Latest Updates
-
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ರಾಷ್ಟ್ರೀಯ ಕಾಂಡೊಮ್ ವೀಕ್: ಕಾಂಡೊಮ್ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು
ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕಾಂಡೊಮ್‌ಗಳಿಗೆಂದೇ ಒಂದು ವಾರವನ್ನು ಫೆಬ್ರವರಿ ತಿಂಗಳಲ್ಲಿ (ಫೆಬ್ರವರಿ 14ರಿಂದ 21) ಮೀಸಲಾಗಿರಿಸಲಾಗಿದೆ. 1978ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಆಚರಣೆಯನ್ನು ಪ್ರಾರಂಭಿಸಿದ್ದು ಅಂದಿನಿಂದ ಅಮೇರಿಕಾದ ಎಲ್ಲಾ ಶಾಲೆಗಳು, ಕಾಲೇಜುಗಳ ಆವರಣದಲ್ಲಿ, ಏಡ್ಸ್ ಬಗ್ಗೆ ಪ್ರಚಾರ ನಡೆಸುವ ಸಂಘಟನೆಗಳು, ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸೌವ ಸಂಘಟನೆಗಳು ಈ ವಾರವನ್ನು ತಪ್ಪದೇ ಆಚರಿಸುತ್ತವೆ.
ಅಮೇರಿಕಾ, ಇಂಗ್ಲೆಂಡ್ ಹಾಗೂ ಭಾರತದ ಕೆಲವು ಭಾಗಗಳಲ್ಲಿಯೂ ಫೆಬ್ರವರಿ ಹದಿನಾಲ್ಕರಿಂದ ಇಪ್ಪತ್ತೊಂದನೆಯವರೆಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಹಲವಾರು ಅಭಿಯಾನಗಳನ್ನು ನಡೆಸಲಾಗುತ್ತದೆ ಹಾಗೂ ಅಸುರಕ್ಷಿತ ಲೈಂಗಿಕ ಸಂಬಂಧದ ಮೂಲಕ ಎದುರಾಗುವ ರೋಗಗಳು ಹಾಗೂ ಆರೋಗ್ಯಕರ ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅರಿವನ್ನು ಮೂಡಿಸಲು ಹಲವಾರು ಮಾಹಿತಿಗಳನ್ನು ಒದಗಿಸಲಾಗುತ್ತದೆ. ವಿಶೇಷವಾಗಿ ಯುವಜನತೆಯಲ್ಲಿ ಸುರಕ್ಷಿತ ಲೈಂಗಿಕತೆ ಮತ್ತು ಲೈಂಗಿಕವಾಗಿ ಹರಡಬಹುದಾದ ರೋಗಗಳು ಮತ್ತು ಅನೈಚ್ಛಿಕ ಗರ್ಭಧಾರಣೆಯನ್ನು ತಡೆಗಟ್ಟಲು ಕಾಂಡಮ್ಮುಗಳನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ತಿಳಿಸಿಕೊಡಲಾಗುತ್ತದೆ.

ಕಾಂಡೊಮ್ ಗಳಂದರೇನು?
