದು. ಯಾಕೆಂದರೆ ಇದು ಪರೋಕ್ಷವಾಗಿ ಪರಿಣಾಮ ಬೀರುವುದು. ಎಳನೀರಿನಲ್ಲಿ ಕೊಬ್ಬು ಕಡಿಮೆ ಇರುವ ಕಾರಣದಿಂಧಾಗಿ ಇದು ನಿಮ್ಮ ತಿನ್ನುವ ಬಯಕೆ ಕಡಿಮೆ ಮಾಡುವುದು. ಎಳನೀರನ್ನು ತುಂಬಾ ಕುಡಿದರೆ ಆಗ ನಿಮ್ಮ ಹಸಿವು ಕಡಿಮೆ ಆಗುವುದು ಮತ್ತು ಇದರಿಂದ ನೀವು ತಿನ್ನುವುದು ಕಡಿಮೆ ಆಗುವುದು. ನಿಮ್ಮ ದೇಹವು ಪಡೆಯುವಂತಹ ಶಕ್ತಿಯಿಂದಾಗಿ ನೀವು ಮತ್ತಷ್ಟು ವ್ಯಾಯಾಮ ಮಾಡಬಹುದು.

ತಲೆನೋವಿನಿಂದ ಪರಿಹಾರ ನೀಡುವುದು

ತಲೆನೋವಿನಿಂದ ಪರಿಹಾರ ನೀಡುವುದು

ನಿಮಗೆ ತಲೆನೋವು ಕಾಡುತ್ತಲಿದ್ದರೆ ಆಗ ಎಳನೀರು ನಿಮಗೆ ನೈಸರ್ಗಿಕ, ಸರಳ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ. ಇದನ್ನು ನೀವು ಕಡೆಗಣಿಸಬಾರದು. ನಿರ್ಜಲೀಕರಣದಿಂದಾಗಿ ರಕ್ತದೊತ್ತಡ ಮತ್ತು ತಲೆನೋವು ಕಾಡುವುದು. ಎಳನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಾಂಶವು ಹೆಚ್ಚಾಗುವುದು. ಇದರಿಂದ ದೇಹವು ಆರಾಮ ಪಡೆಯುವುದು ಮತ್ತು ತಲೆ ನೋವನ್ನು ತುಂಬಾ ಶೀಘ್ರವಾಗಿ ನಿವಾರಣೆ ಮಾಡಲು ಇದು ನೆರವಾಗುವುದು.

ಚರ್ಮಕ್ಕೆ ಪುನರ್ಶ್ಚೇತನ ನೀಡುವುದು

ಚರ್ಮಕ್ಕೆ ಪುನರ್ಶ್ಚೇತನ ನೀಡುವುದು

ಪ್ರತಿನಿತ್ಯ ನೀವು ಒಂದು ಗ್ಲಾಸ್ ಎಳನೀರು ಕುಡಿದರೆ ಅದರಿಂದ ಚರ್ಮಕ್ಕೆ ತೇವಾಂಶ ಸಿಗುವುದು, ಅದು ನಯ ಮತ್ತು ಕಾಂತಿಯುತವಾಗುವುದು. ನೀವು ಎಳನೀರಿನೊಂದಿಗೆ ಮಿನರಲ್ ವಾಟರ್ ನ್ನು ಕೂಡ ಕುಡಿದರೆ ಅದರಿಂದ ದೇಹವು ಇನ್ನು ಹೆಚ್ಚಿನ ನೀರಿನಾಂಶ ಪಡೆಯುವುದು ಮತ್ತು ದೇಹವು ನೀರಿನಾಂಶವನ್ನು ಪಡೆಯುವುದು. ಒಂದು ವಾರದಲ್ಲಿ ನಿಮಗೆ ಇದರ ಪರಿಣಾಮವು ಕಂಡುಬರುವುದು. ನಿಮ್ಮ ಚರ್ಮದಲ್ಲಿ ತುಂಬಾ ಧನಾತ್ಮಕವಾದ ಬದಲಾವಣೆಗಳು ಕಂಡುಬರುವುದು.

Most Read:ಎಳನೀರು, ಗರ್ಭಿಣಿಯರ ಪಾಲಿಗಂತೂ ಪನ್ನೀರು

ಕಣ್ಣಿನ ದೃಷ್ಟಿ ಸುಧಾರಣೆ ಆಗುವುದು

ಕಣ್ಣಿನ ದೃಷ್ಟಿ ಸುಧಾರಣೆ ಆಗುವುದು

ಕಣ್ಣಿನ ದೃಷ್ಟಿ ಸುಧಾರಣೆ ಮಾಡಲು ನಿಮಗೆ ಕ್ಯಾರೆಟ್ ತಿನ್ನಲು ಇಷ್ಟವಿಲ್ಲವೆಂದಾದರೆ ಆಗ ನೀವು ಎಳನೀರನ್ನು ಇದಕ್ಕೆ ಪರ್ಯಾಯವಾಗಿ ಬಳಸಿಕೊಳ್ಳಬಹುದು. ಇದು ಕಣ್ಣಿನ ಕೆಲವೊಂದು ಸಮಸ್ಯೆಗಳಾಗಿರುವಂತಹ ಗ್ಲುಕೋಮಾ, ಕಣ್ಣಿನ ಪೊರೆಗಳನ್ನು ಇದು ನಿವಾರಣೆ ಮಾಡುವುದು. ಪ್ರತಿನಿತ್ಯ ಎಳನೀರು ಕುಡಿದರೆ ಅದರಿಂದ ಹೃದಯಾಘಾತ ಪಾರ್ಶ್ವವಾಯುವಿನ ಅಪಾಯ ಕಡಿಮೆ ಆಗುವುದು ಮತ್ತು ವಯಸ್ಸಾಗುವ ಲಕ್ಷಣಗಳು ನಿಧಾನವಾಗುವುದು.

ಯೌವನವು ಮರಳಿ ಬರುವುದು

ಯೌವನವು ಮರಳಿ ಬರುವುದು

ಎಳನೀರಿನಲ್ಲಿ ಇರುವಂತಹ ಕೆಲವೊಂದು ಅಂಶಗಳು ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲದೆ, ಇದು ದೇಹವು ಹೆಚ್ಚಿನ ಶಕ್ತಿ ಪಡೆಯುವುದು. ಇದರೊಂದಿಗೆ ಚರ್ಮಕ್ಕೆ ಕಾಂತಿ ಕೂಡ ಸಿಗುವ ಕಾರಣದಿಂದಾಗಿ ನೀವು ತುಂಬಾ ಯೌವನಯುವಾಗಿ ಕಾಣುವಿರಿ. ನೆರಿಗೆ, ಚರ್ಮ ಜೋತು ಬೀಳುವ ಸಮಸ್ಯೆಯು ಕಡಿಮೆ ಆಗುವುದು.

English summary

What happens when you drink coconut water for a week

Drink a cup of fresh coconut water every day for one week, you will see your body change significantly: stretch the skin smooth, youthful, slim body and energetic. Coconut water is a popular drink in the summer is much loved. Not only fragrant, coconut water also contains many healthy nutrients that you did not expect. Drink coconut water for a week will help you significantly improve health problems like weight loss, support the digestive system, boosting energy, and rejuvenate the skin.
Story first published: Thursday, March 28, 2019, 10:44 [IST]
X
Desktop Bottom Promotion