ಮಹಿಳೆಯರ ಮೊದಲ ಋತುಚಕ್ರ-ಆರೋಗ್ಯದಲ್ಲಿ ಮಹತ್ತರ ಬದಲಾವಣೆಗಳನ್ನು ಬಿಚ್ಚಿಡುತ್ತದೆ

ಋತುಚಕ್ರ ಎನ್ನುವುದು ಹೆಣ್ಣಿಗೆ ಪ್ರಕೃತಿ ನೀಡಿದ ಒಂದು ವರ. ತನ್ನಂತೆ ಹೋಲುವ ಇನ್ನೊಂದು ಜೀವಕ್ಕೆ ಜನ್ಮ ನೀಡಲು ದೈಹಿಕವಾಗಿ ಶಕ್ತಳಾಗಿದ್ದಾಳೆ ಎನ್ನುವುದಕ್ಕೆ ಒಂದು ಸಾಕ್ಷಿ ಎನ್ನಬಹುದು. ಮೊದಲ ಬಾರಿಗೆ ಋತುಚಕ್ರವಾದಾಗ ಹೆಣ್ಣಿಗೊಂದುಬಗೆಯ ಆತಂಕ, ಗೊಂದಲ ಹಾಗೂ ಮುಜುಗರ ಉಂಟಾಗುವುದು. ಹೆಣ್ಣಿನ ಸೂಕ್ಷ್ಮ ಗುಣಗಳಿಗೆ ಇದೊಂದು ಸೂಕ್ಷ್ಮ ತಿರುವು ಎಂದು ಸಹ ಹೇಳಲಾಗುವುದು. ಹೆಣ್ತನಕ್ಕೆ ಹೆಜ್ಜೆ ಇಡುವ ಮೊದಲ ಹಂತವಾದ ಋತುಬಂಧವು ಹೆಣ್ಣಿನ ಆರೋಗ್ಯ ಹಾಗೂ ಮಾನಸಿಕ ಸ್ಥಿತಿಯ ಬಗ್ಗೆಯೂ ಸಾಕಷ್ಟು ಸಂಗತಿಯನ್ನು ತೆರೆದಿಡುವುದು.

ಮೊದಲ ಋತುಚಕ್ರವು ಹೆಣ್ತನದ ಜ್ಯೋತಕವಾಗಿರುವುದರಿಂದ ಸಾಂಪ್ರದಾಯಿಕವಾಗಿಯೂ ಆ ವೇಳೆಯಲ್ಲಿ ಅವಳ ಆರೋಗ್ಯಕ್ಕೆ ಅನುಕೂಲವಾಗುವಂತಹ ಆಹಾರ ಪದಾರ್ಥಗಳನ್ನು ನೀಡಲಾಗುವುದು. ಆ ಸಂದರ್ಭದಲ್ಲಿ ನೀಡಲಾಗುವ ಆಹಾರ ಪದಾರ್ಥಗಳಿಂದ ಹೆಣ್ಣು ದೈಹಿಕವಾಗಿ ಸಾಕಷ್ಟು ಬದಲಾವಣೆ ಹಾಗೂ ಗುಣಲಕ್ಷಣಗಳನ್ನು ಪಡೆದುಕೊಳ್ಳುತ್ತಾಳೆ. ನೈಸರ್ಗಿಕವಾಗಿಯೂ ಹೆಣ್ಣು ಮೈನೆರೆದ ನಂತರ ಹೆಚ್ಚು ಸೂಕ್ಷ್ಮತೆ ಹಾಗೂ ನಾಜೂಕು, ನಾಚಿಕೆಯ ಸ್ವಭಾವಕ್ಕೆ ಒಳಗಾಗುತ್ತಾಳೆ. ಒಟ್ಟಿನಲ್ಲಿ ಅದೊಂದು ಹೊಸ ಅನುಭವದೊಂದಿಗೆ ಜೀವನದಲ್ಲಿ ಹೊಸ ತಿರುವನ್ನು ತಂದುಕೊಡುವುದು.

ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುತ್ತದೆಯಂತೆ!

ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುತ್ತದೆಯಂತೆ!