ಭಾರತ ಸರ್ಕಾದ ನಿರೋಧ್ ಎಂಬ ಹೆಸರಿನಲ್ಲಿ ಉಚಿತವಾಗಿ ವಿತರಿಸುವ, ಸುಲಭ ದರದಲ್ಲಿ ಔಷಧಿ ಅಂಗಡಿಗಳಲ್ಲಿಯೂ ದೊರಕುವ ಈ ಗರ್ಭನಿರೋಧಕ ವಸ್ತು ಪುರುಷರಿಗೆ ಮೀಸಲಾಗಿದ್ದು ಲ್ಯಾಟೆಕ್ಸ್ ಎಂಬ ರಬ್ಬರ್ ವಸ್ತುವಿನಿಂದ ತಯಾರಿಸಲಾಗಿರುತ್ತದೆ. ಇತ್ತೀಚೆಗೆ ಇದರ ಗುಣಮಟ್ಟವನ್ನು ಹೆಚ್ಚಿಸಲು ಪಾಲಿಯೂರಿಥೇನ್ ಅಥವಾ ಪಾಲಿಐಸೋಪ್ರೀನ್ ಎಂಬ ಕಚ್ಚಾವಸ್ತುವಿನಿಂದಲೂ ತಯಾರಿಸಲಾಗುತ್ತಿದ್ದು ಅನೈಚ್ಛಿಕ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ರೋಗಗಳಿಂದ ರಕ್ಷಣೆ ಒದಗಿಸುತ್ತದೆ. ಕಾಂಡಮ್ಮುಗಳಲ್ಲಿ ಪುರುಷರಿಗೂ ಮಹಿಳೆಯರಿಗೂ ಅನ್ವಯವಾಗುವ ವಿಧಗಳಿದ್ದು ಎರಡೂ ವಿಧಗಳ ಉದ್ದೇಶ ಅನೈಚ್ಛಿಕ ಗರ್ಭಧಾರಣೆ ತಡೆಯುವುದು ಮತ್ತು ಲೈಂಗಿಕವಾಗಿ ಹರಡುವ ರೋಗಗಳಿಂದ ತಡೆಯುವುದೇ ಆಗಿದೆ.

ಕಾಂಡೊಮ್ ಗಳ ವಿಧಗಳು
ಪುರುಷ ಕಾಂಡೊಮ್ ಗಳು: ಇವು ಒಂದು ತುದಿ ಮುಚ್ಚಿರುವ ತೆಳುವಾದ ರಬ್ಬರ್ ನ ಕೊಳವೆಯಂತಿರುದ್ದು ಲ್ಯಾಟೆಕ್ಸ್. ಪಾಲಿಯೂರಿಥೇನ್ ಅಥವಾ ಪಾಲಿಐಸೋಪ್ರೀನ್ ಎಂಬ ಕಚ್ಚಾವಸ್ತುವಿನಿಂದ ತಯಾರಿಸಲಾಗಿರುತ್ತದೆ. ಪುರುಷ ಜನನಾಂಗವನ್ನು ಪೂರ್ಣವಾಗಿ ಆವರಿಸುವ ಈ ರಬ್ಬರ್ ನ ಕೊಳವೆ ಮುಂಭಾಗದಲ್ಲಿ ಮುಚ್ಚಿದ್ದು ಚಿಕ್ಕ ಚೀಲವನ್ನು ಹೊಂದಿರುತ್ತದೆ ಹಾಗೂ ಸ್ಖಲನಗೊಂಡ ವೀರ್ಯವನ್ನು ಗರ್ಭಾಶಯಕ್ಕೆ ಸೋರಲು ಬಿಡದೇ ಹಿಡಿದಿಟ್ಟುಕೊಂಡು ಗರ್ಭಧಾರಣೆಯನ್ನು ತಡೆಯುತ್ತದೆ. ಅಂಕಿ ಅಂಶಗಳ ಪ್ರಕಾರ ಪುರುಷ ಕಾಂಡಮ್ಮುಗಳು 98% ಯಶಸ್ವಿಯಾದ ವಿಧಾನವಾಗಿದೆ. ಅಂದರೆ ಈ ವಿಧಾನವನ್ನು ಉಪಯೋಗಿಸಿದವರಲ್ಲಿ ನೂರರಲ್ಲಿ ಇಬ್ಬರು ಮಹಿಳೆಯರಲ್ಲಿ ಮಾತ್ರವೇ ಗರ್ಭಾಂಕುರವಾಗುವ ಸಾಧ್ಯತೆ ಇದೆ.

ಮಹಿಳಾ ಕಾಂಡೊಮ್ ಗಳು
ಇವುಗಳನ್ನು ಸಹಾ ಪಾಲಿಯೂರಿಥೇನ್ ಎಂಬ ಅತಿ ತೆಳುವಾದ ಪ್ಲಾಸ್ಟಿಕ್ ನಿಂದ ತಯಾರಿಸಲಾಗಿದ್ದು ಮಹಿಳೆ ತನ್ನ ಜನನಾಂಗದೊಳಗೆ ಸ್ವತಃ ಅಳವಡಿಸಿಕೊಳ್ಳಬಹುದಾದ ಉಪಕರಣವಾಗಿದ್ದು ವೀರ್ಯಾಣುಗಳನ್ನು ಗರ್ಭಾಶಯದತ್ತ ಸಾಗುವುದನ್ನು ತಡೆಯುತ್ತದೆ. ಗರ್ಭಾಂಕುರವನ್ನು ತಡೆಯಲು ಈ ವಿಧಾನ 95% ಪರಿಣಾಮಕಾರಿಯಾಗಿದೆ.

