Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಇಂತಹ ಕೊಬ್ಬಿನ ಆಹಾರಗಳನ್ನು ತಿಂದರೆ- ದೇಹದ ತೂಕ ಕಡಿಮೆಯಾಗುವುದು!
ದೇಹದಲ್ಲಿ ತೂಕವು ಹೆಚ್ಚಾದರೆ ಅದನ್ನು ಕಡೆಗಣಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ. ಯಾಕೆಂದರೆ ಇದರಿಂದ ಹಲವಾರು ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ತೂಕ ಸಮತೋಲನದಲ್ಲಿ ಇಡಲು ಪ್ರತಿಯೊಬ್ಬರು ಇಂದಿನ ದಿನಗಳಲ್ಲಿ ಹೆಚ್ಚಿನ ವ್ಯಾಯಾಮ ಮತ್ತು ಆಹಾರದಲ್ಲಿ ಪಥ್ಯ ಮಾಡಿಕೊಳ್ಳುವರು. ತೂಕ ಕಳೆದುಕೊಳ್ಳಬೇಕಾದರೆ ಕೆಲವೊಂದು ಆಹಾರವನ್ನು ಕಡೆಗಣಿಸಬೇಕು ಎಂದು ಹೇಳಲಾಗುತ್ತದೆ.

ಆದರೆ ಇಲ್ಲಿ ಕೊಬ್ಬಿನ ಆಹಾರವನ್ನು ತಿಂದು ತೂಕ ಇಳಿಸಿಕೊಳ್ಳಬಹುದು. ಹೌದು, ತೂಕ ಇಳಿಸಿಕೊಳ್ಳಲು ನೀವು ಕೆಲವೊಂದು ಕೊಬ್ಬು ಇರುವಂತಹ ಆಹಾರ ಸೇವನೆ ಮಾಡಿದರೂ ಸಾಧ್ಯವಿದೆ. ಆದರೆ ಈ ವೇಳೆ ನೀವು ಸಂಸ್ಕರಿತ ಮತ್ತು ಕೆಲವೊಂದು ಫಾಸ್ಟ್ ಫುಡ್ ಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ತೂಕ ಇಳಿಸಿಕೊಳ್ಳಲು ನೀವು ತಿನ್ನಬಹುದಾದ ಕೊಬ್ಬಿನ ಆಹಾರಗಳು ಯಾವುದು ಎಂದು ತಿಳಿಯುವ.

ಅವಕಾಡೊ
ಅವಕಾಡೊದಲ್ಲಿ ಉನ್ನತ ಮಟ್ಟದಲ್ಲಿ ಕೊಬ್ಬಿನಾಮ್ಲಗೂ ಇದ್ದರೂ ಇದರಲ್ಲಿ ಕಾರ್ಬ್ಸ್ ಇದೆ. ಅವಕಾಡೊದಲ್ಲಿ ಶೇ.77ರಷ್ಟು ಕೊಬ್ಬು ಇದೆ. ಅವಕಾಡೋದಲ್ಲಿ ಏಕಪರ್ಯಾಪ್ತ ಕೊಬ್ಬು ಆಗಿರುವಂತಹ ಒಲೆಯಿಕ್ ಆಮ್ಲವಿದೆ. ಈ ಕೊಬ್ಬಿನಾಮ್ಲವು ಆಲಿವ್ ತೈಲದಲ್ಲೂ ಲಭ್ಯವಿದೆ. ಇದು ಹೆಚ್ಚಿನ ಆರೋಗ್ಯ ಲಾಭಗಳನ್ನು ಹೊಂದಿದೆ. ಪೊಟಾಶಿಯಂ ಕೂಡ ಆಹಾರ ಪಥ್ಯಕ್ಕೆ ಮುಖ್ಯವಾಗಿ ಬೇಕು ಮತ್ತು ಅವಕಾಡೊದಲ್ಲಿ ಅಧಿಕ ಮಟ್ಟದ ಪೊಟಾಶಿಯಂ ಇದೆ. ಇದರಲ್ಲಿ ನಾರಿನಾಂಶವು ಲಭ್ಯವಿದೆ. ನಿಮ್ಮ ಆಹಾರ ಕ್ರಮದಲ್ಲಿ ಅವಕಾಡೊ ಸೇರಿಸಿಕೊಂಡರೆ ಆಗ ನೀವು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಬಹುದು. ಈ ಹಣ್ಣು ಕೆಟ್ಟ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುವುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು. ಇದರಲ್ಲಿ ಅಧಿಕ ಮಟ್ಟದ ನಾರಿನಾಂಶ ಮತ್ತು ಪೊಟಾಶಿಯಂ ಇರುವ ಕಾರಣದಿಂದಾಗಿ ಅವಕಾಡೊ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಚೀಸ್
ಕೊಬ್ಬಿನಿಂದ ಸಮೃದ್ಧವಾಗಿರುವ ಮತ್ತು ತಿನ್ನಲು ತುಂಬಾ ರುಚಿಯಾಗಿರುವ ಚೀಸ್ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇದನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಿ. ಒಂದು ಸಣ್ಣ ತುಂಬಾ ಚೀಸ್ ಒಂದು ಲೋಟ ಹಾಲಿನಿಂದ ಮಾಡಲಾಗುವುದು. ಚೀಸ್ ಹಾಲಿನ ಉತ್ಪನ್ನವಾಗಿರುವ ಕಾರಣದಿಂದಾಗಿ ಇದರಲ್ಲಿ ಉನ್ನತ ಮಟ್ಟದ ಕ್ಯಾಲ್ಸಿಯಂ, ವಿಟಮಿನ್ ಬಿ12 ಮತ್ತು ಇತರ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇದರಲ್ಲಿ ಉನ್ನತ ಮಟ್ಟದ ಕೊಬ್ಬು ಇದ್ದರೂ ಒಂದು ಲೋಟ ಹಾಲಿನಿಂದ ಸಿಗುವ ಎಲ್ಲಾ ಪೋಕಾಂಶಗಳು ಸಿಗುವುದು. ಇದನ್ನು ಮಿತವಾಗಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ಆಹಾರಕ್ಕೂ ರುಚಿ ನೀಡುವುದು. ಇದರಲ್ಲಿ ಇರುವಂತಹ ಕೊಬ್ಬಿನಾಮ್ಲವು ಟೈಪ್-2 ಮಧುಮೇಹ ತಡೆಯುವುದು.

