Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಥೈರಾಯ್ಡ್ ಸಮಸ್ಯೆ ನಿವಾರಣೆಗೆ ಅದ್ಭುತ ಸಾರಭೂತ ತೈಲಗಳು
ಇಂದಿನ ವೇಗದ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ನಮ್ಮನ್ನು ಮುತ್ತಿಕ್ಕಿಕೊಳ್ಳುತ್ತಿದೆ. ಇದರಲ್ಲಿ ಥೈರಾಯ್ಡ್ ಕೂಡ ಒಂದಾಗಿದೆ. ಥೈರಾಯ್ಡ್ ಎನ್ನುವುದು ನಮ್ಮ ದೇಹದಲ್ಲಿ ಇರುವಂತಹ ತುಂಬಾ ಸಣ್ಣ ಗ್ರಂಥಿಯಾಗಿದ್ದು, ಇದು ದೇಹದಲ್ಲಿ ಹಲವಾರು ರೀತಿಯ ಕಾರ್ಯಗಳಾಗಿರುವ ಚಯಾಪಚಯ ಕ್ರಿಯೆ, ಮೆದುಳಿನ ಕಾರ್ಯ, ಭಾವನೆ ಮತ್ತು ಇತರ ಕೆಲವೊಂದು ಕಾರ್ಯಗಳನ್ನು ನಿರ್ವಹಿಸುವುದು. ಈ ಗ್ರಂಥಿಯು ಹಾರ್ಮೋನ್ ನ್ನು ಸ್ರವಿಸುವುದರಿಂದ ವಿವಿಧ ಕಾರ್ಯಗಳು ನಡೆಯುವುದು. ಹಾರ್ಮೋನಿನಲ್ಲಿ ಯಾವುದೇ ರೀತಿಯ ಅಸಮತೋಲನ ಕಂಡುಬಂದರೆ ಅದು ನಮ್ಮ ದೇಹದ ಮೇಲೆ ಪರಿಣಾಮ ಬೀರುವುದು.

ಸಾರಭೂತ ತೈಲಗಳು ನಮ್ಮ ದೇಹಕ್ಕೆ ತುಂಬಾ ಪರಿಣಾಮಕಾರಿ ಮತ್ತು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಇದು ನಿವಾರಣೆ ಮಾಡುವುದು. ಸಾರಭೂತ ತೈಲವನ್ನು ಇಂದಿನ ದಿನಗಳಲ್ಲಿ ವಿವಿಧ ರೀತಿಯ ಕಾಯಿಲೆಗಳ ಪರಿಹಾರಕ್ಕಾಗಿ ಬಳಸಲಾಗುತ್ತದೆ. ಸಾರಭೂತ ತೈಲದಿಂದ ಥೈರಾಯ್ಡ್ ಸಮಸ್ಯೆ ಕೂಡ ನಿವಾರಣೆ ಮಾಡಬಹುದು ಎಂದು ತಿಳಿದುಬಂದಿದೆ. ನಿಮಗೆ ಥೈರಾಯ್ಡ್ ಸಮಸ್ಯೆಯಿದ್ದರೆ ಆಗ ನೀವು ಸಾರಭೂತ ತೈಲ ಬಳಸಿಕೊಂಡು ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಥೈರಾಯ್ಡ್ ಹಾರ್ಮೋನುಗಳ ಸಮತೋಲನ ಕಾಪಾಡಲು ವಿವಿಧ ರೀತಿಯ ಸಾರಭೂತ ತೈಲಗಳು ಯಾವ ರೀತಿಯಿಂದ ನಿಮಗೆ ನೆರವಾಗುವುದು ಎಂದು ಈ ಲೇಖನದ ಮೂಲಕ ತಿಳಿಯಿರಿ.

