ಮಹಿಳೆಯರು ರೆಡ್ ವೈನ್ ಕುಡಿದರೆ-ಅವರಲ್ಲಿ ಸೆಕ್ಸ್ ಆಸಕ್ತಿ ಹೆಚ್ಚಾಗಲಿದೆಯಂತೆ!

ಮಿತ ಪ್ರಮಾಣದಲ್ಲಿ ರೆಡ್ ವೈನ್ ಸೇವನೆ ಮಾಡುವಂತಹ ಮಹಿಳೆಯರಲ್ಲಿ ಬೇರೆ ಮಹಿಳೆಯರಿಗಿಂತ ಹೆಚ್ಚಿನ ಲೈಂಗಿಕ ಆಕಾಂಕ್ಷೆ ಹೊಂದಿರುವರು ಎಂದು ಅಧ್ಯಯನಗಳು ಹೇಳಿವೆ. ಬೇರೆ ಆಲ್ಕೋಹಾಲ್ ಸೇವನೆ ಅಥವಾ ಇತರ ಪಾನೀಯಗಳಿಗಿಂತ ಇದು ಉತ್ತಮವೆಂದು ಹೇಳಲಾಗಿದೆ.

ಇಟಲಿಯ ವೈದ್ಯರು ನಡೆಸಿರುವಂತಹ ಅಧ್ಯಯನವೊಂದರ ಪ್ರಕಾರ ರೆಡ್ ವೈನ್ ನಲ್ಲಿ ಕಂಡುಬರುವಂತಹ ರಾಸಾಯನಿಕ ಸಂಯುಕ್ತವು ದೇಹದಲ್ಲಿನ ಎಲ್ಲಾ ಭಾಗಗಳಿಗೆ ರಕ್ತ ಪರಿಚಲನೆಯನ್ನು ಉತ್ತಮಪಡಿಸುವ ಮೂಲಕ ಲೈಂಗಿಕ ಚಟುವಟಿಕೆಯನ್ನು ಹೆಚ್ಚಿಸುವುದು ಎಂದು ಹೇಳಿದೆ. ಈ ಅಧ್ಯಯನವು ಮತ್ತೊಂದು ಅಂಶವನ್ನು ಕೂಡ ಹೇಳಿದೆ. ಈ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದು ಕೂಡ ಅಗತ್ಯವಾಗಿರುವುದು. ಸಮರ್ಥ ಸಂಬಂಧ ಮತ್ತು ಉತ್ತಮ ಲೈಂಗಿಕತೆಗೆ ಕೇವಲ ರೆಡ್ ವೈನ್ ಮಾತ್ರ ಕಾರಣವಲ್ಲವೆಂದು ಹೇಳಿದೆ.

