Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಧಿಕ ರಕ್ತದೊತ್ತಡ ನಿಯಂತ್ರಣ ಮಾಡುವ ಪವರ್ ಇಂತಹ ಬೇಸಿಗೆಯ ಹಣ್ಣಿನಲ್ಲಿದೆ
ಜೀವನಶೈಲಿ, ಒತ್ತಡ ಇತ್ಯಾದಿಗಳಿಂದಾಗಿ ಅಧಿಕ ರಕ್ತದೊತ್ತಡ ಎನ್ನುವುದು ಸಾಮಾನ್ಯ ಎನ್ನುವಂತಾಗಿದೆ. ಆದರೆ ಅಧಿಕ ರಕ್ತದೊತ್ತಡವಿದ್ದರೆ ಆಗ ಹಲವಾರು ರೀತಿಯ ರೋಗಗಳು ಬರುವುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕೇವಲ ಔಷಧಿ ಮಾತ್ರ ಸೇವನೆ ಮಾಡುವುದು ರಕ್ತದೊತ್ತಡ ನಿಯಂತ್ರಣ ಮಾಡಲು ಸರಿಯಾದ ವಿಧಾನವಲ್ಲ.

ಇದಕ್ಕಾಗಿ ಜೀವನಶೈಲಿಯಲ್ಲಿ ಕೂಡ ಕೆಲವೊಂದು ಬದಲಾವಣೆಗಳನ್ನು ಮಾಡಬೇಕು ಮತ್ತು ನಿಯಂತ್ರಿತವಾದ ಆಹಾರ ಕ್ರಮದಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಬೇಸಿಗೆಯಲ್ಲಿ ಸಿಗುವಂತಹ ಹಲವಾರು ರೀತಿಯ ಹಣ್ಣುಗಳಲ್ಲಿ ನೀರಿನಾಂಶವು ಹೆಚ್ಚಾಗಿರುವುದು ಮತ್ತು ಇದು ಹಲವಾರು ಆರೋಗ್ಯ ಲಾಭಗಳನ್ನು ಕೂಡ ನೀಡುವುದು. ರಕ್ತದೊತ್ತಡ ನಿವಾರಣೆ ಮಾಡುವಂತಹ ಕೆಲವೊಂದು ಬೇಸಿಗೆಯ ಹಣ್ಣುಗಳ ಬಗ್ಗೆ ತಿಳಿಯುವ.

ಕಿವಿ ಹಣ್ಣು
ಕಿವಿ ಹಣ್ಣು ತುಂಬಾ ರುಚಿಕರವಾಗಿದೆ ಮತ್ತು ಇದು ಜೀರ್ಣಕ್ರಿಯೆ ಸುಧಾರಣೆ ಮಾಡುವುಉ, ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ಚರ್ಮದ ಆರೋಗ್ಯವನ್ನು ಸುಧಾರಣೆ ಮಾಡುವುದು. ಇದು ರಕ್ತದೊತ್ತಡ ನಿವಾರಣೆ ಕೂಡ ಮಾಡುವುದು. ಕಿವಿ ಹಣ್ಣಿನಲ್ಲಿ ಅತ್ಯುತ್ತಮವಾಗಿರುವ ಆಂಟಿಆಕ್ಸಿಡೆಂಟ್ ಗಳು ಇವೆ. ಅಧ್ಯಯನಗಳು ಹೇಳುವ ಪ್ರಕಾರ ದಿನದಲ್ಲಿ ಮೂರು ಕಿವಿ ಹಣ್ಣುಗಳನ್ನು ತಿಂದರೆ ಆಗ ರಕ್ತದೊತ್ತಡವು ನಿಯಂತ್ರಣದಲ್ಲಿ ಇರುವುದು. ಅಧಿಕ ರಕ್ತದೊತ್ತಡದಿಂದ ಉಂಟಾಗುವಂತಹ ಕೆಲವೊಂದು ಇತರ ಸಮಸ್ಯೆಗಳಾಗಿರುವಂತಹ ಹೃದಯಾಘಾತ, ಪಾರ್ಶ್ವವಾಯು ಇತ್ಯಾದಿಗಳನ್ನು ಇದು ತಡೆಯುವುದು.