ಕಾಂಡಮ್ಮುಗಳನ್ನು ಉಪಯೋಗಿಸುವ ಬಗೆ
ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟುವಲ್ಲಿ ಎರಡೂ ಬಗೆಯ ಕಾಂಡಮ್ಮುಗಳು ಫಲಕಾರಿಯಾಗಿವೆ. ಸಾಮಾನ್ಯವಾಗಿ ಈ ರೋಗಗಳು ದೇಹದ ತೇವಭಾಗಗಳು ಮತ್ತು ದ್ರವಗಳ ಮೂಲಕ ಹರಡುತ್ತವೆ. ವೀರ್ಯಾಣು, ರಕ್ತ, ಮಹಿಳಾ ಜನನಾಂಗದ ತೇವರಸಗಳ ಮೂಲಕ ಹರಡುತ್ತವೆ. ಕಾಂಡಮ್ಮುಗಳು ಈ ದ್ರವಗಳು ಒಂದು ಶರೀರದಿಂದ ಇನ್ನೊಂದು ಶರೀರಕ್ಕೆ ಹರಡುವುದನ್ನು ತಡೆಯುತ್ತವೆ. ತನ್ಮೂಲಕ ಲೈಂಗಿಕರಾಗಿ ಹರಡುವ ರೋಗಗಳಾದ ಹೆಚ್ ಐ ವಿ, ಸಿಫಿಲಿಸ್, ಕ್ಲಾಮೈಡಿಯಾ, ಗೊನೋರಿಯಾ ಮತ್ತು ಟ್ರೈಖೋಮೋನಿಯಾಸಿಸ್ ಮೊದಲಾದವುಗಳಿಂದ ರಕ್ಷಣೆ ಒದಗಿಸುತ್ತವೆ. ಅಲ್ಲದೇ ಸಂಶೋಧನೆಗಳ ಮೂಲಕ ಕಂಡುಕೊಂಡ ಪ್ರಕಾರ ಕಾಂಡಮ್ಮುಗಳು ಗರ್ಭಕಂಠದ ಕ್ಯಾನ್ಸರ್, ಮತ್ತು ಹೆಚ್ ಪಿ ವಿ (Human Papillomavirus infections) ಎಂಬ ವೈರಸ್ಸಿನ ಸೋಂಕುಗಳಿಂದಲೂ ರಕ್ಷಣೆ ಒದಗಿಸುತ್ತವೆ.

ಅನೈಚ್ಛಿಕ ಗರ್ಭಧಾರಣೆಗೆ ತಡೆಯೊಡ್ಡುವುದು
ಕಾಂಡಮ್ಮುಗಳ ಇನ್ನೊಂದು ಅತ್ಯುತ್ತಮ ಪ್ರಯೋಜನವೆಂದರೆ ಅನೈಚ್ಛಿಕ ಗರ್ಭಧಾರಣೆಗೆ ತಡೆಯೊಡ್ಡುವುದು. ಸಹಜ ಮಿಲನ, ಮುಖಮೈಥುನ ಮತ್ತು ಗುದರತಿಯ ಸಮಯದಲ್ಲಿ ಕಾಂಡಮ್ಮುಗಳನ್ನು ಉಪಯೋಗಿಸಬಹುದು. ಅಲ್ಲದೇ ಇತರ ಗರ್ಭನಿರೋಧಕ ಕ್ರಮಗಳಾದ ಐಯುಡಿ (Intrauterine device) ಅಥವಾ ಕಾಪರ್ ಟಿ, ಗರ್ಭನಿರೋಧಕ ಗುಳಿಗೆಗಳು, ಚುಚ್ಚುಮದ್ದು, ಗರ್ಭನಾಳಕ್ಕೆ ಉಂಗುರ ತೊಡಿಸುವುದು ಮೊದಲಾದವು ಸಹಾ ಅನೈಚ್ಛಿಕ ಗರ್ಭಧಾರಣೆಯಿಂದ ರಕ್ಷಣೆ ಒದಗಿಸುತ್ತದೆ ಹಾಗೂ ಲೈಂಗಿಕ ರೋಗಗಳು ಹರಡದಂತೆ ತಡೆ ನೀಡುತ್ತದೆ.