ಸಂಶೋಧನೆಯ ಪ್ರಕಾರ

ಸಂಶೋಧನೆಯ ಪ್ರಕಾರ

ಸಂಶೋಧನೆಯಲ್ಲಿ ಮೊದಲಿಗೆ ರೆಡ್ ವೈನ್ ನ್ನು ಸೇವಿಸಲು ಹೇಳಲಾಯಿತು ಮತ್ತು ಮಹಿಳೆಯರ ಲೈಂಗಿಕ ಚಟುವಟಿಕೆ ಪರೀಕ್ಷೆ ಮಾಡಲಾಯಿತು. ಇದಕ್ಕಾಗಿ ಯುನಿವರ್ಸಿಟಿ ಆಫ್ ಫ್ಲೊರೆನ್ಸ್ ನ ವೈದ್ಯರು 18ರಿಂದ 50ರ ಹರೆಯದ ಸುಮಾರು 800 ಮಂದಿ ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಿದ್ದರು. ಈ ಮಹಿಳೆಯರಲ್ಲಿ ಯಾರೊಬ್ಬರು ಕೂಡ ಲೈಂಗಿಕ ಆರೋಗ್ಯದ ಸಮಸ್ಯೆಯ ಬಗ್ಗೆ ದೂರು ನೀಡಿರಲಿಲ್ಲ. ಈ ಮಹಿಳೆಯರನ್ನು ಮೂರು ಗುಂಪುಗಳನ್ನಾಗಿ ಮಾಡಲಾಯಿತು. ಒಂದು ಗುಂಪಿನಲ್ಲಿ ದಿನಕ್ಕೆ ಒಂದರಿಂದ ಎರಡು ಗ್ಲಾಸ್ ರೆಡ್ ವೈನ್ ಸೇವನೆ ಮಾಡುತ್ತಲಿದ್ದರೆ, ಇನ್ನೊಂದು ಗುಂಪು ಒಂದು ಗ್ಲಾಸ್ ಗಿಂತ ಕಡಿಮೆ ವೈನ್ ಅಥವಾ ಯಾವುದೇ ಆಲ್ಕೋಹಾಲ್ ಮತ್ತು ಮೂರನೇ ಗುಂಪು ಸಂಪೂರ್ಣವಾಗಿ ಯಾವುದೇ ಮದ್ಯ ಸೇವನೆ ಮಾಡದೆ ಇತ್ತು.

ದಿನಕ್ಕೆ ಎರಡು ಗ್ಲಾಸ್ ಗಿಂತ ಹೆಚ್ಚು ಕುಡಿದ ಮಹಿಳೆಯರಲ್ಲಿ

ದಿನಕ್ಕೆ ಎರಡು ಗ್ಲಾಸ್ ಗಿಂತ ಹೆಚ್ಚು ಕುಡಿದ ಮಹಿಳೆಯರಲ್ಲಿ

ದಿನಕ್ಕೆ ಎರಡು ಗ್ಲಾಸ್ ಗಿಂತ ಹೆಚ್ಚು ಕುಡಿದ ಮಹಿಳೆಯರನ್ನು ಈ ಅಧ್ಯಯನದಿಂದ ಹೊರಗೆ ಇಡಲಾಯಿತು. ಯಾಕೆಂದರೆ ಈ ಮಹಿಳೆಯರು ಮದ್ಯಕ್ಕೆ ದಾಸರಾಗಬಹುದಿತ್ತು. ಇದರಲ್ಲಿ ಭಾಗಿಯಾಗಿದ್ದ ಎಲ್ಲರು ಪ್ರಶ್ನೆಗಳಿಗೆ ಉತ್ತರಿಸಿದರು. ಇದರಲ್ಲಿ ಮಹಿಳೆಯರ ಲೈಂಗಿಕ ಚಟುವಟಿಕೆ ಕೋಷ್ಠಕ ಒಳಗೊಂಡಿತ್ತು. ಮಹಿಳೆ ಹಾಗೂ ಆಕೆಯ ಲೈಂಗಿಕ ಆರೋಗ್ಯದ ಬಗ್ಗೆ ತಿಳಿಯಲು ವೈದ್ಯರು ಈ ಕೋಷ್ಠಕವನ್ನು ಬಳಸುವರು. ಈ ಅಧ್ಯಯನದಲ್ಲಿ ಸುಮಾರು 19 ಪ್ರಶ್ನೆಗಳು ಇದ್ದವು ಮತ್ತು ಅದಕ್ಕೆ ಉತ್ತರವು ಸುಮಾರು 2ರಿಂದ 36ರ ಮಧ್ಯೆ ಇತ್ತು. ಅಧಿಕ ಅಂಕವೆಂದರೆ ಅದು ಒಳ್ಳೆಯ ಚಟುವಟಿಕೆ ಎಂದು ಅರ್ಥ.

