Latest Updates
-
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ
ದಿನಾಲೂ ವೀರ್ಯ ಹೊರಗಡೆ ಹಾಕಿದರೆ ಆರೋಗ್ಯಕ್ಕೆ ಸಮಸ್ಯೆ ಏನಿಲ್ಲ, ಲಾಭವೇ ಜಾಸ್ತಿ!
ಸಂಪ್ರದಾಯಬದ್ಧ ರಾಷ್ಟ್ರವಾಗಿರುವತಹ ಭಾರತದಲ್ಲಿ ಲೈಂಗಿಕತೆ ಬಗ್ಗೆ ಮುಕ್ತವಾಗಿ ಮಾತನಾಡುವಂತಹ ಸಮಯ ಇದುವರೆಗೆ ಬಂದಿಲ್ಲ. ಲೈಂಗಿಕತೆ ಮತ್ತು ಅದರ ವಿಚಾರಗಳ ಬಗ್ಗೆ ಭಾರತದಲ್ಲಿ ಹೆಚ್ಚಾಗಿ ಹರಡಿರುವುದು ಸುಳ್ಳು ಸುದ್ದಿಗಳೇ. ತಮಗೆ ತೋಚಿದನ್ನು ಮಾತನಾಡುವರು ಮತ್ತು ಇದು ಒಬ್ಬರಿಂದ ಒಬ್ಬರಿಗೆ ಹಲವಾರು ರೆಕ್ಕೆ ಪುಕ್ಕಗಳನ್ನು ಪಡೆದುಕೊಂಡು ಇನ್ನಷ್ಟು ಬಲಿಷ್ಠವಾಗಿ ಸಾವಿರಾರು ಜನರ ಕಿವಿಗೆ ಬೀಳುತ್ತಲೇ ಇರುವುದು.
ಆದರೆ ಇವುಗಳಿಗೆ ಯಾವುದೇ ರೀತಿಯ ವೈಜ್ಞಾನಿಕ ಕಾರಣಗಳು ಇಲ್ಲ. ಅದರಲ್ಲೂ ಹಸ್ತಮೈಥುನ ಮಾಡಿಕೊಳ್ಳುವ ಬಗ್ಗೆ ತುಂಬಾ ಭೀತಿಯ ಸುಳ್ಳುಗಳನ್ನು ಹಬ್ಬಲಾಗಿದೆ. ಹಸ್ತಮೈಥುನ ಮಾಡಿಕೊಂಡರೆ ಹಾಗೆ ಆಗುವುದು ಮತ್ತು ಹೀಗೆ ಆಗುವುದು ಎಂದೆಲ್ಲಾ ಹೇಳಲಾಗಿದೆ. ಆದರೆ ವೈದ್ಯಕೀಯವಾಗಿ ಯಾವುದೇ ದೃಢಪಟ್ಟಿಲ್ಲ. ಪ್ರತಿನಿತ್ಯ ನೀವು ವೀರ್ಯ ಹೊರಗಡೆ ಹಾಕಿದರೆ ಆಗ ಏನಾಗುತ್ತದೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದಿಕೊಳ್ಳಿ.

ದಿನಾಲೂ ವೀರ್ಯ ಹೊರಗಡೆ ಹಾಕಿದರೆ ಏನಾಗುವುದು?
ಹಸ್ತಮೈಥನ ಎನ್ನುವುದು ಒಂದು ಲೈಂಗಿಕ ಕ್ರಿಯೆಯಾಗಿದೆ. ಇಲ್ಲಿ ಪುರುಷರು ತಮ್ಮ ಜನನೇಂದ್ರೀಯವನ್ನು ಉತ್ತೇಜಿಸಿ ಅದರಿಂದ ಲೈಂಗಿಕ ಸುಖ ಪಡೆದುಕೊಳ್ಳುವರು ಮತ್ತು ಈ ವೇಳೆ ವೀರ್ಯವು ಬಿಡುಗಡೆಯಾಗುವುದು. ಎಲ್ಲಾ ವಯೋಮಾನದ ಪುರುಷರು ಹಾಗೂ ಮಹಿಳೆಯರಲ್ಲಿ ಇದು ಸಾಮಾನ್ಯವಾಗಿರುವುದು. ಅಧ್ಯಯನಗಳ ಪ್ರಕಾರ ಅಮೆರಿಕಾದಲ್ಲಿ 14ರಿಂದ 17ರ ಹರೆಯದ(ಶೇ.74ರಷ್ಟು ಪುರುಷರು ಮತ್ತು ಶೇ.48ರಷ್ಟು ಮಹಿಳೆಯರು) ಹಸ್ತಮೈಥುನ ಮಾಡಿಕೊಳ್ಳುವರು.

ದಿನಾಲೂ ವೀರ್ಯ ಹೊರಗಡೆ ಹಾಕಿದರೆ ಏನಾಗುವುದು?
ಸರಿಸುಮಾರು ಶೇ.63ರಷ್ಟು ಪುರುಷರು ಮತ್ತು ಶೇ.32ರಷ್ಟು ಮಹಿಳೆಯರು 57ರಿಂದ 64ನೇ ಹರೆಯದವರು ಕೂಡ ಹಸ್ತಮೈಥುನ ಮಾಡುವರು. ಜನರು ಲೈಂಗಿಕ ಖುಷಿ, ಸಂತೋಷ ಮತ್ತು ಒತ್ತಡ ನಿವಾರಣೆಗೆ ಹಸ್ತಮೈಥುನ ಮಾಡಿಕೊಳ್ಳುವರು.