ಕಾಂಡಮ್ಮುಗಳ ಅನಾನುಕೂಲತೆಗಳು
ಬಹುತೇಕ ಎಲ್ಲಾ ಕಾಂಡಮ್ಮುಗಳನ್ನು ಲ್ಯಾಟೆಕ್ಸ್ ನಿಂದಲೇ ತಯಾರಿಸಲಾಗಿರುತ್ತದೆ. ಲ್ಯಾಟೆಕ್ಸ್ ಕೆಲವರಿಗೆ ಅಲರ್ಜಿಕಾರಕವಾಗಿದೆ. ಸಾಮಾನ್ಯವಾಗಿ ಮಹಿಳೆಯರಿಗೇ ಈ ಅಲರ್ಜಿ ಹೆಚ್ಚಾಗಿ ಕಾಡುವ ಕಾರಣ ಇವರಿಗೆ ಮಿಲನದ ಅನುಭವ ಹಿತಕರವಾಗಿರುವುದಿಲ್ಲ. ಅಲ್ಲದೇ ಲ್ಯಾಟೆಕ್ಸ್ ರಬ್ಬರಿನಲ್ಲಿರುವ ಪ್ರೋಟೀನುಗಳು ಜನನಾಂಗದ ಒಳಭಾಗದ ದ್ರವದಲ್ಲಿ ಕರಗುತ್ತವೆ ಮತ್ತು ಮಹಿಳೆಯ ದೇಹವನ್ನು ಪ್ರವೇಶಿಸಿ ತುರಿಕೆ, ಜನನಾಂಗದ ಒಳಭಾಗದಲ್ಲಿ ಊದಿಕೊಳ್ಳುವುದು, ತೀರಾ ಹೆಚ್ಚು ಸಂವೇದಿಯಾಗುವುದು ಮೊದಲಾದ ತೊಂದರೆಗಳನ್ನು ತಂದೊಡ್ಡುತ್ತದೆ. ಇವೆಲ್ಲವೂ ಲ್ಯಾಟೆಕ್ಸ್ ಅಲರ್ಜಿಯ ಸಂಕೇತವಾಗಿವೆ. ಇದರ ಜೊತೆಗೇ ಜನನಾಂಗದ ಭಾಗದಲ್ಲಿ ದದ್ದುಗಳೇಳುವುದು, ಕೀವುಗುಳ್ಳೆಗಳಾಗುವುದು ಮತ್ತು ಕೆಂಪಗಾಗುವುದು ಕಂಡುಬರುತ್ತದೆ. ಹಾಗಾಗಿ ಲ್ಯಾಟೆಕ್ಸ್ ಬದಲಿಗೆ ಪಾಲಿಯೂರಿಥೇನ್ ಕಾಂಡಮ್ಮುಗಳನ್ನು ಉಪಯೋಗಿಸುವುದೇ ಉತ್ತಮ.