ಕಲ್ಲಂಗಡಿ
ಕಲ್ಲಂಗಡಿಯಲ್ಲಿ ಹಲವಾರು ಪೋಷಕಾಂಶಗಳು ಇದ್ದು ತುಂಬಾ ರುಚಿಕರ ಹಣ್ಣಾಗಿದೆ. ಬೇಸಿಗೆಯಲ್ಲಿ ನೀವು ದಿನನಿತ್ಯವು ಕಲ್ಲಂಗಡಿ ಹಣ್ಣು ತಿನ್ನಬಹುದು. ಇದರಲ್ಲಿ ನೀರಿನಾಂಶವು ಅಧಿಕವಾಗಿದೆ ಮತ್ತು ಇದು ದೇಹವನ್ನು ತೇವಾಂಶದಿಂದ ಇಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಕಲ್ಲಂಗಡಿ ಹಣ್ಣಿನಲ್ಲಿ ಇರುವಂತಹ ಅಧಿಕ ಮಟ್ಟದ ಪೊಟಾಶಿಯಂನಿಂದಾಗಿ ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು. ಕಲ್ಲಂಗಡಿಯಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಇದೆ.

ಮಾವಿನ ಹಣ್ಣು
ಬೇಸಿಗೆ ಸಮಯವೆಂದರೆ ಆಗ ಅದು ಮಾವಿನ ಹಣ್ಣಿನ ಋತು ಎಂದೇ ಅರ್ಥ. ಕೆಲವರು ಮಾವಿನ ಹಣ್ಣುಗಳನ್ನು ತಿನ್ನಲು ಬೇಸಿಗೆ ಕಾಲಕ್ಕಾಗಿ ಕಾಯುತ್ತಲಿರುವರು. ಬೇಸಿಗೆ ಸಮಯದಲ್ಲಿ ವಿವಿಧ ರೀತಿಯ ಮಾವಿನ ಹಣ್ಣುಗಳು ಋತುವಿಡಿ ಸಿಗುವುದು. ಈಗ ಮಾವಿನ ಹಣ್ಣನ್ನು ಸೇವಿಸಲು ಮತ್ತೊಂದು ಕಾರಣ ಹೆಚ್ಚಿಗೆ ಸಿಕ್ಕಿದೆ. ಅದೇನೆಂದರೆ ಮಾವಿನ ಹಣ್ಣು ಕೂಡ ರಕ್ತದೊತ್ತಡ ನಿಯಂತ್ರಣ ಮಾಡುವುದು. ಮಾವಿನ ಹಣ್ಣಿನಲ್ಲಿ ಪೊಟಾಶಿಯಂ ಅಧಿಕವಾಗಿರುವ ಕಾರಣದಿಂಧಾಗಿ ಅದು ಅಧಿಕ ರಕ್ತದೊತ್ತಡ ನಿಯಂತ್ರಣ ಮಾಡಲು ತುಂಬಾ ಪರಿಣಾಮಕಾರಿ. ಮಾವಿನ ಹಣ್ಣಿನ ಶೇಕ್, ಸ್ಮೂಥಿ, ಸಿಹಿತಿಂಡಿ ಮತ್ತು ಇತ್ಯಾದಿಗಳನ್ನು ತಯಾರಿಸಿಕೊಂಡು ಆನಂದಿಸಬಹುದು.