ವೈಜ್ಞಾನಿಕವಾಗಿ ಮಹಿಳೆಯ ಋತುಚಕ್ರವು ಸಾಕಷ್ಟು ವಿಷಯಗಳನ್ನು ತೆರೆದಿಡುವುದು. ಹೆಣ್ಣು ಮೈನೆರೆದಾಗ ಸಾಕಷ್ಟು ಸಂತೋಷ ಹಾಗೂ ಖುಷಿಯನ್ನು ಮನೆ ಮಂದಿ ಅನುಭವಿಸುವುದು ಸಹಜ. ಅದೇ ಹೆಣ್ಣು ಯಾವ ವರ್ಷದಲ್ಲಿ ಮೈನೆರೆದಿದ್ದಾಳೆ ಎನ್ನುವುದರ ಆಧಾರದ ಮೇಲೆ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಸಹ ಹೇಳಲಾಗುವುದು. ಮೈನೆರೆಯುವುದರ ಹಿಂದೆ ದೇಹದಲ್ಲಿ ಸಾಕಷ್ಟು ಹಾರ್ಮೋನ್‍ಗಳ ವ್ಯತ್ಯಾಸ ಉಂಟಾಗುವುದು ಸಹಜ. ಈ ಹಿನ್ನೆಲೆಯಲ್ಲಿಯೇ ಹೆಣ್ಣು ಕೆಲವು ಅಪಾಯಕಾರಿ ಆರೋಗ್ಯ ಸಮಸ್ಯೆಯನ್ನು ಸಹ ಅನುಭವಿಸಬೇಕಾಗುವುದು ಎಂದು ತಜ್ಞರು ಅಭಿಪ್ರಾಯಿಸುತ್ತಾರೆ. ಹೆಣ್ಣು ಮೊದಲ ಋತುಚಕ್ರದಿಂದ ಯಾವ ಬಗೆಯಲ್ಲಿ ತನ್ನ ಆರೋಗ್ಯದ ಬದಲಾವಣೆಯನ್ನು ಕಂಡುಕೊಳ್ಳುವಳು? ಅವಳ ಋತುಚಕ್ರಕ್ಕೂ ಆರೋಗ್ಯದಲ್ಲಿ ಉಂಟಾಗುವ ಸಮಸ್ಯೆಗಳಿಗೂ ಏನಾದರೂ ಸಂಬಂಧ ಇದೆಯೇ? ಮೊದಲ ಋತುಚಕ್ರದಿಂದ ಆರೋಗ್ಯದಲ್ಲಿ ಉಂಟಾಗುವ ಐದು ಮಹತ್ತರ ಬದಲಾವಣೆಗಳು ಯಾವವು? ಎನ್ನುವುದನ್ನು ತಿಳಿಯಲು ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

ದೇಹದ ತೂಕದ ಮೇಲೆ ಪ್ರಭಾವ ಬೀರುವುದು

ದೇಹದ ತೂಕದ ಮೇಲೆ ಪ್ರಭಾವ ಬೀರುವುದು

ಮೊದಲ ಋತುಚಕ್ರವು ಮಹಿಳೆಯ ದೇಹ ತೂಕದ ಮೇಲೆ ಗಮನಾರ್ಹ ಪ್ರಭಾವ ಬೀರುವುದು. ದೇಹದಲ್ಲಾಗುವ ಹಾರ್ಮೋನ್‍ಗಳ ವ್ಯತ್ಯಾಸದಿಂದ ಮಹಿಳೆ ತನ್ನ ಆಹಾರ ಋಚಿಯಲ್ಲಿ ವ್ಯತ್ಯಾಸವನ್ನು ಪಡೆದುಕೊಳ್ಳುವಳು. ಜೊತೆಗೆ ದೇಹದಲ್ಲಿ ಕೊಬ್ಬಿನಾಂಶದ ಬಿಡುಗಡೆಯು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಋತುಚಕ್ರದ ಪೂರ್ವಕ್ಕಿಂತ ಹೆಚ್ಚು ತೂಕವನ್ನು ನೈಸರ್ಗಿಕವಾಗಿಯೇ ಪಡೆದುಕೊಳ್ಳುವಳು. ಮೊದಲಿನ ಋತುಚಕ್ರವನ್ನು ಮೆನಾರ್ಚ್ ಎಂದು ಕರೆಯಲಾಗುವುದು. ಬಾಲ್ಯದಲ್ಲಿ ಅತಿಯಾದ ತೂಕ ಇರುವ ಮಕ್ಕಳು ವಯಸ್ಸಿಗೆ ಬಂದಾಗಲೂ ಹೆಚ್ಚಿನ ತೂಕವನ್ನು ಪಡೆದುಕೊಳ್ಳುವರು ಎಂದು ತಜ್ಞರು ಅಭಿಪ್ರಾಯಿಸುತ್ತಾರೆ. ಈ ಹಿನ್ನೆಲೆಯಲ್ಲಿಯೇ ಕೆಲವು ಮಹಿಳೆಯರು ಅಧಿಕ ಸ್ಥೂಲಕಾಯವನ್ನು ಅನುಭವಿಸುವರು.