ಕೆಲವು ಲೈಂಗಿಕ ರೋಗಗಳಾದ ಜನನಾಂಗದ ಗುಳ್ಳೆಗಳು, ಹರ್ಪಿಸ್ ಮೊದಲಾದವುಗಳಿಂದ ಕಾಂಡಮ್ಮುಗಳು ರಕ್ಷಣೆ ನೀಡುವುದಿಲ್ಲ. ಏಕೆಂದರೆ ಈ ಸೋಂಕುಗಳು ಜನನಾಂಗದ ಹೊರಭಾಗ ಮತ್ತು ಅಕ್ಕ ಪಕ್ಕದ ಭಾಗಗಳಲ್ಲಿ ಮತ್ತು ತೊಡೆಸಂಧಿಯಲ್ಲಿ ಕಾಣಿಸಿಕೊಳ್ಳುತ್ತವೆ ಹಾಗೂ ಈ ಭಾಗಗಳನ್ನು ಸ್ಪರ್ಷಿಸುವ ಚರ್ಮಕ್ಕೂ ರೋಗ ಹರಡಬಹುದು. ಇನ್ನೊಂದು ಅನಾನುಕೂಲತೆ ಎಂದರೆ ಮಿಲನಕ್ರಿಯೆಯ ಸಮಯದಲ್ಲಿ ಹೆಚ್ಚು ಘರ್ಷಣೆ ಎದುರಾದರೆ ಹರಿಯುವ ಸಾಧ್ಯತೆ ಇರುವುದು. ಚಿಕ್ಕ ತೂತು ಆದರೂ ಕಾಂಡಮ್ಮಿನ ಮೂಲ ಉದ್ದೇಶವೇ ನೆರವೇರದೇ ಹೋಗಬಹುದು.

ಕಾಂಡಮ್ ವೈಫಲ್ಯಕ್ಕೆ ಕೆಲವು ಕಾರಣಗಳು
* ಇವುಗಳನ್ನು ಉಪಯೋಗಿಸುವ ಅವಧಿಯ ದಿನಾಂಕ ಮೀರಿರುವುದು
* ತಯಾರಿಸುವಾಗಲೇ ಎದುರಾಗಿದ್ದ ದೋಶದೊಂದಿಗೇ ಮಾರಲ್ಪಟ್ಟಿರುವುದು ಅಥವಾ ಗ್ರಾಹಕನಿಗೆ ತಲುಪುವ ಮುನ್ನವೇ ಜಖಂಗೊಡಿರುವುದು
* ಮಿಲನಕ್ರಿಯೆಯ ಸಮಯದಲ್ಲಿ ನಡುವೆ ಹರಿಯುವುದು
* ಜಾರುಕ ದ್ರವಗಳ ಬಳಕೆ

ಅತ್ಯುತ್ತಮ ಕಾಂಡಮ್ಮುಗಳ ಆಯ್ಕೆ ಮಾಡುವುದು ಹೇಗೆ?
ಕಾಂಡಮ್ಮುಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದ್ದು ಪ್ರತಿಯೊಂದು ಲ್ಯಾಟೆಕ್ಸ್ ಮತ್ತು ಪಾಲಿಯೂರಿಥೇನ್ ಕಾಂಡಮ್ಮುಗಳನ್ನು ಪರೀಕ್ಷಿಸಿದೇ ಮಾರುಕಟ್ಟೆಗೆ ಬಿಡಲಾಗುತ್ತದೆ. ಅಮೇರಿಕಾದ ಎಫ್.ಡಿ.ಎ (The US Food and Drug Administration (FDA) ಅಥವಾ ಆಹಾರ ಮತ್ತು ಔಷಧಿ ಪ್ರಾಧಿಕಾರ ಈ ಉತ್ಪನ್ನಗಳ ತಯಾರಿಕರಿಗೆ ತಮ್ಮ ಉತ್ಪನ್ನಗಳನ್ನು ನಡುನಡುವೆ ಪೂರ್ಣಪರೀಕ್ಷೆಗೆ ಒಳಪಡಿಸುವಂತೆ ಸೂಚಿಸುತ್ತದೆ. ಇದರ ಹೊರತಾಗಿ ಎಫ್.ಡಿ.ಎ ಪರೀಕ್ಷಕರು ಉತ್ಪಾದನಾ ಹಂತದಲ್ಲಿರುವ ಕಾಂಡಮ್ಮುಗಳಲ್ಲಿ ನಡುವೆ ಕೆಲವು ಮಾದರಿಗಳನ್ನು ಸಂಗ್ರಹಿಸಿ ಇದನ್ನು ಕೆಲವು ಕಠಿಣ ಪರೀಕ್ಷೆಗಳಿಗೆ ಒಡ್ಡುತ್ತಾರೆ. ಇದರಲ್ಲೊಂದು ವಾಟರ್ ಲೀಕ್ ಅಥವಾ ನೀರು ಸೋರುವುದನ್ನು ಪರೀಕ್ಷಿಸುವ ಪರೀಕ್ಷೆಯಾಗಿದೆ. ಪ್ರತಿ ಸಾವಿರ ಕಾಂಡಮ್ಮುಗಳಲ್ಲಿ 996 ರಷ್ಟು ಸರಾಸರಿ ಕಾಂಡಮ್ಮುಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣವಾದರೆ ಮಾತ್ರ ಈ ಉತ್ಪನ್ನವನ್ನು ಸುರಕ್ಷಿತ ಎಂದು ಭಾವಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.