ಅಧ್ಯಯನ ವರದಿಯ ಪ್ರಕಾರ

ಅಧ್ಯಯನ ವರದಿಯ ಪ್ರಕಾರ

ರೆಡ್ ವೈನ್ ಸೇವಿಸಿದ್ದ ಮಹಿಳೆಯರು ಸರಾಸರಿ 27.3 ಅಂಕಗಳನ್ನು ಗಳಿಸಿದ್ದಾರೆ. ಯಾವಾಗಲೊಮ್ಮೆ ಸೇವನೆ ಮಾಡುವವರು 25.9 ಮತ್ತು ಮದ್ಯಪಾನ ಮಾಡದೆ ಇರುವವರು 24.4 ಅಂಕ ಪಡೆದು ಕೊಂಡಿದ್ದರು. ಈ ಅಧ್ಯಯನ ವರದಿಯನ್ನು ಕಳೆದ ವಾರ ಜರ್ನಲ್ ಆಫ್ ಸೆಕ್ಸುಲ್ ಮೆಡಿಸಿನ್ ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನ ವರದಿಯು ತುಂಬಾ ಮೆಚ್ಚುಗೆ ಗಳಿಸಿದೆ. ಯಾಕೆಂದರೆ ಬೇರೆ ಎರಡು ಗುಂಪಿನಲ್ಲಿ ಇದ್ದ ಮಹಿಳೆಯರಿಗಿಂತ ವೈನ್ ಸೇವನೆ ಮಾಡುತ್ತಿದ್ದ ಗುಂಪಿನಲ್ಲಿದ್ದ ಮಹಿಳೆಯರು ಹೆಚ್ಚು ವಯಸ್ಸಾದವರು. ಯಾಕೆಂದರೆ ವಯಸ್ಸಾದಂತೆ ಲೈಂಗಿಕಾಸಕ್ತಿಯು ಕಡಿಮೆಯಾಗುತ್ತಾ ಹೋಗುವುದು.

ದೇಹದಲ್ಲಿನ ಅಂಗಾಂಗಗಳಿಗೆ ರಕ್ತ ಸಂಚಾರವನ್ನು ಉತ್ತಮಪಡಿಸುವುದಂತೆ

ದೇಹದಲ್ಲಿನ ಅಂಗಾಂಗಗಳಿಗೆ ರಕ್ತ ಸಂಚಾರವನ್ನು ಉತ್ತಮಪಡಿಸುವುದಂತೆ

ರೆಡ್ ವೈನ್ ಈ ರೀತಿಯ ಪರಿಣಾಮ ಹೇಗೆ ಬೀರುತ್ತದೆ ಎಂದು ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ ಇದಕ್ಕೆ ಹಲವಾರು ಸಿದ್ಧಾಂತಗಳು ಇವೆ. ರೆಡ್ ವೈನ್ ನಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್ ನಿಂದಾಗಿ ರಕ್ತನಾಳಗಳ ಪದರದ ಮೇಲೆ ಪರಿಣಾಮ ಬೀರುವುದು ಮತ್ತು ಇದು ರಕ್ತನಾಳಗಳನ್ನು ಅಗಲಗೊಳಿಸುವುದು ಮತ್ತು ದೇಹದಲ್ಲಿನ ಅಂಗಾಂಗಗಳಿಗೆ ರಕ್ತ ಸಂಚಾರವನ್ನು ಉತ್ತಮಪಡಿಸುವುದು ಎಂದು ಹೇಳಲಾಗಿದೆ.

