Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮನೆಯಲ್ಲಿಯೇ ಸರಳವಾಗಿ 'ಅಲೋವೆರಾ ಜ್ಯೂಸ್ ಮಾಡುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಲೋಳೆಸರ ಅಥವಾ ಆಲೋವೆರಾ ಒಂದು ಅದ್ಭುತ ಮೂಲಿಕೆಯಾಗಿದ್ದು ಹಲವಾರು ಕಾಯಿಲೆಗಳಿಗೆ ಔಷಧಿಯಾಗಿದೆ. ಅತ್ಯುತ್ತಮ ಸೌಂದರ್ಯ ವರ್ಧಕವೂ ಆಗಿದ್ದು ತ್ವಚೆ, ಕೂದಲು ಉಗುರುಗಳನ್ನು ಆರೋಗ್ಯಕರವಾಗಿಸುವ ಜೊತೆಗೇ ಜೀರ್ಣಾಂಗಗಳಿಗೂ ಉತ್ತಮವಾಗಿದೆ. ಲೋಳೆ ಸರದ ಜ್ಯೂಸು ಮಾಡಿಕೊಂಡು ಕುಡಿಯುವುದು ಅತ್ಯುತ್ತಮ ವಿಧಾನವಾಗಿದ್ದು ಹಲವಾರು ಪ್ರಯೋಜನಗಳನ್ನು ಪಡೆಯಬಹುದು.
ದೇಹದಲ್ಲಿ ಎದುರಾದ ನಿರ್ಜಲೀಕರಣವನ್ನು ದೂರವಾಗಿಸಲು, ಮಲಬದ್ದತೆ ಇಲ್ಲವಾಗಿಸಲು ಹಾಗೂ ಹಲವಾರು ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸಲು ಸಕ್ಷಮವಾಗಿದೆ. ಲೋಳೆಸರದ ಜ್ಯೂಸ್ ನಿತ್ಯವೂ ಕುಡಿಯಬಹುದಾಗಿದ್ದು ಯಾವುದೇ ಅಡ್ಡಪರಿಣಾಮ ಉಂಟಾಗದು. ಲೋಳೆಸರದ ತಿರುಗಳನ್ನು ತ್ವಚೆಗೆ ಹಚ್ಚಿಕೊಂಡಾಗ ತ್ವಚೆ ಪ್ರಜ್ವಲಗೊಳ್ಳುತ್ತದೆ ಹಾಗೂ ಜ್ಯೂಸ್ ಕುಡಿಯುವುದರಿಂದಲೂ ತ್ವಚೆಗೆ ಹಲವು ರೀತಿಯ ಪ್ರಯೋಜನಗಳಿವೆ. ನಿತ್ಯವೂ ಈ ಜ್ಯೂಸ್ ಸೇವಿಸಲು ಇನ್ನೂ ಹಲವಾರು ಕಾರಣಗ್ಳನ್ನು ನೀಡಬಹುದು. ಇದು ನೈಸರ್ಗಿಕ ಹಾಗೂ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ರಸವಾಗಿದೆ. ಬನ್ನಿ, ಈ ಜ್ಯೂಸ್ ಅನ್ನು ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ...

ಈ ಜ್ಯೂಸ್ ಅನ್ನು ತಯಾರಿಸುವ ವಿಧಾನ
*ಒಂದು ದೊಡ್ಡ ಮತ್ತು ಈಗ ತಾನೇ ಕೊಯ್ದ ಲೋಳೆಸರದ ಒಂದು ಕೋಡನ್ನು ಸಂಗ್ರಹಿಸಿ
*ನಡುವೆ ಉದ್ದಕ್ಕೆ ಸೀಳಿ ಎರಡು ಭಾಗವಾಗಿಸಿ
*ಈಗ ಒಂದು ಚಮಚದಿಂದ ಒಳಗಿನ ತಿರುಳನ್ನು ಕೆರೆದು ತೆಗೆಯಿಸಿ.
*ಎರಡೂ ಭಾಗಗಳಿಂದ ಸಿಪ್ಪೆಯಿಲ್ಲದಂತೆ ಕೇವಲ ತಿರುಳನ್ನು ಮಾತ್ರವೇ ಸಂಗ್ರಹಿಸಿ
*ಈ ತಿರುಳನ್ನು ಒಂದು ಚಿಕ್ಕ ಪಾತ್ರೆಗೆ ಹಾಕಿಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಕೊಂಚ ನೀರಿನೊಂದಿಗೆ ಕೊಂಚವೇ ಕಾಲ ಮಿಶ್ರಣ ಮಾಡಿ
ಲೋಳೆಸರದ ಜೆಲ್ ಈಗ ತಯಾರಾಗಿದೆ.