ಅತ್ಯುತ್ತಮ ಮತ್ತು ಸುರಕ್ಷಿತ ಕಾಂಡಮ್ಮುಗಳನ್ನು ಕೊಳ್ಳಲು ಈ ವಿಧಾನಗಳನ್ನು ಅನುಸರಿಸಿ
*ಉತ್ಪನ್ನದ ಮೇಲೆ ಬರೆದಿರುವ ಮಾಹಿತಿಯನ್ನು ಗಮನವಿಟ್ಟು ಓದಿ, ಇದಕ್ಕೆ ಅನ್ವಯವಾಗುವ ಎಲ್ಲಾ ಗುಣಮಟ್ಟಗಳನ್ನು ಪಡೆದಿದೆಯೇ ಎಂದು ಖಚಿತಪಡಿಸಿ.
*ಅಗತ್ಯ ಬಿದ್ದರೆ, ಜಾರುಕ ದ್ರವವನ್ನು ಮೊದಲೇ ಸಿಂಪಡಿಸಿರುವ ಅಥವಾ ನೀರು ಆಧಾರಿತ ಅಥವಾ ಸಿಲಿಕೋನ್ ಆಧಾರಿತ ಜಾರುಕದ್ರವವನ್ನು ಕೊಂಡುಕೊಳ್ಳಿ. ಈ ಜಾರುಕದ್ರವ ಕಾಂಡಮ್ಮಿನ ಮೇಲೆ ಘರ್ಷಣೆಯನ್ನು ಕಡಿಮೆ ಮಾಡುತ್ತದೆ ಹಾಗೂ ಕಾಂಡಮ್ಮು ಮಿಲನಕ್ರಿಯೆಯಲ್ಲಿ ಹರಿಯುವುದನ್ನು ತಪ್ಪಿಸುತ್ತದೆ.
*ಸುರಕ್ಷತೆಗಿಂತಲೂ ಬಿನ್ನಾಣಕ್ಕೇ ಹೆಚ್ಚಿನ ಮಹತ್ವ ನೀಡುವ ಕಾಂಡಮ್ಮುಗಳನ್ನು ಕೊಳ್ಳದಿರಿ.
*ಎಣ್ಣೆಯಾಧಾರಿತ (ಉದಾಹರಣೆಗೆ ಮಗುವಿನ ಎಣ್ಣೆ, ವ್ಯಾಸೆಲಿನ್ ಮತ್ತು ಲೋಶನ್ ) ಕಾಂಡಮ್ಮುಗಳನ್ನು ಕೊಳ್ಳದಿರಿ. ಇವು ಕಾಂಡಮ್ಮುಗಳು ಸುಲಭವಾಗಿ ಹರಿಯುವಂತೆ ಮಾಡುತ್ತವೆ.
*ಕಾಂಡಮ್ಮುಗಳಿಗೂ ಬಳಕೆಯ ಅವಧಿಯ ಮಿತಿ ದಿನಾಂಕವಿರುತ್ತದೆ. ತಪ್ಪದೇ ಈ ದಿನಾಂಕವನ್ನು ನೋಡಿ ಖಚಿತಪಡಿಸೊಕೊಂಡೇ ಖರೀದಿಸಿ.