ಡಾರ್ಕ್ ಚಾಕಲೇಟ್
ಡಾರ್ಕ್ ಚಾಕಲೇಟ್ ಕೊಬ್ಬು ಹೆಚ್ಚಿಸುವುದು ಮತ್ತು ಇದನ್ನು ತಿನ್ನದೆ ಇರುವುದು ತುಂಬಾ ಕಷ್ಟವಾಗಿರುವುದು. ಆದರೆ ಡಾರ್ಕ್ ಚಾಕಲೇಟ್ ನಲ್ಲಿ ಶೇ.70ರಷ್ಟು ಕೋಕಾ ಒಳಗೊಂಡಿದ್ದು, ಇದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಮನಸ್ಥಿತಿ ಸುಧಾರಣೆ ಮಾಡುವುದು. ಡಾರ್ಕ್ ಚಾಕಲೇಟ್ ನಲ್ಲಿ ಶೇ.65ರಷ್ಟು ಕೊಬ್ಬಿನಾಮ್ಲಗಳು ಇವೆ. ಇದರಲ್ಲಿ ಉನ್ನತ ಮಟ್ಟದ ಆ್ಯಂಟಿ ಆಕ್ಸಿಡೆಂಟ್ ಗಳು ಇವೆ. ಇದರಲ್ಲಿ ತಾಮ್ರ, ಮ್ಯಾಂಗನೀಸ್ ಮತ್ತು ಕಬ್ಬಿನಾಂಶವು ಇದೆ. ಡಾರ್ಕ್ ಚಾಕಲೇಟ್ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮತ್ತು ರಕ್ತದೊತ್ತಡ ಕಡಿಮೆ ಮಾಡುವುದು.

ಬೀಜಗಳು
ಬೀಜಗಳಲ್ಲಿ ಉನ್ನತ ಮಟ್ಟದ ಕೊಬ್ಬು ಇದ್ದು, ಇದರಲ್ಲಿ ಉತ್ತಮ ಕೊಬ್ಬು ಇದೆ. ಇದು ಚಯಾಪಚಯ ಕ್ರಿಯೆ ಉತ್ತಮಪಡಿಸುವುದು ಮತ್ತು ಆಹಾರವನ್ನು ಜೀರ್ಣಗೊಳಿಸುವುದು ಹೆಚ್ಚಾಗುವುದು. ಬೀಜಗಳಲ್ಲಿ ಉನ್ನತ ಮಟ್ಟದ ಪ್ರೋಟೀನ್ ಇದೆ ಮತ್ತು ಇದು ಪದೇ ಪದೇ ಹಸಿವಾಗುವುದನ್ನು ತಪ್ಪಿಸುವುದು. ಒಂದು ಹಿಡಿ ಬೀಜಗಳು ಹಸಿವನ್ನು ನಿಯಂತ್ರಿಸುವುದು. ಇದರಿಂದ ಜಂಕ್ ಫುಡ್ ಸಹವಾಸ ತಪ್ಪಿಸವುದು. ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕಾದ ಇನ್ನು ಕೆಲವು ಆರೋಗ್ಯಕಾರಿ ಕೊಬ್ಬಿನ ಆಹಾರಗಳೆಂದರೆ ಬಾದಾಮಿ, ವಾಲ್ ನಟ್ಸ್, ಪಿಸ್ತಾ ಮತ್ತು ಇನ್ನೂ ಹಲವಾರು.



Click it and Unblock the Notifications