ಇದರ ಸೇವನೆಯ ವಿಧಾನ
ಲೋಳೆಸರವನ್ನು ಏನನ್ನೂ ಮಿಶ್ರಣ ಮಾಡದೆಯೂ ಅಥವಾ ನಿಮ್ಮ ನೆಚ್ಚಿನ ಸ್ವಾದವನ್ನು ಬೆರೆಸಿಯೂ ಸೇವಿಸಬಹುದು. ಆದರೆ ದಿನವೊಂದರಲ್ಲಿ ಗರಿಷ್ಟ ನಾಲ್ಕು ದೊಡ್ಡ ಚಮಚದಷ್ಟು ಮಾತ್ರವೇ ಲೋಳೆಸರದ ಜೆಲ್ ಅನ್ನು ಸೇವಿಸಬಹುದು. ಈ ಪ್ರಮಾಣವನ್ನು ಮೀರಬಾರದು.

ಲೋಳೆಸರದ ಜ್ಯೂಸ್ ನ ಇತರ ಪ್ರಕಾರಗಳು
ಲೋಳೆಸರ ಮತ್ತು ಕಿತ್ತಳೆಯ ಜ್ಯೂಸ್
ಸುಮಾರು ಮೂವತ್ತು ಮಿಲಿಲೀಟರ್ ಲೋಳೆಸರದ ರಸವನ್ನು ಒಂದು ಕಪ್ ಕಿತ್ತಳೆ ರಸದೊಂದಿಗೆ ಮಿಶ್ರಣ ಮಾಡಿ. ಇದನ್ನು ಮಿಕ್ಸಿಯಲ್ಲಿ ಚೆನ್ನಾಗಿ ಕಡೆದು ಕುಡಿಯಿರಿ. ನಿಮ್ಮ ರುಚಿಗೆ ತಕ್ಕಂತೆ ಒಂದು ಅಥವಾ ಎರಡು ದೊಡ್ಡ ಚಮಚ ಲಿಂಬೆರಸವನ್ನು ಬೆರೆಸಿಯೂ ಕುಡಿಯಬಹುದು.

ಲೋಳೆಸರ ಮತ್ತು ಜೇನು
ಒಂದು ಕಪ್ ಲೋಳೆಸರದ ಜೆಲ್ ಮತ್ತು ಒಂದು ಕಪ್ ಜೇನು ಬೆರೆಸಿ ಮಿಕ್ಸಿಯಲ್ಲಿ ಕಡೆಯಿರಿ. ಈ ಮಿಶ್ರಣವನ್ನು ಒಂದು ಬಾಟಲಿಯಲ್ಲಿ ಹಾಕಿ ತಣ್ಣನೆಯ ಸ್ಥಳದಲ್ಲಿ ಸಂಗ್ರಹಿಸಿಡಿ. ಈ ಸಂಗ್ರಹದಿಂದ ಸುಮಾರು ಮೂರು ದೊಡ್ಡ ಚಮಚದಷ್ಟು ದ್ರವವನ್ನು ಒಂದು ದಿನದ ಅವಧಿಯಲ್ಲಿ ಕೊಂಚಕೊಂಚವಾಗಿ ಸೇವಿಸಿ. ಸತತವಾಗಿ ಹತ್ತು ದಿನಗಳವರೆಗೆ ಸೇವಿಸಿ, ಬಳಿಕ ಹತ್ತು ದಿನಗಳವರೆಗೆ ಸೇವಿಸದಿರಿ, ಈ ಕ್ರಮವನ್ನು ಕೆಲವಾರು ಬಾರಿ ಅನುಸರಿಸಿ.

ಲೋಳೆಸರ ಮತ್ತು ಇತರ ಹಣ್ಣುಗಳ ಜ್ಯೂಸ್
ನಿಮ್ಮ ಇಷ್ಜದ ಇತರ ಹಣ್ಣುಗಳ ರಸವನ್ನೂ ಲೋಳೆಸರದೊಂದಿಗೆ ಬೆರೆಸಿ ಸೇವಿಸಬಹುದು. ನೆಲ್ಲಿಕಾಯಿಯ ರಸ ಅತ್ಯುತ್ತಮವಾದ ಆಯ್ಕೆಯಾಗಿದೆ. ಒಂದು ಕಪ್ ಲೋಳೆಸರ ಜ್ಯೂಸ್ ಗೆ ಒಂದುಕಪ್ ನಷ್ಟು ನಿಮ್ಮ ಆಯ್ಕೆಯ ಹಣ್ಣಿನ ರಸವನ್ನು ಬೆರೆಸಿ ನುಣ್ಣಗೆ ಅರೆದು ಪ್ರತಿದಿನ ಬೆಳಿಗ್ಗೆ ಸೇವಿಸಿ.



Click it and Unblock the Notifications