ಲೈಂಗಿಕ ಶಕ್ತಿಯನ್ನು ಹೆಚ್ಚಿಸುವುದಂತೆ

ಲೈಂಗಿಕ ಶಕ್ತಿಯನ್ನು ಹೆಚ್ಚಿಸುವುದಂತೆ

ಇನ್ನು ಕೆಂಪು ವೈನ್ ಅನ್ನು ಮಿತ ಪ್ರಮಾಣದಲ್ಲಿ ಸೇವಿಸುವುದು ಸೇವಿಸದೇ ಇರುವುದಕ್ಕಿಂತ ಒಳ್ಳೆಯದು. ಏಕೆಂದು ಗೊತ್ತೇ? ಕೆಂಪು ವೈನ್ ನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹೃದಯದ ಕಾಯಿಲೆಗಳು, ಟೈಪ್ 2 ಮಧುಮೇಹ ಹಾಗೂ ಈ ಮೂಲಕ ಎದುರಾಗುವ ಸಾವಿನ ಸಾಧ್ಯತೆಯನ್ನೂ ಕಡಿಮೆಯಾಗಿಸುತ್ತದೆ. ಆದರೆ ವೈನ್ ಸೇವನೆಯ ಪ್ರಮಾಣ ಹೆಚ್ಚಾದರೆ ಇದು ಪ್ರಾಣಕ್ಕೇ ಕುತ್ತಾಗಬಹುದು. ಕೆಂಪು ವೈನ್ ಅನ್ನು ಮಿತ ಪ್ರಮಾಣದಲ್ಲಿ ಸೇವಿಸುವುದು ಸೇವಿಸದೇ ಇರುವುದಕ್ಕಿಂತ ಒಳ್ಳೆಯದು. ಏಕೆಂದು ಗೊತ್ತೇ? ಕೆಂಪು ವೈನ್ ನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹೃದಯದ ಕಾಯಿಲೆಗಳು, ಟೈಪ್ ೨ ಮಧುಮೇಹ ಹಾಗೂ ಈ ಮೂಲಕ ಎದುರಾಗುವ ಸಾವಿನ ಸಾಧ್ಯತೆಯನ್ನೂ ಕಡಿಮೆಯಾಗಿಸುತ್ತದೆ. ಆದರೆ ವೈನ್ ಸೇವನೆಯ ಪ್ರಮಾಣ ಹೆಚ್ಚಾದರೆ ಇದು ಪ್ರಾಣಕ್ಕೇ ಕುತ್ತಾಗಬಹುದು. ಕೆಂಪು ವೈನ್ ನ ಪ್ರಯೋಜನಗಳಲ್ಲಿ ಇದೊಂದು ಕುತೂಹಲಕರವಾದ ಮಾಹಿತಿಯಾಗಿದೆ. ಒಂದು ವೇಳೆ ಕೆಂಪು ವೈನ್ ಅನ್ನು ನಿಯಮಿತವಾಗಿ ಹಾಗೂ ಮಿತಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಇದು ಲೈಂಗಿಕ ಶಕ್ತಿಯನ್ನು ಹೆಚ್ಚಿಸುವುದಾಗಿ ಕಂಡುಕೊಳ್ಳಲಾಗಿದೆ. ನಿತ್ಯವೂ ಎರಡು ಲೋಟ ಕೆಂಪು ವೈನ್ ಸೇವಿಸುವ ಮಹಿಳೆಯರು ಲೈಂಗಿಕ ಸಂವೇದನೆಯನ್ನು ಇತರರಿಗಿಂತ ಹೆಚ್ಚು ಅನುಭವಿಸುತ್ತಾರೆ