ಇದು ನಿಮ್ಮ ಹೃದಯದ ಆರೋಗ್ಯದ ಮೇಲೆ ಪ್ರಭಾವ ಬೀರುವುದು

ಇದು ನಿಮ್ಮ ಹೃದಯದ ಆರೋಗ್ಯದ ಮೇಲೆ ಪ್ರಭಾವ ಬೀರುವುದು

ಮೊದಲ ಋತುಚಕ್ರವು ಹತ್ತು ವರ್ಷಕ್ಕೂ ಮೊದಲೇ ಅನುಭವಿಸಿದ್ದರೆ ಅಥವಾ ಹದಿನೇಳು (17)ವರ್ಷದ ನಂತರ ಆಗಿದ್ದರೆ ಅಂತಹ ಹುಡುಗಿಯರಿಗೆ ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಾಡುವುದು ಎಂದು ತಜ್ಞರು ಹೇಳುತ್ತಾರೆ. ಈ ಎರಡು ವಯಸ್ಸು ಹುಡುಗಿಯರ ಆರೋಗ್ಯದ ಮೇಲೆ ತೀವ್ರತೆಯನ್ನು ಉಂಟುಮಾಡುತ್ತವೆ. ಇತ್ತೀಚೆಗೆ ನಡೆಸಿದ ಸಂಶೋಧನೆಯ ಪ್ರಕಾರ 1.3 ಮಿಲಿಯನ್ ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅದರಲ್ಲಿ 13ನೇ ವಯಸ್ಸಿನ ಅವಧಿಯಲ್ಲಿ ಮೊದಲ ಋತುಚಕ್ರವನ್ನು ಅನುಭವಿಸಿದ ಮಹಿಳೆಯರು ಹೃದಯಕ್ಕೆ ಸಂಬಂಧಿಸಿದ ರೋಗಗಳಿಂದ ಕಡಿಮೆ ಅಪಾಯವನ್ನು ಹೊಂದಿದ್ದರು. ಹತ್ತು ವರ್ಷ ಹಾಗೂ 17ನೇ ವಯಸ್ಸಿನಲ್ಲಿ ಮೊದಲ ಋತುಚಕ್ರ ಹೊಂದಿರುವ ಮಹಿಳೆಯರಲ್ಲಿ ಹೃದಯಕ್ಕೆ ಸಂಬಂಧಿಸಿದ ಅನೇಕ ಅಪಾಯಕಾರಿ ರೋಗಗಳು, ಪಾಶ್ರ್ವವಾಯು, ಅಧಿಕ ರಕ್ತದೊತ್ತಡಗಳಂತಹ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದರು ಎಂದು ಅಧ್ಯಯನವು ದೃಢಪಡಿಸಿದೆ.