ಸಾಂಬ್ರಾಣಿ ಎಣ್ಣೆ
ಸಾಂಬ್ರಾಣಿ ಎಣ್ಣೆ ಬಗ್ಗೆ ನೀವು ಕೇಳಿರಬಹುದು. ಇದು ಉರಿಯೂತ ಶಮನಕಾರಿ ಗುಣ ಹೊಂದಿದೆ. ಇದು ಥೈರಾಯ್ಡ್ ಸಮಸ್ಯೆಗೆ ತುಂಬಾ ಲಾಭಕಾರಿ. ಥೈರಾಯ್ಡ್ ಹಾರ್ಮೋನುಗಳ ಬದಲಾವಣೆಯಿಂದಾಗಿ ದೇಹದೊಳಗೆ ಉರಿಯೂತ ಉಂಟಾಗುವುದು. ಸಾಂಬ್ರಾಣಿ ಎಣ್ಣೆಯು ಉರಿಯೂತ ಶಮನ ಮಾಡಲು ನೆರವಾಗುವುದು ಮತ್ತು ಹಾರ್ಮೋನ್ ನ ಸಮತೋಲನ ಕಾಯ್ದುಕೊಳ್ಳುವುದು. ಇದು ಹೈಪರ್ ಮತ್ತು ಹೈಪೋಥೈರಾಯ್ಡಿಸಮ್ ನಲ್ಲಿ ತುಂಬಾ ಪರಿಣಾಮಕಾರಿಯಾಗಿರುವುದು. ಸ್ವಲ್ವ ಸಾಂಬ್ರಾಣಿ ಎಣ್ಣೆಯನ್ನು ಅಂಗೈಗೆ ಹಾಕಿಕೊಂಡು ಅದರಿಂದ ನಿಮ್ಮ ಸಂಪೂರ್ಣ ದೇಹಕ್ಕೆ ಮಸಾಜ್ ಮಾಡಿಕೊಳ್ಳಿ. ಹೊಟ್ಟೆಯ ಭಾಗ, ಕುತ್ತಿಗೆಯ ಹಿಂಭಾಗ ಮತ್ತು ಪಾದದ ಅಡಿಗೂ ಮಸಾಜ್ ಮಾಡಿಕೊಳ್ಳಲು ಮರೆಯಬೇಡಿ. ಇದಕ್ಕೆ ನೀವು ಕೆಲವು ಹನಿ ತೆಂಗಿನ ಎಣ್ಣೆ ಕೂಡ ಮಿಶ್ರಣ ಮಾಡಬಹುದು. ಸಾಂಬ್ರಾಣಿ ಎಣ್ಣೆಯನ್ನು ಮತ್ತೊಂದು ರೀತಿಯಿಂದ ಬಳಸುವ ವಿಧಾನವೆಂದರೆ ಕೆಲವು ಹನಿ ಎಣ್ಣೆಯನ್ನು ಒಂದು ಲೋಟ ನೀರಿಗೆ ಹಾಕಿಡಿ ಮತ್ತು ಇದನ್ನು ಪ್ರತಿನಿತ್ಯವು ಸೇವನೆ ಮಾಡಿ.

