ಪುರುಷರ ಆರೋಗ್ಯ: ಶಿಶ್ನದ ಆರೋಗ್ಯವನ್ನು ವೃದ್ಧಿಸುವ ಆಹಾರಗಳು

ದೇವರ ಸೃಷ್ಟಿಯ ಮುಂದೆ ಯಾವ ಇಂಜಿನಿಯರ್ ಕೂಡ ಸರಿಸಾಟಿಯಾಗಲಾರ. ಭೂಮಿ ಮೇಲೆ ಗಂಡು ಹಾಗೂ ಹೆಣ್ಣನ್ನು ಸೃಷ್ಟಿಸಿದ ದೇವರು, ಅವರಿಬ್ಬರ ದೇಹದ ಅಂಗಾಂಗಗಳನ್ನು ಕೂಡ ತುಂಬಾ ಭಿನ್ನವಾಗಿ ರಚನೆ ಮಾಡಿದ್ದಾನೆ. ಇದರಿಂದಾಗಿಯೇ ಮಾನವ ಸಂತತಿ ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳ ಸಂತತಿಯು ಬೆಳೆಯುತ್ತಾ ಇರುವುದು. ಗಂಡು ಹಾಗೂ ಹೆಣ್ಣಿನ ದೇಹಕ್ಕೆ ತಕ್ಕಂತೆ ಜನನೇಂದ್ರೀಯಗಳು ಕೂಡ ಭಿನ್ನವಾಗಿದೆ. ಜನನೇಂದ್ರೀಯಗಳು ಸ್ರವಿಸುವಿಕೆ ಹಾಗೂ ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವುದು.

ಕೆಲವೊಂದು ಆರೋಗ್ಯ ಸಮಸ್ಯೆಯಿಂದಾಗಿ ಜನನೇಂದ್ರಿಯಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದರೆ ಆಗ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು. ಇದರಿಂದ ದೇಹದ ಇತರ ಅಂಗಾಂಗಗಳನ್ನು ಆರೈಕೆ ಮಾಡಿಕೊಳ್ಳುವಂತೆ ಜನನೇಂದ್ರೀಯವನ್ನು ಆರೈಕೆ ಮಾಡಿಕೊಳ್ಳಬೇಕು. ದೇಹದ ಆರೋಗ್ಯ ಚೆನ್ನಾಗಿರಬೇಕಾದರೆ ನಾವು ಕೆಲವೊಂದು ಆಹಾರ ಕ್ರಮಗಳನ್ನು ಪಾಲಿಸಿಕೊಂಡು ಹೋಗುತ್ತೇವೆ. ಅದೇ ರೀತಿ ಶಿಶ್ನದ ವಿಷಯದಲ್ಲೂ ಹೀಗೆ ಮಾಡಬೇಕು. ಕೆಲವೊಂದು ಆಹಾರಗಳು ಜನನೇಂದ್ರೀಯಗಳ ಕಾರ್ಯ ವೃದ್ಧಿಸಿ, ಅನಾರೋಗ್ಯ ಬರದಂತೆ ತಡೆಯುವುದು. ನಿಮ್ಮ ಶಿಶ್ನದ ಕಾರ್ಯ ಹೆಚ್ಚಿಸಲು ಯಾವೆಲ್ಲಾ ಆಹಾರ ತಿನ್ನಬೇಕು ಎಂದು ಈ ಲೇಖನದ ಮೂಲಕ ತಿಳಿಯಿರಿ....

 ಚೆನ್ನಾಗಿ ಕ್ಯಾರೆಟ್ ತಿನ್ನಿ!

ಚೆನ್ನಾಗಿ ಕ್ಯಾರೆಟ್ ತಿನ್ನಿ!

ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುವುದು ಎಂಬ ಮಾತೇನೋ ನಿಜ. ಆದರೆ ಪುರುಷರ ಮತ್ತು ಮಹಿಳೆಯರ ದೇಹ ರಚನೆಯನ್ನು ಗಮನಿಸಿದರೆ ಪುರುಷರಿಗೆ ಸೇಬಿಗಿಂತಲೂ ದಿನಕ್ಕೊಂದು ಕ್ಯಾರೆಟ್ ಸೇವಿಸುವುದು ಹೆಚ್ಚು ಪ್ರಯೋಜನ ಕಾರಿಯಾಗಿದೆ ಎಂದು ಇತ್ತೀಚಿನ ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಇದಕ್ಕೆ ಕಾರಣ ಇದರಲ್ಲಿರುವ ಬೀಟಾ ಕ್ಯಾರೋಟೀನ್ ಎಂಬ ಪೋಷಕಾಂಶ. ಇದು ಸೇಬಿಗಿಂತಲೂ ಕ್ಯಾರೆಟ್ಟಿನಲ್ಲಿ ಹೆಚ್ಚಾಗಿದೆ ಹಾಗೂ ಪುರುಷರ ದೇಹಕ್ಕೆ ವಿಶಿಷ್ಟವಾದ ಹಾರ್ಮೋನುಗಳು ಹಾಗೂ ರಾಸಾಯನಿಕಗಳ ಉತ್ಪಾದನೆಯಲ್ಲಿ ಸಹಕರಿಸಿ ಆರೋಗ್ಯವನ್ನು ವೃದ್ಧಿಸುತ್ತದೆ. ಇನ್ನು ಹಲವಾರು ಆರೋಗ್ಯ ಗುಣಗಳು ಹಾಗೂ ಪೋಷಕಾಂಶಗಳನ್ನು ಹೊಂದಿರುವಂತಹ ಕ್ಯಾರೆಟ್ ನ್ನು ಸಲಾಡ್ ರೂಪದಲ್ಲಿ, ಬೇಯಿಸಿ ತಿನ್ನಬಹುದು. ಕ್ಯಾರೆಟ್ ತಿನ್ನುವುದರಿಂದ ನಮ್ಮ ಕಣ್ಣಿನ ದೃಷ್ಟಿ ಉತ್ತಮವಾಗುವುದು ಮಾತ್ರವಲ್ಲದೆ ಪ್ರತಿರೋಧಕ ಶಕ್ತಿ ಹೆಚ್ಚಾಗು ವುದು. ಕ್ಯಾರೆಟ್ ನಲ್ಲಿ ಇರುವ ವಿಟಮಿನ್ ಎ ಪುರುಷರಲ್ಲಿ ಹಾರ್ಮೋನು ಉತ್ಪತ್ತಿ ಹೆಚ್ಚಿಸುವುದು. ಇದರಿಂದ ಪುರುಷರ ಶಿಶ್ನವು ಆರೋಗ್ಯವಾಗಿರುವುದು.

ಕೋಳಿ ಮಾಂಸ ಬಹಳ ಒಳ್ಳೆಯದು

ಕೋಳಿ ಮಾಂಸ ಬಹಳ ಒಳ್ಳೆಯದು

ನಿಮ್ಮ ಆಹಾರ ಕ್ರಮಕ್ಕೆ ಕೋಳಿ ಮಾಂಸ ಸೇರಿಸಿದರೆ ಅದರಿಂದ ಹಲವಾರು ಆರೋಗ್ಯ ಲಾಭಗಳು ಇವೆ. ಇದು ಸ್ನಾಯುಗಳು ಬೆಳೆಯಲು, ಕೊಬ್ಬು ವಿಘಟಿಸಲು, ಶಕ್ತಿ ಹೆಚ್ಚಿಸಲು ಇತ್ಯಾದಿಗಳಿಗೆ ನೆರವಾಗುವುದು. ಕೋಳಿಯಲ್ಲಿ ಉನ್ನತ ಮಟ್ಟದ ಪ್ರೋಟೀನ್ ಇದೆ. ಇದರಲ್ಲಿರುವ ವಿಟಮಿನ್ ಬಿ3 ಶಿಶ್ನಗಳಿಗೆ ರಕ್ತಸಂಚಾರ ಸರಾಗಗೊಳಿ ಸುವುದು. ಇದರಿಂದ ಜನನೇಂದ್ರೀಯದ ಆರೋಗ್ಯ ಚೆನ್ನಾಗಿ ರುವುದು ಮತ್ತು ಕಾಮಾಸಕ್ತಿ ಹೆಚ್ಚುವುದು.