ಮಧುಮೇಹದ ಅಪಾಯ

ಮಧುಮೇಹದ ಅಪಾಯ

ಇತ್ತೀಚಿನ ದಿನದಲ್ಲಿ ಮಧು ಮೇಹ ಎನ್ನುವುದು ಸಾಮಾನ್ಯವಾದ ಆರೋಗ್ಯ ಸಮಸ್ಯೆ. ಒಂದು ವಯಸ್ಸಿನ ನಂತರ ಸಾಮಾನ್ಯವಾಗಿ ಆವರಿಸಿಕೊಳ್ಳುವ ಕಾಯಿಲೆ ಎಂದು ಹೇಳಲಾಗುತ್ತಿದೆ. ಇಂತಹ ಆರೋಗ್ಯ ಸಮಸ್ಯೆಯು ಮಹಿಳೆಯರಲ್ಲಿ ಹೆಚ್ಚಾಗಿ ಕಾಡಲು ಅವರ ಮೊದಲ ಋತುಚಕ್ರದ ಸಮಯ ಎಂದು ಸಹ ಹೇಳಲಾಗುವುದು. ವಯಸ್ಸಾದಂತೆ ಮಹಿಳೆಯರಲ್ಲಿ ಎರಡನೇ ವಿಧದ ಮಧುಮೇಹ ಆವರಿಸಿಕೊಳ್ಳುವುದು ಎಂದು ತಜ್ಞರು ಅಭಿಪ್ರಾಯಿಸುತ್ತಾರೆ. ಮೊದಲ ಋತುಚಕ್ರ ಅಥವಾ ಪ್ರೌಢಾವಸ್ಥೆಯ ಅವಧಿಯಲ್ಲಿ ಇನ್ರೋಲಿನ್ ಪ್ರತಿರೋಧಕವನ್ನು ಹೆಚ್ಚಿಸುವ ಹಾರ್ಮೋನ್‍ಗಳ ಬದಲಾವಣೆ ಹೆಚ್ಚಾಗಿರುತ್ತದೆ. ವಯಸ್ಸಿಗೆ ಬಂದಾಗ ದೇಹದಲ್ಲಿ ಹಾರ್ಮೋನ್‍ಗಳು ಬದಲಾವಣೆಯನ್ನು ಕಂಡುಕೊಳ್ಳುತ್ತವೆ. ಈ ಬದಲಾವಣೆಗಳು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಹ ಹೇಳಲಾಗುವುದು. ವಯಸ್ಸಾದಂತೆ ಮಧುಮೇಹದ ಸಮಸ್ಯೆ ಅಧಿಕವಾಗುತ್ತಾ ಸಾಗುವುದು. ಕೆಲವರಲ್ಲಿ ಬಹಳ ಸಣ್ಣ ವಯಸ್ಸಿನಲ್ಲಿಯೇ ಮಧುಮೇಹದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಗರ್ಭಧಾರಣೆಯ ವಿಷಯದ ಮೇಲೂ ಹೆಚ್ಚಿನ ಪ್ರಭಾವ ಬೀರುವುದು

