Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
20, 30 ಮತ್ತು 40ರ ಮಹಿಳೆಯರಿಗೆ ಋತುಚಕ್ರದ ಅವಧಿಯಲ್ಲಿ ಕಂಡುಬರುವ ಸಮಸ್ಯೆಗಳು
ಮಹಿಳೆಯರಿಗೆ ಋತುಚಕ್ರ ಎನ್ನುವುದು ಒಂದು ರೀತಿಯಲ್ಲಿ ಯಾತನೆ ಹಾಗೂ ಹಲವಾರು ಸಮಸ್ಯೆಗಳನ್ನು ಉಂಟು ಮಾಡುವುದು. ಇದು ಕೆಲವು ಸಲ ಋತುಚಕ್ರಕ್ಕೆ ಮೊದಲು ಹಾಗೂ ಋತುಚಕ್ರದ ಬಳಿಕ ತೊಂದರೆ ಉಂಟು ಮಾಡುವುದು. ಪ್ರೌಢಾವಸ್ಥೆ ತಲುಪಿದ ಬಳಿಕ ಮತ್ತು ಋತುಬಂಧ ವಾಗುವ ತನಕ ಪ್ರತೀ ತಿಂಗಳು ಋತುಚಕ್ರ ಆಗುತ್ತಲೇ ಇರುವುದು. ಸಮಯ ಕಳೆದಂತೆ ಹೊಸ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಅತೀ ಅಗತ್ಯವಾಗಿದೆ. ವಯಸ್ಸಾಗುತ್ತಾ ಹೋದಂತೆ ಋತುಚಕ್ರದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಬಹುದು. ಸಹಿಸಲು ಸಾಧ್ಯವಾಗದ ಸೆಳೆತದಿಂದ ಹಿಡಿದು ಹೊಟ್ಟೆ ನೋವಿನಂತಹ ತೊಂದರೆ ಬರಬಹುದು. ಇದು ಋತುಚಕ್ರಕ್ಕೆ ಮೊದಲು, ಆ ವೇಳೆ ಮತ್ತು ಬಳಿಕ ಬರಬಹುದು. 20ರ ಹರೆಯದಲ್ಲಿ ಹುಡುಗಿಯರು ನಿಯಮಿತವಾಗಿ ಅಂಡೋತ್ಪತ್ತಿ ಮಾಡುವುದಿಲ್ಲ. ಅಂಡೋತ್ಪತ್ತಿ ಅನಿಯಮಿತವಾಗಿದ್ದರೆ ಆಗ ಅನಿಯಮಿತ ಋತುಚಕ್ರದ ಆವರ್ತನ ಉಂಟಾಗುವುದು. ಋತುಚಕ್ರದ ವೇಳೆ ದೇಹವು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುವುದು ಎಂದು ಇಲ್ಲಿ ತಿಳಿಯುವ...

ಶಕ್ತಿ ಹೊಂದಿರುವ 20ರ ಹರೆಯ
ಈ ವಯಸ್ಸಿನಲ್ಲಿ 30 ಮತ್ತು 40ರ ವಯಸ್ಸಿಗಿಂತ ಚೆನ್ನಾಗಿ ದೈಹಿಕ ಒತ್ತಡವನ್ನು ನಿಭಾಯಿಸಬಹುದು ಎಂದು ಪರಿಗಣಿಸಲಾಗಿದೆ. 20ರ ಹರೆಯದಲ್ಲಿ ಹುಡುಗಿಯರು ಹೆಚ್ಚು ಶಕ್ತಿಯುತವಾಗಿ ಇರುವರು. ಅದಾಗ್ಯೂ, ಅಂಡೋತ್ಪತ್ತಿ ಕಡಿಮೆ ಇರುವ ಕಾರಣದಿಂದಾಗಿ ಅನಿಯಮಿತ ಋತುಚಕ್ರವಾಗಬಹುದು. ಮನಸ್ಥಿತಿ ಬದಲಾವಣೆ, ಸ್ನಾಯು ಸೆಳೆತ ಮತ್ತು ಸ್ತನಗಳು ಮೆದುವಾಗುವಂತಹ ಸಮಸ್ಯೆಗಳು ನಿಯಮಿತವಾಗಿ ಋತುಚಕ್ರಕ್ಕೆ ಒಳಗಾಗಿರುವವರಲ್ಲಿ ಕಂಡುಬರುವುದು. 20ರ ಹರೆಯದ ಆರಂಭದಲ್ಲಿ ನಾವು ನಿಯಮಿತವಾಗಿ ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಲು ಆರಂಭಿಸಿದೆ ಎಂದು ಗುರ್ಗಾಂವ್ ನ ಸಾಫ್ಟವೇರ್ ಎಂಜಿನಿಯರ್ ನಿಕಿತಾ ಶರ್ಮಾ ಹೇಳುತ್ತಾರೆ. ನನ್ನ ವೃತ್ತಿಗಾಗಿ ನಾನು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ. ಅದಾಗ್ಯೂ, ಈ ಮಾತ್ರೆಗಳು ನನ್ನ ಋತುಚಕ್ರದ ಆವರ್ತನದಲ್ಲಿ ಅತಿಯಾದ ಬದಲಾವಣೆ ಉಂಟು ಮಾಡಿವೆ. ಅಚ್ಚರಿಯೆಂದರೆ ರಕ್ತಸ್ರಾವ ಕಡಿಮೆ ಆಗಿದೆ ಮತ್ತು ನೋವು ಮಾಯವಾಗಿದೆ. ಋತುಚಕ್ರದ ವೇಳೆ ಇಷ್ಟು ಮಟ್ಟಿಗೆ ನನಗೆ ಆರಾಮ ಸಿಕ್ಕಿರಲಿಲ್ಲ ಎನ್ನುತ್ತಾರೆ ಅವರು.
