Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಸಂಗಾತಿಯೊಂದಿಗೆ ಸೆಕ್ಸ್ ಊಟದ ಮೊದಲೋ ನಂತರವೋ ? ಇಲ್ಲಿದೆ ಉತ್ತರ!!!
ಈಗಿನ ಪೀಳಿಗೆಯ ಜನರಲ್ಲಿ ಡೇಟಿಂಗ್ ಎನ್ನುವುದು ಸಾಮಾನ್ಯ ಪದವಾಗಿದೆ.ಅದರಲ್ಲೂ ನಗರದಲ್ಲಿನ ಯುವ ಜನತೆಯನ್ನು ನೋಡಿದರೆ ಮೂವರಲ್ಲಿ ಒಬ್ಬರು ಡೇಟಿಂಗ್ ಮೀಟಿಂಗ್ ಚಾಟಿಂಗ್ ಎಂಬಿತ್ಯಾದಿ ವಿಷಯಗಳಲ್ಲೇ ಮುಳುಗಿರುತ್ತಾರೆ.ಡೇಟಿಂಗ್ ನಿಂದ ಶುರುವಾದ ಪ್ರೀತಿ ಪ್ರೇಮ ಪ್ರಣಯ ಕೊನೆಗೆ ಸಾಂಸಾರಿಕ ಸಂಬಂಧ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ.ಸಾಂಸಾರಿಕ ಜೀವನದಲ್ಲಿ ಸಂಗಾತಿಯ ಜೊತೆ ಪ್ರಣಯ ಮತ್ತು ಲೈಂಗಿಕ ಕ್ರಿಯೆ ಮಾಮೂಲು.

ಆದರೆ ರಾತ್ರಿ ಮಲಗುವ ಸಮಯದಲ್ಲಿ ಮೊದಲು ಲೈಂಗಿಕ ಕ್ರಿಯೆ ನಡೆಸಿ ನಂತರ ಊಟ ಮಾಡಬೇಕಾ ಇಲ್ಲಾ ಹೊಟ್ಟೆ ತುಂಬಾ ಮೊದಲು ಊಟ ಮಾಡಿ ನಂತರ ಸಂಭೋಗ ನಡೆಸಬೇಕಾ ಎನ್ನುವುದೇ ಹಲವರಿಗೆ ಗೊಂದಲ . ಚಿಂತೆ ಬೇಡ ಈ ವಿಷಯದಲ್ಲಿ ನಾವು ನಿಮ್ಮ ಗೊಂದಲ ನಿವಾರಣೆ ಮಾಡುತ್ತೇವೆ .ನಂತರ ನೀವೇ ತೀರ್ಮಾನಿಸಿ . ಈಗ ಮೊದಲು ಊಟ ಮಾಡಿ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಬಗ್ಗೆ ಮತ್ತು ಅದರಿಂದಾಗುವ ಪರಿಣಾಮ ಮತ್ತು ದುಷ್ಪರಿಣಾಮಗಳ ಬಗ್ಗೆ ಮಾತಾಡೋಣ....

ಊಟ ಮಾಡುವ ಬಗ್ಗೆ ಒಮ್ಮೆ ಆಲೋಚಿಸಿ
ಊಟವೆಂದರೆ ಸಾಕು ನಾವು ಎಲ್ಲರೂ ತಿನ್ನುವುದಕ್ಕಾಗಿಯೇ ಹುಟ್ಟಿದ್ದೇವೇನೋ ಎಂಬಂತೆ ಸಿಕ್ಕಿದ್ದೆಲ್ಲಾ ತಿನ್ನುತ್ತೇವೆ . ರೋಸ್ಟೆಡ್ ಕೆಬಾಬ್ , ಚಿಕನ್ , ಮಶ್ರೂಮ್ , ಪಿಜ್ಜಾ , ಪಾಸ್ಟಾ. ಇಷ್ಟಕ್ಕೇ ಸುಮ್ಮನಾಗುತ್ತೇವೆಯೇ ? ಇದರ ಜೊತೆಗೆ ತಣ್ಣನೆಯ ಐಸ್ಕ್ರೀಂ , ಗುಲಾಬ್ ಜಾಮೂನ್ , ಒಂದು ಚಿಲ್ಲೆಡ್ ಬಿಯರ್ ಹೀಗೆ ನೋಡುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಲೈಂಗಿಕ ಕ್ರಿಯೆಗೆ ಇವೆಲ್ಲಾ ನಿಜಕ್ಕೂ ಸಹಕಾರಿಯೇ ? ನಮ್ಮನ್ನು ಸಲಹೆ ಕೇಳಿದರೆ, ಇಲ್ಲ . ಯಾವಾಗಲೂ ಸ್ವಲ್ಪ ಕಮ್ಮಿ ತಿಂದರೆ ಒಳ್ಳೆಯದು.