ಗರ್ಭಧಾರಣೆಯ ವಿಷಯದ ಮೇಲೂ ಹೆಚ್ಚಿನ ಪ್ರಭಾವ ಬೀರುವುದು

ತಜ್ಞರ ಪ್ರಕಾರ ಮೊದಲ ಋತುಚಕ್ರವು ಮಹಿಳೆಯ ಗರ್ಭಧಾರಣೆಯ ವಿಷಯದ ಮೇಲೆ ಪ್ರಭಲವಾದ ಪರಿಣಾಮ ಬೀರುವುದು. ಬಹಳ ಚಿಕ್ಕವಯಸ್ಸಿನಲ್ಲಿಯೇ ಋತುಚಕ್ರವನ್ನು ಅನುಭವಿಸಿದ ಮಹಿಳೆಯರು ಗರ್ಭಾವಸ್ಥೆಯಲ್ಲಿ ಸಾಕಷ್ಟು ತೊಡಕುಗಳನ್ನು ಅನುಭವಿಸುತ್ತಾರೆ. ಇದು ಪ್ರಿಕ್ಲಾಂಪ್ಸಿಯ ಅಪಾಯವನ್ನು ಉಂಟುಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಹೊಟ್ಟೆಯಲ್ಲಿರುವ ಮಗುವಿನ ಮೇಲೂ ಪ್ರಭಾವ ಬೀರುವುದು. ಅಧಿಕ ರಕ್ತದೊತ್ತಡದ ಸಮಸ್ಯೆ ಮತ್ತು ಅಂಗಗಳ ಬೆಳವಣಿಗೆ ಸೂಕ್ತ ರೀತಿಯಲ್ಲಿ ಆಗದೆ ಇರಬಹುದು. ಇಲ್ಲವೇ ಅಂಗಗಳು ಹಾನಿಗೊಳಗಾಗುವ ಸಾದ್ಯತೆಗಳು ಹೆಚ್ಚಾಗಿರುತ್ತವೆ. ನವಜಾತ ಮಗುವಿನ ಮರಣ ಅಥವಾ ತಾಯಿ ಪ್ರಸವದ ಸಂದರ್ಭದಲ್ಲಿ ಮರಣ ಹೊಂದಬಹುದು. ಗರ್ಭಧಾರಣೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ಹಾಗೂ ಮಕ್ಕಳು ಆರೋಗ್ಯವಂತರಾಗಿ ಬೆಳವಣಿಗೆ ಹೊಂದಲು ಕಷ್ಟವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಅಭಿಪ್ರಾಯಿಸಲಾಗುತ್ತದೆ. ಸೂಕ್ತ ವಯಸ್ಸಿನಲ್ಲಿ ಋತುಚಕ್ರವನ್ನು ಹೊಂದಿದ್ದರೆ ಮಹಿಳೆ ಆರೋಗ್ಯಯುತವಾದ ದೇಹ ಹೊಂದುತ್ತಾಳೆ. ಜೊತೆಗೆ ಗರ್ಭಕೋಶದ ಬೆಳವಣಿಗೆ ಹಾಗೂ ಕಾರ್ಯಚಟುವಟಿಕೆಗಳು ಕ್ರಮಬದ್ಧವಾಗಿ ನಡೆಯುವುದು ಎನ್ನಲಾಗುತ್ತದೆ.

ಸ್ತನ ಕ್ಯಾನ್ಸರ್‍ನಂತಹ ಅಪಾಯವನ್ನು ಹೆಚ್ಚಿಸುವುದು

ಸ್ತನ ಕ್ಯಾನ್ಸರ್‍ನಂತಹ ಅಪಾಯವನ್ನು ಹೆಚ್ಚಿಸುವುದು

ಮೊದಲ ಋತುಚಕ್ರವು ಹುಡುಗಿಯರಿಗೆ 12 ವರ್ಷಕ್ಕಿಂತಲೂ ಮುಂಚೆಯೇ ಸಂಭವಿಸಿದ್ದರೆ ಅಂತಹವರಲ್ಲಿ ಪ್ರತಿಶತ 20ರಷ್ಟು ಸ್ತನ ಕ್ಯಾನ್ಸರ್‍ನಂತಹ ಅಪಾಯ ಹೆಚ್ಚಾಗಿರುತ್ತದೆ ಎಂದು ಅಧ್ಯಯನ ದೃಢಪಡಿಸಿದೆ. ಇತ್ತೀಚಿನ ದಿನದಲ್ಲಿ ಅಧಿಕ ಮಹಿಳೆಯರು ಸ್ತನ ಕ್ಯಾನ್ಸರ್ ಎನ್ನುವ ಮಹಾ ಅಪಾಯಕಾರಿ ರೋಗಗಳಿಗೆ ಬಹುಬೇಗ ತುತ್ತಾಗುತ್ತಿದ್ದಾರೆ. ವಿದೇಶದಂತಹ ರಾಷ್ಟ್ರದಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಲಾಗುವುದು. ಅಲ್ಲದೆ ಅದರ ಬಗ್ಗೆ ಸೂಕ್ತ ಕಾಳಜಿ ಹಾಗೂ ಚಿಕಿತ್ಸೆಯನ್ನು ಆದಷ್ಟು ಬೇಗ ಪಡೆದುಕೊಳ್ಳಬೇಕು. ಪ್ರಾಥಮಿಕ ಹಂತವನ್ನು ಮೀರಿದರೆ ಈ ಸಮಸ್ಯೆಯನ್ನು ಗುಣಪಡಿಸುವುದು ಅಷ್ಟು ಸುಲಭದ ಸಂಗತಿಯಲ್ಲ. ಮಹಿಳೆಯರಿಗೆ ಕಾಡುವ ಭಯಂಕರ ರೋಗಗಳಲ್ಲಿ ಇದು ಒಂದು ಎನ್ನಲಾಗುವುದು.