ಬಾಳೆಹಣ್ಣು

ಬಾಳೆಹಣ್ಣು

ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುತ್ತದೆ ಎಂಬುದೊಂದು ಸುಭಾಷಿತ. ದಿನಕ್ಕೆರಡು ಬಾಳೆಹಣ್ಣು ಸಹಾ ವೈದ್ಯರನ್ನು ದೂರವಿಡುವಲ್ಲಿ ಸಮರ್ಥವಾಗಿದೆ. ಏಕೆಂದರೆ ಬಾಳೆಹಣ್ಣಿನಲ್ಲಿ ಆರೋಗ್ಯಕ್ಕೆ ಪೂರಕವಾದ ಹಲವು ಪೋಷಕಾಂಶಗಳು, ಕರಗುವ ಮತ್ತು ಕರಗದ ನಾರು ಹಾಗೂ ಉತ್ತಮ ಪ್ರಮಾಣದ ಸಕ್ಕರೆ, ಖನಿಜಗಳೂ ಇವೆ. ಸೇಬಿಗಿಂತಲೂ ಬಾಳೆಹಣ್ಣನ್ನು ಆಯ್ದುಕೊಳ್ಳಲು ಇನ್ನೂ ಹಲವು ಕಾರಣಗಳಿವೆ. ಸುಲಭದರದಲ್ಲಿ ವರ್ಷಪೂರ್ತಿ ಎಲ್ಲೆಡೆ ಸಿಗುವ ಹಣ್ಣು ಎಂದರೆ ಬಾಳೆಹಣ್ಣು. ಅದರಲ್ಲೂ ಪುರುಷರ ಆರೋಗ್ಯಕ್ಕೆ ಇದು ಅತ್ಯುತ್ತಮವಾದ ಹಣ್ಣು. ಇದು ಪುರುಷರಿಗೆ ಬಲವಾದ ಹೃದಯವನ್ನು ಕಲ್ಪಿಸಿಕೊಡುವುದು. ಹೃದಯದ ರಕ್ತಪರಿಚಲನೆಯನ್ನು ಉತ್ತಮವಾಗಿ ಇಡುವುದು. ಇದರಲ್ಲಿ ಉತ್ತಮ ಪೊಟ್ಯಾಸಿಯಂ ಇರುತ್ತವೆ. ಇದನ್ನು ತಿನ್ನುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಇಡಬಹುದು. ಇದರಲ್ಲಿ ಇರುವ ಪೊಟ್ಯಾಸಿಯಮ್ ಗುಣವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಸೋಡಿಯಂ ಮಟ್ಟವನ್ನು ಸ್ಥಿರಗೊಳಿಸುವ ಮೂಲಕ ಆರೋಗ್ಯವಾಗಿರುವಂತೆ ಮಾಡುತ್ತದೆ. ಹೆಚ್ಚು ಉಪ್ಪು ತಿನ್ನುವ ವ್ಯಕ್ತಿಗಳು ಅಧಿಕ ಬಾಳೆ ಹಣ್ಣನ್ನು ತಿನ್ನುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಒಣಗಿದ ಮೀನು

ಒಣಗಿದ ಮೀನು

ಒಣಗಿದ ಮೀನುಗಳು ಅತ್ಯುತ್ತಮವಾದ ಒಮೆಗಾ-3 ಅನ್ನು ಒಳಗೊಂಡಿರುತ್ತವೆ. ಒಣಗಿದ ಮೀನುಗಳು ಆರೋಗ್ಯಕ್ಕೆ ಉತ್ತಮವಾದದ್ದು. ಇದು ದೇಹದಲ್ಲಿ ಅತ್ಯುತ್ತಮವಾದ ರಕ್ತದ ಹರಿವನ್ನು ಪ್ರೇರೇಪಿಸುತ್ತದೆ. ನಿಯಮಿತವಾಗಿ ಒಣಗಿದ ಮೀನುಗಳನ್ನು ಸೇವಿಸುವುದರಿಂದ ಅಪಧಮನಿಯ ಕಾರ್ಯಗಳು

ಸುಲಭವಾಗಿ ನಡೆಯುವುದು. ವಾರದಲ್ಲಿ ಎರಡು ಬಾರಿ ಸೇವಿಸುವುದರಿಂದ ಪುರುಷರು ಗಮನಾರ್ಹ ಆರೋಗ್ಯವನ್ನು ಪಡೆದು ಕೊಳ್ಳಬಹುದು ಜೊತೆಗೆ ಪುರುಷರ ಶಿಶ್ನವು ಆರೋಗ್ಯವಾಗಿರುವುದು, ಅಷ್ಟೇ ಅಲ್ಲದೆ ಲೈಂಗಿಕ ಕ್ರಿಯೆಗೂ ಶಕ್ತಿಯನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗುವುದು.

ಚೆರ್ರಿ ಹಣ್ಣುಗಳು

ಚೆರ್ರಿ ಹಣ್ಣುಗಳು

ಕೆಲವು ಸೂಕ್ತ ಋತುವಿನಲ್ಲಿ ಸಿಗುವ ಚೆರ್ರಿ ಹಣ್ಣುಗಳು ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮವಾದ ಹಣ್ಣುಗಳು ಇದು ದೇಹದಲ್ಲಿ ಉತ್ತಮ ರಕ್ತದ ಹರಿವನ್ನು ಉತ್ತೇಜಿಸುವುದು. ಅಪಧಮನಿಯ ಗೋಡೆಯನ್ನು ರಕ್ಷಿಸುತ್ತದೆ. ಅನಗತ್ಯ ಕೊಬ್ಬುಗಳನ್ನು ಕರಗಿಸುವುದು. ಪುರುಷರಿಗೆ ಲೈಂಗಿಕ ಜೀವನಕ್ಕೆ ಅಗತ್ಯವಾದ

ಹಾರ್ಮೋನ್ಗಳ ಬಿಡುಗಡೆಗೆ ಸಹಕರಿಸುವುದು. ಜೊತೆಗೆ ಶಿಶ್ನಗಳ ನಿಮಿರುವಿಕೆಗೂ ಪ್ರೋತ್ಸಾಹಿಸುವುದು.