ವೈನ್ ನ ಪ್ರಮುಖ ಆರೋಗ್ಯಕರ ಗುಣ

ವೈನ್ ನ ಪ್ರಮುಖ ಆರೋಗ್ಯಕರ ಗುಣ

ವೈನ್ ನ ಪ್ರಮುಖ ಆರೋಗ್ಯಕರ ಗುಣವೆಂದರೆ ಅದು ಪಾರ್ಶ್ವವಾಯು ತಪ್ಪಿಸುತ್ತದೆ. ಮೆದುಳಿನ ಆರೋಗ್ಯದಲ್ಲಿ ರೆಡ್ ವೈನ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ಹೇಳಿವೆ. ಸಂಯುಕ್ತ ರೆಸ್ವೆರಾಟ್ರೊಲ್ ಪಾರ್ಶ್ವವಾಯು ತಪ್ಪಿಸುವ ಸಾಮರ್ಥ್ಯ ಹೊಂದಿದೆ. ಈ ಸಂಯುಕ್ತವನ್ನು ಪ್ರಾಣಿಗಳಿಗೆ ನೀಡಲಾಯಿತು ಮತ್ತು ಈ ಸಂಯುಕ್ತ ನೀಡಿದ ಪ್ರಾಣಿಗಳು ಇತರ ಪ್ರಾಣಿಗಳಿಂತ ಮೆದುಳಿನ ಹಾನಿಗೊಳಗಾದದ್ದು ಕಡಿಮೆ ಎನ್ನುವುದನ್ನು ತೋರಿಸಿದೆ. ಸಂಯುಕ್ತ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಡಿಮೆ ಮಾಡುತ್ತದೆ ಮತ್ತು ವೇಗವಾಗಿ ಚೇತರಿಸಲು ನೆರವಾಗುತ್ತದೆ. ಇದು ಕೆಂಪು ವೈನ್ ನಲ್ಲಿರುವ ಆರೋಗ್ಯಕಾರಿ ಲಾಭಗಳು. ದೀರ್ಘಾವಧಿ ತನಕ ಮೆದುಳಿನ ಹಾನಿಯನ್ನು ತಡೆಯುವಂತಹ ಸಾಮರ್ಥ್ಯ ರೆಡ್ ವೈನ್‌ನಲ್ಲಿದೆ. ರೆಡ್ ವೈನ್ ನಿಂದಾಗಿ ಶೇ. 40ರಷ್ಟು ಮೆದುಳಿನ ಹಾನಿಯನ್ನು ತಡೆಯಬಹುದು ಎಂದು ಸಂಶೋಧನೆಗಳು ಹೇಳಿವೆ. ಆದಾಗ್ಯೂ ಇದರ ಬಗ್ಗೆ ಪ್ರಯೋಗ ಶಾಲೆಯಲ್ಲಿ ಯಾವುದೇ ಪ್ರಯೋಗವಾಗಿಲ್ಲ ಮತ್ತು ವೈನ್ ಅಥವಾ ಆಲ್ಕೋಹಾಲ್ ನ್ನು ಮಿತವಾಗಿ ಸೇವಿಸಬೇಕೆಂದು ಸಂಶೋಧನೆಗಳು ಹೇಳಿವೆ. ಅತಿಯಾದ ಸೇವನೆ ತೊಂದರೆಯನ್ನುಂಟು ಮಾಡಬಹುದು. ರೆಡ್ ವೈನ್ ನ್ನು ಮೆದುಳಿಗೆ ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಇದರಿಂದ ಮಿತವಾಗಿ ಅದನ್ನು ಕುಡಿಯಿರಿ. ರೆಡ್ ವೈನ್ ನ ಆರೋಗ್ಯಕಾರಿ ಗುಣಗಳು ನಿಮ್ಮನ್ನು ವಿಸ್ಮಯಗೊಳಿಸಬಹುದು. ರೆಡ್ ವೈನ್ ಕುಡಿಯುವ ವ್ಯಕ್ತಿಯ ಮೆದುಳು ಯಾವಾಗಲೂ ಕ್ರಿಯಾಶೀಲವಾಗಿರುತ್ತದೆ. ಇದು ಯಾಕೆಂದರೆ ರೆಡ್ ವೈನ್ ನಲ್ಲಿ ಉತ್ಕರ್ಷಣ ನಿರೋಧಕಗಳಿರುತ್ತದೆ. ಈ ಉತ್ಕರ್ಷಣ ನಿರೋಧಕಗಳು ಫ್ರೀ ರ್‍ಯಾಡಿಕಲ್ ನ ದಾಳಿಯನ್ನು ತಡೆಯುತ್ತದೆ.

English summary

Red wine increases womens sexual desire

Researchers concluded that levels of sexual desire were higher in women who were moderate drinkers of red wine than in their counterparts who preferred other alcoholic drinks, or were teetotal.One theory put forward by the team of Italian doctors who carried out the study is that chemical compounds found in red wine may improve sexual functioning by increasing blood flow to key areas of the body.
Story first published: Wednesday, February 20, 2019, 13:30 [IST]
X
Desktop Bottom Promotion