*ಅತಿ ಬಿಸಿಯಾದ ಅಥವಾ ಅತಿ ತಣ್ಣಗಿನ ಸ್ಥಳಗಳಲ್ಲಿರಿಸಿದ್ದ ಕಾಂಡಮ್ಮುಗಳನ್ನು ಕೊಳ್ಳದಿರಿ. ಏಕೆಂದರೆ ಇವೆರಡೂ ಸ್ಥಿತಿಗಳಲ್ಲಿ ಕಾಂಡಮ್ಮು ತನ್ನ ಗುಣಗಳನ್ನು ಕಳೆದುಕೊಳ್ಳುತ್ತದೆ.
*ವೀರ್ಯಾಣುಗಳನ್ನು ಕೊಲ್ಲುವ ಸ್ಪರ್ಮಿಸೈಡ್ ಎಂಬ ರಾಸಾಯನಿಕ ಸಿಂಪಡಿಸಿದ ಕಾಂಡಮ್ಮುಗಳನ್ನು ಕೊಳ್ಳದಿರಿ. ಏಕೆಂದರೆ ಈ ರಾಸಾಯನಿಕ ಪುರುಷ ಮತ್ತು ಜನನಾಂಗಗಳಲ್ಲಿ ಉರಿ ತರಿಸುತ್ತದೆ. ಹಾಗಾಗಿ ಇವು ಬೇಡವೇ ಬೇಡ.

ಕಾಂಡಮ್ಮುಗಳನ್ನು ಸುರಕ್ಷಿತವಾಗಿ ಉಪಯೋಗಿಸಲು ಕೆಲವು ಸಲಹೆಗಳು
*ಮೊದಲು ಉತ್ಪನ್ನದ ಬಳಕೆಯ ಗರಿಷ್ಟ ದಿನಾಂಕವನ್ನು ಖಚಿತ ಪಡಿಸಿ. ಪ್ಯಾಕೆಟ್ ತೆರೆದ ಬಳಿಕ ಧರಿಸಿಕೊಳ್ಳುವ ಮೊದಲು ಇದರಲ್ಲಿ ತೂತು ಇದೆಯೇ ಎಂದು ಪರೀಕ್ಷಿಸಿ
*ಉಪಯೋಗಿಸುವ ಮುನ್ನ ಪೊಟ್ಟಣವನ್ನು ಜಾಗರೂಕತೆಯಿಂದ ಮತ್ತು ಕೇವಲ ಬೆರಳುಗಳಿಂದ ಮಾತ್ರವೇ ತೆರೆಯಿರಿ, ಈ ಸಮಯದಲ್ಲಿ ಕೈಗಳಲ್ಲಿ ಯಾವುದೇ ಹರಿತ ಉಪಕರಣಗಳಿರಬಾರದು
*ಸಂಸರ್ಗ ನಡೆಸುವ ಮುನ್ನವೇ ಕಾಂಡಮ್ಮನ್ನು ಪೂರ್ಣವಾಗಿ ಧರಿಸಿರುವುದನ್ನು ಖಚಿತಪಡಿಸಿಕೊಳ್ಳಿ
*ಕಾಂಡಮ್ಮು ಹರಿಯುವುದನ್ನು ತಡೆಯಲು ನೀರು ಆಧಾರಿತ ಜಾರುಕ ದ್ರವವನ್ನು ಕಾಂಡಮ್ಮಿನ ಒಳಭಾಗದಲ್ಲಿಯೂ ಹೊರಭಾಗದಲ್ಲಿಯೂ ಮೊದಲೇ ಲೇಪಿಸಿಕೊಂಡ ಬಳಿಕ ಧರಿಸಿ
*ಪ್ರತಿ ಬಾರಿ ಹೊಸ ಕಾಂಡಮ್ಮನ್ನೇ ಉಪಯೋಗಿಸಿ ಹಾಗೂ ಪ್ರತಿ ಬಳಕೆಯ ಬಳಿಕ ಒಂದು ಗಂಟುಹಾಕಿ ಟಿಶ್ಯೂ ಪೇಪರ್ ಒಂದರಲ್ಲಿ ಸುತ್ತಿ ವಿಸರ್ಜಿಸಿ.



Click it and Unblock the Notifications