ಲೆಮನ್ ಗ್ರಾಸ್
ಲೆಮನ್ ಗ್ರಾಸ್ ಎಣ್ಣೆಯು ಹೈಪೋಥೈರಾಯ್ಡಿಸಮ್ ನಿವಾರಣೆ ಮಾಡಲು ನಿಮಗೆ ನೆರವಾಗುವುದು. ಇದು ತುಂಬಾ ಪ್ರಬಲ ಉರಿಯೂತ ಶಮನಕಾರಿ ಗುಣ ಹೊಂದಿದೆ. ಥೈರಾಯ್ಡ್ ಸಮೀಪ ಊತವಿದ್ದರೆ ಆಗ ನೀವು ಲೆಮನ್ ಗ್ರಾಸ್ ಎಣ್ಣೆಯನ್ನು ಹಚ್ಚಿಕೊಂಡರೆ ಅದು ತುಂಬಾ ಪರಿಣಾಮಕಾರಿಯಾಗಿ ಇರುವುದು. ಲೆಮನ್ ಗ್ರಾಸ್ ಎಣ್ಣೆಯನ್ನು ನೇರವಾಗಿ ಹಚ್ಚಿಕೊಂಡರೂ ಅದರಿಂದ ಪರಿಹಾರ ಸಾಧ್ಯ. ಕೆಲವು ಹನಿ ಲೆಮನ್ ಗ್ರಾಸ್ ನ್ನು ತೆಗೆದುಕೊಂಡು ಅದರ ಸುಗಂಧವನ್ನು ಮೂಗಿನ ಮೂಲಕ ಒಳಗೆ ಎಳೆದುಕೊಳ್ಳಬೇಕು. ಥೈರಾಯ್ಡ್ ಹಾರ್ಮೋನು ಅಸಮತೋಲನ ನಿವಾರಣೆ ಮಾಡಲು ಇನ್ನು ಹಲವಾರು ವಿಧಾನಗಳು ಇವೆ. ಕೆಲವು ಹನಿ ಲೆಮನ್ ಗ್ರಾಸ್ ಎಣ್ಣೆಯನ್ನು ತೆಂಗಿನ ಎಣ್ಣೆ ಜತೆಗೆ ಮಿಶ್ರಣ ಮಾಡಿಕೊಳ್ಳಿ ಮತ್ತು ಇದನ್ನು ನಿಮ್ಮ ಸಂಪೂರ್ಣ ದೇಹಕ್ಕೆ ಹಚ್ಚಿಕೊಳ್ಳಿ.

ಲ್ಯಾವೆಂಡರ್
ಲ್ಯಾವೆಂಡರ್ ಎಣ್ಣೆಯು ದೇಹಕ್ಕೆ ಶಮನ ನೀಡುವುದು. ಇದು ಆತಂಕ ಮತ್ತು ಹೈಪೋಥೈರಾಯ್ಡಿಸಮ್ ನ್ನು ನಿವಾರಣೆ ಮಾಡಲು ಸಹಕಾರಿಯಾಗಿದೆ. ಇದರಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಹಾರ್ಮೋನು ಸಮತೋಲನ ಮಾಡುವುದು ಮತ್ತು ತುಂಬಾ ಬಲವಾದ ಸುಗಂಧ ಹೊಂದಿದೆ. ಸ್ವಲ್ಪ ಲ್ಯಾವೆಂಡರ್ ಎಣ್ಣೆ ತೆಗೆದುಕೊಂಡು ಅದರ ಸುಗಂಧವನ್ನು ನೀವು ಮೂಗಿನ ಮೂಲಕ ಎಳೆದುಕೊಳ್ಳಬಹುದು. ಇದನ್ನು ಗಾಳಿಯಲ್ಲಿ ಬಿಟ್ಟಾಗ ಅದು ಶಾಂತಗೊಳಿಸುವ ಗುಣ ಹೆಚ್ಚಿಸುವುದು ಮತ್ತು ಮನಸ್ಸನ್ನು ಕೂಡ ಶಾಂತಗೊಳಿಸುವುದು.

ಶ್ರೀಗಂಧದ ಎಣ್ಣೆ
ಶ್ರೀಗಂಧದ ಎಣ್ಣೆಯಲ್ಲಿ ವಿವಿಧ ರೀತಿಯ ಗುಣಗಳು ಇದ್ದು, ಇದು ಒತ್ತಡ ಹಾಗೂ ಆತಂಕವನ್ನು ನಿವಾರಣೆ ಮಾಡುವುದು. ಕೆಲವು ಹನಿ ಶ್ರೀಗಂಧದ ಎಣ್ಣೆಯನ್ನು ಬಳಸಿಕೊಂಡು ನೀವು ಥೈರಾಯ್ಡ್ ಸಮಸ್ಯೆ ನಿವಾರಣೆ ಮಾಡಬಹುದು. ಶ್ರೀಗಂಧದ ಎಣ್ಣೆಯ ಸುವಾಸನೆಯನ್ನು ನೀವು ಮೂಗಿನ ಮೂಲಕ ಒಳಗೆ ಎಳೆದುಕೊಳ್ಳಿ ಅಥವಾ ಕೆಲವು ಹನಿ ತೆಂಗಿನ ಎಣ್ಣೆ ಮತ್ತು ಕೆಲವು ಹನಿ ಶ್ರೀಗಂಧದ ಎಣ್ಣೆ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕುತ್ತಿಗೆ, ಹೊಟ್ಟೆ ಮತ್ತು ಪಾದಗಳಿಗೆ ಹಚ್ಚಿಕೊಳ್ಳಿ.