30ರ ಹರೆಯದಲ್ಲಿ ಬದಲಾವಣೆಗಳು
30ರ ಹರೆಯದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಾಣಿಸುವುದಿಲ್ಲ ಮತ್ತು ಇದನ್ನು ನಿರೀಕ್ಷಿಸಬಹುದು. ಯಾಕೆಂದರೆ ಋತುಚಕ್ರದ ಆವರ್ತನ ಬದಲಾವಣೆಗಳು ಆಗುವುದಿಲ್ಲ. ರಕ್ತಸ್ರಾವು ಸಾಮಾನ್ಯವಾಗಿ ಇರುವುದು. ಎಚ್ಚರಿಕೆಯ ಕರೆಗಂಟೆ ಎಂದರೆ ಅಸಾಮಾನ್ಯ ರಕ್ತಸ್ರಾವ ಮತ್ತು ಹೊಟ್ಟೆಯಲ್ಲಿ ನೋವು ಕಾಣಿಸುವುದು. ಇಂತಹ ಸಂದರ್ಭದಲ್ಲಿ ನೀವು ಫಿಬ್ರೊಡ್ಸ್ ಪರೀಕ್ಷೆ ಮಾಡಿಸಬೇಕು. 30ರ ಹರೆಯದ ಮಹಿಳೆಯರಲ್ಲಿ ಫಿಬ್ರೊಡ್ಸ್ ಮತ್ತು ಎಂಡೊಮೆಟ್ರಿಯೊಸಿಸ್ ಸಮಸ್ಯೆ ಕಂಡುಬರುವುದು. ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಜ್ಞೆ ಡಾ. ಸುಚೆತಾ ಎಂ. ಪರ್ತೆ ಅವರ ಪ್ರಕಾರ, ಪಾಲಿಸಿಟಿಕ್ ಒವರಿಯನ್ 30ರ ಹರೆಯದಲ್ಲಿ ಮಹಿಳೆಯರು ಎದುರಿಸುವಂತಹ ಸಾಮಾನ್ಯ ಸಮಸ್ಯೆಯಾಗಿದೆ. ಆರೋಗ್ಯಕರ, ಒತ್ತಡವಿಲ್ಲದೆ ಜೀವನದೊಂಧಿಗೆ ಸರಿಯಾದ ವ್ಯಾಯಾಮ ಮತ್ತು ಆಹಾರ ಸೇವಿಸಿದರೆ ಇದನ್ನು ದೂರವಿಡಬಹುದು ಎನ್ನುತ್ತಾರೆ.
40ರ ಹರೆಯದಲ್ಲಿನ ಸಮಸ್ಯೆಗಳು
ಋತುಬಂಧಕ್ಕೆ ಮೊದಲಿನ ಹಾರ್ಮೋನುಗಳು ವೈಪರಿತ್ಯವನ್ನು ಉಂಟು ಮಾಡುವುದು. ಈ ಹಂತದಲ್ಲಿ ಹೆಚ್ಚಾಗಿ ಋತುಬಂಧವು ಆರಂಭವಾಗುವುದು ಮತ್ತು 50ರಲ್ಲಿ ಇದು ನಡೆಯುವುದು. ಇಲ್ಲಿ ಯಾವುದನ್ನೂ ಊಹಿಸಲು ಸಾಧ್ಯವಿಲ್ಲ. ಮನಸ್ಥಿತಿ ಬದಲಾವಣೆ, ಬಿಸಿ ಹವೆ ಮತ್ತು ಎಲ್ಲವೂ ಬರುವುದು. 40ರ ಹರೆಯದಲ್ಲಿ ತುಂಬಾ ಭಿನ್ನವಾಗಿರುವಂತಹ ಭಾವನಾತ್ಮಕವಾದ ಬದಲಾವಣೆಗಳು ಆಗುವುದು. ಅನಿಯಮಿತ ಅಂಡೋತ್ಪತ್ತಿ ಮತ್ತು ಈಸ್ಟ್ರೋಜನ್ ಮಟ್ಟದಲ್ಲಿ ವೈಫರಿತ್ಯವು ಕಂಡುಬರುವುದು. ಇದರಿಂದ ಋತುಚಕ್ರದಲ್ಲಿ ಬದಲಾವಣೆ, ಮನಸ್ಥಿತಿ ಬದಲಾವಣೆ ಉಂಟಾಗಬಹುದು. ಈ ವೇಳೆ ಮಹಿಳೆಯರಲ್ಲಿ ರಕ್ತದೊತ್ತಡ ಸಮಸ್ಯೆಯು ಕಂಡುಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