ಸ್ಟ್ರಾಬೆರಿ
ಇದರ ಬಣ್ಣವನ್ನು ನೋಡಿದ ಕೂಡಲೇ ತಿಂದು ಬಿಡಬೇಕು ಎಂದು ಅನಿಸುವುದು. ಅಷ್ಟು ಮಾತ್ರವಲ್ಲದೆ ಹುಳಿ ಹಾಗೂ ಸಿಹಿಯ ಮಿಶ್ರಣದ ರುಚಿ ತುಂಬಾ ಒಳ್ಳೆಯದು. ಸ್ಟ್ರಾಬೆರಿ ಶೇಕ್ ತಯಾರಿಸಿಕೊಳ್ಳಬಹುದು, ಸಲಾಡ್ ಮಾಡಬಹುದು, ಇದನ್ನು ನೇರವಾಗಿ ಸೇವಿಸಲು ಇಷ್ಟವಿಲ್ಲದೆ ಇದ್ದರೆ ಸಾಸ್ ಕೂಡ ತಯಾರಿಸಬಹುದು. ನೀವು ಯಾವತ್ತಿಗೂ ಸ್ಟ್ರಾಬೆರಿಗೆ ಇಲ್ಲವೆನ್ನಲು ಸಾಧ್ಯವಿಲ್ಲ. ಯಾಕೆಂದರೆ ಇದರಲ್ಲಿ ಹಲವಾರು ಆರೋಗ್ಯ ಲಾಭಗಳು ಇವೆ. ಸ್ಟ್ರಾಬೆರಿಯಲ್ಲಿ ಆಂಟಿಆಕ್ಸಿಡೆಂಟ್, ವಿಟಮಿನ್ ಸಿ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಇವೆ. ಇದರಲ್ಲಿ ಇರುವಂತಹ ಪೊಟಾಶಿಯಂ ಅಧಿಕ ರಕ್ತದೊತ್ತಡ ನಿಯಂತ್ರಣ ಮಾಡುವುದು.

ಬಾಳೆಹಣ್ಣು
ಅಧಿಕ ರಕ್ತದೊತ್ತಡ ನಿಯಂತ್ರಣ ಮಾಡುವಲ್ಲಿ ಬಾಳೆಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಿಮಗೆ ಈಗ ತಿಳಿದಿದೆ ಮತ್ತು ಬಾಳೆಹಣ್ಣಿನಲ್ಲಿ ಉನ್ನತ ಮಟ್ಟದ ಪೊಟಾಶಿಯಂ ಇದೆ. ಬಾಳೆಹಣ್ಣು ಸ್ವಲ್ಪ ಅಗ್ಗವಾಗಿ ಯಾವ ಮಾರುಕಟ್ಟೆಯಲ್ಲಿ ಬೇಕಿದ್ದರೂ ಸಿಗುವಂತಹ ಹಣ್ಣು. ಇದು ಬೇಸಿಗೆ ಮಾತ್ರವಲ್ಲದೆ ಎಲ್ಲಾ ಋತುಗಳಲ್ಲಿಯೂ ಸಿಗುವುದು. ಇದರಿಂದ ಬಾಳೆಹಣ್ಣು ತಿಂದು ರಕ್ತದೊತ್ತಡದ ಸಮಸ್ಯೆಯನ್ನು ದೂರವಿರಿಸಿಕೊಳ್ಳಿ.

ರಕ್ತದೊತ್ತಡ ನಿಯಂತ್ರಣ ಮಾಡಲು ಇತರ ವಿಧಾನಗಳು
ಆಹಾರ ಕ್ರಮದ ಕಡೆ ಗಮನಹರಿಸಿ
30 ನಿಮಿಷ ಕಾಲ ಪ್ರತಿನಿತ್ಯ ವ್ಯಾಯಾಮ ಮಾಡಿ
ಒತ್ತಡದಿಂದ ಮುಕ್ತವಾಗಿರಿ
ಕೋಪ ನಿಯಂತ್ರಿಸಲು ಧಾನ್ಯ ಮಾಡಿ.
ಉಪ್ಪಿನಾಂಶವನ್ನು ಕಡಿಮೆ ಸೇವಿಸಿ
ಧೂಮಪಾನ ಮಾಡಬೇಡಿ
ಆದಷ್ಟು ಕೆಫಿನ್ ಸೇವನೆ ಕಡಿಮೆ ಮಾಡಿ
ಈ ಕ್ರಮಗಳನ್ನು ಪಾಲಿಸಿಕೊಂಡು ಹೋದರೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಬಹುದು.



Click it and Unblock the Notifications