ವೈನ್

ವೈನ್

ಕೆಂಪು ವೈನ್ ಉತ್ಕರ್ಷಣ ನಿರೋಧಕ ಫೈಟೊಕೆಮಿಕಲ್ ರೆಸ್ವೆರಾಟ್ರೊಲ್ನ ಒಂದು ಉತ್ತಮ ಮೂಲವಾಗಿದೆ. ಇದು ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಅಪಧಮನಿಗಳನ್ನು ತೆರೆಯಲು ಸಹಾಯ ಮಾಡುತ್ತದೆ. ನೈಟ್ರಿಕ್ ಆಕ್ಸೈಡ್ನ ಉತ್ಪಾದನೆಯು ರಕ್ತನಾಳಗಳನ್ನು ವಿಸ್ತರಿಸಲು ಅನುವು

ಮಾಡಿಕೊಡುತ್ತದೆ ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಶಿಶ್ನ ಆರೋಗ್ಯಕ್ಕೆ ಸಂಬಂಧಿಸಿದಂತೆ ಉತ್ಕರ್ಷಣ ನಿರೋಧಕ ಫೈಟೊಕೆಮಿಕಲ್ ರೆವೆರಾಟ್ರೊಲ್ ನಿಮ್ಮ ಚಿಕ್ಕ ಮತ್ತು ಮುಖ್ಯ ಅಪಧಮನಿಗಳನ್ನು ವಿಸ್ತರಿಸುವ ಮೂಲಕ ವಯಾಗ್ರದ ಹಾಗೆ ಕಾರ್ಯನಿರ್ವಹಿಸುತ್ತದೆ. ಆದರೆ ಎಲ್ಲಾ ವಿಷಯಗಳಂತೆಯೇ,

ಮದ್ಯವನ್ನು ಯಾವಾಗಲೂ ಮಿತವಾಗಿ ಸೇವಿಸಬೇಕು.

ಗಂಜಿ ಸೇವನೆ

ಗಂಜಿ ಸೇವನೆ

ಗಂಜಿಯು ಆರೋಗ್ಯಕ್ಕೆ ಅತ್ಯುತ್ತಮವಾದ ಆಹಾರ. ಗಂಜಿ ಅಥವಾ ಅಂಬಲಿಯು ಆರೋಗ್ಯಕ್ಕೆ ಅದ್ಭುತ ಪ್ರಚೋದನೆಯನ್ನು ನೀಡುವುದು. ಇದು ದೇಹಕ್ಕೆ ಅಗತ್ಯವಾದ ನಾರಿನಂಶ ಹಾಗೂ ಕೊಬ್ಬನ್ನು ನೀಡುತ್ತದೆ. ಉತ್ತಮ ರಕ್ತದ ಹರಿವು ಹಾಗೂ ರಕ್ತನಾಳಗಳನ್ನು ಹಿಗ್ಗಲು ಪ್ರಚೋದಿಸುತ್ತದೆ. ರಕ್ತನಾಳಗಳು

ಆರೋಗ್ಯಕರ ರೀತಿಯಲ್ಲಿ ಹಿಗ್ಗುವಿಕೆಯನ್ನು ಪಡೆದು ಕೊಳ್ಳುವುದರಿಂದ ಲೈಂಗಿಕ ಕ್ರಿಯೆಗೆ ಅಗತ್ಯವಾದ ಪ್ರಚೋದನೆ ನೀಡುವುದು. ಆರೋಗ್ಯಕರ ಪುರುಷತ್ವಕ್ಕೆ ಗಂಜಿಯು ಪ್ರೇರೇಪಿಸುವುದು.

English summary

Mens Health: Best foods for your penis

The fact that the food you eat directly affects your sexual health, is common knowledge. But are there foods which can be included in your diet to improve penile health? Besides making small changes in your lifestyle choices and keeping yourself physically fit, eating certain foods can help you significantly improve health of your nether regions. In the case of penile performance, everything from sperm motility to erection can be affected by what you eat. So you should be careful while making such dietary choices.
X
Desktop Bottom Promotion