ರೋಸ್ಮೆರಿ ಎಣ್ಣೆ
ಥೈರಾಯ್ಡ್ ಹಾರ್ಮೋನುಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತಹ ಸಾರಭೂತ ತೈಲಗಳಲ್ಲಿ ರೋಸ್ಮೆರಿ ಎಣ್ಣೆಯು ಒಂದಾಗಿದೆ. ಇದು ಉರಿಯೂತ ಕಡಿಮೆ ಮಾಡುವುದು ಮತ್ತು ಥೈರಾಯ್ಡ್ ಗ್ರಂಥಿಗೆ ಉತ್ತೇಜನ ನೀಡುವುದು. ಥೈರಾಯ್ಡ್ ಹಾರ್ಮೋನುಗಳ ಅಸಮತೋಲನದಿಂದ ಉಂಟಾಗಿರುವಂತಹ ನಿಶ್ಯಕ್ತಿಯನ್ನು ಇದು ದೂರ ಮಾಡುವುದು. ಇದು ಹೈಪೋಥೈರಾಯ್ಡಿಸಮ್ ಗೆ ಪರಿಹಾರ ನೀಡುವುದು. ಕೆಲವು ಹನಿ ರೋಸ್ಮೆರಿ ಎಣ್ಣೆ ತೆಗೆದುಕೊಂಡು ಅದನ್ನು ಸುಗಂಧಿತ ತೈಲದೊಂದಿಗೆ ಮಿಶ್ರಣ ಮಾಡಿಕೊಳ್ಳಿ. ತೆಂಗಿನ ಎಣ್ಣೆ ಅಥವಾ ಆಲಿವ್ ತೈಲವನ್ನು ನೀವು ಇದಕ್ಕೆ ಮಿಶ್ರಣ ಮಾಡಬಹುದು. ಈ ಮಿಶ್ರಣವನ್ನು ನೀವು ಕುತ್ತಿಗೆ ಮತ್ತು ದೇಹದ ಇತರ ಭಾಗಗಳಿಗೆ ಹಚ್ಚಿಕೊಳ್ಳಬಹುದು.
ಈ ಸಾರಭೂತ ತೈಲಗಳನ್ನು ನೀವು ನಿತ್ಯವು ಬಳಸುವ ಜತೆಗೆ ಪ್ರತಿನಿತ್ಯವು ವ್ಯಾಯಾಮ ಮಾಡಬೇಕು. ನೀವು ವೈದ್ಯರನ್ನು ಭೇಟಿಯಾಗಿ ಅವರೊಂದಿಗೆ ಸಮಲೋಚನೆ ಮಾಡಿಕೊಂಡು ಆಹಾರ ಕ್ರಮದಲ್ಲಿ ಬೇಕಾಗಿರುವಂತಹ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ಸರಿಯಾದ ಜೀವನ ಕ್ರಮ ಮತ್ತು ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಆಗ ಥೈರಾಯ್ಡ್ ಸಮಸ್ಯೆ ಕೂಡ ನಿವಾರಣೆ ಮಾಡಬಹುದು. ಸಾರಭೂತ ತೈಲದೊಂದಿಗೆ ನೀವು ಆರೋಗ್ಯಕರ ಜೀವನಶೈಲಿ ಹಾಗೂ ಆಹಾರ ಕ್ರಮ ಪಾಲಿಸಿಕೊಂಡು ಹೋಗಬೇಕು. ಇದು ಥೈರಾಯ್ಡ್ ಸಮಸ್ಯೆಯ ಪರಿಹಾರಕ್ಕೆ ತುಂಬಾ ಲಾಭಕಾರಿ ಆಗಿ ಪರಿಣಮಿಸಲಿದೆ.



Click it and Unblock the Notifications