ಕಡಿಮೆ ತಿಂದು ನಿಮ್ಮ ಸಂಗಾತಿಯ ಜೊತೆ ಮಿಲನದಲ್ಲಿ ತೊಡಗಿ!
ಕಡಿಮೆ ತಿಂದು ನಿಮ್ಮ ಸಂಗಾತಿಯ ಜೊತೆ ಮಿಲನದಲ್ಲಿ ತೊಡಗುವುದರಿಂದ ನಿಮಗೆ ಹೆಚ್ಚು ಉಪಯೋಗ . ಹೇಗೆಂದರೆ ನಿಮಗೆ ಜಾಸ್ತಿ ತಿಂದ ನಂತರ ಆಗುವಂತೆ ಹೊಟ್ಟೆ ಉಬ್ಬರದ ಸಮಸ್ಯೆ ಆಗುವುದಿಲ್ಲ. ಹೊಟ್ಟೆ ತುಂಬ ತಿಂದ ಮೇಲೆ ನಿದ್ರೆ ಬರುವುದು ಸಾಮಾನ್ಯ .ಇಲ್ಲಿ ಆ ಸಮಸ್ಯೆಯೂ ಇರುವುದಿಲ್ಲ .ಹಾಗಾಗಿ ನಿಮಗೆ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಆಸಕ್ತಿ ಬೆಳೆಯುತ್ತಾ ಹೋಗುತ್ತದೆ ಮತ್ತು ನಿಮ್ಮ ಸಂಗಾತಿಗೂ ಸಂತೋಷ ಪಡಿಸಿ ನೀವೂ ಸಂತಸದಿಂದಿರುತ್ತೀರಿ.

ಲೈಂಗಿಕ ಕ್ರಿಯೆ ಕೂಡ ಒಂದು ವ್ಯಾಯಾಮ!
ಲೈಂಗಿಕ ಕ್ರಿಯೆಯನ್ನು ಬೇರೆ ರೀತಿಯಲ್ಲಿ ಯೋಚಿಸುವ ಬದಲು ಒಂದು ವ್ಯಾಯಾಮ ಎಂದೇಕೆ ಯೋಚಿಸಬಾರದು ? ಹೌದು ಅದು ಒಂದು ರೀತಿಯ ವ್ಯಾಯಾಮವೇ. ವ್ಯಾಯಾಮ ಮಾಡಲು ನಾವು ಹೇಗೆ ತಯಾರಾಗುತ್ತೇವೆಯೋ ಹಾಗೆ ಇದೂ ಕೂಡ. ಹೊಟ್ಟೆ ತುಂಬ ತಿಂದು ವ್ಯಾಯಾಮ , ದೈಹಿಕ ಕಸರತ್ತು ಮಾಡಲು ಸಾಧ್ಯವೇ ? ಎಂದಿಗೂ ಇಲ್ಲ. ಅಂದಮೇಲೆ ಊಟ ಮಾಡಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೋ ಬೇಡವೋ ಎಂಬುದಕ್ಕೆ ನಿಮ್ಮ ಬಳಿಯೇ ಉತ್ತರ ಇದೆ ಅಲ್ಲವೇ .

ರಾತ್ರಿಯ ಊಟ ತಡವಾಗಿ ಮಾಡುವುದು
ಈ ವಿಷಯದಲ್ಲಿ ನಮ್ಮ ಸಲಹೆ ಏನೆಂದರೆ ಮೊದಲು ನಿಮ್ಮ ಸಂಗಾತಿಯ ಜೊತೆ ರಾತ್ರಿಯ ತಂಪಾದ ತಂಗಾಳಿಯಲ್ಲಿ ಮಿಲನದಲ್ಲಿ ಮಿಂದು ನಂತರ ಊಟ ಮಾಡುವುದೇ ಲೇಸು. ಯಾವ ಇರಿಸು ಮುರಿಸು ಉಂಟಾಗುವುದಿಲ್ಲ . ಆಮೇಲೆ ಬೇಕಾದರೆ ನಿಮಗೆ ಬೇಕಾದ ಹೋಟೆಲ್ ಅಥವಾ ರೆಸ್ಟೋರೆಂಟ್ಗೆ ಹೋಗಿ ಬೇಕಾದ ಊಟ ಮಾಡಿ ಬನ್ನಿ. ನೆನಪಿರಲಿ ಆಗಲೂ ನಿಮಗಾಗಿ ಮತ್ತು ನಿಮ್ಮ ಬರುವಿಕೆಗಾಗಿ ನಿಮ್ಮ ಮನೆಯಲ್ಲಿ ಕಾಯುತ್ತಿರುವುದು ನಿಮ್ಮ ಮಂಚ ಹಾಸಿಗೆಯೇ !!!



Click it and Unblock the Notifications