ದಿನನಿತ್ಯ ಹಸ್ತಮೈಥುನ ಮಾಡುವ ಬಗ್ಗೆ ಇರುವ ಸುಳ್ಳುಗಳು
ದಿನನಿತ್ಯ ಹಸ್ತಮೈಥುನ ಮಾಡಿಕೊಳ್ಳುವುದರಿಂದ ಅಂಧತ್ವ, ಅಂಗೈಯಲ್ಲಿ ಕೂದಲು ಬರುವುದು, ಅನಾರೋಗ್ಯ, ನಿಮಿರು ದೌರ್ಬಲ್ಯ, ಶಿಶ್ನ ಕುಗ್ಗುವುದು ಮತ್ತು ಶಿಶ್ನದಲ್ಲಿ ಕೆಲವೊಂದು ಬದಲಾವಣೆಗಳು ಆಗುವುದು ಎಂದು ಹೇಳಲಾಗುತ್ತದೆ. ಅತಿಯಾಗಿ ಹಸ್ತಮೈಥುನ ಮಾಡಿಕೊಳ್ಳುವ ಕಾರಣದಿಂದಾಗಿ ವೀರ್ಯದ ಪ್ರಮಾಣವು ಕಡಿಮೆಯಾಗುವುದು ಎಂದು ಜನರು ಹೆಳುತ್ತಾರೆ. ಹಸ್ತಮೈಥುನ ಬಗ್ಗೆ ಇರುವಂತಹ ಬಹುದೊಡ್ಡ ಸುಳ್ಳು ಎಂದರೆ ಬಂಜೆತನ ಬರುತ್ತದೆ ಎನ್ನುವುದು. ಪುರುರು ಹಸ್ತಮೈಥುನ ಮಾಡಿಕೊಳ್ಳಬಹುದು. ಆದರೆ ಮಹಿಳೆಯರು ಮಾಡಬಾರದು ಎಂದು ಹೇಳಲಾಗಿದೆ. ಋತುಚಕ್ರದ ವೇಳೆ ಹಸ್ತಮೈಥುನ ಮಾಡಿಕೊಳ್ಳಬಾರದು. ಅದು ಅನಾರೋಗ್ಯ ಎಂದು ಹೇಳಲಾಗುತ್ತದೆ. ಇದು ಕೂಡ ಸುಳ್ಳು.

ದಿನನಿತ್ಯ ಹಸ್ತಮೈಥುನ ಮಾಡಿಕೊಳ್ಳುವುದರ ಲಾಭಗಳು
ನೀವು ಹಸ್ತಮೈಥುನದಿಂದ ಸಂತಸವಾಗಿದ್ದರೆ ಆಗ ಪ್ರೊಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆಯು ತುಂಬಾ ಕಡಿಮೆ ಇರುವುದು. ಇದರಿಂದ ಒತ್ತಡ ಮತ್ತು ಆತಂಕವು ನಿವಾರಣೆಯಾಗುವುದು. ಹಸ್ತಮೈಥುನದಿಂದ ಕೆಲವೊಂದು ಸಮಸ್ಯೆಗಳಾಗಿರುವ ಯೋನಿ ಒಣಗುವುದು ಮತ್ತು ಸೆಕ್ಸ್ ವೇಳೆ ಹೆಚ್ಚು ನೋವಾಗುವುದನ್ನು ತಪ್ಪಿಸುವುದು.

ಆರೋಗ್ಯಕರ ಕ್ರಮ
ಹಸ್ತಮೈಥುನ ಬಗ್ಗೆ ಮಾತನಾಡಲು ಹೆಚ್ಚಿನವರಿಗೆ ತುಂಬಾ ಮುಜುಗರ, ತಪ್ಪಿತಸ್ಥ ಮತ್ತು ನಾಚಿಕೆಯಾಗುವುದು. ಆದರೆ ಹಸ್ತಮೈಥುನವು ಸಾಮಾನ್ಯ, ಆರೋಗ್ಯಕರ ಮತ್ತು ಇದರ ಬಗ್ಗೆ ಯಾವತ್ತೂ ತಪ್ಪಿತಸ್ಥ ಭಾವನೆ ಹೊಂದಬೇಕಾಗಿಲ್ಲ.

ಆರೋಗ್ಯಕರ ಕ್ರಮ
ದಿನನಿತ್ಯ ಹಸ್ತಮೈಥುನ ಮಾಡಿಕೊಂಡರೆ ಅದರಿಂದ ಅಂಧತ್ವ ಬರುವುದಿಲ್ಲ ಅಥವಾ ಯಾವುದೇ ರೀತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳದು. ಅದಾಗ್ಯೂ, ಅತಿಯಾದರೆ ಹಾನಿಕಾರಕವಾಗುವುದು. ನೀವು ಇದರ ಬದಲಿಗೆ ಯಾವುದಾದರೂ ಕ್ರೀಡೆ ಅಥವಾ ಇತರ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಆರೋಗ್ಯಕರ, ಸಮತೋಲಿನ ಮತ್ತು ಸಂತಸದ ಜೀವನ ಸಾಗಿಸಬಹುದು.



Click it and Unblock the Notifications