ಎಚ್ಚರಿಕೆ ಅಗತ್ಯ

ಎಚ್ಚರಿಕೆ ಅಗತ್ಯ

ಋತುಚಕ್ರ ಎನ್ನುವುದು ಪ್ರಕೃತಿಯು ಹೆಣ್ಣಿಗೆ ನೀಡುವ ಒಂದು ವರದಾನ. ಈ ವರವು ಒಂದು ಬಾಲಕಿಗೆ ಅಥವಾ ಹುಡುಗಿಗೆ ಇಂತಹದ್ದೇ ವರ್ಷದಲ್ಲಿ ಆಗುವುದು ಎಂದು ಹೇಳಲು ಸಾಧ್ಯವಿಲ್ಲ. ಅಥವಾ ಅದು ಸಂಭವಿಸುವ ಸಮಯದಲ್ಲಿ ತಡೆಯಲೂ ಸಹ ಸಾಧ್ಯವಿಲ್ಲ. ಋತುಚಕ್ರ ಯಾವ ವಯಸ್ಸಿನಲ್ಲಿ ಆದರೂ ಅದನ್ನು ಸ್ವೀಕರಿಸಬೇಕು. ಏಕೆಂದರೆ ಅದು ನಮ್ಮ ನಿಯಂತ್ರಣದಲ್ಲಿ ಇಲ್ಲದ ಒಂದು ಪ್ರಕ್ರಿಯೆ. ಹುಡುಗಿ 10 ವರ್ಷಕ್ಕಿಂತಲೂ ಮೊದಲು ಹಾಗೂ 17 ವರ್ಷದ ನಂತರದ ಸಮಯದಲ್ಲಿ ಮೊದಲ ಋತುಚಕ್ರವನ್ನು ಅನುಭವಿಸಿದ್ದರೆ ಅದು ಅವಳ ಆರೋಗ್ಯದ ಮೇಲೆ ಸಾಕಷ್ಟು ಹಾನಿಕಾರಕ ಪ್ರಭಾವ ಬೀರುವುದು ಎನ್ನಲಾಗುವುದು. ಅದರಂತೆಯೇ ಬಹಳ ಮುಖ್ಯವಾದ ಸಂಗತಿ ಎಂದರೆ ನಮ್ಮ ಹವ್ಯಾಸಗಳು. ಸಣ್ಣ ವಯಸ್ಸಿನಲ್ಲಿಯೇ ಧೂಮಪಾನ, ಮಧ್ಯಸೇವನೆ, ಅನುಚಿತ ಆಹಾರ ಸೇವನೆಗಳಂತಹ ಹವ್ಯಾಸಗಳನ್ನು ಬೆಳೆಸಿಕೊಂಡರೆ ಆರೋಗ್ಯದಲ್ಲಿ ಬಹುಬೇಗ ಅಪಾಯವನ್ನು ಪಡೆದುಕೊಳ್ಳಬೇಕಾಗುವುದು. ಅದರ ಬದಲಿಗೆ ಆರೋಗ್ಯಕರ ಜೀವನಶೈಲಿ ಹಾಗೂ ಆಹಾರವನ್ನು ಸ್ವೀಕರಿಸುವುದರಿಂದ ಜೀವನವನ್ನು ಸಂತೋಷದಿಂದ ಕಳೆಯಬಹುದು ಎಂದು ತಜ್ಞರು ಅಭಿಪ್ರಾಯಿಸುತ್ತಾರೆ.

English summary

things your first period reveals about your health

No matter how much you have become a ‘seasoned period pro’, you can’t forget the time when you got your first period. That feeling of crankiness, fear of spotting and moreover, stepping into womanhood was altogether a new experience. You do remember that experience, but when it comes to the exact age, you might not be able to recall it accurately. If this is the case, then think harder, as the age you got your first period is linked to certain medical conditions.
X
Desktop Bottom Promotion